ದೇಶದಲ್ಲಿ ನಿಷೇಧ ಮಾಡಲಾಗಿರುವ ಅಪ್ರಾಪ್ತ ಬಾಲಕಿಯರ ವೀಡಿಯೋಗಳನ್ನು ಅಪ್ಲೋಡ್ ಮಾಡಲು 13 ನಕಲಿ ಸಾಮಾಜಿಕ ಜಾಲತಾಣ ಸೃಷ್ಟಿಸಿದ್ದ ವಿಚಿತ್ರ ಕಾಮುಕ ಈಗ ಪೊಲೀಸರ ಅತಿಥಿ ಆಗಿದ್ದಾನೆ.
ವರದಿ - ಷಡಕ್ಷರಿ ಕಂಪೂನವರ್ ಏಷ್ಯಾನೆಟ್ ಸುವರ್ಣ ನ್ಯೂಸ್
ವಿಜಯಪುರ (ಆ.06): ಸಾಮಾಜಿಕ ಜಾಲತಾಣಗಳಲ್ಲಿ ನಕಲಿ ಖಾತೆ ಸೃಷ್ಟಿಸಿ ಮಾಡಬಾರದ ಕೆಲಸ ಮಾಡ್ತಿದ್ರೆ ಎಚ್ಚೆತ್ತುಕೊಳ್ಳಿ. ಅಪ್ರಾಪ್ತೆಯರ ಅಶ್ಲೀಲ ವಿಡಿಯೋ ಅಪ್ಲೋಡ್ ಮಾಡಿದ್ರೆ ಖಾಕಿ ಕೈಗೆ ತಗಲಾಕಿಕೊಳ್ಳೋದು ಗ್ಯಾರಂಟಿ. ನಕಲಿ ಫೇಸ್ಬುಕ್ ಖಾತೆ, ನಕಲಿ ಇನ್‌ಸ್ಟಾಗ್ರಾಂ ಖಾತೆಗಳನ್ನ ಸೃಷ್ಟಿ ಮಾಡಿ. ಯಾರಿಗು ತಿಳಿಯದಂತೆ ಅಶ್ಲೀಲತೆ ಹರಡಿಸುವ ಕೆಲಸ ಮಾಡಿದ್ರೆ ಸೈಬರ್ ಪೊಲೀಸರು ಕೃಷ್ಣನ ಜನ್ಮಸ್ಥಾನದ ದರ್ಶನ ಮಾಡಿಸೋದು ಪಕ್ಕಾ.. ಹೀಗೆ ನಕಲಿ ಅಕೌಂಟ್ ಗಳ ಮೂಲಕ ಅಪ್ರಾಪ್ತೆಯರ ನಗ್ನ ದೃಶ್ಯಗಳನ್ನ ವೈರಲ್ ಮಾಡ್ತಿದ್ದ ವಿಜಯಪುರದ ಆಸಾಮಿಯೊಬ್ಬ ಸೈಬರ್ ಪೊಲೀಸರಿಗೆ ತಗಲಾಕಿಕೊಂಡಿದ್ದಾನೆ.
ಅಪ್ರಾಪ್ತೆಯರ ನಗ್ನ ದೃಶ್ಯ ಅಪ್ಲೋಡ್ ಮಾಡ್ತಿದ್ದ ಖದೀಮ: ಸಾಮಾಜಿಕ ಜಾಲತಾಣಗಳು ಪ್ರಭಾವಿಯಾದಂತೆ ಅದರ ಸದುಪಯೋಗ ಎಷ್ಟಿದೆಯೋ ಅದರ ದುಪ್ಪಟ್ಟು ಅದರ ದುರ್ಬಳಕೆ ನಡೆಯುತ್ತಿದೆ. ಸಾಮಾಜಿಕ ಜಾಲತಾಣಗಳನ್ನ ಕೆಲವರು ಕೆಟ್ಟ ಕೆಲಸಗಳಿಗೆ ಉಪಯೋಗಿಸಿಕೊಳ್ತಿದ್ದಾರೆ. ನಕಲಿ ಅಕೌಂಟ್ ಗಳನ್ನ ತೆರೆದು ಅಶ್ಲೀಲ ಹಬ್ಬಿಸೋ ಕೆಲಸ ಮಾಡ್ತಿದ್ದಾರೆ. ವಿಜಯಪುರ ನಗರದ ಹವೇಲಿ ಗಲ್ಲಿಯ ನಿವಾಸಿ ಅಬ್ದುಲ್ ಗೌರ್ ಎಂಬಾತ ಫೇಸ್ಬುಕ್ ಹಾಗೂ ಇನ್‌ಸ್ಟಾಗ್ರಾಮ್ ನಲ್ಲಿ ನಕಲಿ ಅಕೌಂಟ ತೆರೆದು ಅಪ್ರಾಪ್ತೆಯರ ಅಶ್ಲೀಲ ವಿಡಿಯೋಗಳನ್ನ ಅಪ್ಲೋಡ್ ಮಾಡುತ್ತಿದ್ದನು. ಈ ಬಗ್ಗೆ ನಿಗಾ ಇಟ್ಟಿದ್ದ ಟಿಪ್‌ಲೈನ್ ಸಂಬಂಧಪಟ್ಟ ಸೈಬರ್ ಪೊಲೀಸರಿಗೆ ಮಾಹಿತಿ ರವಾನಿಸಿತ್ತು. ಮಾಹಿತಿ ಸಿಗ್ತಿದ್ದಂತೆ ತಡಮಾಡದ ವಿಜಯಪುರ ಸಿಇಎನ್ ಪೊಲೀಸರು ಆರೋಪಿ ಅಬ್ದುಲ್ ಗೌರನನ್ನ ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದಾರೆ. ಈ ವೇಳೆ ತನ್ನದೆ ಮೊಬೈಲ್ ನಿಂದ ನಕಲಿ ಖಾತೆಗಳನ್ನ ಸೃಷ್ಟಿಸಿ ಅಪ್ರಾಪ್ತೆಯರ ಅಶ್ಲೀಲ ವಿಡಿಯೋಗಳನ್ನ ಅಪ್ಲೋಡ್ ಮಾಡಿದ್ದ ಎನ್ನುವ ವಿಚಾರ ಬಯಲಾಗಿದೆ.
Bengaluru: ಟ್ರಾಫಿಕ್ ಹೆಡ್ ಕಾನ್ಸ್‌ಸ್ಟೇಬಲ್ ಸಾವಿಗೆ ರೋಚಕ ಟ್ವಿಸ್ಟ್: ಆ.26ಕ್ಕೆ ಮದುವೆ ನಿಶ್ಚಯ ಆಗಿತ್ತು
12 ನಕಲಿ ಅಕೌಂಟ್ ಸೃಷ್ಟಿ, ವಿಚಿತ್ರ ರೀತಿಯ ಹೆಸರಿಟ್ಟು ವಿಡಿಯೋ ವೈರಲ್: ಕಾಮುಕ ಅಬ್ದುಲ್ ಗೌರ್ ಅಪ್ರಾಪ್ತ ಬಾಲಕಿಯರ ಅಶ್ಲೀಲ ದೃಶ್ಯಗಳನ್ನ ಅಪ್ಲೋಡ್ ಮಾಡೋದಕ್ಕಾಗಿಯೆ 12 ನಕಲಿ ಖಾತೆಗಳನ್ನ ತೆರೆದಿದ್ದ. ಫೇಸ್ಬುಕ್ ಹಾಗೂ ಇನ್‌ಸ್ಟಾಗ್ರಾಮ್ ಗಳಲ್ಲಿ ವಿಚಿತ್ರ ರೀತಿಯ ಹೆಸರಿನಲ್ಲಿ ನಕಲಿ ಅಕೌಂಟ್ ಸೃಷ್ಟಿಸಿದ್ದ. ಅವುಗಳ ಮೂಲಕವೇ ಅಪ್ರಾಪ್ತೆಯರ ಅಶ್ಲೀಲ ವಿಡಿಯೋ ವೈರಲ್ ಮಾಡ್ತಿದ್ದ. ಇನ್ನು ನಕಲಿ ಅಕೌಂಟ್ ಗಳಿಗು ವಿಚಿತ್ರ ರೀತಿಯಲ್ಲಿ ಹೆಸರಿಟ್ಟಿದ್ದನು. Ggg77 , Gff77, Fgg77, Bgg66 ಹೀಗೆ ವಿಚಿತ್ರ ಹೆಸರುಗಳಲ್ಲಿ 12 ನಕಲಿ ಅಕೌಂಟ್ ಸೃಷ್ಟಿಸಿದ್ದ ಎನ್ನಲಾಗಿದೆ. ವಿಚಾರಣೆ ವೇಳೆ ಭಯಾನಕ ಮಾಹಿತಿಗಳು ಹೊರಬಿದ್ದಿವೆ..
