ಅಯ್ಯೋ ಪಾಪ: ನಾಯಿಗಳಿಂದ ಎಸ್ಕೇಪ್‌ ಆಗಲು ಹೋಗಿ ರೈಲಿಗೆ ಡಿಕ್ಕಿ; ಇಬ್ಬರು ಮಕ್ಕಳು ಬಲಿ!

By Suvarna News  |  First Published Jan 20, 2024, 1:57 PM IST

ಮೂವರು ಸ್ನೇಹಿತರೊಂದಿಗೆ ಶಾಲೆಯಿಂದ ವಾಪಸಾಗುತ್ತಿದ್ದ ವೇಳೆ ನಾಯಿಗಳು ಹಿಂಬಾಲಿಸಲು ಆರಂಭಿಸಿದ್ದು, ಗಾಬರಿಗೊಂಡ ಮಕ್ಕಳು ಭಯಭೀತರಾಗಿ ಓಡಲು ಆರಂಭಿಸಿದ್ದಾರೆ. ಓಡುತ್ತಿರುವಾಗ, ಬಲಿಪಶುಗಳು ಸೇರಿದಂತೆ ಮೂವರು ರೈಲ್ವೆ ಟ್ರ್ಯಾಕ್ ತಲುಪಿದರು ಮತ್ತು ಸ್ವಲ್ಪ ಸಮಯದ ನಂತರ ಅನನ್ಯ ಮತ್ತು ಯುವರಾಜ್‌ರನ್ನು ಗೂಡ್ಸ್ ರೈಲಿಗೆ ಡಿಕ್ಕಿ ಹೊಡೆದಿದೆ ಎಂದು ತಿಳಿದುಬಂದಿದೆ.


ಜೈಪುರ (ಜನವರಿ 20, 2024): ಇಬ್ಬರು ಸೋದರ ಸಂಬಂಧಿಗಳು ನಾಯಿಗಳಿಂದ ತಪ್ಪಿಸಿಕೊಳ್ಳಲು ಪ್ರಯತ್ನಿಸುವಾಗ ಗೂಡ್ಸ್ ರೈಲಿಗೆ ಡಿಕ್ಕಿ ಹೊಡೆದು ಮೃತಪಟ್ಟಿರುವ ದಾರುಣ ಘಟನೆ ರಾಜಸ್ಥಾನದ ಜೋಧ್‌ಪುರದಲ್ಲಿ ನಡೆದಿದೆ. ನಗರದ ಮಾತಾ ಕಾ ಥಾನ್‌ನಲ್ಲಿ ಶುಕ್ರವಾರ ಈ ದುರ್ಘಟನೆ ನಡೆದಿದೆ. ಅಪಘಾತದ ಬಗ್ಗೆ ಮಾಹಿತಿ ಪಡೆದ ಎಸಿಪಿ ಮಂಡೋರೆ ಪಿಯೂಷ್ ಕಾವಿಯಾ ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸಿದರು. ಹಾಗೂ, ಸ್ಥಳೀಯ ಪೊಲೀಸ್‌ ಠಾಣೆಯಲ್ಲಿ ಈ ಸಂಬಂಧ ಪ್ರಕರಣ ದಾಖಲಾಗಿದೆ.

5 ಮತ್ತು 7 ನೇ ತರಗತಿಯಲ್ಲಿ ಓದುತ್ತಿದ್ದ ಮಕ್ಕಳು

Tap to resize

Latest Videos

ಮೃತ ಅನನ್ಯಾ (12) ಮತ್ತು ಯುವರಾಜ್ ಸಿಂಗ್ (14) ಗಣೇಶ್ ಪುರ ಮತ್ತು ಬನಾರ್ ನಿವಾಸಿಗಳಾಗಿದ್ದು, ಆರ್ಮಿ ಚಿಲ್ಡ್ರನ್ ಅಕಾಡೆಮಿಯಲ್ಲಿ 5 ಮತ್ತು 7 ನೇ ತರಗತಿಯಲ್ಲಿ ಓದುತ್ತಿದ್ದರು ಎಂದು ವರದಿಯಾಗಿದೆ.

