Bengaluru: ಬಿಡಿಎ ಜಾಗ ಒತ್ತುವರಿ: ಬಿಬಿಎಂಪಿ ಮಾಜಿ ಕಾರ್ಪೋರೇಟರ್ ಅರೆಸ್ಟ್

By Sathish Kumar KHFirst Published Feb 9, 2023, 3:11 PM IST
Highlights

ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ (ಬಿಡಿಎ) ಜಾಗ ಒತ್ತುವರಿ ಮಾಡಿಕೊಂಡು ಸರ್ಕಾರದ‌ ಬೊಕ್ಕಸಕ್ಕೆ ನಷ್ಟ ಉಂಟು ಮಾಡಿದ ಆರೋಪದ ಹಿನ್ನೆಲೆಯಲ್ಲಿ ಮಂಗಮ್ಮನಪಾಳ್ಯ ವಾರ್ಡ್‌ನ ಮಾಜಿ ಕಾರ್ಪೋರೇಟರ್‌ ಜಗದೀಶ್‌ ಅವರನ್ನು ಪೊಲೀಸರು ಬಂಧಿಸಿದ್ದಾರೆ.

ಬೆಂಗಳೂರು (ಫೆ.09): ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ (ಬಿಡಿಎ) ಜಾಗ ಒತ್ತುವರಿ ಮಾಡಿಕೊಂಡು ಸರ್ಕಾರದ‌ ಬೊಕ್ಕಸಕ್ಕೆ ನಷ್ಟ ಉಂಟು ಮಾಡಿದ ಆರೋಪದ ಹಿನ್ನೆಲೆಯಲ್ಲಿ ಮಂಗಮ್ಮನಪಾಳ್ಯ ವಾರ್ಡ್‌ನ ಮಾಜಿ ಕಾರ್ಪೋರೇಟರ್‌ ಜಗದೀಶ್‌ ಅವರನ್ನು ಪೊಲೀಸರು ಬಂಧಿಸಿದ್ದಾರೆ.

ಸಿಲಿಕಾನ್‌ ಸಿಟಿ ಬೆಂಗಳೂರಿನಲ್ಲಿ ಸಾರ್ವಜನಿಕ ಸಂಸ್ಥೆಗಳ ಆಸ್ತಿಗಳನ್ನು ಕಬಳಿಕೆ ಮಾಡುವಲ್ಲಿ ರಾಜಕೀಯ ವ್ಯಕ್ತಿಗಳು ತಮ್ಮ ಪ್ರಭಾವ ಬಳಸಿಕೊಳ್ಳುವುದು ಸಾಮಾನ್ಯ. ಆದರೆ, ಬಹುತೇಕರು ನೇರವಾಗಿ ಭೂಮಿ ಕಬಳಿಸದೇ ಬೇರೊಬ್ಬರ ಹೆಸರಿಗೆ ಮಾಡಿಕೊಟ್ಟು ಅದರ ಅಧಿಕಾರವನ್ನು ತಾವು ಅನುಭವಿಸುತ್ತಿರುತ್ತಾರೆ. ಇಂತಹ ಅನೇಕ ಪ್ರಕರಣಗಳು ಈಗಾಗಲೇ ಬೆಳಕಿಗೆ ಬಂದಿವೆ. ಆದರೆ, ಮಂಗಮ್ಮನಪಾಳ್ಯ ವಾರ್ಡ್‌ನ ಮಾಜಿ ಕಾರ್ಪೋರೇಟರ್‌ ಜಗದೀಶ್‌ ಬೆಂಗಳುರು ಅಭಿವೃದ್ಧಿ ಪ್ರಾಧಿಕಾರ (ಬಿಡಿಎ) ಆಸ್ತಿಯನ್ನು ಕಬಳಿಸಿದ ಹಿನ್ನೆಲೆಯಲ್ಲಿ ಅವರನ್ನು ಬೆಂಗಳೂರು ಮಹಾನಗರ ಪೊಲೀಸ್‌ ಕಾರ್ಯಪಡೆ (ಬಿಎಂಟಿಎಫ್‌) ಬಂಧಿಸಿದೆ.

