ವಿಜಯಪುರ ಜಿಲ್ಲೆಯ ಅಂಗಡಗೇರಿ ಗ್ರಾಮದ ಹೊರವಲಯದ ಜಮೀನಿನಲ್ಲಿ ಮರವೊಂದಕ್ಕೆ ಅಪ್ರಾಪ್ತ ವಯಸ್ಕ ಪ್ರೇಮಿಗಳು ಒಂದೇ ವೇಲ್‌ನಿಂದ ನೇಣು ಹಾಕಿಕೊಂಡು ಸಾವನ್ನಪ್ಪಿದ ಸ್ಥಿತಿಯಲ್ಲಿ ಶವಗಳು ಪತ್ತೆಯಾಗಿವೆ.
ವಿಜಯಪುರ (ಮೇ 3): ವಿಜಯಪುರ ಜಿಲ್ಲೆಯ ಅಂಗಡಗೇರಿ ಗ್ರಾಮದ ಹೊರವಲಯದ ಜಮೀನಿನಲ್ಲಿ ಮರವೊಂದಕ್ಕೆ ಅಪ್ರಾಪ್ತ ವಯಸ್ಕ ಪ್ರೇಮಿಗಳು ಒಂದೇ ವೇಲ್‌ನಿಂದ ನೇಣು ಹಾಕಿಕೊಂಡು ಸಾವನ್ನಪ್ಪಿದ ಸ್ಥಿತಿಯಲ್ಲಿ ಶವಗಳು ಪತ್ತೆಯಾಗಿವೆ.
ಇಬ್ಬರೂ ಅಪ್ರಾಪ್ತ ವಯಸ್ಕರಾಗಿದ್ದು, ಶನಿವಾರ ಮನೆಯಿಂದ ಪರಾರಿಯಾಗಿದ್ದರು. ಇನ್ನು ಕಳೆದ ಮೂರು ದಿನಗಳಿಂದ ಇಬ್ಬರನ್ನೂ ಮನೆಯವರು ಹುಡುಕಾಡುತ್ತಿದ್ದರು. ಆದರೆ, ಎಲ್ಲಿಯೂ ಪತ್ತೆಯಾಗಿರಲಿಲ್ಲ. ಇಬ್ಬರೂ ಪ್ರೇಮಿಗಳು ಅಪ್ತಾಪ್ತ ವಯಸ್ಕರಾಗಿದ್ದು, ಹುಡುಗಿಗೆ 15 ವರ್ಷ ಹಾಗೂ ಹುಡಗನಿಗೆ 16 ವರ್ಷ ಎಂದು ತಿಳಿದುಬಂದಿದೆ. ವಿಜಯಪುರ ಜಿಲ್ಲೆಯ ನಿಡಗುಂದಿ ತಾಲ್ಲೂಕಿನ ಅಂಗಡಗೇರಿ ಗ್ರಾಮದ ಹೊರವಲಯದ ಜಮೀನಿನಲ್ಲಿ ಮರವೊಂದಕ್ಕೆ ಒಂದೇ ವೇಲ್‌ನಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಸ್ಥಿತಿಯಲ್ಲಿ ಶವಗಳು ನೇತಾಡುತ್ತಿವೆ.
undefined
ಮಂಗ್ಳೂರ್ ಮುಸ್ಲಿಂ ಹುಡುಗಿ- ಬಳ್ಳಾರಿ ಹಿಂದೂ ಹುಡ್ಗ: ಬೆಂಗ್ಳೂರಲ್ಲಿ ಲವ್ ಮಾಡ್ತಾ ಸತ್ತೇ ಹೋದ ಯುವತಿ!
