ಟೀಚರಮ್ಮನ ಕಾಮದಾಟಕ್ಕೆ ಗಂಡ ಬಲಿ, ಪೊಲೀಸ್ ತನಿಖೆಯಲ್ಲಿ ಪತ್ನಿ ನವರಂಗಿ ಆಟ ಬಯಲು

Published : Jun 12, 2022, 06:42 PM IST
ಟೀಚರಮ್ಮನ ಕಾಮದಾಟಕ್ಕೆ  ಗಂಡ ಬಲಿ, ಪೊಲೀಸ್ ತನಿಖೆಯಲ್ಲಿ ಪತ್ನಿ ನವರಂಗಿ ಆಟ ಬಯಲು

ಸಾರಾಂಶ

* ಟೀಚರಮ್ಮನ ಕಾಮದಾಟಕ್ಕೆ  ಗಂಡ ಬಲಿ * ಪೊಲೀಸ್ ತನಿಖೆಯಲ್ಲಿ ಪತ್ನಿ ನವರಂಗಿ ಆಟ ಬಯಲು   * ಗಂಡನನ್ನು ಕೊಲೆ ಮಾಡಿ ನಾಟಕವಾಡಿದ್ದ ಹೆಂಡತಿ

ವಿಜಯಪುರ, (ಜೂನ್.12): ಯುವಕನೊಬ್ಬನ ಜೊತೆಗಿನ ಕಾಮದಾಟಕ್ಕೆ ಅಡ್ಡಿಯಾಗಿದ್ದ ಗಂಡನನ್ನು ಕೊಲೆ ಮಾಡಿಸಿ ನಾಟಕ ಮಾಡಿದ್ದ ಪತ್ನಿ ನವರಂಗಿ ಆಟವನ್ನು ಪೊಲೀಸ್ರು ಬಯಲಿಗೆಳೆದಿದ್ದಾರೆ.

ಹೌದು.... ವಿಜಯಪುರದಲ್ಲಿ ಇದೇ 8ರಂದು ನಡೆದಿದ್ದ ಕೊಲೆ ಪ್ರಕರಣವೊಂದನ್ನು ಪೊಲೀಸರು ಭೇದಿಸಿದ್ದಾರೆ. ಏಕ್ತಾ ನಗರ ನಿವಾಸಿ ಪ್ರಕಾಶ ಹಳ್ಳಿ(40)ಮನೆಯಲ್ಲೇ ಕೊಲೆಯಾಗಿತ್ತು. ತನ್ನ ಪತಿ ಹೃದಯಾಘಾತದಿಂದ ಮೃತಪಟ್ಟಿರುವುದಾಗಿ ಪತ್ನಿ, ಅಂಗನವಾಡಿ ಟೀಚರ್​ ರಾಜೇಶ್ವರಿ ಹೊಸಮನಿ ಗೋಳೋ ಎಂದು ಅತ್ತಿದ್ದಳು. ಆದರೆ ಇದು ಸಹಜ ಸಾವಲ್ಲ, ಬದಲಿಗೆ ಪತ್ನಿಯೇ ಕೊಲೆ ಮಾಡಿರುವುದು ಎಂದು ಪೊಲೀಸ್ ತನಿಖೆ ವೇಳೆ ಬಟಾಬಯಾಗಿದೆ.

Crime News: 18 ವರ್ಷದ ಯುವತಿ ಮೇಲೆ ಅತ್ಯಾಚಾರ: ಸ್ನೇಹಿತನಿಗೆ ಕೃತ್ಯ ಲೈವ್‌ ಸ್ಟ್ರೀಮ್‌ ಮಾಡಿದ ದುರುಳ