ಕೆಂಪೇಗೌಡ ಲೇಔಟಲ್ಲಿ 180 ಎಕರೆಯ ಸೈಟ್‌ ಅಕ್ರಮವಾಗಿ ಪರಿವರ್ತಿಸಿ ಮಾರಾಟ..?

ಸಿಎ ಸೈಟ್‌ನ ನಿವೇಶನದಲ್ಲಿ ಕಾಂಪೌಂಡ್‌:  ಬಿಡಿಎಗೆ ಸೇರಿದ ಜಾಗದಲ್ಲಿ ಸಾರ್ವಜನಿಕರಿಗೆ ಸಂಚಾರ ಮಾಡಲು ರಸ್ತೆಯನ್ನು ಬಿಡಲಾಗಿದೆ. ಆದರೆ, ಸಾರ್ವಜನಿಕ ರಸ್ತೆಯಲ್ಲಿ ಖಾಸಗಿಯಾಗಿ ಕಾಂಪೌಂಡ್‌ ನಿರ್ಮಿಸಿಕೊಂಡು ಜನರ ಸಂಚಾರಕ್ಕೆ ತೊಂದರೆ ಕೊಡುತ್ತಿದ್ದಾರೆ ಎಂಬ ಆರೋಪ ಕೇಳಿಬಂದಿತ್ತು. ಈ ಹಿನ್ನೆಲೆಯಲ್ಲಿ ದೂರು ಬಂದ ಸ್ಥಳವಾದ ಬಿಡಿಎ ನಿರ್ಮಿತ ಐಟಿಐ ಲೇಔಟ್‌ನ ಸಿಎ ಸೈಟ್ ಒತ್ತುವರಿ ಮಾಡಿರುವುದನ್ನು ತೋರಿಸಲಾಗಿದೆ. ಸ್ಥಳ ಪರಿಶೀಲನೆಗೆ ಬಿಡಿಎ ಅಧಿಕಾರಿಗಳೊಂದಿಗೆ ಸ್ಥಳ ಪರಿಶೀಲನೆ ಮಾಡಿದ ಬಿಎಂಟಿಎಫ್‌ ಪೊಲೀಸರು ದೂರು ದಾಖಲಾದ ಹುನ್ನೆಲೆಯಲ್ಲಿ ಮಾಜಿ ಕಾರ್ಪೋರೇಟರ್‌ ಅನ್ನು ವಶಕ್ಕೆ ಪಡೆದಿದ್ದಾರೆ.

ಕೋರ್ಟ್ ಮುಂದೆ ಹಾಜರು:  ಮಾಜಿ ಕಾರ್ಫೋರೇಟರ್ ಜಗದೀಶ್‌ ಅವರನ್ನು ಬಂಧಿಸಿದ ನಂತರ ಬಿಎಂಟಿಎಫ್‌ ಅಧಿಕಾರಿಗಳು  ಕೋರ್ಟ್ ‌ಮುಂದೆ ಹಾಜರು ಪಡಿಸಿದ್ದಾರೆ. 

180 ಎಕರೆಯ ಸೈಟ್‌ ಅಕ್ರಮವಾಗಿ ಪರಿವರ್ತಿಸಿ ಮಾರಾಟ..?: ಬೆಂಗಳೂರು (ಫೆ.09): ನಾಡಪ್ರಭು ಕೆಂಪೇಗೌಡ ಬಡಾವಣೆಯಲ್ಲಿ ನಾಗರಿಕ ಸೌಕರ್ಯ ಕಲ್ಪಿಸಲು ಮೀಸಲಿಟ್ಟ ನಿವೇಶನಗಳನ್ನು (ಸಿಎ ಸೈಟ್‌) ಅಕ್ರಮವಾಗಿ ವಸತಿ ನಿವೇಶನಗಳನ್ನಾಗಿ ಪರಿವರ್ತಿಸಿ ಮಾರಾಟ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ 35 ಎಂಜಿನಿಯರ್‌ಗಳು ಮತ್ತು ಏಳು ಮಂದಿ ಸರ್ವೇಯರ್‌ಗಳ ವಿರುದ್ಧ ಪ್ರಕರಣ ದಾಖಲಿಸಲು ಬಿಡಿಎ ಮುಂದಾಗಿದೆ ಎಂದು ಪ್ರಾಧಿಕಾರದ ಮೂಲಗಳು ತಿಳಿಸಿವೆ.