ಇದನ್ನು ಓದಿ: ನಂಜನಗೂಡು: ಕಪಿಲಾ ನದಿಯಲ್ಲಿ ಮುಳುಗಿ ಮೂವರು ಅಯ್ಯಪ್ಪ ಮಾಲಾಧಾರಿಗಳ ದುರ್ಮರಣ!

ಗಾಬರಿಗೊಂಡ ಮಕ್ಕಳು ಭಯದಿಂದ ಓಡಲಾರಂಭಿಸಿದರು
ಮೂವರು ಸ್ನೇಹಿತರೊಂದಿಗೆ ಶಾಲೆಯಿಂದ ವಾಪಸಾಗುತ್ತಿದ್ದ ವೇಳೆ ನಾಯಿಗಳು ಹಿಂಬಾಲಿಸಲು ಆರಂಭಿಸಿದ್ದು, ಗಾಬರಿಗೊಂಡ ಮಕ್ಕಳು ಭಯಭೀತರಾಗಿ ಓಡಲು ಆರಂಭಿಸಿದ್ದಾರೆ. ಓಡುತ್ತಿರುವಾಗ, ಬಲಿಪಶುಗಳು ಸೇರಿದಂತೆ ಮೂವರು ರೈಲ್ವೆ ಟ್ರ್ಯಾಕ್ ತಲುಪಿದರು ಮತ್ತು ಸ್ವಲ್ಪ ಸಮಯದ ನಂತರ ಅನನ್ಯ ಮತ್ತು ಯುವರಾಜ್‌ರನ್ನು ಗೂಡ್ಸ್ ರೈಲಿಗೆ ಡಿಕ್ಕಿ ಹೊಡೆದಿದೆ ಎಂದು ತಿಳಿದುಬಂದಿದೆ.

ಸ್ಥಳದಲ್ಲೇ ಮೃತಪಟ್ಟ ಮಕ್ಕಳು

ಅಪಘಾತದ ಬಗ್ಗೆ ಮಾಹಿತಿ ಪಡೆದ ಬಾಲಕಿಯ ತಂದೆ ಪ್ರೇಮ್ ಸಿಂಗ್ ಮತ್ತು ಇತರ ಕುಟುಂಬ ಸದಸ್ಯರು ಸ್ಥಳಕ್ಕೆ ಧಾವಿಸಿದ್ದಾರೆ. ಇನ್ನು, ಮಕ್ಕಳು ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಈ ಘಟನೆ ಬಗ್ಗೆ ಎಚ್ಚೆತ್ತುಕೊಂಡ ಜೋಧ್‌ಪುರ ಮುನ್ಸಿಪಲ್ ಕಾರ್ಪೊರೇಷನ್ ತಂಡ ನಾಯಿಗಳನ್ನು ಹಿಡಿದಿದೆ ಎಂದೂ ವರದಿಯಾಗಿದೆ.

ಬೆಂಗಳೂರಿನಿಂದ ಬಳ್ಳಾರಿಗೆ ಅಜ್ಜಿ ಶವ ಕೊಂಡೊಯ್ಯುತ್ತಿದ್ದ ಕಾರು ಪಲ್ಟಿ: ಮೂವರು ಮೊಮ್ಮಕ್ಕಳ ಸಾವು

ಈ ಮಧ್ಯೆ, ಮೃತ ಬಾಲಕ ಯುವರಾಜ್ ತಂದೆ ಮದನ್ ಸಿಂಗ್ ಕರ್ನಾಟಕದಲ್ಲಿದ್ದಾರೆ ಎಂದು ತಿಳಿದುಬಂದಿದ್ದು, ಈ ಅಪಘಾತದ ಬಗ್ಗೆ ಅವರಿಗೆ ಕರೆ ಮಾಡಿ ಮಾಹಿತಿ ನೀಡಲಾಯಿತು. ಹಾಗೆ, ಜೋಧ್‌ಪುರ ಮುನ್ಸಿಪಲ್ ಕಾರ್ಪೊರೇಷನ್ ತಂಡ ನಾಯಿಗಳನ್ನು ಹಿಡಿದ ನಂತರವೇ ಕುಟುಂಬ ಸದಸ್ಯರು ಶವಗಳನ್ನು ತೆಗೆದುಕೊಂಡು ಹೋಗಿದ್ದಾರೆ ಎಂದೂ ಹೇಳಲಾಗಿದೆ.
 

click me!