* ಪ್ರೇಯಸಿ ಹೆಣ ಮಣ್ಣಲ್ಲಿ, ಪ್ರಿಯಕರಣ ಹೆಣ ಮರದ ಕೊಂಬೆಯಲ್ಲಿ
* ಮೈಸೂರು ಜಿಲ್ಲೆಯ ತಿ.ನರಸೀಪುರ ತಾಲೂಕಿನ ತಲಕಾಡು ಕಾವೇರಿ ನಿಸರ್ಗಧಾಮದಲ್ಲಿ ನಡೆದ ಘಟನೆ
* ಇವರಿಬ್ಬರ ಸಾವಿನ ಸುತ್ತ ಅನುಮಾನದ ಹುತ್ತ
ಮೈಸೂರು(ಜೂ.22): ಅಕ್ರಮ ಸಂಬಂಧಕ್ಕೆ ಎರಡು ಹೆಣಗಳು ಬಿದ್ದ ಘಟನೆ ಜಿಲ್ಲೆಯ ತಿ.ನರಸೀಪುರ ತಾಲೂಕಿನ ತಲಕಾಡು ಕಾವೇರಿ ನಿಸರ್ಗಧಾಮದಲ್ಲಿ ಇಂದು(ಬುಧವಾರ) ನಡೆದಿದೆ. ಪ್ರೇಯಸಿಯನ್ನ ಕೊಂದು ಪ್ರಿಯಕರನೂ ಆತ್ಮಹತ್ಯೆಗೆ ಶರಣಾಗಿದ್ದಾನೆ. ಸುಮಿತ್ರಾ ಹಾಗೂ ಸಿದ್ದರಾಜು ಮೃತಪಟ್ಟ ದುರ್ದೈವಿಗಳಾಗಿದ್ದಾರೆ.
ಇದೀಗ ಇವರಿಬ್ಬರ ಸಾವಿನ ಸುತ್ತ ಅನುಮಾನದ ಹುತ್ತ ಆವರಿಸಿದೆ. ಮೃತರಿಬ್ಬರೂ ನರಸೀಪುರ ತಾಲೂಕಿನ ಎಂ.ಕೆಬ್ಬೆಹುಂಡಿ ಗ್ರಾಮದ ನಿವಾಸಿಗಳಾಗಿದ್ದಾರೆ ಅಂತ ಮಾಹಿತಿ ತಿಳಿದು ಬಂದಿದೆ. ಸಿದ್ದರಾಜು ನೇಣು ಬಿಗಿದುಕೊಂಡಿರುವ ಸ್ಥಳದಲ್ಲೇ ಸುಮಿತ್ರಾಳ ಶವವನ್ನ ಸಿದ್ದರಾಜು ಹೂತಿದ್ದಾನೆ. ಹಲವು ವರ್ಷಗಳಿಂದ ಸುಮಿತ್ರಾ ಹಾಗೂ ಸಿದ್ದರಾಜು ಮಧ್ಯೆ ಅಕ್ರಮ ಸಂಬಂಧ ಇತ್ತು ಅಂತ ಹೇಳಲಾಗುತ್ತಿದೆ.
ಬೆಳಗಾವಿ: ಅನೈತಿಕ ಸಂಬಂಧಕ್ಕೆ ಅಡ್ಡ ಬಂದ ಗಂಡನನ್ನೇ ಹತ್ಯೆಗೈದ ಪತ್ನಿ, ಪ್ರಿಯಕರ
ಶನಿವಾರ ಸುಮಿತ್ರಾ ಜೊತೆ ತಲಕಾಡಿಗೆ ತೆರಳಿದ್ದ ಸಿದ್ದರಾಜು ಬಳಿಕ ಇಬ್ಬರೂ ಹೆಣವಾಗಿ ಪತ್ತೆಯಾಗಿದ್ದಾರೆ. ಸಿದ್ದರಾಜು ಈ ಹಿಂದೆಯೂ ಅನೇಕ ಬಾರಿ ಆತ್ಮಹತ್ಯೆಗೆ ಪ್ರಯತ್ನ ಮಾಡಿದ್ದನಂತೆ. ಸಾಯುವ ಮುನ್ನ ಕೊನೆಯದಾಗಿ ತಮ್ಮದೇ ಗ್ರಾಮದ ನಿಂಗರಾಜು ಎಂಬುವರಿಗೆ ಸಿದ್ದರಾಜು ವಾಟ್ಸಾಪ್ ವಾಯ್ಸ್ ಮೆಸೇಜ್ ಮಾಡಿದ್ದನಂತೆ. ಸುಮಿತ್ರ ಕೂಡ ಸತ್ತಿದ್ದಾಳೆ ನಾನು ಸಹ ಸಾಯುತ್ತೇನೆ ನನಗೆ ಬದುಕಲು ಇಷ್ಟವಿಲ್ಲ ಅಂತ ಸಿದ್ದರಾಜು ಮೆಸೇಜ್ ಮಾಡಿದ್ದಾನೆ.
ಘಟನಾ ಸ್ಥಳಕ್ಕೆ ತಲಕಾಡು ಪೊಲೀಸ್, ಅರಣ್ಯ ಇಲಾಖೆ ಸಿಬ್ಬಂದಿಗಳು ಭೇಟಿ ಪರಿಶೀಲನೆ ನಡೆಸಿದ್ದಾರೆ. ಈ ಸಂಬಂಧ ಪ್ರಕರಣ ಕೈಗೆತ್ತಿಕೊಂಡ ಪೊಲೀಸರು ತನಿಖೆಯನ್ನ ಶುರು ಮಾಡಿದ್ದಾರೆ.