
ಗರ್ಭಿಣಿ ಪತ್ನಿಯ ಹೊಟ್ಟೆಯೊಳಗಿರುವ ಮಗುವಿನ ಲಿಂಗವನ್ನು ತಿಳಿಯಲು ಪತಿ ಆಕೆಯ ಹೊಟ್ಟೆಯನ್ನು ಸೀಳಿರುವ ಘಟನೆ ಉತ್ತರಪ್ರದೇಶದಲ್ಲಿ ನಡೆದಿದೆ. ಉತ್ತರಪ್ರದೇಶದ ಬುಡೌನ್‌ನ ಸಿವಿಲ್ ಲೈನ್ಸ್ ಪ್ರದೇಶದಲ್ಲಿ ಸೆಪ್ಟೆಂಬರ್ 19, 2020ರಂದು ಘಟನೆ ಸಂಭವಿಸಿದೆ. 46 ವರ್ಷದ ಪನ್ನಾ ಲಾಲ್, ತನ್ನ ಪತ್ನಿ ಅನಿತಾ ದೇವಿಯ ಕತ್ತು ಸೀಳಿದ್ದಾನೆ. ಅನಿತಾ ದೇವಿಯನ್ನು ದೆಹಲಿಯ ಸಫರ್‌ಜಂಗ್ ಹಾಸ್ಪಿಟಲ್‌ಗೆ ದಾಖಲಿಸಲಾಗಿತ್ತು. ವಾರ್ಡ್‌ನಲ್ಲಿ ಯಾರೂ ಇಲ್ಲದ ಸಂದರ್ಭದಲ್ಲಿ ಪನ್ನಾ ಲಾಲ್ ಹೀಗೆ ಮಾಡಿದ್ದಾನೆ ಎಂದು ತಿಳಿದುಬಂದಿದೆ.
ಘಟನೆಯ ಬಗ್ಗೆ ತಿಳಿದುಕೊಂಡ ಬದೌನ್ ಪೊಲೀಸರು ತಕ್ಷಣ ಸ್ಥಳಕ್ಕೆ ಧಾವಿಸಿದರು. ವೈದ್ಯರು ಮಹಿಳೆಯ ಪ್ರಾಣವನ್ನು ಉಳಿಸುವಲ್ಲಿ ಯಶಸ್ವಿಯಾಗಿದ್ದಾರೆ. ಆದರೆ ಘಟನೆಯಲ್ಲಿ ಗಂಡು ಮಗು ಮೃತಪಟ್ಟಿದೆ ಎಂದು ತಿಳಿದುಬಂದಿದೆ. ಪನ್ನಾ ಲಾಲ್ ವಿರುದ್ಧ ಮಹಿಳೆಯ ಒಪ್ಪಿಗೆಯಿಲ್ಲದೆ ಗರ್ಭಪಾತವನ್ನು ಮಾಡಿದ್ದಾಗಿ ಸೆಕ್ಷನ್ 307 ಮತ್ತು 313ರ ಅಡಿಯಲ್ಲಿ ಪ್ರಕರಣ ದಾಖಲಾಗಿದೆ.
ಐವಿಎಫ್ ಮೂಲಕ ಅವಳಿ ಮಕ್ಕಳ ಗರ್ಭ ಧರಿಸಿದ್ದ ಮಹಿಳೆ, ಹೆರಿಗೆ ಸಮಯದಲ್ಲಿ ಸಾವು
ಇನ್ನು ಅನಿತಾ ದೇವಿ ಅಣ್ಣ ರವಿ ಮಾತನಾಡಿ, 'ಅನಿತಾ ಮತ್ತು ಪನ್ನಾ ಲಾಲ್ ಮಧ್ಯೆ ಮಗುವಿನ ವಿಚಾರಕ್ಕೆ ಆಗಾಗ ಜಗಳವಾಗುತ್ತಿತ್ತು. ಆದರೆ ಆತ ಗಂಡು ಮಗುವಿಗಾಗಿ ಇಷ್ಟೊಂದು ಕೆಟ್ಟದಾಗಿ ನಡೆದುಕೊಳ್ಳಬಹುದು ಎಂದು ನಾವು ಅಂದುಕೊಂಡಿರಲ್ಲಿಲ್ಲ. ಆತನಿಗೆ ಈ ಶಿಕ್ಷೆ ಸಿಕ್ಕಿರುವುದು ನಮಗೆ ಖುಷಿ ತಂದಿದೆ' ಎಂದಿದ್ದಾರೆ.
ಪನ್ನಾ ಲಾಲ್ ಮತ್ತು ಅನಿತಾ ದೇವಿ ಮದುವೆಯಾಗಿ ಬರೋಬ್ಬರಿ 25 ವರ್ಷ ಕಳೆದಿದೆ. ಇವರಿಗೆ ಐದು ಹೆಣ್ಣು ಮಕ್ಕಳಿದ್ದು, ಪನ್ನಾ ಲಾಲ್ ಗಂಡು ಮಗು ಬೇಕೆಂದು ಹಠ ಮಾಡುತ್ತಿದ್ದ. ಅನಿತಾ ದೇವಿ ಗರ್ಭಿಣಿಯಾದಾಗ ಗಂಡು ಮಗು ಬೇಕೆಂದು ಬಯಸಿದ್ದ. ಮತ್ತೆ ಹೆಣ್ಣು ಆದರೆ ಎಂಬ ಭೀತಿಯೂ ಪನ್ನಾ ಲಾಲ್‌ಗಿತ್ತು. ಹೀಗಾಗಿ ಅನಿತಾ ದೇವಿಯ ಹೊಟ್ಟೆ ಸೀಳಿ ಮಗುವಿನ ಲಿಂಗವನ್ನು ತಿಳಿಯಲು ಯತ್ನಿಸಿದ್ದಾನೆ. ಪನ್ನಾ ಅಪರಾಧದ ತೀವ್ರತೆಯನ್ನು ಪಬ್ಲಿಕ್ ಪ್ರಾಸಿಕ್ಯೂಟರ್ ಅತುಲ್ ಸಿಂಗ್ ಒತ್ತಿ ಹೇಳಿದರು.
ಗರ್ಭಿಣಿ ಪತ್ನಿಗಾಗಿ ವೆಜ್ ಆಹಾರ ಆರ್ಡರ್ ಮಾಡಿದ ವ್ಯಕ್ತಿ, ನಾನ್‌ವೆಜ್ ಥಾಲಿ ಡೆಲಿವರಿ ಮಾಡಿದ ಝೊಮೇಟೋ!
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