ವಿಡಿಯೋ ಮೂಲಕ ಪ್ರಧಾನಿ ನರೇಂದ್ರ ಮೋದಿ ಮಾನಹಾನಿ ಮಾಡಿದ ಆರೋಪದ ಮೇಲೆ ಗೂಗಲ್ ಸಿಇಒ ಸುಂದರ್ ಪಿಚೈ ಸೇರಿದಂತೆ 17 ಮಂದಿ ವಿರುದ್ಧ ವಾರಣಾಸಿ ಪೊಲೀಸರು FIR ದಾಖಲಿಸಿದ್ದಾರೆ. ಈ ಕುರಿತ ಹೆಚ್ಚಿನ ವಿವರ ಇಲ್ಲಿದೆ
ವಾರಣಾಸಿ(ಫೆ.12): ಗೂಗಲ್ ಸಿಇಒ ಸುಂದರ್ ಪಿಚೈ ವಿರುದ್ಧ FIR ದಾಖಲಿಸಿ ಬಳಿಕ ಕೈಬಿಟ್ಟ ಪ್ರಕರಣ ವಾರಣಾಸಿಯಲ್ಲಿ ನಡೆದಿದೆ. ಪ್ರಧಾನಿ ನರೇಂದ್ರ ಮೋದಿ ಮಾನಹಾನಿ ಮಾಡಿದ ಆರೋಪದ ಮೇಲೆ ಗೂಗಲ್ ಮುಖ್ಯಸ್ಥ ಸುಂದರ್ ಪಿಚೈ ಹಾಗೂ ಇತರ 17 ಮಂದಿ ವಿರುದ್ಧ FIR ದಾಖಲಾಗಿದೆ.
ಪ್ರಧಾನಿ ಮೋದಿ, Goolge ಸಿಇಓ ಪಿಚೈ ಮಾತುಕತೆ, ಭಾರತದಲ್ಲಿ 75,000 ಕೋಟಿ ಹೂಡಿಕೆ!
undefined
ಮೋದಿ ಮಾನಹಾನಿ ಪ್ರಕರಣದಲ್ಲಿ ಪಿಚೈ ಹಾಗೂ ಇತರ ಮೂವರು ಉನ್ನತ ಅಧಿಕಾರಿಗಳ ಪಾತ್ರ ಇಲ್ಲ ಎಂದು ಪ್ರಕರಣದಿಂದ ತೆಗೆದುಹಾಕಲಾಗಿದೆ. ಮೋದಿ ಕುರಿತು ಅವಹೇಳನಕಾರಿಯಾಗಿ ಚಿತ್ರಿಸಿರುವ ವಿಡಿಯೋ ವ್ಯಾಟ್ಸಾಪ್‌ನಲ್ಲಿ ಹರಿದಾಡುತ್ತಿದೆ. ಇನ್ನೂ ಯೂಟ್ಯೂಬ್‌ನಲ್ಲಿ 5 ಲಕ್ಷಕ್ಕೂ ಹೆಚ್ಚು ವೀಕ್ಷಣೆಯಾಗಿದೆ. ಈ ಕುರಿತು ವರಾಣಾಸಿ ಸ್ಥಳೀಯ ದೂರು ದಾಖಲಿಸಿದ್ದಾರೆ. ಇಷ್ಟೇ ಅಲ್ಲ ಬೆದರಿಕೆ ಕರೆಗಳು ಬರುತ್ತಿರುವುದಾಗಿ ಹೇಳಿದ್ದಾರೆ.
ಭಾರತೀಯ ದಂಡ ಸಂಹಿತೆ ಸೆಕ್ಷನ್ 504 (ಶಾಂತಿ ಉಲ್ಲಂಘಿಸುವ ಹಾಗೂ ಉದ್ದೇಶಪೂರ್ವಕ ಅವಮಾನ), 506 (ಕ್ರಿಮಿನಲ್ ಬೆದರಿಕೆ), 500 (ಮಾನಹಾನಿ), 120 ಬಿ (ಕ್ರಿಮಿನಲ್ ಪಿತೂರಿ) ಅಡಿಯಲ್ಲಿ ಎಫ್ಐಆರ್ ದಾಖಲಿಸಲಾಗಿದೆ. ಮಾಹಿತಿ ತಂತ್ರಜ್ಞಾನ ಕಾಯ್ದೆಯ ಸೆಕ್ಷನ್ 67ರ ಪ್ರಕಾರ (ಅಶ್ಲೀಲ ವಸ್ತುಗಳನ್ನು ಪ್ರಕಟಿಸುವುದು ಅಥವಾ ರವಾನಿಸುವುದು) ಅಪರಾಧವಾಗಿದೆ. ಈ ಕುರಿತು FIRನಲ್ಲಿ ವಾರಣಾಸಿ ಪೊಲೀಸರು ಉಲ್ಲೇಖಿಸಿದ್ದಾರೆ.