ಹೋಟೆಲ್ ನಲ್ಲಿ ಉಜ್ಬೇಕಿಸ್ತಾನ ಯುವತಿಯ ಕೊಲೆ ಪ್ರಕರಣ - ಅಸ್ಸಾಂ ಮೂಲದ ಇಬ್ಬರು ಆರೋಪಿಗಳ ಬಂಧನ

By Ravi JanekalFirst Published Mar 16, 2024, 4:26 PM IST
Highlights

ಬೆಂಗಳೂರಿನ ಹೋಟೆಲ್‌ನಲ್ಲಿ ಉಜ್ಬೇಕಿಸ್ತಾನ ಮೂಲಕ ಪ್ರವಾಸಿ ಮಹಿಳೆ ಕೊಲೆ ಪ್ರಕರಣ ಕಾರ್ಯಾಚರಣೆ ನಡೆಸಿ ಕೇರಳದಲ್ಲಿ ಇಬ್ಬರು ಆರೋಪಿಗಳನ್ನು ಬಂಧಿಸಿದ ಶೇಷಾದ್ರಿಪುರ ಪೊಲೀಸರು. ನಲ್ಲಿ ರಿಪೇರಿ ನೆಪದಲ್ಲಿ ಯುವತಿ ರೂಮ್ ಒಳೆಗೆ ಹೊಕ್ಕಿದ್ದ ಖದೀಮರು ಮಾಡಿದ್ದೇನು ಇಲ್ಲಿದೆ ನೋಡಿ

ಕಿರಣ್ ಕೆಎನ್ ಏಷ್ಯಾನೆಟ್ ಸುವರ್ಣ ನ್ಯೂಸ್ .ಬೆಂಗಳೂರು

ಬೆಂಗಳೂರು (ಮಾ.16) : ಅವ್ರು ಇತ್ತೀಚೆಗಷ್ಟೇ ಹೋಟೆಲ್ ನಲ್ಲಿ ಕೆಲಸಕ್ಕೆ ಸೇರಿಕೊಂಡಿದ್ರು. ಕೆಲಸಕ್ಕಿಂತ ಹೆಚ್ಚಾಗಿ ಬರೋ ಗ್ರಾಹಕರ ಮೇಲೆನೇ ಕಣ್ಣಿಡ್ತಿದ್ರು. ಗ್ರಾಹಕರು ಬಳಸೋ ಮೊಬೈಲ್, ಪರ್ಸ್ ಮೇಲೆಯೇ ಕಣ್ಣಿಡ್ತಿದ್ರು. ನಲ್ಲಿ ರಿಪೇರಿ ಅಂತಾ ಯುವತಿ ಇದ್ದ ರೂಂ ಒಳಗೆ ಹೋದವ್ರು ಮಾಡಬಾರದ್ದನ್ನ ಮಾಡಿ ಎಸ್ಕೇಪ್ ಆಗಿದ್ರು. ಬೆಂಗಳೂರಲ್ಲಿ ಕೊಲೆ ಮಾಡಿ ಕೇರಳದಲ್ಲಿ ತಲೆ ಮರೆಸಿಕೊಂಡಿದ್ದ ಖದೀಮರನ್ನ ಖಾಕಿ ಖೆಡ್ಡಗೆ ಕೆಡವಿದ್ದಾರೆ.

ರಾಬರ್ಟ್ ಹಾಗೂ ಅಮ್ರಿತ್ ಯುವತಿಯನ್ನ ಕೊಂದ ಆರೋಪಿಗಳು, ಇಬ್ಬರೂ ಅಸ್ಸಾಂ ಮೂಲದವ್ರು. ಬೆಂಗಳೂರಿಗೆ ಕೆಲಸ ಅರಸಿ ಬಂದಿದ್ದ ಖದೀಮರು ಅಂತರಾಷ್ಟ್ರೀಯ ಮಟ್ಟದಲ್ಲಿ ಭಾರತಕ್ಕೆ ಕೆಟ್ಟ ಹೆಸರು ಬರುವಂತೆ ಮಾಡಿದ್ದಾರೆ. ದೇಶ ಸುತ್ತಲು ಬಂದಿದ್ದ ವಿದೇಶಿ ಯುವತಿಯ ಉಸಿರನ್ನೇ ನಿಲ್ಲಿಸಿ ಪೊಲೀಸರ ಅತಿಥಿಯಾಗಿದ್ದಾರೆ.

