ಶಿವಮೊಗ್ಗ(ಜ.23): ಕಾಲೇಜು ವಿದ್ಯಾರ್ಥಿನಿಯೊಬ್ಬಳನ್ನು(College Students) ಬೆದರಿಸಿ ಅತ್ಯಾಚಾರವೆಸಗಿ ಸಾಮಾಜಿಕ ಜಾಲತಾಣದಲ್ಲಿ(Social Media) ವಿಡಿಯೋ ಅಪ್‌ಲೋಡ್ ಮಾಡಿದ್ದ ಆರೋಪದ ಮೇರೆಗೆ ಐವರನ್ನು ಹೊಸನಗರ ಪೊಲೀಸರು ಬಂಧಿಸಿದ್ದಾರೆ.
ಅಪ್ರಾಪ್ತ ಬಾಲಕಿ ಜ.15ರಂದು ಊರಿಗೆ ತೆರಳಲು ಬಸ್ ನಿಲ್ದಾಣದಲ್ಲಿ ನಿಂತಿದ್ದಳು. ಆಕೆಯ ಮನೆಗೆ ಕೆಲಸಕ್ಕೆಂದು ಹೋಗಿ ಪರಿಚಯವಾಗಿದ್ದ ಸಂತೋಷ್ ಹಾಗೂ ಸುನಿಲ್ ಎಂಬುವರು ಬಾಲಕಿಯನ್ನು ಮಾತನಾಡಿಸಿದ್ದರು. ತಾವೂ ಊರಿಗೆ ಹೋಗುತ್ತಿರುವುದಾಗಿ, ಕರೆದುಕೊಂಡು ಹೋಗುವಾಗಿ ಕಾರಿಗೆ ಹತ್ತಿಸಿಕೊಂಡಿದ್ದರು. ಬಳಿಕ ಬೆದರಿಸಿ(Threat) ಅತ್ಯಾಚಾರವೆಸಗಿ ವಿಡಿಯೋ(Video) ಮಾಡಿಕೊಂಡಿದ್ದರು. ಕೆಲ ದಿನ ಬಳಿಕ ಬಾಲಕಿಯನ್ನು(Minor) ಲೈಂಗಿಕ ಕ್ರಿಯೆಗೆ ಕರೆದಿದ್ದರು. ಆಕೆ ಬರಲು ನಿರಾಕರಿಸಿದಾಗ ಸಾಮಾಜಿಕ ಜಾಲತಾಣಗಳಲ್ಲಿ ವಿಡಿಯೋ ಅಪ್‌ಲೋಡ್ ಮಾಡಿದ್ದರು. ವಿಡಿಯೋ ಗಮನಿಸಿದ ಪೊಲೀಸರು(Police) ಸ್ವಯಂಪ್ರೇರಿತ ಪ್ರಕರಣ ದಾಖಲಿಸಿ, ಸಂತ್ರಸ್ತೆಯ ಹೇಳಿಕೆ ದಾಖಲಿಸಿ ಆರೋಪಿಗಳನ್ನು ಬಂಧಿಸಿದ್ದಾರೆ.
Sexual Harassment : ಮದುವೆಯಾದ ಮಹಿಳೆಯ ಸ್ನಾನದ ವಿಡಿಯೋ ಮಾಡಿಕೊಂಡ ಸಂಬಂಧಿ ಮಾಡಿದ ಕೆಲಸ!
