4 ತಿಂಗಳ ಮಗುವನ್ನು ಕಟ್ಟಡದಿಂದ ಕೆಳಗೆಸೆದು ಕೊಂದ ಕೋತಿ

Published : Jul 18, 2022, 03:23 PM ISTUpdated : Jul 18, 2022, 03:38 PM IST
4 ತಿಂಗಳ ಮಗುವನ್ನು ಕಟ್ಟಡದಿಂದ ಕೆಳಗೆಸೆದು ಕೊಂದ ಕೋತಿ

ಸಾರಾಂಶ

ಬರೇಲಿ: ಕಪಿಚೇಷ್ಟೆ ಮಾಡುವ ಕೋತಿಯೊಂದು ಉಗ್ರ ರೂಪ ತಾಳಿದ ಭಯಾನಕ ಘಟನೆ ಉತ್ತರಪ್ರದೇಶದಲ್ಲಿ ನಡೆದಿದೆ. ನಾಲ್ಕು ತಿಂಗಳ ಮಗುವನ್ನು ಕಟ್ಟಡದಿಂದ ಕೆಳಗೆಸೆದ ಪರಿಣಾಮ ಮಗು ಸಾವನ್ನಪ್ಪಿದೆ. 

ಬರೇಲಿ: ಕಪಿಚೇಷ್ಟೆ ಮಾಡುವ ಕೋತಿಯೊಂದು ಉಗ್ರ ರೂಪ ತಾಳಿದ ಭಯಾನಕ ಘಟನೆ ಉತ್ತರಪ್ರದೇಶದಲ್ಲಿ ನಡೆದಿದೆ. ನಾಲ್ಕು ತಿಂಗಳ ಮಗುವನ್ನು ಕಟ್ಟಡದಿಂದ ಕೆಳಗೆಸೆದ ಪರಿಣಾಮ ಮಗು ಸಾವನ್ನಪ್ಪಿದೆ. ವರದಿಯ ಪ್ರಕಾರ, 4 ತಿಂಗಳ ಮಗು ತನ್ನ ಹೆತ್ತವರೊಂದಿಗೆ ಟೆರೇಸ್‌ನಲ್ಲಿದ್ದಾಗ ಕೋತಿಗಳ ಗುಂಪು ಛಾವಣಿಯ ಮೇಲೆ ಬಂದಿದೆ. ಈ ವೇಳೆ ಮಗುವಿನ ಪೋಷಕರು ಮಂಗಗಳನ್ನು ಓಡಿಸಲು ಪ್ರಯತ್ನಿಸುತ್ತಿರುವಾಗ ಈ ಘಟನೆ ಸಂಭವಿಸಿದೆ.

ಬರೇಲಿಯ ಗ್ರಾಮಾಂತರ ಪ್ರದೇಶದಲ್ಲಿ ಈ ಘಟನೆ ನಡೆದಿದೆ. ಕೋತಿಯೊಂದು ಮೂರು ಅಂತಸ್ತಿನ ಮನೆಯ ಛಾವಣಿಯಿಂದ ಮಗುವನ್ನು ಕೆಳಗೆ ಎಸೆದ ಪರಿಣಾಮ ನಾಲ್ಕು ತಿಂಗಳ ಗಂಡು ಮಗು ಸಾವನ್ನಪ್ಪಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಘಟನೆ ಕುರಿತು ವರದಿಯಾಗಿದ್ದು, ತನಿಖೆ ನಡೆಸಲು ಅರಣ್ಯ ಇಲಾಖೆಯ ತಂಡವನ್ನು ಕಳುಹಿಸಲಾಗಿದೆ ಎಂದು ಬರೇಲಿ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಲಲಿತ್ ವರ್ಮಾ ತಿಳಿಸಿದ್ದಾರೆ.

