ಲಕ್ಷ್ಮಣ ಸವದಿ ಆತ್ಯಾಪ್ತನ ಬರ್ಬರ ಕೊಲೆ; ಲೋಕಾ ಚುನಾವಣೆ ವೇಳೆ ಅಥಣಿಯ ಕಾಂಗ್ರೆಸ್‌ಗೆ ಬಿಗ್ ಶಾಕ್

By Sathish Kumar KH  |  First Published Apr 4, 2024, 1:31 PM IST

ಬೆಳಗಾವಿ ಜಿಲ್ಲೆಯ ಅಥಣಿ ತಾಲೂಕಿನ ಕಾಂಗ್ರೆಸ್‌ ಮುಖಂಡ ಹಾಗೂ ಲಕ್ಷ್ಮಣ ಸವದಿಯ ಅತ್ಯಾಪ್ತ ಅಣ್ಣಪ್ಪ ಬಸಪ್ಪ ನಿಂಬಾಳ ಅವರನ್ನು ನಡು ರಸ್ತೆಯಲ್ಲಿ ಬರ್ಬರವಾಗಿ ಹತ್ಯೆ ಮಾಡಲಾಗಿದೆ.


ಬೆಳಗಾವಿ (ಏ.04): ಬೆಳಗಾವಿ ಜಿಲ್ಲೆಯ ಚಿಕ್ಕೋಡಿ ಲೋಕಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ಚುನಾವಣೆಗೂ ಮುನ್ನವೇ ಅಥಣಿ ಕಾಂಗ್ರೆಸ್‌ ಮುಖಂಡರೂ ಆಗಿರುವ ಹಾಗೂ ಶಾಸಕ ಲಕ್ಷ್ಮಣ ಸವದಿಯವರ ಆಪ್ತ ಅಣ್ಣಪ್ಪ ಬಸಪ್ಪ ನಿಂಬಾಳ ಅವರನ್ನು ಮಾರಕಾಸ್ತ್ರಗಳಿಂದ ಬರ್ಬರವಾಗಿ ಕೊಚ್ಚಿ ಕೊಲೆ ಮಾಡಿರುವ ದುರ್ಘಟನೆ ನಡೆದಿದೆ.'

ಬೆಳಗಾವಿ ಜಿಲ್ಲೆ ಅಥಣಿ ತಾಲೂಕಿನ ಖೀಳೆಗಾಂವ್ ಗ್ರಾಮದ ಅಣ್ಣಪ್ಪ ಬಸಪ್ಪ ನಿಂಬಾಳ (58) ಕೊಲೆಯಾದ ದುರ್ದೈವಿ ಆಗಿದ್ದಾರೆ. ಈ ಗ್ರಾಮದ ಹೊರವಲಯದ ಖೀಳೆಗಾಂವ-ಅಥಣಿ ರಸ್ತೆಯಲ್ಲಿ ಹತ್ಯೆ ಮಾಡಲಾಗಿದೆ. ಇನ್ನು ಅಣ್ಣಪ್ಪ ಬಸಪ್ಪ ನಿಂಬಾಳ ಅವರು ಅಥಣಿಯ ಕಾಂಗ್ರೆಸ್ ಮುಖಂಡನೂ ಆಗಿದ್ದು, ಮಾಜಿ ಉಪ ಮುಖ್ಯಮಂತ್ರಿ ಲಕ್ಷ್ಮಣ ಸವದಿ ಆಪ್ತರೂ ಆಗಿದ್ದರು. ಇವರು ಖೀಳೆಗಾಂವ ಗ್ರಾಮದ ಕೃಷಿ ಪತ್ತಿನ ಸಂಘ ಸಹಕಾರಿ ಅಧ್ಯಕ್ಷರೂ ಆಗಿದದರು. ಇವರ ರಾಜಕೀಯದಲ್ಲಿ ಬೆಳೆಯುವುದನ್ನು ಸಹಿಸದೇ ಕೊಲೆ ಮಾಡಲಾಗಿದೆ ಎಂದು ಹೇಳಲಾಗುತ್ತಿದೆ. 