ಖಾಸಗಿ ಸಂಸ್ಥೆಯೊಂದು ತನಿಖೆ ನಡೆಸಿ ಸಿದ್ಧಪಡಿಸಿರುವ ವರದಿಯ ಪ್ರಾಥಮಿಕ ಅಂಶಗಳ ಪ್ರಕಾರ, ಬಿಡಿಎ ಅಧಿಕಾರಿಗಳು ಅಕ್ರಮವಾಗಿ ಕನಿಷ್ಠ 12 ಸಿಎ ನಿವೇಶನಗಳನ್ನು ವಸತಿ ನಿವೇಶನಗಳನ್ನಾಗಿ ಪರಿವರ್ತಿಸಿದ್ದಾರೆ. ಇದು ಕೆಟಿಸಿಪಿ ಕಾಯಿದೆ (ಕರ್ನಾಟಕ ಟೌನ್‌ ಆ್ಯಂಡ್‌ ಕಂಟ್ರಿ ಪ್ಲಾನಿಂಗ್‌ ಆಕ್ಟ್) ಹಾಗೂ ಸುಪ್ರೀಂ ಕೋರ್ಟ್‌ ಆದೇಶದ ಉಲ್ಲಂಘನೆಯಾಗಿದೆ. ಬಡಾವಣೆಯಲ್ಲಿ ಒಂದು ಬಾರಿ ಸಿಎ ನಿವೇಶನ, ಉದ್ಯಾನ ಅಥವಾ ಮೈದಾನ ಎಂದು ಅಧಿಸೂಚನೆಯಾದರೆ ಅದನ್ನು ಬದಲಿಸುವ ಅಧಿಕಾರ ಎಂಜಿನಿಯರ್‌ಗಳಿಗೆ ಇರುವುದಿಲ್ಲ. ಆದರೆ ಕಾನೂನು ಉಲ್ಲಂಘಿಸಿ ಸಿಎ ನಿವೇಶನಗಳನ್ನು ವಸತಿ ನಿವೇಶನಗಳನ್ನಾಗಿ ಪರಿವರ್ತಿಸಿರುವುದು ಅಪರಾಧವಾಗಿದೆ.

ಹಳೆಯ ನಿಯಮಕ್ಕೆ ತಿಲಾಂಜಲಿ: ನೂತನ ಅಪಾರ್ಟ್ಮೆಂಟ್‌ಗೆ ಬಿಡಿಎ ಗ್ರೀನ್ ಸಿಗ್ನಲ್

ಬಿಡಿಎಗೆ ಕೋಟ್ಯಂತರ ರೂಪಾಯಿ ನಷ್ಟ: ಸಿಎ ನಿವೇಶನಗಳಲ್ಲದೆ ವಾಣಿಜ್ಯ ಉದ್ದೇಶಕ್ಕೆ ಅಭಿವೃದ್ಧಿಯಾಗಬೇಕಾದ 100 ಅಡಿ ಮತ್ತು 80 ಅಡಿ ರಸ್ತೆಯ ಸುತ್ತಮುತ್ತಲಿನ 180 ಎಕರೆ ಪ್ರದೇಶದ ನಿವೇಶನಗಳನ್ನು ವಸತಿ ನಿವೇಶನಗಳನ್ನಾಗಿ ಎಂಜಿನಿಯರ್‌ಗಳು ಪರಿವರ್ತಿಸಿದ್ದಾರೆ. ಬಿಡಿಎ ಎಂಜಿನಿಯರ್‌ಗಳು, ಉಪ ಕಾರ್ಯದರ್ಶಿ ಮತ್ತು ಸಬ್‌ರಿಜಿಸ್ಟ್ರಾರ್‌ ಕಚೇರಿಯಲ್ಲಿ ನಡೆದ ಅಕ್ರಮದಿಂದ ಬಿಡಿಎಗೆ ಕೋಟ್ಯಂತರ ರೂಪಾಯಿ ನಷ್ಟವನ್ನು ಉಂಟು ಮಾಡಲಾಗಿದೆ.

click me!