ವರದಕ್ಷಿಣೆ ಕಿರುಕುಳ ನೀಡಿ ಹೆಂಡತಿ ಬಲಿಪಡೆದ, ಸರ್ಕಾರಿ ಕೆಲಸದಲ್ಲಿದ್ದಾತನಿಗೆ ಜೈಲಿನಲ್ಲಿ 63 ರೂ. ದಿನಗೂಲಿ!

By Suvarna News  |  First Published Jun 22, 2022, 11:45 AM IST

* ವರದಕ್ಷಿಣೆ ಕಿರುಕುಳ, ಆತ್ಮಹತ್ಯೆಗೆ ಶರಣಾಗಿದ್ದ ವೈದ್ಯಕೀಯ ವಿದ್ಯಾರ್ಥಿನಿ

* ಗಂಡನೇ ದೋಷಿ ಎಂದು ತೀರ್ಪು ನೀಡಿದ್ದ ಕೋರ್ಟ್‌

* ಜೈಲು ಸೇರಿದಾತನಿಗೀಗ ದಿನಗೂಲಿ ಕೆಲಸ


ತಿರುವನಂತಪುರ(ಜೂ.22): ತನ್ನ 24 ವರ್ಷದ ಪತ್ನಿ ವಿಸ್ಮಯಾಳ ವರದಕ್ಷಿಣೆ ಸಾವಿನ ಪ್ರಕರಣದಲ್ಲಿ 10 ವರ್ಷಗಳ ಕಠಿಣ ಕಾರಾಗೃಹ ಶಿಕ್ಷೆಗೆ ಗುರಿಯಾಗಿರುವ ಎಸ್ ಕಿರಣ್ ಕುಮಾರ್ ಅವರನ್ನು ಪೂಜಾಪುರದ ಕೇಂದ್ರ ಕಾರಾಗೃಹದ ಆವರಣದಲ್ಲಿರುವ ತರಕಾರಿ ತೋಟದಲ್ಲಿ ತೋಟಗಾರನ ಕರ್ತವ್ಯಕ್ಕೆ ನಿಯೋಜಿಸಲಾಗಿದೆ.

ಜೈಲಿನ ಗಡಿ ಗೋಡೆಯೊಳಗೆ ಇರುವ 9.5 ಎಕರೆ ಬಯಲು ಪ್ರದೇಶದ ಕೆಲವು ಭಾಗಗಳಲ್ಲಿ ತರಕಾರಿ ಕೃಷಿಯನ್ನು ಮಾಡಲಾಗುತ್ತದೆ. ಕೆಲವು ಪ್ರದೇಶಗಳಲ್ಲಿ, ಅಲಂಕಾರಿಕ ಸಸ್ಯಗಳನ್ನು ಸಹ ಬೆಳೆಯಲಾಗುತ್ತದೆ. ಕಿರಣ್ ಅವರಂತಹ ಆಯ್ದ ಜೈಲು ಕೈದಿಗಳನ್ನು ಮಾತ್ರ ಜೈಲಿನಲ್ಲಿ ತೋಟಗಾರಿಕೆ ಕೆಲಸಕ್ಕೆ ನಿಯೋಜಿಸಲಾಗುತ್ತದೆ.

Tap to resize

Latest Videos

ವೈದ್ಯೆ ಪತ್ನಿ ಸುಸೈಡ್‌ಗೆ ಕಾರಣವಾಗಿದ್ದ ಗಂಡ ಸರ್ಕಾರಿ ಕೆಲಸದಿಂದ ವಜಾ

ಕಿರಣ್ ಕೆಲಸ ಬೆಳಗ್ಗೆ 7.15ಕ್ಕೆ ಆರಂಭವಾಗಿ ಸಂಜೆ 5ಕ್ಕೆ ಮುಗಿಯುತ್ತದೆ. ಉಪಾಹಾರ ಮತ್ತು ಮಧ್ಯಾಹ್ನದ ಊಟಕ್ಕೆ ಸ್ವಲ್ಪ ವಿರಾಮವಿದೆ. ಸಂಜೆ ಚಹಾ ನೀಡಲಾಗುತ್ತದೆ. ಊಟದ ನಂತರ 5.45 ಕ್ಕೆ ಕೈದಿಗಳನ್ನು ಕಂಬಿ ಹಿಂದೆ ಹಾಕಲಾಗುತ್ತದೆ.

ಕಿರಣ್ ಅವರನ್ನು ಜೈಲಿನ ಬ್ಲಾಕ್ 5ರಲ್ಲಿ ಇರಿಸಲಾಗಿದೆ. ತನ್ನ ಕೆಲಸಕ್ಕೆ ಕಿರಣ್ ಪ್ರತಿದಿನ 63 ರೂ ಕೂಲಿಯಾಗಿ ಪಡೆಯುತ್ತಾರೆ. ಒಂದು ವರ್ಷ ಪೂರ್ಣಗೊಂಡ ನಂತರ, ಅವರು ರೂ 127 ದಿನಗೂಲಿ ಪಡೆಯಲು ಅರ್ಹರಾಗುತ್ತಾರೆ.

