ಬೆಂಗಳೂರು: ಒಳ ಉಡುಪಿನಲ್ಲಿ ಚಿನ್ನ ಸಾಗಾಟ, ಪ್ರಯಾಣಿಕನ ಬಂಧನ

By Girish GoudarFirst Published Feb 5, 2023, 10:08 PM IST
Highlights

ಪ್ಯಾಂಟ್ ಹಾಗೂ ಒಳ ಉಡುಪಿನಲ್ಲಿ ಚಿನ್ನ ಸಾಗಾಟ ಮಾಡಿದ ಪ್ರಯಾಣಿಕನೊಬ್ಬನನ್ನ ಪೊಲೀಸರು ಬಂಧಿಸಿದ ಘಟನೆ ನಗರದ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ನಡೆದ ಘಟನೆ. 

ಬೆಂಗಳೂರು(ಫೆ.05):  ಪ್ಯಾಂಟ್ ಹಾಗೂ ಒಳ ಉಡುಪಿನಲ್ಲಿ ಚಿನ್ನ ಸಾಗಾಟ ಮಾಡಿದ ಪ್ರಯಾಣಿಕನೊಬ್ಬನನ್ನ ಪೊಲೀಸರು ಬಂಧಿಸಿದ ಘಟನೆ ನಗರದ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಇಂದು(ಭಾನುವಾರ) ನಡೆದಿದೆ. ಧರಿಸಿದ್ದ ಪ್ಯಾಂಟ್ ಹಾಗೂ ಒಳ ಉಡುಪಿನಲ್ಲಿ ಸೆಮಿ ಲೇಯರ್ ರೀತಿ ಚಿನ್ನದ ಲೇಪನ ಮಾಡಲಾಗಿತ್ತು ಅಂತ ತಿಳಿದು ಬಂದಿದೆ.  

ಬಂಧಿತ ಪ್ರಯಾಣಿಕ ಅತಿ ಸಣ್ಣ ಲೇಯರ್ ರೀತಿ ಲೇಪನ ಮಾಡಿದ ಪ್ಯಾಂಟ್ ಧರಿಸಿದ್ದ, ಪ್ರಯಾಣಿಕರ ತಪಾಸಣೆ ವೇಳೆ ಪ್ಯಾಂಟ್ ಹಾಗೂ ಒಳ ಉಡುಪಿನಲ್ಲಿ ಚಿನ್ನ ಲೇಪನ ಪತ್ತೆಯಾಗಿದೆ. 

53 ವರ್ಷದ ಮಹಿಳೆ ಮೇಲೆ ಅತ್ಯಾಚಾರ ಎಸಗಿ ಹತ್ಯೆಗೈದ ಅಪ್ರಾಪ್ತ ಬಾಲಕ!

ಬಂಧಿತ ಪ್ರಯಾಣಿಕ ಬಹ್ರೇನ್‌ನಿಂದ ಬೆಂಗಳೂರಿಗೆ ಆಗಮಿಸಿದ್ದನು. ತಪಾಸಣೆ ವೇಳೆ 13.46 ಲಕ್ಷ ಮೌಲ್ಯದ 238 ಗ್ರಾಂ ಚಿನ್ನ ಪತ್ತೆಯಾಗಿದೆ. ಏರ್ ಕಸ್ಟಮ್ಸ್ ಅಧಿಕಾರಿಗಳ ಪರಿಶೀಲನೆ ವೇಳೆ ಪ್ರಯಾಣಿಕ ಸಿಕ್ಕಿ ಬಿದ್ದಿದ್ದಾನೆ. ಪ್ರಯಾಣಿಕನನ್ನ ವಶಕ್ಕೆ ಪಡೆದು ಕಸ್ಟಮ್ಸ್ ಅಧಿಕಾರಿಗಳು ವಿಚಾರಣೆ ನಡೆಸುತ್ತಿದ್ದಾರೆ. 

click me!