Crime News ಪ್ರಿಯತಮೆ ಕೈಕೊಟ್ಟಿದ್ದಕ್ಕೆ ಆಕೆಯ ಸಹೋದರನನ್ನೇ ಕಿಡ್ನಾಪ್ ಮಾಡಿದ ಭೂಪ

Published : Jan 22, 2022, 04:15 PM IST
Crime News ಪ್ರಿಯತಮೆ ಕೈಕೊಟ್ಟಿದ್ದಕ್ಕೆ ಆಕೆಯ ಸಹೋದರನನ್ನೇ ಕಿಡ್ನಾಪ್ ಮಾಡಿದ ಭೂಪ

ಸಾರಾಂಶ

* ಪ್ರಿಯತಮೆ ಕೈಕೊಟ್ಟಿದ್ದಕ್ಕೆ ಆಕೆಯ ಸಹೋದರನನ್ನೇ ಕಿಡ್ನಾಪ್ ಮಾಡಿದ ಭೂಪ * ಬೆಂಗಳೂರಿನ ಬ್ಯಾಡ್ರಳ್ಳಿ ಪೊಲೀಸರಿಂದ ಆರೋಪಿ ಅರೆಸ್ಟ್ * ಈ ಸಂಬಂಧ ಬ್ಯಾಡ್ರಳ್ಳಿ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು

ಬೆಂಗಳೂರು, (ಜ.22): ಒಂದೊಂದು ಕ್ರೈಮ್ ಪ್ರಕರಣಗಳನ್ನ ಕೇಳಿದ್ರೆ ಹೊಟ್ಟೆ ಹುಣ್ಣಾಗುವಷ್ಟು ನಗು ಬರುತ್ತೆ. ಇನ್ನೂ ಕೆಲ ಪ್ರಕರಣಗಳು ಕೇಳಿದ್ರೆ ಗಾಬರಿಯಾಗುತ್ತೆ. ಅಂತಹದ್ದೇ ಎರಡು ವಿಚಿತ್ರ ಪ್ರಕರಣಗಳು ನಡೆದಿರುವುದನ್ನು ನಿಮಗೆ ತಿಳಿಸುತ್ತಿದ್ದೇವೆ.

ಹೌದು..ಓರ್ವ ಪಾಗಲ್ ಪ್ರೇಮಿ, ಪ್ರಿಯತಮೆ ಕೈಕೊಟ್ಟಿದ್ದಕ್ಕೆ ಆಕೆಯ ಸಹೋದರನನ್ನೇ ಕಿಡ್ನಾಪ್ ಮಾಡಿ ಪೊಲೀಸರಿಗೆ ಸಿಕ್ಕಿಬಿದ್ದಿದ್ದಾನೆ. ಮತ್ತೊಂದಡೆ ಓರ್ವ ಇಂಜಿನಿಯರಿಂಗ್ ವಿದ್ಯಾರ್ಥಿ ಸಾಲ ತೀರಿಸಲು ಬ್ಯಾಂಕ್‌ಗೆ ಕನ್ನ ಹಾಕಿ ತಗ್ಲಾಕಿಕೊಂಡಿದ್ದಾನೆ.

ಮೊದಲಿಗೆ ಪಾಗಲ್ ಪ್ರೇಮಿಯ ಸುದ್ದಿ ನೋಡಿ
ಪ್ರಿಯತಮೆ ಕೈಕೊಟ್ಟಿದ್ದಕ್ಕೆ ಪಾಗಲ್ ಪ್ರೇಮಿಯೊಬ್ಬ (Lover) ಆಕೆಯ ಸಹೋದರನನ್ನ ಅಪಹರಣ (Kidnap) ಮಾಡಿರುವ ಘಟನೆ ಬೆಂಗಳೂರಿನಲ್ಲಿ ನಡೆದಿದೆ.

.ಕಿಡ್ನಾಪ್ ಮಾಡಿದ್ದ ಆರೋಪಿ ಶ್ರೀನಿವಾಸನನ್ನು ಬೆಂಗಳೂರಿನ(Bengaluru) ಬ್ಯಾಡರಹಳ್ಳಿ ಪೊಲೀಸರು (Police) ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಆರೋಪಿ ಶ್ರೀನಿವಾಸನ ಜೊತೆ ಕೈಜೋಡಿಸಿದ್ದ ಐವರು ಆರೋಪಿಗಳನ್ನೂ ಸಹ ಪೊಲೀಸರು ಬಂಧಿಸಿದ್ದಾರೆ. ಶಿವಕುಮಾರ್,ಆಕಾಶ್,ಹುಚ್ಚೇಗೌಡ,ಗಂಗಾಧರ,ಪ್ರತಾಪ ಬಂಧಿತ ಆರೋಪಿಗಳು.

