ರೂಮ್‌ನಲ್ಲಿ ಪ್ರೆಗ್ನೆನ್ಸಿ ಕಿಟ್‌ ಕಂಡು 21 ವರ್ಷದ ಮಗಳನ್ನು ಕೊಂದ ಪಾಲಕರು!

By Santosh NaikFirst Published Feb 9, 2023, 4:36 PM IST
Highlights

ಮಗಳ ಕೋಣೆಯಲ್ಲಿ ಪ್ರೆಗ್ನೆನ್ಸಿ ಕಿಟ್ ಅನ್ನು ಕಂಡ ತಂದೆ-ತಾಯಿ ತಮ್ಮಿಬ್ಬರ ಸಂಬಂಧಿಗಳ ಸಹಾಯದಿಂದ 21 ವರ್ಷದ ಮಗಳನ್ನು ಕೊಂದ ಘಟನೆ ಉತ್ತರ ಪ್ರದೇಶದ ಕೌಶಂಬಿಯಲ್ಲಿ ನಡೆದಿದೆ. ಮಗಳನ್ನು ಕೊಂದಿದ್ದಲ್ಲದೆ, ಆಕೆಯ ಶವದ ಗುರುತು ಸಿಗಬಾರದು ಎನ್ನುವ ಕಾರಣಕ್ಕೆ ಆಸಿಡ್‌ ಕೂಡ ಸುರಿದಿದ್ದರು.
 

ನವದೆಹಲಿ (ಫೆ.9): ಮಗಳ ಕೋಣೆಯಲ್ಲಿ ಪ್ರೆಗ್ನೆನ್ಸಿ ಕಿಟ್‌ ನೋಡಿದ್ದ ಕಾರಣಕ್ಕೆ ಪಾಲಕರು 21 ವರ್ಷದ ಮಗಳನ್ನು ದಾರುಣವಾಗಿ ಕೊಂದ ಘಟನೆ ಉತ್ತರ ಪ್ರದೇಶದ ಕೌಶಂಬಿಯಲ್ಲಿ ನಡೆದಿದೆ. ತಂದೆ ಹಾಗೂ ತಾಯಿ ತಮ್ಮಿಬ್ಬರ ಸಂಬಂಧಿಗಳ ಸಹಾಯದಿಂದ 21 ವರ್ಷದ ಹುಡುಗಿಯ ಹತ್ಯೆ ಮಾಡಿದ್ದಾರೆ. ಮಗಳ ಕೋಣೆಯಲ್ಲಿ ಪ್ರೆಗ್ನೆನ್ಸಿ ಕಿಟ್‌ಅನ್ನು ಕಂಡಿದ್ದರಿಂದ, ಮಗಳಿಗೆ ಅಫೇರ್‌ ಇರಬಹುದು ಎಂದು ಊಹೆ ಮಾಡಿದ ಪಾಲಕರು ಆಕೆಯನ್ನು ಕೊಂದಿದ್ದು ಮಾತ್ರವಲ್ಲದೆ, ಆಕೆಯ ಶವದ ಗುರುತು ಸಿಗಬಾರದು ಎನ್ನುವ ಕಾರಣಕ್ಕೆ ದೇಹದ ಮೇಲೆ ಆಸಿಡ್‌ ಸುರಿದು ವಿರೂಪಗೊಳಿಸಿದ ಘಟನೆ ಕೂಡ ನಡೆದಿದೆ. ವಿರೂಪಗೊಂಡ ಶವವನ್ನು ಅಜ್ಞಾತ ಸ್ಥಳದಲ್ಲಿ ಎಸೆದು ಬಂದಿದ್ದಾರೆ. ಬುಧವಾರ ಪೊಲೀಸರಿಗೆ ಈ ಕೊಲೆಯ ಮಾಹಿತಿ ಲಭಿಸಿದ್ದು, ತಕ್ಷಣವೇ ಕಾರ್ಯಪ್ರವೃತ್ತರಾಗುವ ಮೂಲಕ ಕೊಲೆಗೆ ಸಂಬಂಧಪಟ್ಟ ಎಲ್ಲಾ ನಾಲ್ವರನ್ನು ಬಂಧಿಸಲಾಗಿದೆ. ಫೆಬ್ರವರಿ 3 ರಂದು ತೀನ್‌ ಶಾ ಅಲಾಮಾಬಾದ್‌ ಗ್ರಾಮದ ನಿವಾಸಿ ನರೇಶ್‌ ತನ್ನ ಮಗಳು ನಾಪತ್ತೆಯಾಗಿರುವ ಬಗ್ಗೆ ಪೊಲೀಸ್‌ ದೂರು ದಾಖಲು ಮಾಡಿದ್ದರು. ಈ ವೇಳೆ ಗ್ರಾಮದ ಹೊರಗಿನ ನೀರು ಕಾಲುವೆಯಲ್ಲಿ ವಿರೂಪಗೊಂಡಿದ್ದ ಮಹಿಳೆಯ ಶವ ಕೂಡ ಪತ್ತೆಯಾಗಿತ್ತು.