ಕೈಯಲ್ಲಿ ಚಾಕು ಹಿಡಿದು ಡಾನ್‌ ತರ ಜನರ ಬೆದರಿಸಿದ ಕೋತಿ: ವಿಡಿಯೋ ವೈರಲ್

 

ವರದಿಯ ಪ್ರಕಾರ, ಬರೇಲಿಯ ಡುಂಕಾ ಗ್ರಾಮದ ನಿವಾಸಿ ನಿರ್ದೇಶ್ ಉಪಾಧ್ಯಾಯ (25) ಅವರು ಶುಕ್ರವಾರ ಸಂಜೆ ತಮ್ಮ ನಾಲ್ಕು ತಿಂಗಳ ಮಗು ಹಾಗೂ  ಪತ್ನಿಯೊಂದಿಗೆ  ತಮ್ಮ ಮೂರು ಅಂತಸ್ತಿನ ಮನೆಯ ಟೆರೇಸ್ ಮೇಲೆ ನಡೆದುಕೊಂಡು ಹೋಗುತ್ತಿದ್ದರು. ಈ ವೇಳೆ ಇದ್ದಕ್ಕಿದ್ದಂತೆ ಕೋತಿಗಳ ಹಿಂಡು ಛಾವಣಿಯ ಮೇಲೆ ಬಂದವು. ಮತ್ತು ದಂಪತಿಯನ್ನು ಸುತ್ತುವರೆದವು. ಈ ವೇಳೆ ಮೆಟ್ಟಿಲುಗಳತ್ತ ಸಾಗಿದಾಗ ಮಗು ನಿರ್ದೇಶ್‌ ಕೈಯಿಂದ ಕೆಳಗೆ ಬಿದ್ದಿದ್ದು, ಈ ವೇಳೆ ಮಗುವನ್ನು ನಿರ್ದೇಶ್‌ ಎತ್ತಿಕೊಳ್ಳುವ ಮೊದಲು ಮಂಗವೊಂದು ಎತ್ತಿಕೊಂಡು ಹೋಗಿ ಮಹಡಿಯಿಂದ ಕೆಳಗೆ ಎಸೆದಿದೆ. ಪರಿಣಾಮ ಮಗು ಸ್ಥಳದಲ್ಲೇ ಸಾವನ್ನಪ್ಪಿದೆ ಎಂದು ತಿಳಿದು ಬಂದಿದೆ.

ಘಟನೆಯಿಂದಾಗಿ ಮಗುವನ್ನು ಕಳೆದುಕೊಂಡ ಪೋಷಕರ ಆಕ್ರಂದನ ಮುಗಿಲು ಮುಟ್ಟಿತ್ತು. 

ಗಾಯಕ್ಕೆ ಚಿಕಿತ್ಸೆ ಪಡೆಯಲು ಆಸ್ಪತ್ರೆಗೆ ಬಂದ ತಾಯಿ ಕೋತಿ: ವಿಡಿಯೋ ವೈರಲ್

ಕೋತಿಗಳ ವರ್ತನೆ ಹೀಗೆ ಇರುತ್ತದೆ ಎಂದು ಹೇಳಲಾಗದು. ಅವುಗಳಿಗೆ ಯಾವಾಗ ಕೋಪ ಬರುವುದು ಪ್ರೀತಿ ಉಕ್ಕುವುದೋ ತಿಳಿಯದು ಕೆಲವು ಕೋತಿಗಳು ಪುಟ್ಟ ಮಕ್ಕಳನ್ನು ತಬ್ಬಿ ಮುದ್ದಾಡುವ ವಿಡಿಯೋಗಳನ್ನು ನಾವು ನೋಡಿದ್ದೇವೆ. ಕೆಲ ದಿನಗಳ ಹಿಂದೆ ಲ್ಲೆಯ ಮಾಲಗತ್ತಿ ಗ್ರಾಮದಲ್ಲಿ ಮಹಿಳೆಯ ಶವದ ಮುಂದೆ ಮಂಗವೊಂದು ಸುಮಾರು 20 ಗಂಟೆಗಳ ಕಾಲ ಕದಲದೇ ಕುಳಿತುಕೊಳ್ಳುವ ಮೂಲಕ ಅಚ್ಚರಿ ಮೂಡಿಸಿರುವ ಘಟನೆ ನಡೆದಿತ್ತು. ಜನರ ಗದ್ದಲದ ನಡುವೆ ಕೋತಿಗಳು ಇರೋದಿಲ್ಲ. ಆದರೆ, ಈ ಮಂಗ ಮಾತ್ರ ಶವದ ಮುಂದೆ ಕಣ್ಣೀರು ಹಾಕುತ್ತ ಕುಳಿತವರ ಮಧ್ಯೆ ತಾನೂ ಸಹ ಕುಳಿತು ಶೋಕದಲ್ಲಿ ಮುಳುಗುವ ಮೂಲಕ ವಿಚಿತ್ರ ವರ್ತನೆ ತೋರಿತ್ತು. ಮಹಿಳೆಯ ಶವದ ಪಕ್ಕದಲ್ಲಿ ಕುಳಿತ ಕೋತಿಯ ವಿಡಿಯೋ ಸಾಮಾಜಿಕ ತಾಣಗಳಲ್ಲಿ ವೈರಲ್‌ ಆಗಿ ಎಲ್ಲರೂ ಬೆರಗಾಗುವಂತೆ ಮಾಡಿತ್ತು.

