ಮಂಕಿ ಕ್ಯಾಪ್ ಧರಿಸಿ ಮೆಡಿಕಲ್ ಶಾಪ್ ಕಳ್ಳತನ: ಖದೀಮರ ಕಳ್ಳಾಟ ಸಿಸಿಟಿವಿಯಲ್ಲಿ ಸೆರೆ!

By Ravi Janekal  |  First Published Jun 15, 2023, 11:19 AM IST

ಮಂಕಿ ಕ್ಯಾಪ್ ಧರಿಸಿ ಮೆಡಿಕಲ್ ಶಾಪ್ ಶಟರ್ ಮುರಿದು ಕಳ್ಳತನಕ್ಕೆ ಯತ್ನಿಸಿದ ಘಟನೆ ತುಮಕೂರು ನಗರದ ಬಿಎಚ್ ರಸ್ತೆಯಲ್ಲಿರುವ ಪಾಲನೇತ್ರಯ್ಯ ಮೆಡಿಕಲ್  ಶಾಪ್‌ನಲ್ಲಿ ನಡೆದಿದೆ.


ವರದಿ : ಮಹಂತೇಶ್ ಕುಮಾರ್,ಏಷ್ಯನೆಟ್ ಸುವರ್ಣ ನ್ಯೂಸ್ ತುಮಕೂರು.‌

ತುಮಕೂರು (ಜೂ.15) : ಮಂಕಿ ಕ್ಯಾಪ್ ಧರಿಸಿ ಮೆಡಿಕಲ್ ಶಾಪ್ ಶಟರ್ ಮುರಿದು ಕಳ್ಳತನಕ್ಕೆ ಯತ್ನಿಸಿದ ಘಟನೆ ತುಮಕೂರು ನಗರದ ಬಿಎಚ್ ರಸ್ತೆಯಲ್ಲಿರುವ ಪಾಲನೇತ್ರಯ್ಯ ಮೆಡಿಕಲ್  ಶಾಪ್‌ನಲ್ಲಿ ನಡೆದಿದೆ.

Tap to resize

Latest Videos

ನಿನ್ನೆ ರಾತ್ರಿ ಖದೀಮನೊಬ್ಬ ಮಂಕಿ ಕ್ಯಾಪ್ ಧರಿಸಿ ಕಳ್ಳತನ ನಡೆಸಿದ್ದಾನೆ. ಈ ಘಟನೆ ಸಿಸಿಟಿವಿಯಲ್ಲಿ ದಾಖಲಾಗಿದೆ. ಅಂಗಡಿಯ ಶಟರ್ ಮುರಿದು ಒಳಗೆ ಬರುವ ಕಳ್ಳ, ಮುಖ ಕಾಣದಂತೆ ಮಂಕಿ ಕ್ಯಾಪ್ ಧರಿಸಿ ಗುರುತು ಮರೆಸಿದ್ದಾನೆ. ಕೈಯಲ್ಲಿ ಬ್ಯಾಟರಿ ಹಿಡಿದು ನಾಲ್ಕೈದು ನಿಮಿಷಗಳ ಕಾಲ ಮೆಡಿಕಲ್ ಶಾಪ್ ನ ಮೂಲೆ ಮೂಲೆಯನ್ನು ಶೋಧಿಸಿದ್ದಾನೆ.‌

 ಕೊನೆ ಗಟ್ಟಪೆಟ್ಟಿಗೆಯಲ್ಲಿದ್ದ ಚಿಲ್ಲರೆ ಹಣ ತೆಗೆದುಕೊಂಡು ಪರಾರಿಯಾಗಿದ್ದಾನೆ. ಕಳ್ಳತನದ ಸಂಪೂರ್ಣ ಚಿತ್ರಣ ಸಿಸಿಟಿವಿಯಲ್ಲಿ ಸೆರೆಯಾಗಿದೆ.  ಎನ್.ಇ.ಪಿಎಸ್ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದ್ದು, ಕೇಸ್ ದಾಖಲಾಗಿದೆ. ಸಿಸಿಟಿವಿ ದೃಶ್ಯಾವಳಿ ಆಧರಿಸಿ ಪೊಲೀಸರು ಖದೀಮ‌ನ ಪತ್ತೆ ಹಚ್ಚಲು ಮುಂದಾಗಿದ್ದಾರೆ.

 

ಪೊಲೀಸರು ಬೆನ್ನುಹತ್ತಿದ್ದು ಒಂದು, ಸಿಕ್ಕಿದ್ದು ಮೂರು! ಶಿರಾಳಕೊಪ್ಪದ ಖತರ್ನಾಕ್ ಕಳ್ಳ ಅರೆಸ್ಟ್!

ಜಾತ್ರೆಯಲ್ಲಿ ಸರಗಳ್ಳತನ ಮಾಡುತ್ತಿದ್ದವರ ಬಂಧನ:

ತುಮಕೂರು: ಜಾತ್ರಾ ಮಹೋತ್ಸವದಲ್ಲಿ ಮಹಿಳೆಯರನ್ನೇ ಟಾರ್ಗೆಚ್‌ ಮಾಡಿ ಸರಗಳ್ಳತನ ಮಾಡುತ್ತಿದ್ದ ಅಂತರ ಜಿಲ್ಲಾ ಖದೀಮರನ್ನು ಕುಣಿಗಲ… ಪೊಲೀಸರು ಬಂಧಿಸಿದ್ದಾರೆ.

