Nirmala Sitharaman deepfake video scam: ವಿತ್ತ ಸಚಿವೆ ನಿರ್ಮಲಾ ಹೆಸರಲ್ಲಿ ವೃದ್ಧನಿಗೆ 7.9 ಲಕ್ಷ ರು. ವಂಚನೆ

Kannadaprabha News   | Kannada Prabha
Published : May 07, 2026, 08:44 AM IST
Belagavi Senior citizen duped of Rs 7 9 lakh in name of FM Nirmala Sitharaman

ಸಾರಾಂಶ

ಕೇಂದ್ರ ಸಚಿವೆ ನಿರ್ಮಲಾ ಸೀತಾರಾಮನ್ ಅವರ ಡೀಪ್‌ಫೇಕ್ ವಿಡಿಯೋ ಬಳಸಿ ಷೇರು ಮಾರುಕಟ್ಟೆ ಹೂಡಿಕೆಯ ಆಮಿಷವೊಡ್ಡಿ, ಬೆಳಗಾವಿಯ ಹಿರಿಯ ನಾಗರಿಕರೊಬ್ಬರಿಗೆ ವಂಚಕರು 7.9 ಲಕ್ಷ ರೂಪಾಯಿ ವಂಚಿಸಿದ್ದಾರೆ. ಈ ಸಂಬಂಧ ಇಬ್ಬರು ಆರೋಪಿಗಳ ವಿರುದ್ಧ ಸೈಬರ್ ಕ್ರೈಂ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಬೆಳಗಾವಿ (ಮೇ.7): ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಅವರ ಹೆಸರನ್ನು ದುರುಪಯೋಗಪಡಿಸಿಕೊಂಡು ಡೀಪ್‌ಫೇಕ್ ವಿಡಿಯೋಗಳ ಮೂಲಕ ಷೇರು ಮಾರುಕಟ್ಟೆ ಹೂಡಿಕೆ ಹೆಸರಿನಲ್ಲಿ ಹಿರಿಯ ನಾಗರಿಕರೊಬ್ಬರಿಗೆ 7.9 ಲಕ್ಷ ರು.ವಂಚಿಸಿರುವ ಘಟನೆ ನಗರದಲ್ಲಿ ಬೆಳಕಿಗೆ ಬಂದಿದೆ. 

ನಗರದ ಪ್ರಕಾಶ ಗುಬ್ಬಿ (76) ವಂಚನೆಗೆ ಒಳಗಾದವರು. ಈ ಸಂಬಂಧ ಕೊಲ್ಲಾಪುರ ಮೂಲದ ಆದರ್ಶ ಆನಂದ ಹಾಗೂ ಮಹಾರಾಷ್ಟ್ರದ ಬುಲ್ದಾಣಾ ಮೂಲದ ದಾಮೋದರ ವಿರುದ್ಧ ಸೈಬರ್ ಕ್ರೈಂ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಕೇಂದ್ರ ಸಚಿವರ ಹೆಸರಿನಲ್ಲಿ ಡೀಪ್‌ಫೇಕ್ ವಿಡಿಯೋಗಳನ್ನು ಬಳಸಿ ಷೇರು ಮಾರುಕಟ್ಟೆಯಲ್ಲಿ ಹೂಡಿಕೆ ಮಾಡಿ ಕಡಿಮೆ ಅವಧಿಯಲ್ಲಿ ಲಾಭ ಗಳಿಸಿ ಎಂಬ ಆಮಿಷ ನೀಡಲಾಗುತ್ತಿತ್ತು. 

ಜಾಹೀರಾತಿನ ಲಿಂಕ್ ಕ್ಲಿಕ್ ಮಾಡಿದ್ದ ಪ್ರಕಾಶ ತಮ್ಮ ವಿವರಗಳನ್ನು ನಮೂದಿಸಿದ್ದರು. ಬಳಿಕ ಆರೋಪಿಗಳು ಕರೆ ಮಾಡಿ, ಹೂಡಿಕೆ ಮಾಡಲು ಪ್ರೇರೇಪಿಸಿ ವಂಚಿಸಿದ್ದರು.

ಫೋನ್‌ಪೇ ಮೂಲಕ ₹16,500, ಬಳಿಕ ಹೆಚ್ಚಿನ ಲಾಭದ ಭರವಸೆ ನೀಡಿ ಆರ್‌ಟಿಜಿಎಸ್ ಮೂಲಕ ಒಟ್ಟು ₹7.9 ಲಕ್ಷ ಹಣವನ್ನು ತಮ್ಮ ಖಾತೆಗಳಿಗೆ ವರ್ಗಾಯಿಸಿಕೊಂಡು ಸಂಪರ್ಕ ಕಡಿತಗೊಳಿಸಿದ್ದಾರೆ. ಹಣವನ್ನು ಹಿಂದಿರುಗಿಸಲು ಕೇಳಿದಾಗ, ಇನ್ನಷ್ಟು ಹಣ ಹೂಡಿದರೆ ಮಾತ್ರ ಮೊತ್ತ ಮತ್ತು ಲಾಭ ದೊರೆಯುತ್ತದೆ ಎಂದು ಹೇಳಿ ಮೋಸ ಮಾಡಲು ಯತ್ನಿಸಿರುವುದು ದೂರಿನಲ್ಲಿ ಉಲ್ಲೇಖಿಸಲಾಗಿದೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

Bengaluru shock: ಪಕ್ಕದ ಮನೆ ಮಹಿಳೆ ಸ್ನಾನ ಮಾಡುವಾಗ ವಿಡಿಯೋ ಮಾಡಿದ್ದ ಕಿಡಿಗೇಡಿ ಅರೆಸ್ಟ್, ನಡೆದಿದ್ದೇನು?
ತುಮಕೂರಿನ ಜೆರಾಕ್ಸ್​ ಅಂಗಡಿಯಲ್ಲಿ ಲವ್​: ಗರ್ಭಿಣಿ ಪತ್ನಿ ಬಿಟ್ಟು ಮತ್ತೊಂದು ಮದ್ವೆಗೆ ರೆಡಿಯಾದ ಪತಿ