ಎನ್‌ಟಿಪಿಸಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ: ಮೃತ ಪ್ರೇಮಿಗಳನ್ನು ಸಕ್ಕೂಬಾಯಿ ಮಾದರ (15) ಹಾಗೂ ಸಚಿನ್ ಮಾದರ (16) ಎಂದು ಗುರುತಿಸಲಾಗಿದೆ. ಇನ್ನು ಕೆಲಸದ ನಿಮಿತ್ತ ಗ್ರಾಮಸ್ಥರು ಜಮೀನಿಗೆ ತೆರಳಿದ್ದಾಗ ಶವಗಳು ಮರದಲ್ಲಿ ನೇತಾಡುವುದನ್ನು ಕಂಡಿದ್ದಾರೆ. ಕೂಡಲೇ ಈ ಘಟನೆಯನ್ನು ಊರಿನ ಹಿರಿಯರಿಗೆ ತಿಳಿಸಿದ್ದಾರೆ. ಕೂಡಲೇ ಗ್ರಾಮಸ್ಥರು ಪೊಲೀಸ್ ಠಾಣೆಗೆ ಮಾಹಿತಿ ನೀಡಿದ್ದಾರೆ. ನಂತರ, ಸ್ಥಳಕ್ಕಾಗಮಿಸಿದ ಪೊಲೀಸರು ಸ್ಥಳ ಪರಿಶೀಲನೆ ನಡೆಸಿ, ಸ್ಥಳೀಯರ ನೆರವಿನಿಂದ ಮೃತ ದೇಹಗಳನ್ನು ಮರದಿಂದ ಕೆಳಗಿಳಿಸಿ, ಮರಣೋತ್ತರ ಪರೀಕ್ಷೆಗಾಗಿ ಆಸ್ಪತ್ರೆಗೆ ರವಾನಿಸಿದ್ದಾರೆ. ಎನ್‌ಟಿಪಿಸಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು, ಪ್ರಕರಣ ದಾಖಲಾಗಿದೆ.
ಬೆಂಗಳೂರಲ್ಲಿ ಲವ್ ಫೇಲ್ಯೂರ್ ಆಗಿ ಯುವತಿ ಆತ್ಮಹತ್ಯೆ: ಹಲವು ದಿನಗಳಿಂದ ಲವ್ ಮಾಡುತ್ತಿದ್ದರೂ ಪ್ರೀತಿ ಫಲಿಸದ ಹಿನ್ನೆಲೆಯಲ್ಲಿ ಕಾಲೇಜು ವಿದ್ಯಾರ್ಥಿಯೊಬ್ಬಳು ಬೆಂಗಳೂರಿನ ಬಿನ್ನಿಪೇಟೆ ಬಳಿಯ ಪೊಲೀಸ್ ಕ್ವಾಟ್ರಸ್‌ನಿಂದ ಜಿಗಿದು ಆತ್ಮಹತ್ಯೆ ಮಾಡಿಕೊಂಡಿರುವ ದುರ್ಘಟನೆ ನಡೆದಿತ್ತು. ಕಾಲೇಜು ವಿದ್ಯಾರ್ಥಿನಿ ತಾನು ಆತ್ಮಹತ್ಯೆ ಮಾಡಿಕೊಳ್ಳುವ ಮುನ್ನ ಡೆತ್ ನೋಟ್ ಬರೆದಿಟ್ಟು, ಬಿನ್ನಿಪೇಟೆ ಬಳಿಯ ಪೊಲೀಸ್ ಕ್ವಾಟ್ರಸ್‌ನ ಏಳನೇ ಮಹಡಿ ಕಟ್ಟಡದಿಂದ ಹಾರಿದ್ದಾಳೆ. ಇನ್ನು ಮೃತ ಕಾಲೇಜು ಯುವತಿಯನ್ನು ಆಯಿಶಾ ಬಿ.ಆರ್.ಆತ್ಮಹತ್ಯೆ ಮಾಡಿಕೊಂಡ ವಿದ್ಯಾರ್ಥಿನಿ ಆಗಿದ್ದಾಳೆ. ಸೇಂಟ್ ಆಗ್ನೆಸ್ ಕಾಲೇಜಿನಲ್ಲಿ ಬಿಎಸ್‌ಸಿ ಕಂಪ್ಯೂಟರ್ ಸೈನ್ಸ್ ಅಭ್ಯಾಸ ಮಾಡುತ್ತಿದ್ದಳು. ಆದರೆ, ಈಗ ಬೆಂಗಳೂರಿಗೆ ಬಂದಿದ್ದು, ಪ್ರೇಮ ವೈಫಲ್ಯದ ಹಿನ್ನೆಲೆಯಲ್ಲಿ ಕಾಟನ್‌ಪೇಟೆ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿನ ಪೊಲೀಸ್ ಕ್ವಾಟ್ರಸ್‌ನಿಂದ ಬಿದ್ದು ಸಾವನ್ನಪ್ಪಿದ್ದಾಳೆ.