Hubballi: ಸಿನಿಮೀಯ ರೀತಿಯಲ್ಲಿ ಬ್ಯಾಂಕ್ ದರೋಡೆಗೆ ಇಳಿದ ಖದೀಮ, ರೋಚಕವಾಗಿ ತಗಲ್ಲಾಕ್ಕೊಂಡ!

ಶ್ರೀನಿವಾಸ ಎರಡು ತಿಂಗಳಿನಿಂದ ವೆಂಕಟೇಶ್ ಸಹೋದರಿ ಕಾವ್ಯಾ ಎಂಬಾಕಿಯನ್ನು ಪ್ರೀತಿಸುತ್ತಿದ್ದನಂತೆ. ಆಕೆ ಕೈಕೊಟ್ಟ ಹಿನ್ನೆಲೆ ಆಕೆಯ ಸಹೋದರನ್ನೆ ಆರೋಪಿ ಅಪಹರಣ ಮಾಡಿದ್ದ. ಕಿಡ್ನಾಪ್ ಮಾಡಿ ಹೊಸಕೋಟೆ-ಕೋಲಾರಕ್ಕೆ ಕರೆದೊಯ್ದು ಹಲ್ಲೆ ನಡೆಸಿದ್ದ. 

ಈ ಘಟನೆ ಸಂಬಂಧ ಬ್ಯಾಡರಹಳ್ಳಿ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ದೂರಿನನ್ವಯ ಪೊಲೀಸರು ಆರೋಪಿ ಶ್ರೀನಿವಾಸನನ್ನು ಅರೆಸ್ಟ್ ಮಾಡಿದ್ದಾರೆ.

ಇನ್ನು ಈ ಬಗ್ಗೆ  ಬೆಂಗಳೂರು ಪಶ್ಚಿಮ ವಿಭಾಗದ ಡಿಸಿಪಿ ಸಂಜೀವ್ ಪಾಟೀಲ್ ಪ್ರತಿಕ್ರಿಯಿಸಿದ್ದು,  ತಮ್ಮನನ್ನ ಅಪಹರಿಸಿಕೊಂಡು ‌ಹೋಗಿದ್ದಾರೆಂದು ಬ್ಯಾಡ್ರಳ್ಳಿ ಪೊಲೀಸ್ ಠಾಣೆಗೆ ಮಹಿಳೆಯೊಬ್ಬರು ದೂರನ್ನ ನೀಡಿದ್ದರು. ಚಿಕ್ಕ ವಿಚಾರಕ್ಕೆ ಗಲಾಟೆಯಾದ ಹಿನ್ನೆಲೆ ಮಹಿಳೆಯ ತಮ್ಮನನ್ನ ಕಿಡ್ನಾಪ್ ಮಾಡಲಾಗಿದೆ. ಮಹಿಳೆಗೆ ಕಾಲ್ ಮಾಡಿ ನಿನ್ನ ತಮ್ಮನನ್ನ ಸಾಯಿಸ್ತೀನಿ ಅಂತ ಎಂದು ಆರೋಪಿ ಹೆದರಿಸಿದ್ದ. ಈ ಸಂಬಂಧ ಬ್ಯಾಡ್ರಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಳ್ಳಲಾಗಿ.ತ್ತು ಬಳಿಕ ಕಾರ್ಯೋನ್ಮುಕರಾದ ವಿಜಯನಗರ ಸಬ್ ಡಿವಿಜನ್ ಎಸಿಪಿ ನಂಜುಂಡೇಗೌಡರ ತಂಡ ಆರು ಆರೋಪಿಗಳನ್ನ ಬಂಧಿಸಿದ್ದಾರೆ ಎಂದು ಹೇಳಿದರು.

ಕೃತ್ಯಕ್ಕೆ ಬಳಸಿದ್ದ ಕಾರನ್ನ ಕೂಡ ವಶಕ್ಕೆ ಪಡೆಯಲಾಗಿದೆ. ಸದ್ಯ ಬಂಧಿತ ಆರೋಪಿಗಳ ಪೈಕಿ ಇಬ್ಬರು ರೌಡಿಶೀಟರ್ ಆಗಿದ್ದಾರೆ ಎಂದು ಮಾಹಿತಿ ನೀಡಿದರು.

