
ನ್ಯಾಯ ವಿಳಂಬವಾದರೆ ನ್ಯಾಯ ನಿರಾಕರಿಸಿದಂತೆ (justice delayed is justice denied) ಎಂಬ ಮಾತಿದೆ. ಆದರೆ ಕೋರ್ಟ್ ಬಾಗಿಲಿಗೆ ಹೋಗುವ ಪ್ರಕರಣಗಳ ಪೈಕಿ ಹಲವು ದಶಕಗಳವರೆಗೂ ಇತ್ಯರ್ಥ ಆಗದೇ ಸಂತ್ರಸ್ತರ ಗೋಳು ಹೇಳತೀರದ ಸ್ಥಿತಿ ಇದೆ. ಅದೂ ಹೋಗಲಿ ಎಂದರೆ ಕೊ*ಲೆ ಪಾತಕಿಗಳು, ಅ*ತ್ಯಾಚಾರಿಗಳಿಗೆ ಕೋರ್ಟ್ಗಳು ಪದೇ ಪದೇ ಜಾಮೀನು ನೀಡುವ ಕಾರಣ, ಸಂತ್ರಸ್ತರು ಭಯದಿಂದ ಇರಬೇಕಾದ ಸ್ಥಿತಿ ಈಗಲೂ ಇದೆ. ಜಾಮೀನು ಪಡೆದು ರಾಜಾರೋಷವಾಗಿ ಓಡಾಡುವ ಈ ಖದೀಮರು, ತಮ್ಮ ಮೇಲೆ ದೂರು ನೀಡಿದರನ್ನು ಸಾಯಿಸುವುದೂ ಇದೆ, ಇಲ್ಲವೇ ಆ್ಯಸಿಡ್ ಎರೆಚುವುದು, ಮಾರಣಾಂತಿಕವಾಗಿ ಹಲ್ಲೆ ಮಾಡುವುದು... ಎಲ್ಲವೂ ನಡೆದೇ ಇದೆ. ಒಂದು ಕೊ*ಲೆ ಮಾಡಿದರೇನು, ಅದರ ಜೊತೆ ಇನ್ನೊಂದು ಕೊ*ಲೆ ಆದ್ರೇನು, ಶಿಕ್ಷೆ ಒಂದೇ ಅಲ್ವಾ ಎನ್ನುವ ಮನಸ್ಥಿತಿ. ಇದರ ಹೊರತಾಗಿಯೂ ಕೋರ್ಟ್ಗಳು ನಿರಾಯಾಸವಾಗಿ ಅಪರಾಧಿಗಳು ಎಂದು ಸಾಬೀತಾಗದ ಆರೋಪಿಗಳಿಗೆ ಜಾಮೀನು ನೀಡುವುದು ಬಹು ದೊಡ್ಡ ದುರಂತವಾಗಿಯೇ ಉಳಿದುಕೊಂಡಿದೆ.
ಅಂಥದ್ದೇ ಒಂದು ಪ್ರಕರಣವೇ ರೇ*ಪಿಸ್ಟ್ ಅಕ್ಕು ಯಾದವ್ ಬರ್ಬರ ಹತ್ಯೆಯದ್ದು. ಮಹಾರಾಷ್ಟ್ರದ ನಾಗ್ಪುರದಲ್ಲಿ ನಡೆದೆ ಘಟನೆ ಇದು. 2004ರಲ್ಲಿ ನಡೆದಿರುವ ಈ ಘಟನೆ ಇಂದಿಗೂ ವೈರಲ್ ಆಗುತ್ತಲೇ ಇರುತ್ತದೆ. ಕೊಳೆಗೇರಿಯ ಯುವತಿಯನ್ನು ರೇ*ಪ್ ಮಾಡಿ ಸಾಯಿಸಿದ್ದ ಈ ಕಿರಾತಕ. 10 ವರ್ಷಗಳು ಕೋರ್ಟ್ನಲ್ಲಿ ವಿಚಾರಣೆ ನಡೆದಾಗಲೆಲ್ಲವೂ ಆತನಿಗೆ ಸಲೀಸಾಗಿ ಜಾಮೀನು ಸಿಗುತ್ತಿತ್ತು! ಇದಕ್ಕೂ ಮೊದಲು ಆತನಿಂದ ಯುವತಿ ಅ*ತ್ಯಾಚಾರಕ್ಕೊಳಗಾಗಿದ್ದಾನೆಂದು ಅವರ ಮನೆಯವರು ಕೇಸ್ ದಾಖಲಿಸಲು ಹೋದಾಗ ಪೊಲೀಸರು ನಕ್ಕಿ ಅವರನ್ನೇ ನಿಂದಿಸಿದ್ದರು. ಇದರಿಂದಾಗಿ ಅಕ್ಕು ಯಾದವ್ ಮತ್ತು ಅವನ ಗ್ಯಾಂಗ್ನ ಆಟಾಟೋಪ ಹೆಚ್ಚಾಗಿತ್ತು. ಅಲ್ಲಿರುವ ಮಹಿಳೆಯರಿಗೆ ಕಿರುಕುಳ ಕೊಡುವುದೇ ಕೆಲಸವಾಗಿತ್ತು. ಜನರನ್ನು ಬೆದರಿಸಿ, ದುಡ್ಡು ಕೀಳುತ್ತಿದ್ದರು. ಯುವತಿಯರ ಮಾನಭಂಗ ಮಾಡುತ್ತಿದ್ದರು. ಚಿಕ್ಕ ಚಿಕ್ಕ ಹೆಣ್ಣು ಮಕ್ಕಳನ್ನೂ ಬಿಡಲಿಲ್ಲ ಈ ಕಾಮುಕ. ಈ ಗ್ಯಾಂಗ್ಗೆ ಪ್ರತಿರೋಧ ಒಡ್ಡಿವರ ಕೊ*ಲೆ ಆಗುತ್ತಿತ್ತು. ಶವಗಳನ್ನು ರೈಲ್ವೆ ಹಳಿಗಳ ಮೇಲೆ ಎಸೆದು ನುಣುಚಿಕೊಳ್ಳುತ್ತಿದ್ದ. ಕೊನೆಗೆ ಜನರ ಒತ್ತಡ ಹೆಚ್ಚಾದ ಮೇಲೆ ಪೊಲೀಸರು ಬಂಧಿಸುವಂತೆ ನಾಟಕವಾಡುತ್ತಿದ್ದರೂ ಪದೇ ಪದೇ ಅವನಿಗೆ ಜಾಮೀನು ಸಿಗುತ್ತಿತ್ತು. ಮತ್ತೆ ಅವನ ಆಟಾಟೋಪ ಹೆಚ್ಚಾಗುತ್ತಿತ್ತು.
