ರೇಪ್‌ ಮಾಡಲು ಯತ್ನಿಸಿದ ಪಾಪಿಯ ತುಟಿಯನ್ನೇ ಕಚ್ಚಿ ಕತ್ತರಿಸಿ ಬಚಾವ್ ಆದ ಯುವತಿ!

Published : Feb 05, 2023, 11:32 PM ISTUpdated : Feb 06, 2023, 12:05 AM IST
ರೇಪ್‌ ಮಾಡಲು ಯತ್ನಿಸಿದ ಪಾಪಿಯ ತುಟಿಯನ್ನೇ ಕಚ್ಚಿ ಕತ್ತರಿಸಿ ಬಚಾವ್ ಆದ ಯುವತಿ!

ಸಾರಾಂಶ

ಅತ್ಯಾಚಾರ ಮಾಡಲು ಯತ್ನಿಸಿದ ಪಾಪಿಯ ತುಟಿಯನ್ನು ಕಚ್ಚಿದ್ದಲ್ಲದೆ, ಹಲ್ಲುಗಳಿಂದ ಅವನ್ನು ಕತ್ತರಿಸಿ ಹಾಕುವ ಮೂಲಕ ಉತ್ತರ ಪ್ರದೇಶದ ಮೀರತ್‌ನಲ್ಲಿ ಯುವತಿಯೊಬ್ಬಳು ಸಾಹಸ ಮಾಡಿದ್ದಾಳೆ. ಶನಿವಾರ ಮಧ್ಯಾಹ್ನ ಈ ಘಟನೆ ನಡೆದಿದ್ದು, ಯುವತಿ ಗದ್ದೆಯಲ್ಲಿ ಕೆಲಸ ಮಾಡುವ ವೇಳೆ ಪಾಪಿ ಅತ್ಯಾಚಾರ ಎಸಗಲು ಬಂದಿದ್ದ.  

ಲಕ್ನೋ (ಫೆ.5): ಯುವತಿಯೊಬ್ಬಳು ತನ್ನನ್ನು ರೇಪ್‌ ಮಾಡಲು ಯತ್ನಿಸಿದ ಪುರುಷನ ಮೇಲೆ ಧೈರ್ಯದಿಂದ ಹೋರಾಟ ಮಾಡಿ ಅತ್ಯಾಚಾರದಿಂದ ಬಚಾವ್‌ ಆಗಿರುವ ಘಟನೆ ಉತ್ತರ ಪ್ರದೇಶದ ಮೀರತ್‌ನಲ್ಲಿ ನಡೆದಿದೆ. ತನ್ನ ಅಗಾಧ ಧೈರ್ಯದಿಂದ ಆಕೆ ಮಾಡಿದ ಕೆಲಸ, ಆಕೆಯಲ್ಲಿ ಅತ್ಯಾಚಾರದಿಂದ ಪಾರು ಮಾಡುವಂತೆ ಮಾಡಿದೆ. ಗದ್ದೆಯಲ್ಲಿ ಕೆಲಸ ಮಾಡುತ್ತಿದ್ದ ಯುವತಿಯನ್ನು ಹಿಡಿದು, ಅತ್ಯಾಚಾರ ಮಾಡಲು ಹೋದ ವ್ಯಕ್ತಿ ವೇಳೆ ಆಕೆಗೆ ಬಲವಂತವಾಗಿ ಚುಂಬಿಸಲು ಹೋಗಿದ್ದಾನೆ.  ಈ ವೇಳೆ ಆಕೆ ವ್ಯಕ್ತಿಯ ತುಟಿಯನ್ನು ತನ್ನ ಹಲ್ಲುಗಳಿಂದ ಕಚ್ಚಿ ಕತ್ತರಿಸಿ ಹಾಕಿದ್ದಾಳೆ. ಇದರಿಂದ ಯುವಕ ತುಟಿಯ ಕೆಳಭಾಗದ ಭಾಗವೇ ಇಲ್ಲದಂತಾಗಿದ್ದು, ಸಂಪೂರ್ಣ ಬಾಯಿ ರಕ್ತಮಯವಾಗಿತ್ತು. ಯುವತಿ ಹಾಗೂ ಯುವಕನ ಕೂಗಾಟದ ಸದ್ದು ಕೇಳಿದ ಅಕ್ಕಪಕ್ಕದವರು ಸ್ಥಳಕ್ಕೆ ಆಗಮಿಸಿ ಆರೋಪಿಯನ್ನು ಹಿಡಿದು ಪೊಲೀಸರಿಗೆ ಒಪ್ಪಿಸಿದ್ದಾರೆ.