 ಪ್ರಮುಖ ಆರೋಪಿ ಶ್ರೀನಿವಾಸ ವಾಹನ ಸೀಜಿಂಗ್ ಮಾಡೋ ಕೆಲಸ ಮಾಡ್ತಿದ್ದ. ಆ ಸೀಜಿಂಗ್ ಕಂಪನಿಯಲ್ಲಿ ಇಬ್ಬರು ರೌಡಿಶೀಟರ್ ಇರೋದು ತಿಳಿದುಬಂದಿದೆ. ಅದಕ್ಕಾಗಿ ನಮ್ಮ ವಿಭಾಗದ ಎಲ್ಲಾ ಸೀಜಿಂಗ್ ಕಂಪನಿಗಳ‌ ಮಾಹಿತಿಯನ್ನ ಕಲೆಹಾಕ್ತೇವೆ. ಅಲ್ಲಿ ಯಾರಾದ್ರು ಅಪರಾಧ ಪ್ರಕರಣಗಳಲ್ಲಿ ಇರೋದು ಬೆಳಕಿಗೆ ಬಂದಲ್ಲಿ ಅಂತವರ ಮೇಲೂ ನಿಗಾ ಇಡ್ತೇವೆ ಎಂದರು.

ಸಾಲ ತೀರಿಸಲು ಬ್ಯಾಂಕ್‌ ಗೆ ಕನ್ನ
ಮಡಿವಾಳ ಠಾಣಾ ವ್ಯಾಪ್ತಿಯ ಎಸ್ ಬಿ ಐ ಬ್ಯಾಂಕ್(Bank) ರಾಬರಿ ಪ್ರಕರಣಕ್ಕೆ ಸಂಬಂಧಿಸಿದಂತೆ ಓರ್ವ ಆರೋಪಿಯನ್ನು ಮಡಿವಾಳ ಪೊಲೀಸರು ಬಂಧಿಸಿದ್ದಾರೆ.

ಧೀರಜ್ ಬಂಧಿತ ಆರೋಪಿಯಾಗಿದ್ದು, ಈ ಇಂಜನಿಯರಿಂಗ್ ವಿದ್ಯಾರ್ಥಿಯಾಗಿದ್ದಾನೆ. ಆನ್ ಲೈನ್ ಆಪ್ ಗಳ  (Online App) 40 ಲಕ್ಷಕ್ಕೂ ಅಧಿಕ ಸಾಲ ಮಾಡಿಕೊಂಡಿದ್ದ. ಆ ಸಾಲದ (Loan) ಕಾಟಕ್ಕೆ ಬ್ಯಾಂಕ್ ರಾಬರಿಗಿಳಿದಿದ್ದ ಎಂದು ತಿಳಿದುಬಂದಿದೆ.

ಜನವರಿ 14ರಂದು ಬಿಟಿಎಂ ಲೇಔಟ್ ನಲ್ಲಿದ್ದ ಎಸ್ ಬಿ ಐ ಬ್ಯಾಂಕ್ ನಲ್ಲಿ(SBI bank) ಸಿಬ್ಬಂದಿಗೆ ಚಾಕು ತೋರಿಸಿ  4 ಲಕ್ಷ ಕ್ಯಾಶ್ ಹಾಗೂ ಚಿನ್ನಾಭರಣ ದೋಚಿ ಪರಾರಿಯಾಗಿದ್ದ.
 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಎರಡು ಮಕ್ಕಳ ತಾಯಿ ಸಹವಾಸ ಮಾಡಿ ಮಸಣ ಸೇರಿದ ಯುವಕ: ತಾಯಿಯ ಲೀವಿಂಗ್ ಪಾರ್ಟನರ್ ಕತೆ ಮುಗಿಸಿದ ಅಮ್ಮ ಮಕ್ಕಳು
ರಿಯಲ್ ಎಸ್ಟೇಟ್ ಉದ್ಯಮಿಯ ಬರ್ಬರ ಹತ್ಯೆ: ಮಗ ಓದುತ್ತಿದ್ದ ಶಾಲೆಯ ಮುಂದೆಯೇ ಕೃತ್ಯ