
ಬೆಂಗಳೂರು (ಮೇ 2): ಬೆಂಗಳೂರಿನಲ್ಲಿ ಬಾಡಿಗೆಗೆ ಕಾರು ಓಡಿಸಿಕೊಂಡಿದ್ದ ಯುವಕನೊಬ್ಬ ತನ್ನ ಕಾರನ್ನು ನಕಲಿ ದಾಖಲೆ ಸೃಷ್ಟಿಸಿ ಉಬರ್ ಕ್ಯಾಬ್ ಸರ್ವಿಸ್ ಕಂಪನಿಗೆ ಅಟ್ಯಾಚ್ ಮಾಡಿದ್ದಾನೆ. ಹೀಗೆ, ನಕಲಿ ದಾಖಲಾತಿಗಳೊಂದಿಗೆ ಕ್ಯಾಬ್ ಓಡಿಸುತ್ತಿದ್ದ ಚಾಲಕ ತನ್ನ ಕಾರು ಹತ್ತಿದ ಯುವತಿಯೊಂದಿಗೆ ಅಸಭ್ಯವಾಗಿ ವರ್ತಿಸಿ ಪೊಲೀಸರ ಅತಿಥಿಯಾಗಿದ್ದಾನೆ.
ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಬಿಎಂಟಿಸಿ ಬಸ್, ಮೆಟ್ರೋ ರೈಲು, ಆಟೋಗಳು, ಬಾಡಿಗೆ ಕಾರುಗಳು, ಓಲಾ- ಉಬರ್ ಕ್ಯಾಬ್ ಸೇವೆಗಳು ಹೆಚ್ಚಿನ ಪ್ರಮಾಣದಲ್ಲಿ ಸಾರ್ವಜನಿಕರಿಗೆ ಅನುಕೂಲ ಆಗುತ್ತಿವೆ. ಆದರೆ, ಪ್ರಯಾಣ ಸೇವೆಯನ್ನು ನೀಡುವ ವೇಳೆಮ ಕೆಲವರು ಅನುಚಿತ ವರ್ತನೆ ತೋರುವ ಅನೇಕ ಘಟನೆಗಳನ್ನು ನಾವು ಗಮನಿಸಬಹುದು. ಹೀಗೆ, ಉಬರ್ ಮೂಲಕ ವಿಮಾನ ನಿಲ್ದಾಣಕ್ಕೆ ಹೋಗಲು ಉಬರ್ ಕ್ಯಾಬ್ ಅನ್ನು ಬಕ್ ಮಾಡಿದ ಯುವತಿ, ನಿಗದಿಯಂತೆ ಕಾರಿನಲ್ಲಿ ಹೋಗುವಾದ ಚಾಲಕ ಅಸಭ್ಯವಾಗಿ ನಡೆದುಕೊಂಡಿದ್ದಾನೆ. ಕಾರನ್ನು ನಿಲ್ಲಿಸಿ ನಾನು ಇಳಿಯುತ್ತೇನೆ ಎಂದರೂ ವೇಗವಾಗಿ ಚಲಿಸಿದ್ದಾನೆ. ನಂತರ, ಕಾರು ನಿಲ್ಲಿಸಿದಾಗಲೂ ಕಾರು ಚಾಲಕ ಅಸಭ್ಯವಾಗಿ ನಡೆದುಕೊಂಡಿರುವ ಹಿನ್ನೆಲೆಯಲ್ಲಿ ಮುಂಬೈ ಯುವತಿ ಸ್ಥಳೀಯ ಹೈಗ್ರೌಂಡ್ಸ್ ಪೊಲೀಸ್ ಠಾಣೆಯಲ್ಲಿ ಕ್ಯಾಬ್ ಚಾಲಕನ ವಿರುದ್ಧ ದೂರು ದಾಖಲಿಸಿದ್ದಾಳೆ.
ಬೆಂಗಳೂರು ರೇವಾ ಕಾಲೇಜು ವಿದ್ಯಾರ್ಥಿ ಕೊಲೆಗೆ ಬಿಗ್ ಟ್ವಿಸ್ಟ್: ಮೋಜಿಗಾಗಿ ಚಾಕು ಚುಚ್ಚಿದ ಆರೋಪಿ!