ಈ ಇಡೀ ವಿಷಯವು ಉತ್ತರ ಪ್ರದೇಶದ ಮೀರತ್ ಜಿಲ್ಲೆಯ ದಾರಾವುಲಾ ಪೊಲೀಸ್ ಠಾಣೆ ವ್ಯಾಪ್ತಿಯ ಹಳ್ಳಿಯೊಂದರಲ್ಲಿ ನಡೆದಿದ್ದಾರ.ೆ ಶನಿವಾರ ಮಧ್ಯಾಹ್ನ ಘಟನೆ ನಡೆದಿದೆ. ಜನರಿಂದ ಮಾಹಿತಿ ಪಡೆದ ಪೊಲೀಸರು ಸ್ಥಳಕ್ಕೆ ಧಾವಿಸಿ ಆರೋಪಿಯನ್ನು ವಶಕ್ಕೆ ಪಡೆದಿದ್ದಾರೆ. ಪೊಲೀಸರು ಆರೋಪಿಯ ತುಟಿಯ ತುಂಡನ್ನು ಪ್ಯಾಕೆಟ್‌ನಲ್ಲಿ ಸೀಲ್‌ ಮಾಡಿ ತೆಗೆದುಕೊಂಡು ಹೋಗಿದ್ದಾರೆ. ಗಂಭೀರವಾಗಿ ಗಾಯಗೊಂಡ ಯುವಕನನ್ನು ಸಮೀಪದ ಸಿಎಚ್‌ಸಿಗೆ ಕರೆದೊಯ್ದು ಚಿಕಿತ್ಸೆ ನೀಡಲಾಗಿದೆ. ಇನ್ನೊಂದೆಡೆ ಮಹಿಳೆಯು, ಲಾವಡ್‌ ಗ್ರಾಮದ ಮೋಹಿತ್‌ ಸೈನಿ ವಿರುದ್ಧ ಅತ್ಯಾಚಾರ ಹಾಗೂ ಲೈಂಗಿಕ ಕಿರುಕುಳದ ಕುರಿತಾಗಿ ಎಫ್‌ಐಆರ್‌ ದಾಖಲು ಮಾಡಿದ್ದಾರೆ.

ರಿವೇಂಜ್‌ ಸ್ಟೋರಿ, 58 ವರ್ಷದ ಮಹಿಳೆಯನ್ನು ರೇಪ್‌ ಮಾಡಿ ಕೊಂದ 16 ವರ್ಷದ ಬಾಲಕ!

ಹೊಲಕ್ಕೆ ಕೆಲಸಕ್ಕೆ ಹೋಗಿದ್ದ ಯುವತಿ: ಶನಿವಾರ ಮಧ್ಯಾಹ್ನ ತನ್ನ ಜಮೀನಿನಲ್ಲಿ ಕೆಲಸಕ್ಕೆ ಹೋಗಿದ್ದೆ ಎಂದು ಸಂತ್ರಸ್ತ ಮಹಿಳೆ ಪೊಲೀಸರಿಗೆ ತಿಳಿಸಿದ್ದಾರೆ. ಈ ಸಮಯದಲ್ಲಿ ಸುತ್ತಮುತ್ತ ಯಾರೂ ಇರಲಿಲ್ಲ. ಜನರೂ ಕೂಡ ಹೆಚ್ಚಾಗಿ ತಿರುಗಾಡುತ್ತರಲಿಲ್ಲ. ಅಷ್ಟರಲ್ಲಿ ಹಿಂದಿನಿಂದ ಬಂದ ಮೋಹಿತ್‌ ಸೈನಿ, ನನ್ನನ್ನು ಬಲವಾಗಿ ತಬ್ಬಿಕೊಂಡಿದ್ದ. ಇದರಿಂದ ನನಗೆ ಬಹಳ ಆತಂಕವಾಗಿತ್ತು. ನನ್ನನ್ನು ಹಿಡಿದದ್ದು ಯಾರು ಎನ್ನುವುದು ಮೊದಲಿಗೆ ಗೊತ್ತಾಗಿರಲಿಲ್ಲ. ಆಕೆ ಕೂಗಲು ಆರಂಭಿಸಿದಾಗ ಆತ, ನನ್ನ ಕುತ್ತಿಗೆಯನ್ನು ಒತ್ತಿ ಹಿಡಿದಿದ್ದ ಎಂದು ಯುವತಿ ಹೇಳಿದ್ದಾಳೆ. ಇದಾದ ಬಳಿಕ ನನ್ನನ್ನು ಗದ್ದೆಗೆ ಎಳೆದೊಯ್ದ ಆತ ಮೈಮೇಲಿನ ಬಟ್ಟೆಯನ್ನು ಹರಿದು ಹಾಕತೊಡಗಿದ್ದ ಎಂದು ಹೇಳಿದ್ದಾರೆ.