ಇನ್ನು ಡೆತ್ ನೋಟ್‌ನಲ್ಲಿ ಏನೇನಿದೆ? 'ಈ ನನ್ನ ಸಾವಿಗೆ ಕಾರಣ ಯಾರು ಅಲ್ಲ. ಈ ಜೀವನದ ಮೇಲೆ ಜಿಗುಪ್ಸೆ ಬಂದಿದೆ. ಆದ್ದರಿಂದ ನಾನೇ ಸ್ವ ಇಚ್ಛೆಯಿಂದ ಕಟ್ಟಡದ ಮೇಲಿಂದ ಹಾರಿ ಆತ್ಮಹತ್ಯೆ ಮಾಡಿಕೊಂಡಿರುತ್ತೇನೆ. ನಾನು ನನ್ನ ಕುಟುಂಬಕ್ಕೆ ಹಾಗೂ ಭೀಮೇಶ್ ನಾಯಕ್ ಮೇಲೆ ದೂರು ನೀಡಿದ್ದೆನು. ನಾನು ನೀಡಿದ್ದ ಸುಳ್ಳು ದೂರಿನಿಂದ ಪಶ್ಚಾತ್ತಾಪ ಪಟ್ಟುಕೊಳ್ಳುತ್ತಿದ್ದೇನೆ. ಭೀಮೇಶ್ ನಾಯಕ್ ತುಂಬ ಸೂಕ್ಷ್ಮ ಮತ್ತು ಮುಗ್ಧ ವ್ಯಕ್ತಿ. ಅವರ ಮತ್ತು ನನ್ನ ಮಧ್ಯೆ ಯಾವುದೇ ದೈಹಿಕ ಸಂಪರ್ಕ ಇರುವುದಿಲ್ಲ' ಎಂದು ಪತ್ರದಲ್ಲಿ ಬರೆಯಲಾಗಿದೆ.
ಲವ್ ಫೇಲ್ಯೂರ್: ಪೊಲೀಸ್ ಕ್ವಾಟ್ರಸ್ ಮೇಲಿಂದ ಬಿದ್ದು ವಿದ್ಯಾರ್ಥಿನಿ ಆತ್ಮಹತ್ಯೆ!
ಪಶ್ಚಾತ್ತಾಪದಿಂದ ಹೊರಬರಲು ಆಗುತ್ತಿಲ್ಲ: 'ನಾನು ಮಾಡಿದ ಈ ಸುಳ್ಳು ಕೇಸಿನಿಂದಾಗಿ ಅವರ ತಂದೆ ಅನಾರೋಗ್ಯಕ್ಕೀಡಾಗಿದ್ದಾರೆ. ನನ್ನಿಂದ ಎರಡು ಕುಟುಂಬಗಳಿಗೂ ತುಂಬಾ ನೋವಾಗಿದೆ. ಈ ಪಶ್ಚಾತ್ತಾಪದಿಂದ ಹೊರಬರಲು ಆಗುತ್ತಿಲ್ಲ. ನಾನು ಮಾನಸಿಕವಾಗಿ ಕುಗ್ಗಿ ಹೋಗಿದ್ದೇನೆ. ಭೀಮೇಶ್ ನಾಯಕ್ ನನ್ನ ಆತ್ಮ ಸ್ನೇಹಿತ. ಆ್ಯಮ್ ವೆರಿ ಸಾರಿ... ಐ ಲವ್ ಯೂ ಸೋ ಮಚ್ ಭೀಮೇಶ್.. ಈ ನನ್ನ ಆತ್ಮಹತ್ಯೆಗೂ ಭೀಮೇಶ್ ನಾಯಕನಿಗೂ ಯಾವುದೇ ಸಂಬಂಧ ಇಲ್ಲ' ಎಂದು ಪೊಲೀಸರಿಗೆ ಲಭ್ಯವಾಗಿರುವ ಡೆತ್‌ನೋಟ್‌ನಲ್ಲಿ ಬರೆಯಲಾಗಿತ್ತು.