ಬಿಟೆಕ್ ವಿದ್ಯಾರ್ಥಿ ಅನುಮಾನಾಸ್ಪದ ಸಾವು: ವಿವಿ ಕುಲಪತಿ ಸೇರಿ 7 ಜನರ ವಿರುದ್ಧ ಎಫ್‌ಐಆರ್

ಹೌದು ಮಾರ್ಚ್ 13 ರ ರಾತ್ರಿ ಬೆಂಗಳೂರಿನ ಶೇಷಾದ್ರಿಪುರಂ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿರುವ ಖಾಸಗಿ ಹೋಟೆಲ್ ನಲ್ಲಿ ಉಜ್ಬೇಕಿಸ್ತಾನ ಮೂಲದ ಯುವತಿ ಶವವಾಗಿ ಬಿದ್ದಿದ್ದಳು. ಭಾರತ ಪ್ರವಾಸಕ್ಕೆಂದು ಬಂದಿದ್ದವಳು ಖದೀಮರ ಕ್ರೌರ್ಯಕ್ಕೆ ಬಲಿಯಾಗಿದ್ದಳು. ವಿಚಾರ ಗೊತ್ತಾಗ್ತಿದ್ದಂತೆ ಪೊಲೀಸರು ತಂಡ ರಚನೆ ಮಾಡಿ ತನಿಖೆ ಆರಂಭಿಸಿದ್ರು. ಬೆಂಗಳೂರಲ್ಲಿ ವಿದೇಶಿ ಯುವತಿ ಕೊಂದು ಕೇರಳದಲ್ಲಿ ತಲೆ ಮರೆಸಿಕೊಂಡಿದ್ದ  ರಾಬರ್ಟ್ ಹಾಗೂ ಅಮ್ರಿತ್ ಎಂಬ ಇಬ್ಬರು ಆರೋಪಿಗಳನ್ನು ಶೇಷಾದ್ರಿಪುರಂ ಪೊಲೀಸರು ಬಂಧಿಸಿದ್ದಾರೆ. ವಿಚಾರಣೆ ವೇಳೆ ನಡೆದ ಸಂಗತಿಗಳನ್ನು ಬಾಯ್ಬಿಟ್ಟಿದ್ದಾರೆ.

ಅಂದು ನಡೆದಿದ್ದೇನು?

ಅಷ್ಟಕ್ಕೂ ಆರೋಪಿಗಳು ವಿದೇಶಿ ಯುವತಿ ಜರೀನಾ ಬಂದಿದ್ದನ್ನ ಗಮನಿಸಿದ್ದಾರೆ. ಕೈಯಲ್ಲಿ ಐಫೋನ್, ಪರ್ಸ್ ಅಲ್ಲಿ ಹಣ ಇರೋದು ಕಂಡು ಕಣ್ಣು ಕುಕ್ಕಿದೆಕ. ಹೇಗಾದ್ರು ಮಾಡಿ ಅದನ್ನ ದೋಚುವ ಉಪಾಯ ಮಾಡಿರುವ ಖದೀಮರು. ಅದ್ರಂತೆ ನಲ್ಲಿಯಲ್ಲಿ ನೀರು ಲೀಕ್ ಆಗ್ತಿದೆ ಸರಿ ಮಾಡ್ಬೇಕು ಅಂತಾ ವೈಟ್ ಸಿಮೆಂಟ್ ತಗೊಂಡು ಜರೀನಾ ಇದ್ದ ರೂಂ ಗೆ ಎಂಟ್ರಿ ಕೊಟ್ಟಿದ್ದಾರೆ. ಪ್ಲಾನ್ ನಂತೆ ಆಕೆಯ ಬಳಿಯಿಂದ ಹಣ ಮತ್ತು ಫೋನ್ ಕಿತ್ತುಕೊಳ್ಳೊ ಯತ್ನ ಮಾಡಿದ್ದಾರೆ. ಪ್ರತಿರೋಧ ಒಡ್ಡಿದಾಗ ತಲೆದಿಂಬಿನಿಂದ ಉಸಿರುಗಟ್ಟಿಸಿ ಕೊಲೆ ಮಾಡಿ ಪರ್ಸ್ ಮತ್ತು ಮೊಬೈಲ್ ಕದ್ದು ಪರಾರಿ ಆಗಿದ್ದಾರೆ. 