ಜೈಲಿನಲ್ಲಿ ಹೊಸಬರು ಕಾಂಪೌಂಡ್ ಗೋಡೆಯ ಹೊರಗೆ ಕೆಲಸ ಮಾಡುವಂತಿಲ್ಲ. ಸಾಮಾನ್ಯ ಅಪರಾಧಿಗಳು, ಅಪಾಯಕಾರಿ ಎಂದು ಪಟ್ಟಿಮಾಡಲ್ಪಟ್ಟವರು ಮತ್ತು ಹೆಚ್ಚಿನ ಮಾಧ್ಯಮಗಳ ಗಮನವನ್ನು ಸೆಳೆದ ಪ್ರಕರಣಗಳಲ್ಲಿ ಶಿಕ್ಷೆಗೊಳಗಾದವರನ್ನು ಸಾಮಾನ್ಯವಾಗಿ ಜೈಲಿನ ಹೊರಗೆ ಕೆಲಸಕ್ಕೆ ಕಳುಹಿಸಲಾಗುವುದಿಲ್ಲ. ಜೈಲು ಅಧಿಕಾರಿಗಳ ವಿಶ್ವಾಸ ಪಡೆದ ನಂತರವೇ ಕೈದಿಯನ್ನು ಹೊರಗಿನ ಕೆಲಸಕ್ಕೆ ಕಳುಹಿಸಲಾಗುತ್ತದೆ.

ಕೇರಳ ವೈದ್ಯ ವಿಸ್ಮಯ ಆತ್ಮಹತ್ಯೆ ಪ್ರಕರಣ: ವರದಕ್ಷಿಣೆ ಪ್ರಕರಣದಲ್ಲಿ ಪತಿ ದೋಷಿ: ಕೋರ್ಟ್‌

ತರಕಾರಿ ತೋಟದ ಹೊರತಾಗಿ, ಪೂಜಾಪುರ ಜೈಲಿನಲ್ಲಿ ಉದ್ಯಾನ ನರ್ಸರಿ ಇದೆ. ಸೋಮವಾರ, ಬುಧವಾರ ಮತ್ತು ಶುಕ್ರವಾರ ಜೈಲಿನಿಂದ ತರಕಾರಿಗಳನ್ನು ಮಾರಾಟ ಮಾಡಲಾಗುತ್ತದೆ. ಜೈಲಿನ ಅಧಿಕಾರಿಗಳ ಪ್ರಕಾರ ತರಕಾರಿ ಮಾರಾಟದಿಂದ ದಿನಕ್ಕೆ ಕನಿಷ್ಠ 10,000 ರೂ. ವ್ಯವಹಾರ ನಡೆಯುತ್ತದೆ.

ಜೈಲು ಶಿಕ್ಷೆಯ ಹೊರತಾಗಿ ಕಿರಣ್‌ಗೆ 12.55 ಲಕ್ಷ ರೂ. ದಂಡವನ್ನು ವಿಧಿಸಿದ್ದು, ಅದರಲ್ಲಿ 4 ಲಕ್ಷ ರೂ.ಗಳನ್ನು ವಿಸ್ಮಯಾ ಪೋಷಕರಿಗೆ ಪಾವತಿಸಬೇಕು. ದಂಡ ಪಾವತಿಸದಿದ್ದಲ್ಲಿ ಹೆಚ್ಚುವರಿಯಾಗಿ 27 ತಿಂಗಳು 15 ದಿನ ಹೆಚ್ಚು ಜೈಲು ಶಿಕ್ಷೆ ಅನುಭವಿಸಬೇಕಾಗುತ್ತದೆ. ವರದಕ್ಷಿಣೆ ಕಾಯ್ದೆಯಡಿ ಬರುವ ಪ್ರಕರಣವೊಂದರಲ್ಲಿ ಇಷ್ಟು ದೊಡ್ಡ ಮೊತ್ತದ ದಂಡವನ್ನು ಮೊದಲ ಬಾರಿಗೆ ವರದಿ ಮಾಡಲಾಗಿದೆ.

ಗಂಡನ ಮನೆ ಕಾಟ ತಾಳಲಾರೆ, ಮೆಸೇಜ್‌ ಕಳಿಸಿ ನೇಣಿಗೆ ಶರಣಾದ ನವವಿವಾಹಿತೆ

ಜೂನ್ 21, 2021 ರಂದು ಕೊಲ್ಲಂ ಜಿಲ್ಲೆಯ ಸಾಸ್ತಮಕೋಟಾದ ಪೊರುವಾಜಿಯಲ್ಲಿರುವ ಕಿರಣ್ ಅವರ ಮನೆಯಲ್ಲಿ ವಿಸ್ಮಯಾ ಶವವಾಗಿ ಪತ್ತೆಯಾಗಿದ್ದರು. ಕಿರಣ್ ಮತ್ತು ವಿಸ್ಮಯಾ ಮೇ 30, 2020 ರಂದು ವಿವಾಹವಾಗಿತ್ತು. ಕಿರಣ್ ಅವರನ್ನು ಈ ಹಿಂದೆ ಪ್ರಕರಣದಲ್ಲಿ ಆರೋಪಿಯನ್ನಾಗಿ ಮಾಡಿದ ನಂತರ ಸಹಾಯಕ ಮೋಟಾರು ವಾಹನ ನಿರೀಕ್ಷಕ ಹುದ್ದೆಯಿಂದ ಅಮಾನತುಗೊಳಿಸಲಾಗಿತ್ತು.

click me!