ಇಸ್ಪೀಟ್‌ ಜೂಜಾಟದಿಂದ ಸಾಲ: ಸೆಲ್ಫಿ ವೀಡಿಯೋ ಮಾಡಿಟ್ಟು ನೇಣಿಗೆ ಶರಣಾದ ಯುವಕ

ತುಟಿ ಕಚ್ಚಿದ ಯುವತಿ: ಈ ಹಂತದಲ್ಲಿ ನನ್ನನ್ನು ರಕ್ಷಿಸಿಕೊಳ್ಳುವುದೇ ನನಗೆ ಮುಖ್ಯವಾಗಿತ್ತು. ಇದಕ್ಕಾಗಿ ಎಲ್ಲಾ ರೀತಿಯ ಪ್ರಯತ್ನ ಮಾಡುತ್ತಿದ್ದೆ ಎಂದು ಪೊಲೀಸರಿಗ ಯುವತಿ ತಿಳಿಸಿದ್ದಾಳೆ. ಇದ್ದಕ್ಕಿದ್ದಂತೆ ಯುವಕ ಆಕೆಯನ್ನು ಬಲವಂತವಾಗಿ ಚುಂಬಿಸಲು ಆರಂಭ ಮಾಡಿದ್ದ. ಇದರಿಂದ ಕೋಪ ಹಾಗೂ ಗಾಬರಿಯಲ್ಲಿದ್ದ ನಾನು, ರಕ್ಷಿಸಿಕೊಳ್ಳುವ ಸಲುವಾಗಿ ಆತನ ತುಟಿಯನ್ನು ಹಲ್ಲಿನ ಸಹಾಯದಿಂದ ಬಹಳ ಗಟ್ಟಿಯಾಗಿ ಕಚ್ಚಿದೆ. ನಾನು ಕಚ್ಚಿದ್ದು ಎಚ್ಡು ಗಟ್ಟಿಯಾಗಿತ್ತೆಂದರೆ, ಆತನ ತುಟಿ ತುಂಡಾಗಿ ನೆಲದ ಮೇಲೆ ಬಿದ್ದಿತ್ತು. ತುಟಿ ನೆಲಕ್ಕೆ ಬಿದ್ದ ಬೆನ್ನಲ್ಲಿಯೇ ಆತ ನೋವಿನಿಂದ ಕಿರುಚಾಡಲು ಆರಂಭ ಮಾಡಿದ್ದ. ಅಷ್ಟರಲ್ಲಿ ನಾನೂ ಕೂಡ ಇನ್ನಷ್ಟು ಗಟ್ಟಿಯಾಗಿ ಕೂಗಲು ಆರಂಭಿಸಿದೆ ಎಂದು ಯುವತಿ ಹೇಳಿದ್ದಾರೆ.

ಮಹಿಳೆಯ ದೂರಿನ ಮೇರೆಗೆ ಆರೋಪಿ ಮೋಹಿತ್ ಸೈನಿ ವಿರುದ್ಧ ಪ್ರಕರಣ ದಾಖಲಿಸಲಾಗಿದೆ ಎಂದು ಠಾಣಾಧಿಕಾರಿ ದೌರಾಲಾ ಸಂಜಯ್ ಕುಮಾರ್ ಶರ್ಮಾ ತಿಳಿಸಿದ್ದಾರೆ. ಯುವಕನ ವಿರುದ್ಧ ಕ್ರಮ ಕೈಗೊಳ್ಳಲಾಗುತ್ತಿದೆ. ವಿಚಾರಣೆ ವೇಳೆ ತನ್ನ ಹೆಸರನ್ನು ಮೋಹಿತ್ ಸೈನಿ ಎಂದು ಹೇಳಿದ್ದು, ಆತ ಲಾವಾಡದ ಮೊಹಲ್ಲಾ ಸೈಯಾನ್ ಪ್ರದೇಶದ ನಿವಾಸಿ. ಅವನು ಯಾವ ಉದ್ದೇಶಕ್ಕಾಗಿ ಗ್ರಾಮವನ್ನು ತಲುಪಿದ ಎನ್ನುವುದನ್ನು ಪರಿಶೀಲಿಸಲಾಗುತ್ತಿದೆ. ಸಂತ್ರಸ್ತೆ ಬಗ್ಗೆ ಆತನಿಗೆ ಮೊದಲೇ ಗೊತ್ತಿತ್ತೇ ಎಂಬ ಬಗ್ಗೆಯೂ ತನಿಖೆ ನಡೆಸಲಾಗುತ್ತಿದೆ ಎಂದಿದ್ದಾರೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಕಾನೂನು ತಾರತಮ್ಯ ಉಲ್ಲೇಖಿಸಿ ಪೋಸ್ಟ್; 'ನಾನು ಇದನ್ನು ಸುಮ್ಮನೆ ಬಿಡುವುದಿಲ್ಲ' ಎಂದ ವಿಜಯಲಕ್ಷ್ಮೀ ದರ್ಶನ್
ಕೇರ್ ಟೇಕರ್ ನಂಬಿದ ಅಪ್ಪ ಮಗಳಿಗೆ ಆಗಬಾರದು ಆಗೋಯ್ತು: ನಂಬೋದು ಯಾರನ್ನು?