ಕುಣಿಗಲ ಪೊಲೀಸರು ಮೈಸೂರು ಮೂಲದ ಇಬ್ಬರು ಮಹಿಳೆಯರನ್ನು ಸೇರಿ ಮೂವರನ್ನು ಬಂಧಿಸಿದ್ದಾರೆ. ಬಂಧಿತರಿಂದ 378 ಗ್ರಾಂ ಚಿನ್ನಾಭರಣ ಹಾಗೂ ಒಂದು ಸ್ಕಾರ್ಪಿಯೋ ಕಾರು ವಶಪಡಿಸಿಕೊಳ್ಳಲಾಗಿದೆ. ಜಾತ್ರಾ ಮಹೋತ್ಸವದಲ್ಲಿ ಜನಸಂದಣಿ ವೇಳೆ ಮಹಿಳೆಯರನ್ನು ಟಾರ್ಗೆಚ್‌ ಮಾಡಿ ಸರ ಅಪಹರಿಸುತ್ತಿದ್ದರು. ಜಿಲ್ಲೆಯ ಚಿಕ್ಕನಾಯಕನಹಳ್ಳಿ, ಗುಬ್ಬಿ, ಅಮೃತೂರು, ಹುಲಿಯೂರುದುರ್ಗ, ದಂಡಿನಶಿವರ ಸೇರಿದಂತೆ ಹಲವು ಕಡೆ ನಡೆದ ಜಾತ್ರಾ ಮಹೋತ್ಸವದಲ್ಲಿ ಮಹಿಳೆಯರ ಬಳಿ ಚಿನ್ನದ ಸರ ಕದ್ದು ಪರಾರಿಯಾಗಿದ್ದರು.

ಘಟನೆ ಸಂಬಂಧ ತುಮಕೂರು ಜಿಲ್ಲೆಯ ವಿವಿಧ ಪೊಲೀಸ್‌ ಠಾಣೆಗಳಲ್ಲಿ 9 ದೂರು ದಾಖಲಾಗಿದೆ. ದೂರಿನ್ವಯ ಆರೋಪಿಗಳಿಗೆ ಬಲೆ ಬೀಸಿದ್ದ ಪೊಲೀಸರು ಮೂವರನ್ನು ಬಂಧಿಸಿದ್ದು ಇನ್ನುಳಿದ ಆರೋಪಿಗಳಿಗೆ ಹುಡುಕಾಟ ಮುಂದುವರೆಸಿದ್ದಾರೆ.

 ಮನೆ ಕಳವು ಆರೋಪಿಗೆ 4 ವರ್ಷ ಜೈಲು

ಉಡುಪಿ: ಇಲ್ಲಿನ ಅಂಬಾಗಿಲು ಗ್ರಾಮದ ಕಕ್ಕುಂಜೆ ಎಂಬಲ್ಲಿ ಮಹಿಳೆಯೊಬ್ಬರ ಮನೆಯಿಂದ ಚಿನ್ನಾಭರಣಗಳನ್ನು ಕಳವು ಮಾಡಿದ ಆರೋಪಿಗೆ ಉಡುಪಿ ಜಿಲ್ಲಾ ನ್ಯಾಯಾಲಯವು 4 ವರ್ಷ ಕಠಿಣ ಜೈಲು ಶಿಕ್ಷೆ ವಿಧಿಸಿದೆ.

 

ಮಾಜಿ ಸಚಿವರ ನಿವಾಸದಲ್ಲಿ ಐಷಾರಾಮಿ ಕಾರು ಕಳ್ಳತನ

2022ರ ಜ 21 ರಂದು ಆರೋಪಿ ಸಂತೋಷ ಪೂಜಾರಿ ಎಂಬಾತನು ಉಡುಪಿ ಕಕ್ಕುಂಜೆಯ ಪ್ರಮಿಳಾ ಬಂಗೇರಾ ಅವರ ಮನೆಯೊಳಗೆ ಪ್ರವೇಶಿಸಿ, ಚಿನ್ನಾಭರಣಗಳನ್ನು ಕಳವು ಮಾಡಿದ್ದು, ಉಡುಪಿ ನಗರಠಾಣೆಯ ಪೊಲೀಸ್‌ ನಿರೀಕ್ಷಕರು ಪ್ರಕರಣ ದಾಖಲಿಸಿ, ನ್ಯಾಯಾಲಯಕ್ಕೆ ದೋಷಾರೋಪಣೆ ಪತ್ರ ಸಲ್ಲಿಸಿದ್ದರು. ಪ್ರಕರಣದ ವಿಚಾರಣೆ ನಡೆದು ಆರೋಪ ಸಾಬೀತಾದ ಹಿನ್ನೆಲೆಯಲ್ಲಿ ಪ್ರಧಾನ ಸಿ.ಜೆ ಮತ್ತು ಸಿ.ಜೆ.ಎಂ. ನ್ಯಾಯಾಧೀಶ ವಿN್ನೕಶ್‌ ಕುಮಾರ್‌ ಅವರು ಆರೋಪಿಗೆ ಕಳ್ಳತನಕ್ಕೆ 3 ವರ್ಷ ಮತ್ತು ಅಕ್ರಮವಾಗಿ ಮನೆ ಪ್ರವೇಶಕ್ಕೆ 1 ವರ್ಷ ಸೇರಿ 4 ವರ್ಷ ಕಠಿಣ ಸಜೆ ಮತ್ತು 2000 ರು. ದಂಡ ದಂಡ ವಿಧಿಸಿದ್ದು, ದಂಡ ಪಾವತಿಸಲು ತಪ್ಪಿದಲ್ಲಿ 2 ತಿಂಗಳ ಹೆಚ್ಚುವರಿ ಶಿಕ್ಷೆಯನ್ನು ವಿಧಿಸಿ, ತೀರ್ಪು ನೀಡಿದ್ದಾರೆ.

click me!