
ಲಖನೌ(ಆ.06):ಇಬ್ಬರು ಅಪ್ರಾಪ್ತ ಬಾಲಕರು. ಪೌಲ್ಟ್ರಿ ಫಾರ್ಮ್‌ನಿಂದ ಕೋಳಿ ಕದ್ದಿದ್ದಾರೆ ಅನ್ನೋ ಆರೋಪದಡಿ ಇಬ್ಬರು ಬಾಲಕರನ್ನು ಹಿಡಿದು ಕಂಬಕ್ಕೆ ಕಟ್ಟಿ ಹಾಕಿ ನಗ್ನಗೊಳಿಸಿದ್ದಾರೆ. ಬಳಿಕ ತೀವ್ರವಾಗಿ ಥಳಿಸಲಾಗಿದೆ. ಬಾಟಲಿಯಲ್ಲಿಟ್ಟ ಮೂತ್ರವನ್ನು ಕುಡಿಸಿದ್ದು ಮಾತ್ರವಲ್ಲ, ಖಾರಪುಡಿಯನ್ನು ಖಾಸಗಿ ಅಂಗಕ್ಕೆ ಹಾಕಿ್. ಈ ವಿಕೃತಿಯನ್ನು ವಿಡಿಯೋ ಮಾಡಿ ಹರಿಬಿಟ್ಟ ಘಟನೆ ಉತ್ತರ ಪ್ರದೇಶದ ಸಿದ್ದಾರ್ಥ್‌ನಗರದಲ್ಲಿ ನಡೆದಿದೆ. ಈ ಕುರಿತು ಪ್ರಕರಣ ದಾಖಲಿಸಿರುವ ಪೊಲೀಸರು 6 ಮಂದಿಯನ್ನು ಬಂಧಿಸಿದ್ದಾರೆ.
ಕೋಳಿ ಫಾರ್ಮ್‌ನಿಂದ ಕೋಳಿ ಕದ್ದಿದ್ದಾರೆ ಎಂದು ಆರೋಪಿಸಿ ಇಬ್ಬರು ಅಪ್ರಾಪ್ತ ಬಾಲಕರನ್ನು ಆರೋಪಿಗಳು ಕಂಬಕ್ಕೆ ಕಟ್ಟಿಹಾಕಿದ್ದಾರೆ. ಪೌಲ್ಟ್ರಿಫಾರ್ಮ್‌ನಲ್ಲಿನ ಕಂಬಕ್ಕೆ ಕಟ್ಟಿ ಹಾಕಿದ ದುಷ್ಕರ್ಮಿಗಳು, ತೀವ್ರವಾಗಿ ಥಳಿಸಿದ್ದಾರೆ.ಬಳಿಕ ಒತ್ತಾಯಪೂರ್ವಕವಾಗಿ ಮೆಣಸಿನ ಕಾಯಿಯನ್ನು ಕಚ್ಚಿ ಕಚ್ಚಿ ತಿನ್ನುವಂತೆ ಮಾಡಿದ್ದಾರೆ. ಈ ಕ್ರೂರತೆ ಬಳಿಕ ಬಾಟಲಿಯಲ್ಲಿ ತುಂಬಿದ್ದ ಮೂತ್ರವನ್ನು ಒತ್ತಾಯಪೂರ್ವಕವಾಗಿ ಕುಡಿಸಿದ್ದಾರೆ.
ವಿದ್ಯಾರ್ಥಿನಿ ನೀರಿನ ಬಾಟಲಿಯೊಳಗೆ ಮೂತ್ರ ಬೆರೆಸಿದ ಕಿಡಿಗೇಡಿಗಳು, ಶುರುವಾಯ್ತು ಕೋಮು ಸಂಘರ್ಷ!
10 ವರ್ಷ ಹಾಗೂ 14 ವರ್ಷದ ಇಬ್ಬರು ಬಾಲಕರನ್ನು ನಗ್ನಗೊಳಿಸಿದ ಕಿಡಿಗೇಡಿಗಳು ಖಾರದ ಪುಡಿಯನ್ನು ಖಾಸಗಿ ಅಂಗಕ್ಕೆ ಎರಚಿದ್ದಾರೆ. ತೀವ್ರವಾಗಿ ನೋವಿನಿಂದ ಚೀರಾಡುತ್ತಿರುವ ಬಾಲಕರು ಬಿಟ್ಟು ಬಿಡುವಂತೆ ಪರಿಪರಿಯಾಗಿ ಬೇಡಿದ್ದಾರೆ. ಆದರೆ ಬಾಲಕರ ಮನಿವಿಗೆ ಕಿವಿಗೊಡದೆ ವಿಕೃತಿ ಮೆರೆದಿದ್ದಾರೆ. ಇದರ ಜೊತೆಗೆ ಸಂಪೂರ್ಣ ವಿಕೃತಿಯ ವಿಡಿಯೋವನ್ನು ಮಾಡಿ ವ್ಯಾಟ್ಸ್ಆ್ಯಪ್ ಮೂಲಕ ಹರಿಬಿಟ್ಟಿದ್ದಾರೆ.