ಅಪ್ರಾಪ್ತ ಕಾಲೇಜು ವಿದ್ಯಾರ್ಥಿನಿಯೊಬ್ಬಳನ್ನು ಪುಸಲಾಯಿಸಿ ಕರೆದೊಯ್ದು, ಬೆದರಿಸಿ ಅತ್ಯಾಚಾರ ನಡೆಸಿ, ಅದರ ವಿಡಿಯೋ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟಆರೋಪದ ಮೇಲೆ ಐವರು ಆರೋಪಿಗಳನ್ನು ಹೊಸನಗರ ಪೊಲೀಸರು ಬಂಧಿಸಿದ್ದಾರೆ. ಜ. 15ರಂದು ಬಾಲಕಿ ಊರಿಗೆ ತೆರಳಲು ಬಸ್ ನಿಲ್ದಾಣದ ಬಳಿ ನಿಂತಿರುವಾಗ, ಈ ಹಿಂದೆ ಬಾಲಕಿಯ ಮನೆಗೆ ಜೆಸಿಬಿ ಕೆಲಸಕ್ಕೆ ಬಂದು ಪರಿಚಯವಾಗಿದ್ದ ಸಂತೋಷ್ ಮತ್ತು ಸುನೀಲ್ ಎಂಬಿಬ್ಬರು ಬಾಲಕಿಯನ್ನು ಮಾತನಾಡಿಸಿ, ತಾವೂ ಕೂಡ ನಿಮ್ಮ ಊರಿಗೇ ಹೋಗುತ್ತಿದ್ದು, ಕರೆದುಕೊಂಡು ಹೋಗುವುದಾಗಿ ಪುಸಲಾಯಿಸಿ, Pರಿನಲ್ಲಿ ಕರೆದೊಯ್ದು ದಾರಿಯಲ್ಲಿ ಬೆದರಿಸಿ ಅತ್ಯಾಚಾರವೆಸಗಿದ್ದಾರೆ.
ಅತ್ಯಾಚಾರದ ವಿಡಿಯೋ ಚಿತ್ರೀಕರಣ ಮಾಡಿಕೊಂಡು ಬಾಲಕಿಯನ್ನು ಬೆದರಿಸಿ ಮತ್ತೆ ಕರೆದಿದ್ದಾರೆ. ಬಾಲಕಿ ಬರಲು ನಿರಾಕರಿಸಿದಾಗ ಆರೋಪಿಗಳು ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ಅಪಲೋಡ್ ಮಾಡಿದ್ದಾರೆ. ಅಪ್ರಾಪ್ತೆಯ ವಿಡಿಯೋ ಹರಿದಾಡುತ್ತಿರುವ ಮಾಹಿತಿ ತಿಳಿದ ತಕ್ಷಣ ಪೊಲೀಸರು ಸುಮೋಟೋ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದರು. ನಂತರ ಸಂತ್ರಸ್ತೆ ಹೇಳಿಕೆ ಮೇಲೆ ಮತ್ತೊಂದು ದೂರು ದಾಖಲಿಸಿಕೊಂಡು ದುಷ್ಕೃತ್ಯವೆಸಗಿದ ವಾರಂಬಳ್ಳಿಯ ಸುನೀಲ್ ಹಾಗೂ ಆಯನೂರು ಗ್ರಾಮದ ಸಂತೋಷ ಎಂಬ ಪ್ರಮುಖ ಆರೋಪಿಗಳ ಜತೆ ಇವರಿಗೆ ಸಹಕಾರ ನೀಡಿದ ಆರೋಪದಡಿ ವಾರಂಬಳ್ಳಿ ಗ್ರಾಮದ ಸಚಿನ್, ಸುಬ್ಬ, ರಾಘು ಎಂಬುವವರನ್ನು ಬಂಧಿಸಿದ್ದಾರೆ. ಪೋಕ್ಸೋ ಕಾಯಿದೆಯಡಿ ಕೇಸು ದಾಖಲಿಸಲಾಗಿದೆ.