ಬಳಿಕ ಪೊಲೀಸರಿಗೆ ಅನುಮಾನ ಬಂದು ನರೇಶ್‌ ಹಾಗೂ ಅವರ ಪತ್ನಿ ಶೋಭಾ ದೇವಿಯನ್ನು ಕರೆಸಿ ತೀವ್ರ ವಿಚಾರಣೆಗೆ ಒಳಪಡಿಸಿದಾಗ ತಪ್ಪನ್ನು ಒಪ್ಪಿಕೊಂಡಿದ್ದಾರೆ. ಫೆಬ್ರವರಿ 3 ರಂದು ತಾವೇ ಮಗಳನ್ನು ಕೊಲೆ ಮಾಡಿದ್ದಾಗಿ ಅವರು ಪೊಲೀಸರಿಗೆ ತಿಳಿಸಿದ್ದರು. ಶವದ ಗುರುತು ಸಿಗಬಾರದು ಎನ್ನುವ ಕಾರಣಕ್ಕಾಗಿ ದೇಹದ ಮೇಲೆ ಆಸಿಡ್‌ ಸುರಿದು ವಿರೂಪಗೊಳಿಸಿದ್ದೆವು ಎಂದು ಆರೋಪಿಗಳು ತಿಳಿಸಿದ್ದಾರೆ. ಮಗಳು ಮೊಬೈಲ್‌ ಫೋನ್‌ನಲ್ಲಿ ಸಾಕಷ್ಟು ಹುಡುಗರ ಜೊತೆ ಮಾತನಾಡುತ್ತಿದ್ದಳು. ಆಕೆಗೆ ಅನೇಕ ಸಂಬಂಧಗಳಿದ್ದ ಬಗ್ಗೆಯೂ ಅನುಮಾನವಿತ್ತು ಎಂದು ಪಾಲಕರು ತಿಳಿಸಿದ್ದಾರೆ.

'ಆಕೆಯ ಕೋಣೆಯಲ್ಲಿ ಕೆಲವು ಪ್ರಗ್ನೆನ್ಸಿ ಕಿಟ್‌ಗಳನ್ನು ಪಾಲಕರು ಕಂಡಿದ್ದಾರೆ. ಇದರಿಂದಾಗಿ ಮಗಳು ಹುಡುಗರ ಜೊತೆ ದೈಹಿಕ ಸಂಬಂಧ ಬೆಳೆಸಿರಬಹುದು ಎನ್ನುವ ಅನುಮಾನ ತಂದೆ ನರೇಶ್‌ಗೆ ವ್ಯಕ್ತವಾಗಿತ್ತು. ಜನರ ಮುಂದೆ ತಮ್ಮ ಮರ್ಯಾದೆ ಹಾಳಾಗುತ್ತದೆ ಎಂದುಕೊಂಡು ಸಿಟ್ಟಾಗಿದ್ದ ನರೇಶ್‌ ಮಗಳನ್ನು ಕೊಲೆ ಮಾಡುವ ತೀರ್ಮಾನಕ್ಕೆ ಬಂದಿದ್ದ' ಎಂದು ಸ್ಥಳೀಯ ಎಸ್‌ಪಿ ತಿಳಿಸಿದ್ದಾರೆ.

Shraddha Walker Murder: ಬ್ಲೋ ಟಾರ್ಚ್‌ ಬಳಸಿ ಶ್ರದ್ಧಾಳ ಮುಖವನ್ನು ಸಂಪೂರ್ಣವಾಗಿ ಸುಟ್ಟಿದ್ದ ಅಫ್ತಾಬ್‌!