ಈ ವಿಡಿಯೋ ಹಲವು ಗ್ರೂಪ್‌ಗಳಲ್ಲಿ ಹರಿದಾಡಿದೆ.ಸಿದ್ದಾರ್ಥ್‌ನಗರ ಪೊಲೀಸ್ ಪೇದೆಯ ಗ್ರೂಪ್ ಒಂದಕ್ಕೆ ಬಂದಿದೆ. ಈ ವಿಡಿಯೋ ಹಾಗೂ ಮಾತುಗಳನ್ನು ಆಲಿಸಿದ ಪೊಲೀಸ್ ಪೇದೆಗೆ ಇದೆ ಜಿಲ್ಲೆಯಲ್ಲಿ ನಡೆದಿರುವ ಅನುಮಾನವನ್ನು ವ್ಯಕ್ತಪಡಿಸಿದ್ದಾರೆ. ಬಳಿಕ ಈ ವಿಡಿಯೋವನ್ನು ಹಿರಿಯ ಪೊಲೀಸ್ ಅಧಿಕಾರಿಗಳಿಗೆ ಫಾರ್ವರ್ಡ್ ಮಾಡಿದ್ದಾರೆ.
ಶಾಲಾ ಬಾಲಕಿಯರ ಕುಡಿಯುವ ನೀರಿನ ಬಾಟಲ್‌ನಲ್ಲಿ ಮೂತ್ರ ಮಿಕ್ಸ್, ಮಧ್ಯಪ್ರದೇಶದಲ್ಲಿ ಮತ್ತೊಂದು ಘಟನೆ!
ಪ್ರಕರಣ ದಾಖಳಿಸಿಕೊಂಡ ಪೊಲೀಸರು ತನಿಖೆ ಆರಂಭಿಸಿದ್ದಾರೆ. ಜಿಲ್ಲೆಯ ಹಲವು ಪೌಲ್ಟ್ರಿ ಫಾರ್ಮ್‌ಗೆ ತೆರಳಿ ತನಿಖೆ ಆರಂಭಿಸಿದ್ದಾರೆ. ಕೊನೆಗೂ ಘಟನೆ ನಡೆದ ಪೌಲ್ಟ್ರಿ ಫಾರ್ಮ್ ಪತ್ತೆಹಚ್ಚಿ ಆರೋಪಿಗಳನ್ನು ಬಂಧಿಸಿದ್ದಾರೆ. ಇದುವರೆಗೆ 6 ಆರೋಪಿಗಳನ್ನು ಈ ಪ್ರಕರಣ ಸಂಬಂಧ ಬಂಧಿಸಲಾಗಿದೆ. ಇನ್ನಿಬ್ಬರಿಗಾಗಿ ಹುಡುಕಾಟ ಆರಂಭಗೊಂಡಿದೆ.
ಆರೋಪಿಗಳ ಪ್ರಕಾರ, ಇಬ್ಬರು ಬಾಲಕರು ಕೋಳಿಯನ್ನು ಕದ್ದು, ಕ್ಯಾಶ್ ಕೌಂಟರ್‌ನಿಂದ ಹಣ ಎಗರಿಸುವ ಪ್ರಯತ್ನ ಮಾಡಿದ್ದಾರೆ. ಇದನ್ನು ಗಮನಿಸಿದ ಕೋಳಿ ಫಾರ್ಮ್ ಸಿಬ್ಬಂದಿಗಳು ಬಾಲಕರಿಬ್ಬರನ್ನು ಅಟ್ಟಾಡಿಸಿಕೊಂಡು ಹಿಡಿದಿದ್ದಾರೆ. ಇಬ್ಬರು ಬಾಲಕರಿಗೆ ಪಾಠ ಕಲಿಸಲು ಅಮಾನವೀಯವಾಗಿ ನಡೆದುಕೊಂಡಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