ಕಾನೂನನ್ನು ಕೈಗೆತ್ತಿಕೊಳ್ಳದೇ ಬೇರೆ ದಾರಿಯೇ ಇಲ್ಲ ಎನ್ನುವುದನ್ನು ಮೊದಲು ಅಲ್ಲಿಯ ಮಹಿಳೆಯರು ಅರಿತರು. ನ್ಯಾಯಕ್ಕಾಗಿ ಕಾದು ಕುಳಿತರೆ ಇನ್ನೊಂದಿಷ್ಟ ಹೆಣಗಳು ಉರುಳುತ್ತವೆ, ಪೊಲೀಸರಿಂದ ಆ ರೇ*ಪಿಸ್ಟ್ಗೆ ರಕ್ಷಣೆ ಬೇರೆ ಇದೆ. ಇನ್ನು ಸುಮ್ಮನೇ ಇರುವುದಕ್ಕೆ ಸಾಧ್ಯವೇ ಇಲ್ಲ ಎಂದು ಟೊಂಕ ಕಟ್ಟಿ ನಿಂತರು ಮಹಿಳೆಯರು. ಕೇಸ್ವೊಂದರ ವಿಚಾರಣೆ ವೇಳೆ ಅಕ್ಕುವನ್ನು ಕೋರ್ಟ್ಗೆ ಹಾಜರು ಪಡಿಸಲು ಪೊಲೀಸರು ಕರೆದುಕೊಂಡು ಹೋಗುವಾಗಲೇ ಮುಹೂರ್ತ ಫಿಕ್ಸ್ ಮಾಡಿದ್ದರು 200 ಮಹಿಳೆಯರು. ಆಗಸ್ಟ್ 13, 2004 ರಂದು ಮಧ್ಯಾಹ್ನ 3 ಗಂಟೆಗೆ, ನೆರೆದ ಮಹಿಳೆಯರ ಗುಂಪು ಅವನ ಮುಖಕ್ಕೆ ಮೆಣಸಿನ ಪುಡಿ ಎಸೆದು ಕಲ್ಲುಗಳನ್ನು ಎಸೆದರು. ಪೊಲೀಸರಿಂದಲೂ ನಿಯಂತ್ರಿಸಲು ಸಾಧ್ಯವಾಗಲೇ ಓಡಿ ಹೋದರು. ಮಹಿಳೆಯರು ಆತನ ಪ್ಯಾಂಟ್ ಬಿಚ್ಚಿ ಖಾಸಗಿ ಅಂಗವನ್ನೇ ಕತ್ತರಿಸಿದರು! ಕಂಡ ಕಂಡಲ್ಲಿ ಅವನ ಮೇಲೆ ಚಾಕುವಿನಿಂದ ಇರಿದರು. ದಶಕಗಳವರೆಗಿನ ಆ ನೋವನ್ನು 15 ನಿಮಿಷಗಳಲ್ಲಿ ತೀರಿಸಿಕೊಂಡಿದ್ದರು ಈ ಮಹಿಳೆಯರು!
ಕೊ*ಲೆ ಮಾಡಿ ಸಂತ್ರಪ್ತರಾದ ಮಹಿಳೆಯರು ಬನ್ನಿ ನಾವು ಕೊ*ಲೆಗಾರರು, ನಮ್ಮನ್ನು ಬಂಧಿಸಿ ಎಂದು ಪೊಲೀಸರ ಮುಂದೆ ಹೋದಾಗ ಅವರು ಭಯದಿಂದ ತತ್ತರಿಸಿ ಹೋಗಿದ್ದರು. ಅಕ್ಕು ಸಾವಿನ ಬಳಿಕ, ಮಹಿಳೆಯರ ಪರವಾಗಿ ಎಲ್ಲರೂ ಒಕ್ಕೋರಲಿನಿಂದ ನಿಂತರು. ವಕೀಲರು ಕೂಡ ಮಹಿಳೆಯರನ್ನು ಆರೋಪಿಯನ್ನಾಗಿಸಬಾರದು ಎಂದು ದನಿ ಎತ್ತಿದರು. ಬಳಿಕ ಕೋರ್ಟ್ ಕೂಡ ಪ್ರಕರಣದ ಗಂಭೀರತೆಯನ್ನು ಅರಿತು ವರ್ಷಗಳ ಬಳಿಕ ತೀರ್ಪು ನೀಡಿ, ಎಲ್ಲರನ್ನೂ ಖುಲಾಸೆಗೊಳಿಸಿತು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