Tap to resize

Latest Videos

ಲೋಕಸಭೆ ಚುನಾವಣೆ 2024: ಕೊಟ್ಟ ಮಾತು ನಾನು, ಪಕ್ಷ ಹಿಂತೆಗೆಯಲ್ಲ, ಸಚಿವೆ ಹೆಬ್ಬಾಳಕರ್

ಇನ್ನು ಖೀಳೇಗಾಂವ್ ಗ್ರಾಮದ ಹೊರವಲಯದಲ್ಲಿ ನಡು ರಸ್ತೆಯಲ್ಲಿಯೇ ದುಷ್ಕರ್ಮಿಗಳು ಮಾರಕಾಸ್ತ್ರಗಳಿಂದ ಹಲ್ಲೆ ನಡೆಸಿ ಕೊಲೆ ಮಾಡಿ ಪರಾರಿಯಾಗಿದ್ದಾರೆ. ಆದರೆ, ಕೊಲೆಗೆ ನಿಖರ ಕಾರಣ ತಿಳಿದು ಬಂದಿಲ್ಲ. ಸ್ಥಳಕ್ಕೆ ಅಥಣಿ  ಡಿ.ಎಸ್.ಪಿ ಶ್ರೀಪಾದ ಜಲ್ದೆ ಅವರು ಭೇಟಿ ಮಾಡಿ ಪರಿಶೀಲನೆ ಮಾಡಿದ್ದಾರೆ. ಅಥಣಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ. ಇನ್ನು ಪೊಲೀಸರು ಕೇಸ್ ದಾಖಲಿಸಿಕೊಂಡು ಹಂತಕರನ್ನು ಹುಡುಗಲು ಮುಂದಾಗಿದ್ದಾರೆ.

ಬೆಳಗಾವಿ ಹಿಂಡಲಗಾ ಜೈಲಿನಲ್ಲಿ ಬೀಡಿ, ಸಿಗರೇಟ್, ತಂಬಾಕು ಪತ್ತೆ
ಬೆಳಗಾವಿ ಡಿಸಿಪಿ ರೋಹನ್ ಜಗದೀಶ ನೇತೃತ್ವದಲ್ಲಿ ನಗರದ ಹಿಂಡಲಗಾ ಜೈಲಿನ ಮೇಲೆ ಪೊಲೀಸರು ಭಾನುವಾರ ದಿಢೀರ್ ದಾಳಿ ನಡೆಸಿದ್ದಾರೆ. 150 ಸಿಬ್ಬಂದಿಯಿಂದ ದಿಢೀರ್ ದಾಳಿ ನಡೆಸಿದ ಪೊಲೀಸರು ಜೈಲು ಜಾಲಾಡಿದ್ದಾರೆ. ದಾಳಿ ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ಡಿಸಿಪಿ ರೋಹನ್ ಜಗದೀಶ್ ಅವರು, ನಮ್ಮ ಎಸಿಪಿಗಳು 5 ಜನ ಇನ್ಸ್ಪೆಕ್ಟರ್ 146 ಸಿಬ್ಬಂದಿ ತಪಾಸಣೆ ಮಾಡಿದ್ದೇವೆ. ಶ್ವಾನದಳದೊಂದಿಗೆ ಬಂದು ಇಡೀ ಜೈಲು ತಪಾಸಣೆ ಮಾಡಿದ್ದೇವೆ. ಜೈಲಿನೊಳಗೆ ವಾಸ್ತವತೆ ಏನಿದೆ ಎಂದು ತಿಳಿಯಲು ತಪಾಸಣೆ ಮಾಡಿದ್ದೇವೆ ಎಂದು ಮಾಹಿತಿ ನೀಡಿದ್ದಾರೆ.

ಬೆಳಗಾವಿಯ 'ಸತ್ತಗುರು' ಬಟ್ಟೆ ಅಂಗಡಿ ನಾಮಫಲಕ ಫುಲ್ ವೈರಲ್; ಕೊನೆಗೂ 'ಸತ್‌ಗುರು' ಎಂದು ಬದಲಿಸಿದ ಮಾಲೀಕ!

ಜೈಲಿನಲ್ಲಿ ದಾಳಿಯ ವೇಳೆ ತಂಬಾಕು, ಬೀಡಿ ಸಿಗರೇಟು ಸಣ್ಣ ಪುಟ್ಟ ಚಾಕುಗಳು ಒಳಗಡೆ ಸಿಕ್ಕಿವೆ. ಭದ್ರತೆ ಇದ್ದರೂ ಸಹ ಒಳಗೆ ಇಂತವೆಲ್ಲ ಏಕೆ ಹೋಗ್ತಿದೆ ತನಿಖೆ ಮಾಡಬೇಕಾಗಿದೆ. ಸದ್ಯಕ್ಕೆ ಯಾವುದೇ ಮೊಬೈಲ್‌ಗಳು ಸಿಕ್ಕಿಲ್ಲ ಮೊಬೈಲ್‌ ಚಾರ್ಜರ್‌ ಹಾಗೂ ಬ್ಲೂಟೂತ್ ಡಿವೈಸಗಳು ಸಿಕ್ಕಿವೆ. ಅದನ್ನ ನಮ್ಮ ವಶಕ್ಕೆ ತೆಗೆದುಕೊಂಡಿದ್ದೇವೆ ಎಂದು ಬೆಳಗಾವಿ ಡಿಸಿಪಿ ರೋಹನ್ ಜಗದೀಶ ತಿಳಿಸಿದ್ದಾರೆ.

click me!