30 ವರ್ಷದ ರಾಜೇಶ್ವರಿ ಅಂಗನವಾಡಿಯಲ್ಲಿ ಟೀಚರ್​ ಆಗಿದ್ದಾಳೆ. ಈಕೆ 24 ವರ್ಷದ ರವಿ ತಳವಾರ ಎಂಬಾತನನ್ನು ಪ್ರೀತಿಸುತ್ತಿದ್ದಳು. ಇವರ ಪ್ರೇಮಕ್ಕೆ ಪತಿ ಪ್ರಕಾಶ ಅಡ್ಡಿಯಾಗುತ್ತಿದ್ದರು ಎನ್ನುವ ಕಾರಣಕ್ಕೆ ಊಟದಲ್ಲಿ ನಿದ್ದೆಮಾತ್ರೆ ಕೊಟ್ಟು ನಂತರ ಸಾಯಿಸಿದ್ದಾಳೆ. ಘಟನೆಗೆ ಸಂಬಂಧಿಸಿದಂತೆ ರಾಜೇಶ್ವರಿ ಹೊಸಮನಿ, ರವಿ ತಳವಾರ ಜತೆ ಇವರಿಗೆ ಸಹಕರಿಸಿರುವ ಗುರುಪಾದ ದಳವಾಯಿ ಎಂಬಾತನನ್ನು ಪೊಲೀಸರು ಬಂಧಿಸಿದ್ದಾರೆ.

ಕೆಲ ವರ್ಷಗಳಿಂದ ಪ್ರಿಯಕರ ರವಿ ತಳವಾರನೊಂದಿಗೆ ಅನೈತಿಕ ಸಂಬಂಧ ಹೊಂದಿದ್ದಳು ರಾಜೇಶ್ವರಿ. ಈ ಹಿಂದೆ ಮೂರು ಬಾರಿ ತಿಂಗಳುಗಟ್ಟಲೇ ರವಿ ಜೊತೆ ಓಡಿ ಹೋಗಿದ್ದಳು. ಇದೇ ವಿಚಾರಕ್ಕೆ ಮನೆಯಲ್ಲಿ ಆಗಾಗ ಗಲಾಟೆ ಆಗುತ್ತಿತ್ತು. ಜೂನ್ 8ರ ರಾತ್ರಿ ಮನೆಗೆ ಬಂದ ಗಂಡನಿಗೆ ಚಿಕನ್ ನಲ್ಲಿ ನಿದ್ರೆ ಮಾತ್ರೆ ಬೆರೆಸಿ ಕೊಟ್ಟಿದ್ದಳು.

ರಾತ್ರಿ ಪ್ರಕಾಶ ನಿದ್ರೆಗೆ ಜಾರಿದ ಬಳಿಕ ಪ್ರಿಯಕರ ರವಿ ಹಾಗೂ ಆತನ ಸ್ನೇಹಿತ ಗುರುಪಾದನನ್ನು ಫೋನ್ ಮಾಡಿ ಕರೆಸಿ ಪತಿಯನ್ನು ಕತ್ತು ಹಿಸುಕಿ ಕೊಲೆ ಮಾಡಿದ್ದರು. ರಾತ್ರಿಯಿಡಿ ಗಂಡನ ಶವದೊಂದಿಗೆ ಇದ್ದು, ಬೆಳಗ್ಗೆದ್ದು ಗಂಡನಿಗೆ ಹಾರ್ಟ್ ಅಟ್ಯಾಕ್ ಆಗಿದೆ ಎಂದು ಬಿಂಬಿಸಿದ್ದಳು ರಾಜೇಶ್ವರಿ. ಗಂಡನ ಮನೆಯವರಿಗೆ ಸಂಶಯ ಬಂದಿದ್ದು, ಮಗನ ಸಾವಿನ ಕುರಿತು ಪ್ರಕಾಶ ತಂದೆ ಲಕ್ಷ್ಮಣ ಸಂಶಯ ವ್ಯಕ್ತಪಡಿಸಿ ದೂರು ದಾಖಲಿಸಿದ್ದರು. ಬಿಳಿಕ ಪೊಳಿಸರು ತನಿಖೆ ನಡೆಸಿದಾಗ ಪ್ರಕರಣ ಬೆಳಕಿಗೆ ಬಂದಿದೆ. 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಎರಡು ಮಕ್ಕಳ ತಾಯಿ ಸಹವಾಸ ಮಾಡಿ ಮಸಣ ಸೇರಿದ ಯುವಕ: ತಾಯಿಯ ಲೀವಿಂಗ್ ಪಾರ್ಟನರ್ ಕತೆ ಮುಗಿಸಿದ ಅಮ್ಮ ಮಕ್ಕಳು
ರಿಯಲ್ ಎಸ್ಟೇಟ್ ಉದ್ಯಮಿಯ ಬರ್ಬರ ಹತ್ಯೆ: ಮಗ ಓದುತ್ತಿದ್ದ ಶಾಲೆಯ ಮುಂದೆಯೇ ಕೃತ್ಯ