Gangrape: ರಾಜಸ್ಥಾನದಲ್ಲೊಂದು ನಿರ್ಭಯಾ ಮಾದರಿ ಗ್ಯಾಂಗ್‌ರೇಪ್, ಪಾಪಿಗಳು
ರೇಪ್ ಸಂತ್ರಸ್ತೆ ವಯಸ್ಸು ಸಾಬೀತು ಹೊಣೆ ಪ್ರಾಸಿಕ್ಯೂಷನ್‌ದು
ಅತ್ಯಾಚಾರ ಪ್ರಕರಣದ ಸಂತ್ರಸ್ತೆ ಅಪ್ರಾಪ್ತಳಲ್ಲ ಎಂದು ಆರೋಪಿ ಅಲ್ಲಗಳೆದರೆ, ಸಂತ್ರಸ್ತೆಯ ನಿಜ ವಯಸ್ಸು ಸಾಬೀತುಪಡಿಸುವ ದೊಡ್ಡ ಹೊಣೆ ಅಭಿಯೋಜನೆ (ಪ್ರಾಸಿಕ್ಯೂಷನ್) ಮೇಲಿರುತ್ತದೆ ಎಂದು ಹೈಕೋರ್ಟ್ ಅಭಿಪ್ರಾಯಪಟ್ಟಿದೆ. ಪೋಕ್ಸೋ ಪ್ರಕರಣವೊಂದರಲ್ಲಿ ಸಂತ್ರಸ್ತೆಯ ವಯಸ್ಸು ಸಾಬೀತಾಗದಿದ್ದರೂ ತನಗೆ ಶಿಕ್ಷೆ ವಿಧಿಸಿದ ವಿಚಾರಣಾ ನ್ಯಾಯಾಲಯದ ಆದೇಶ ಪ್ರಶ್ನಿಸಿ ಮುಧೋಳದ ಯುವಕನೊಬ್ಬ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎಂ.ಜಿ.ಉಮಾ ಅವರ ಏಕ ಸದಸ್ಯ ಪೀಠ ಈ ಅಭಿಪ್ರಾಯ ವ್ಯಕ್ತಪಡಿಸಿದೆ.
ಅಪ್ರಾಪ್ತೆಯೊಂದಿಗೆ ಅಕ್ರಮವಾಗಿ ದೈಹಿಕ ಸಂಪರ್ಕ ಬೆಳೆಸಿದ ಹಾಗೂ ಅತ್ಯಾಚಾರ ನಡೆಸಿದ ಆರೋಪ ಸಂಬಂಧ ಅರ್ಜಿದಾರನಿಗೆ 5 ವರ್ಷ ಕಠಿಣ ಜೈಲು ಶಿಕ್ಷೆ ಹಾಗೂ ಎರಡು ಸಾವಿರ ರು. ದಂಡ ವಿಧಿಸಿದ ಜಮಖಂಡಿಯ ತ್ವರಿತಗತಿ ನ್ಯಾಯಾಲಯದ ಆದೇಶ ರದ್ದುಪಡಿಸಿ ಹೈಕೋರ್ಟ್ ಆದೇಶಿಸಿದೆ.
ನಿಜ ವಯಸ್ಸು ಪತ್ತೆ ಹಚ್ಚಬೇಕು:
ಅಪ್ರಾಪ್ತೆಯನ್ನು ಜತೆಗಿರಿಸಿಕೊಂಡು ಅಕ್ರಮವಾಗಿ ದೈಹಿಕ ಸಂಪರ್ಕ ಬೆಳೆಸಿದ (ಐಪಿಸಿ ಸೆಕ್ಷನ್ 366ಎ) ಆರೋಪ ಅರ್ಜಿದಾರನ ವಿರುದ್ಧ ಇದೆ. ಇಂತಹ ಸನ್ನಿವೇಶದಲ್ಲಿ ಸಂತ್ರಸ್ತೆಯು 18 ವರ್ಷಕ್ಕಿಂತ ಕಡಿಮೆ ವಯಸ್ಸಿನವಳು ಹಾಗೂ ಆಕೆಯನ್ನು ಅಕ್ರಮ ದೈಹಿಕ ಸಂಪರ್ಕ ಬೆಳೆಸುವ ಉದ್ದೇಶದಿಂದ ಬಲವಂತವಾಗಿ ಅಥವಾ ಯಾವುದೇ ರೀತಿಯ ವ್ಯಾಮೋಹ ತೋರಿಸಿ ಕರೆದುಕೊಂಡು ಹೋಗಿರುವುದನ್ನು ಸಾಬೀತುಪಡಿಸಬೇಕು ಎಂದು ಅಭಿಪ್ರಾಯಪಟ್ಟಿದೆ.