 

ಮಾಲಗತ್ತಿ ಗ್ರಾಮದ ಶಾಮಲಾ ಎಂಬುವರು ಕಾಯಿಲೆಯಿಂದ ಮೃತಪಟ್ಟಿದ್ದರು. ಮನೆಯಲ್ಲಿ ಶಾಮಲಾ ಅವರ ಶವವಿಟ್ಟು ಸಂಬಂಧಿಕರು ಅಳುತ್ತ ಕುಳಿತಿದ್ದರು. ಮಹಿಳೆ ಮೃತಪಟ್ಟಒಂದು ಗಂಟೆಗೆ ಪ್ರತ್ಯಕ್ಷವಾದ ಕೋತಿ ಸ್ಥಳ ಬಿಟ್ಟು ಕದಲದೇ ಜನರ ಮಧ್ಯೆ ತಾನೂ ಕೂಡ ಕುಳಿತಿತ್ತು. ಕೋತಿ ಓಡಿಸೋದಕ್ಕೆ ಎಷ್ಟೇ ಪ್ರಯತ್ನಪಟ್ಟರೂ ಸಹ ಅದು ಆ ಜಾಗದಿಂದ ಕದಲೇ ಇಲ್ಲ. ಅಂತ್ಯ ಸಂಸ್ಕಾರದ ವಿಧಿ ವಿಧಾನಕ್ಕೂ ಅಡ್ಡಿಪಡಿಸಿದ ಕೋತಿ, ಶವಕ್ಕೆ ಮುಂದಿನ ಕಾರ್ಯ ನಡೆಸಲು ಬಿಡಲಿಲ್ಲ. ಇದರಿಂದ ಭಯಭೀತರಾದ ಗ್ರಾಮಸ್ಥರು ಅರಣ್ಯ ಇಲಾಖೆ ಅಧಿಕಾರಿಗಳಿಗೆ ಮಾಹಿತಿ ನೀಡಿದಾಗ ಸ್ಥಳಕ್ಕೆ ಆಗಮಿಸಿದ ಸಿಬ್ಬಂದಿ ಕೋತಿಗೆ ಅರವಳಿಕೆ ಚುಚ್ಚುಮದ್ದು ನೀಡಿ ಕರೆದೊಯ್ದಿದ್ದರು.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

Pocso: 9 ವರ್ಷದ ಬಾಲಕಿ ಮೇಲೆ ಲೈಂಗಿಕ ದೌರ್ಜನ್ಯ; ಆರೋಪಿಗೆ ಗ್ರಾಮಸ್ಥರಿಂದ ಧರ್ಮದೇಟು!
ಸಿನಿಮೀಯ ಶೈಲಿಯಲ್ಲಿ ಹಿಮಾಲಯದ ಮೈನಸ್ ತಾಪಮಾನದಲ್ಲಿ ಅಂತಾರಾಷ್ಟ್ರೀಯ ಮಹಿಳಾ ಸ್ಮಗ್ಲರ್‌ ಬಂಧನ