ಅನುಚಿತ ವರ್ತನೆ ಬಗ್ಗೆ ಉಬರ್‌ಗೆ ದೂರು: ಪ್ರಯಾಣಿಸ್ತಿದ್ದ ಯುವತಿ ಜೊತೆ ಚಾಲಕ ಅನುಚಿತ ವರ್ತನೆ ನಕಲಿ ಊಬರ್ ಚಾಲಕನ ಬಂಧನ ಮಾಡಲಾಗಿದೆ. ಕಳೆದ ಮೂರು ದಿನಗಳ ಹಿಂದೆ ಈ ಘಟನೆ ನಡೆದಿದೆ. ಹೈಗೌಂಡ್ಸ್ ಪೊಲೀಸರಿಂದ ನಕಲಿ ಕ್ಯಾಬ್ ಚಾಲಕ ಅಮಿತ್ ( 33) ಬಂಧನ ಮಾಡಲಾಗಿದೆ. ಮುಂಬೈ ಮೂಲದ ಯುವತಿ ಏರ್ ಪೋರ್ಟ್ ಗೆ ಊಬರ್ ಕಾರು ಬುಕ್ ಮಾಡಿದ್ದು, ಕಾರಿನಲ್ಲಿ ಹೋಗುವಾಗ ಹೈಗೌಂಡ್ಸ್ ಠಾಣಾ ವ್ಯಾಪ್ತಿಯಲ್ಲಿ ಕಾರು ಅತಿವೇಗದಿಂದ ಚಾಲನೆ ಮಾಡಿದ್ದಾನೆ. ಈ ವೇಳೆ ಯುವತಿ ಕಾರು ನಿಲ್ಲಿಸುವಂತೆ ಚಾಲಕನಿಗೆ ಹೇಳಿದ್ದಾಳೆ. ಕಾರು ನಿಲ್ಲಿಸಿ ಕೆಳಗಿಳಿದು ಊಬರ್ ಕಂಪನಿಗೆ ಚಾಲಕನ ಬಗ್ಗೆ ದೂರು ನೀಡಿದ್ದಾಳೆ.
ನಕಲಿ ದಾಖಲೆ ದೃಷ್ಟಿಸಿ ಕ್ಯಾಬ್ ಚಾಲನೆ: ಇದೇ ವೇಳೆ ಕಾರು ಚಾಲಕ ಯುವತಿಯೇ ತನ್ನ ಜೊತೆ ಅಸಭ್ಯ ವರ್ತಿಸಿದ್ದಾಗಿ ಆರೋಪ ಮಾಡಿದ್ದಾನೆ. ಈ ವೇಳೆ ಕ್ಯಾಬ್ ಚಾಲಕ ಯುವತಿ ಜೊತೆ ಅನುಚಿತವಾಗಿ ವರ್ತಿಸಿದ್ದಾನೆ. ಇದರಿಂದ ಭಯಗೊಂಡ ಯುವತಿ ಕೂಡಲೇ ಹೈಗ್ರೌಂಡ್ಸ್ ಪೊಲೀಸ್ ಠಾಣೆಗೆ ದೂರು ನೀಡಿದ್ದಾಳೆ. ಇನ್ನು ಪೊಲೀಸರ ತನಿಖೆ ವೇಳೆ ನಕಲಿ ದಾಖಲೆ ಸೃಷ್ಟಿಸಿದ ಅಮಿತ್, ಊಬರ್ ಗೆ ತನ್ನ ಕಾರ್ ಅಟ್ಯಾಚ್ ಮಾಡಿಸಿದ್ದನು ಎಂದು ತಿಳಿದುಬಂದಿದೆ. ಚಂದ್ರಶೇಖರ್ ಎಂಬುವವರ ಹೆಸರಲ್ಲಿ ನಕಲಿ ದಾಖಲಾತಿ ಸೃಷ್ಟಿಸಿ ಊಬರ್ ಚಾಲನೆ ಮಾಡುತ್ತಿದ್ದನು.
ಬೆಂಗಳೂರಿನಲ್ಲಿ ಕೋರಿಯರ್ ಬಾಯ್ ಸಾವು: ನೇಣು ಬಿಗಿದ ಸ್ಥಿತಿಯಲ್ಲಿ ಮೃತದೇಹ ಪತ್ತೆ!
2 ವರ್ಷದಿಂದ ನಕಲಿ ದಾಖಲೆ ಸೃಷ್ಟಿಸಿ ಕಾರು ಅಟ್ಯಾಚ್: ಸದ್ಯ ಆರೋಪಿ ಅಮಿತ್‌ನನ್ನು ಬಂಧಿಸಿರುವ ಪೊಲೀಸರು ವಿಚಾರಣೆ ಮಾಡುತ್ತಿದ್ದಾರೆ. ಆರೋಪಿಯ ಮಾಹಿತಿ ಮೇರೆಗೆ ನಕಲಿ ದಾಖಲಾತಿ ಸೃಷ್ಟಿಸಿ ಕಾರುಗಳನ್ನ ಅಟ್ಯಾಚ್ ಮಾಡಿಸುತ್ತಿದ್ದ, ಪಾಲಾಕ್ಷ ಮತ್ತು ಮಂಜುನಾಥ್ ಎಂಬ ಇಬ್ಬರನ್ನು ಬಂಧಿಸಲಾಗಿದೆ. ಈ ಇಬ್ಬರು ಆರೋಪಿಗಳನ್ನ ವಿಚಾರಣೆ ಮಾಡಿದಾಗ, ಕಳೆದ 2 ವರ್ಷಗಳಿಂದ ಇದೇ ರೀತಿ ಕೃತ್ಯವೆಸಗುತ್ತಿರೋದು ಬೆಳಕಿಗೆ ಬಂದಿದೆ. ಇದಕ್ಕೆ ಸ್ವತಃ ಊಬರ್ ಉದ್ಯೋಗಿಗಳೇ ಸಹಕರಿಸಿದ್ದಾರೆ. ಸದ್ಯ ಊಬರ್ ಸಂಸ್ಥೆ ಮುಖ್ಯಸ್ಥರಿಗೆ ಹೈಗ್ರೌಂಡ್ ಪೊಲೀಸರು ನೋಟೀಸ್ ಜಾರಿ ಮಾಡಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