ಕೊಲೆ ಬಳಿಕ ನೇರವಾಗಿ ಮೆಜೆಸ್ಟಿಕ್ ಬಂದಿರುವ ಆರೋಪಿಗಳು, ಅಲ್ಲಿಂದ ಕೇರಳ ತೆರಳಿದ್ದಾರೆ. ಆರೋಪಿಗಳನ್ನು ಟ್ರ್ಯಾಕ್ ಮಾಡಿದ ಪೊಲೀಸರು ಕೇರಳದಲ್ಲಿ ಬಂಧಿಸಿ ಕರೆತಂದಿದ್ದಾರೆ. ಬಂಧಿತರಿಂದ 13000 ನಗದು ಹಣ, 2000 ಮುಖಬೆಲೆಯ 2 ಉಜ್ಬೇಕಿಸ್ತಾನ 2 ನೋಟುಗಳು, 5000 ಮುಖಬೆಲೆಯ 1 ಉಜ್ಬೇಕಿಸ್ತಾನ ನೋಟು ಮತ್ತು ಐಫೋನ್ ಮೊಬೈಲ್ ವಶಕ್ಕೆ ಪಡೆದಿದ್ದಾರೆ.

ಒಂದು ಲಕ್ಷ ರೂಪಾಯಿ ಲಂಚ ಸ್ವೀಕರಿಸುವಾಗ ಲೋಕಾಯುಕ್ತ ಬಲೆಗೆ ಬಿದ್ದ ಕೆಆರ್‌ ಪುರಂ ಠಾಣೆ ಇನ್ಸ್‌ಪೆಕ್ಟರ್‌, ಪಿಎಸ್‌ಐ!

ಪ್ರಮಾಣಿಕವಾಗಿ ದುಡಿದು ತಿನ್ನದೇ ಅಡ್ಡಮಾರ್ಗದಿಂದ ಹಣ ಮಾಡುವ ಉದ್ದೇಶದಿಂದ ಇಂಥ ಕೃತ್ಯ ಎಸಗಿದ್ದಾರೆ. ಈ ಪ್ರಕರಣದಿಂದ ವಿದೇಶಿಯರು ಬೆಂಗಳೂರಿಗೆ ಬರಲು ಹೆದರುವಂತಾಗಿದೆ. ವಿದೇಶಿಯರಿಗೆ ಬೆಂಗಳೂರು ಎಂದರೆ ಅಚ್ಚುಮೆಚ್ಚು ಇಲ್ಲಿನ ತಂಪಾದ ವಾತಾವರಣಕ್ಕೆ ಮನಸೋಲದವರೇ ಇಲ್ಲ. ಆದರೆ ಹೋಟೆಲ್‌ನಲ್ಲೇ ಸಿಬ್ಬಂದಿಯಿಂದ ಕೊಲೆಯಾಗಿರುವುದು ವಿದೇಶಿ ಪ್ರವಾಸಿಗರನ್ನು ಬೆಚ್ಚಿಬಿಳಿಸಿರುವುದಂತೂ ಸುಳ್ಳಲ್ಲ. ಮಾಡಿದ ಕೃತ್ಯಕ್ಕೆ ಇವ್ರು ಜೈಲಿಗೆ ಹೋಗೋದ್ರ ಜೊತೆಗೆ ದೇಶದ ಮರ್ಯಾದೆಯನ್ನು ತೆಗೆದು ಹೋಗಿದ್ದಾರೆ ಪರಮ‌ಪಾಪಿಗಳು. ದೇಶ ನೋಡೋಕೆ‌ಅಂತಾ ಬಂದ ಯುವತಿ ಅಸು ನೀಗಿದ್ದು ಮಾತ್ರ ನಿಜಕ್ಕೂ ದುರಂತವೇ ಸರಿ.

click me!