ಕೊಲೆ ಹಾಗೂ ಕೊಲೆಯ ಸಾಕ್ಷ್ಯವನ್ನು ನಾಶಪಡಿಸಲು ಮಾಡಿದಂಥ ಎಲ್ಲಾ ಕೆಲಸಗಳು ಮನೆಯಲ್ಲಿಯೇ ನಡೆದಿತ್ತು ಎನ್ನುವುದು ಇನ್ನೂ ಅಚ್ಚರಿಯ ವಿಚಾರ. ತಂದೆ ತಾಯಿ ಅಲ್ಲದೆ, ಯುವತಿಯ ಇಬ್ಬರು ಚಿಕ್ಕಪ್ಪಂದಿರನ್ನು ಪೊಲೀಸರು ಬಂದಿಸಿದ್ದಾರೆ. ನರೇಶ್‌ ಸ್ಥಳೀಯವಾಗಿ ಕಾರ್ಮಿಕರಾಗಿ ಕೆಲಸ ಮಾಡುತ್ತಿದ್ದರೆ, ಅರ 2ನೇ ಮಗಳು ನಿಶಾ ಬಿಎ ವ್ಯಾಸಂಗ ಮಾಡುತ್ತಿದ್ದಳು. ಪೊಲೀಸರು ಮಗಳ ಮಿಸ್ಸಿಂಗ್‌ ದೂರು ದಾಖಲಿಸಿದ ಬೆನ್ನಲ್ಲಿಯೇ ಪೋಷಕರ ಬಗ್ಗೆಯೂ ಪೊಲೀಸರು ಅನುಮಾನ ಹೊಂದಿದ್ದರು. 

ಸಾಲ ವಾಪಸ್‌ ಕೇಳಿದ್ದಕ್ಕೆ ಸ್ನೆಹಿತನ ಇರಿದು ಕೊಂದ ಗೆಳೆಯ: ಒಟ್ಟಿಗೇ ಮದ್ಯ ಸೇವನೆ ವೇಳೆ ಜಗಳ

ಹುಡುಗರೊಂದಿಗೆ ಫೋನ್‌ನಲ್ಲಿ ಅತಿಯಾಗಿ ಮಾತನಾಡುತ್ತಾಳೆ ಎನ್ನುವ ವಿಚಾರವಾಗಿ ತಂದೆ ತಾಯಿಯ ಜೊತೆ ಗಲಾಟೆ ಕೂಡ ನಡೆದಿತ್ತು. ಈ ನಡುವೆ ನಿಶಾ ಪ್ರೆಗ್ನೆಂಟ್‌ ಆಗಿದ್ದಾಳೆ ಎನ್ನುವ ಸುದ್ದಿ ತಾಯಿ ಶೋಭಾ ದೇವಿಗೆ ಗೊತ್ತಾಗಿತ್ತು. ಅದಲ್ಲದೆ, ಪ್ರೆಗ್ನೆನ್ಸಿ ಕಿಟ್‌ ಮಗಳ ಕೋಣೆಯಲ್ಲಿ ಕಂಡ ಬಳಿಕ ತಂದೆ ತಾಯಿ ಕೆಂಡಾಮಂಡಲರಾಗಿದ್ದರು. ಆದರೆ, ಮನೆಯವರಿಗೆ ಎಲ್ಲವೂ ಸರಿಯಾಗುತ್ತದೆ. ಪ್ರೆಗ್ನೆನ್ಸಿ ಆಗಿದ್ದರೂ ಅದನ್ನು ತೆಗೆಯುತ್ತೇನೆ ಎಂದು ನಿಶಾ ಹೇಳಿದ್ದಳು. ಆದರೆ, ತಂದೆ ತಾಯಿ ಹಾಗೂ ಆಕೆಯ ಚಿಕ್ಕಪ್ಪಂದಿರು ಇದರಿಂದ ಸಿಟ್ಟಾಗಿದ್ದರು. ಸಿಟ್ಟಿನ ಭರದಲ್ಲಿ ಕೊಲೆ ಮಾಡಿದ್ದಲ್ಲದೆ, ಶವದ ಮೇಲೆ ಬ್ಯಾಟರಿ ಆಸಿಡ್‌ ಹಾಕಿ ವಿರೂಪ ಮಾಡಿದ್ದರು.
 

click me!