ಡಾರ್ಕ್ ವೆಬ್ ಆಗಿತ್ತು ಈತನ ಸೋರ್ಸ್:
ಈತ ಅದೇಷ್ಟು ಖತರ್ನಾಕ್ ಆಗಿದ್ದನೆಂದರೆ ಕಾನೂನು ಪ್ರಕಾರ ನಿಷೇಧವಿರುವ ಡಾರ್ಕ್ ವೆಬ್ ಈತನ ಅಶ್ಲೀಲ ವಿಡಿಯೋಗಳ ಸೋರ್ಸ್ ಆಗಿತ್ತು ಎನ್ನುವುದು. ಸೈಬರ್ ಕಾನೂನುಗಳ ಪ್ರಕಾರ ಡಾರ್ಕ್ ವೆಬ್ ಗಳ ಸರ್ಚ್, ಅಲ್ಲಿನ ನಿಷೇಧಿತ ವಿಡಿಯೋ ಡೌನ್ಲೋಡ್, ಡಾರ್ಕ್ ವೆಬ್ ಗಳಿಗೆ ಅಶ್ಲೀಲ ವಿಡಿಯೋಗಳ ಅಪ್ಲೋಡ ಶಿಕ್ಷಾರ್ಹ ಅಪರಾಧವಾಗಿದೆ. ಇಂಥ ಡಾರ್ಕ್ ವೆಬ್ ಮೂಲಕ ಗೌರ್ ಅಪ್ರಾಪ್ತೆಯರ ಅಶ್ಲೀಲ ವಿಡಿಯೋ ಸಂಗ್ರಹಿಸಿಕೊಳ್ತಿದ್ದ ಎನ್ನುವ ಸ್ಪೋಟಕ ಮಾಹಿತಿ ಲಭ್ಯವಾಗಿದೆ. ಅಪ್ರಾಪ್ತ ಬಾಲಕಿಯ ಮೇಲಿನ ಅತ್ಯಾಚಾರ, ಟಾರ್ಚರಿಂಗ್ ಪೋರ್ನ್ ವಿಡಿಯೋ ಡೌನಲೋಡ್ ಮಾಡಿಕೊಳ್ತಿದ್ದ. ಬಳಿಕ ಅವುಗಳನ್ನ ತಾನು ಸೃಷ್ಟಿಸಿದ್ದ ನಕಲಿ ಅಕೌಂಟ್ ಗಳ ಮೂಲಕ ಅಪ್ಲೋಡ್ ಮಾಡಿ ವಿಕೃತಿ ಮೆರೆಯುತ್ತಿದ್ದನು.
ಪಂಜುರ್ಲಿ ದೈವದ ರೂಪವಾಗಿ ಪೂಜಿಸುತ್ತಿದ್ದ ಕಾಡು ಹಂದಿಯನ್ನು, ಬಾಂಬ್ ಇಟ್ಟು ಹತ್ಯೆಗೈದ ದುಷ್ಕರ್ಮಿಗಳು
ಮೊಬೈಲ್, ಸಿಮ್ ಕಾರ್ಡ್ ವಶಕ್ಕೆ ಪಡೆದ ಸೈಬರ್ ಪೊಲೀಸರು: ಈತನ ಕೃತ್ಯಗಳ ಬಗ್ಗೆ ಮಾಹಿತಿ ಸಿಗ್ತಿದ್ದಂತೆ ವಶಕ್ಕೆ ಪಡೆದ ವಿಜಯಪುರ ಸೈಬರ್ ಪೊಲೀಸರು ಆತ ಕೃತ್ಯಕ್ಕೆ ಬಳಕೆ ಮಾಡ್ತಿದ್ದ ಮೊಬೈಲ್ ಪೋನ್, ಸಿಮ್ ಕಾರ್ಡ್ ವಶಕ್ಕೆ ಪಡೆದಿದ್ದಾರೆ. ಜೊತೆಗೆ ಆತನ ವಿಕೃತಿ ಮೆರೆಯಲು ಸೃಷ್ಟಿಸಿದ್ದ ನಕಲಿ ಅಕೌಂಟ್ ಗಳನ್ನ ಬ್ಲಾಕ್ ಮಾಡಿದ್ದಾರೆ. ಕಾನೂನು ರಿತ್ಯಕ್ರಮ ಜರುಗಿಸಿದ್ದಾರೆ.