
ಬರೇಲಿ (ನವೆಂಬರ್ 20, 2023): ಉತ್ತರ ಪ್ರದೇಶದ ಬರೇಲಿಯಲ್ಲಿ ಹೆಂಡತಿಯನ್ನು ಗಂಡ ಜೀವಂತವಾಗಿ ಸುಟ್ಟುಹಾಕಿದ್ದಾರೆ. ಆಕೆ ಬೇರೊಬ್ಬ ಪುರುಷನೊಂದಿಗೆ ಅನ್ಯೋನ್ಯವಾಗಿ ಇರುವುದನ್ನು ನೋಡಿದ ಪತಿ ಸಿಟ್ಟಿಗೆದ್ದು ಸುಟ್ಟು ಹಾಕಿ ಕೊಂದಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಯುಪಿಯ ಬರೇಲಿ ಜಿಲ್ಲೆಯ ಗೊಟಿಯಾ ಗ್ರಾಮದಲ್ಲಿ 35 ವರ್ಷದ ಮಹಿಳೆಯೊಬ್ಬರು ಬೇರೊಬ್ಬ ಪುರುಷನೊಂದಿಗೆ ಇರುವುದನ್ನು ನೋಡಿದ ಪತಿ ಆಕೆಯನ್ನು ಸುಟ್ಟು ಹಾಕಿ ಕೊಂದಿದ್ದಾರೆ ಎಂದು ಪೊಲೀಸರು ಭಾನುವಾರ ಮಾಹಿತಿ ನೀಡಿದ್ದಾರೆ. ಶನಿವಾರ ತಡರಾತ್ರಿ ಗ್ರಾಮದ ಸಮೀಪದ ಹೊಲವೊಂದರಲ್ಲಿ ಅಂಜಲಿ ಎಂದು ಗುರುತಿಸಲಾದ ಮಹಿಳೆಯ ಸುಟ್ಟ ಮೃತದೇಹ ಪತ್ತೆಯಾಗಿದೆ ಎಂದೂ ಪೊಲೀಸರು ಹೇಳಿದ್ದಾರೆ.
ಇದನ್ನು ಓದಿ: ಉದ್ಯಮಿ ಮನೆ ದರೋಡೆಗೆ ಬಂದೋರು ಕಳ್ಳತನದ ಜತೆಗೆ ಮನೆಯೊಡತಿಯ ಸಾಮೂಹಿಕ ಅತ್ಯಾಚಾರ ಮಾಡಿದ್ರು!
ಶಾಹಿ ಪೊಲೀಸ್ ಠಾಣೆಯು ಈ ಪ್ರದೇಶದ ಅಧಿಕಾರ ವ್ಯಾಪ್ತಿಯನ್ನು ಹೊಂದಿದ್ದು, ಕೊಲೆಯ ಆರೋಪದ ಮೇಲೆ ಆರೋಪಿ ನೇಪಾಲ್ ಸಿಂಗ್‌ನನ್ನು ತಕ್ಷಣವೇ ಬಂಧಿಸಿದೆ. ಆದರೆ, ಉದ್ದೇಶಪೂರ್ವಕವಾಗಿ ಅಂಜಲಿಯನ್ನು ಜೀವಂತವಾಗಿ ಸುಟ್ಟು ಹಾಕಿದ್ದಾರೆ ಎಂದು ಅಂಜಲಿಯ ಮನೆಯವರು ಆರೋಪಿಸಿದ್ದರು.
ಇನ್ನು, ಅಂಜಲಿಯ ಶವವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದೆ ಎಂದೂ ಪೊಲೀಸರು ತಿಳಿಸಿದ್ದಾರೆ. ಆದರೆ, ಮಹಿಳೆಯೊಂದಿಗಿದ್ದ ವ್ಯಕ್ತಿ ಇನ್ನೂ ಬದುಕಿದ್ದಾರಾ ಅಥವಾ ಅವರನ್ನೂ ಕೊಲೆ ಮಾಡಲಾಗಿದ್ಯಾ ಅನ್ನೋ ಬಗ್ಗೆ ಮಾಹಿತಿ ತಿಳಿದುಬಂದಿಲ್ಲ.
ಇದನ್ನು ಓದಿ: ಕೆನಡಾ, ಇಸ್ರೇಲ್‌ನಿಂದ ನಿಮಗೂ ಕಾಲ್ ಬರ್ತಿದ್ಯಾ? ಲಕ್ಷಾಂತರ ರೂ. ಹಣ ಕಳ್ಕೋಬೋದು ಹುಷಾರ್!
ಘಟನೆಯ ವಿವರ..
ತನ್ನ ಹೆಂಡತಿ ಒಬ್ಬ ವ್ಯಕ್ತಿಯೊಂದಿಗೆ ಒಣಹುಲ್ಲಿನ ರಾಶಿಯ ಮೇಲೆ ಮಲಗಿರುವುದನ್ನು ಆರೋಪಿ ಪತಿ ನೇಪಾಲ್ ಸಿಂಗ್ ನೋಡಿದನು. ಇದರಿಂದ ಸಿಟ್ಟಿಗೆದ್ದ ಪತಿ ಬಣವೆಗೆ ಬೆಂಕಿ ಹಚ್ಚಿ ಹೊರಟು ಹೋದ ಎಂದೂ ಪೊಲೀಸರು ಮಾಹಿತಿ ನೀಡಿದ್ದಾರೆ. ತನ್ನ ಪತ್ನಿಗೆ ಬೇರೊಬ್ಬ ಪುರುಷನೊಂದಿಗೆ ವಿವಾಹೇತರ ಸಂಬಂಧ ಹೊಂದಿದ್ದರಿಂದ ಆಕೆಯನ್ನು ಕೊಂದಿರುವುದಾಗಿ ವಿಚಾರಣೆ ವೇಳೆ ನೇಪಾಲ್ ಸಿಂಗ್ ಪೊಲೀಸರಿಗೆ ತಿಳಿಸಿದ್ದಾನೆ ಎಂದೂ ಹೇಳಲಾಗಿದೆ.
ಇದನ್ನೂ ಓದಿ: ಪಕ್ಕದ ಮನೆ ಯುವಕನ ಜತೆ ಜಗಳ: ವ್ಯಕ್ತಿಯ ಜನನಾಂಗವನ್ನೇ ಕತ್ತರಿಸಿದ ಮಹಿಳೆ!
ಇದನ್ನೂ ಓದಿ: ದುಬಾರಿ ಐಫೋನ್ 15 ಪ್ರೋ ಮ್ಯಾಕ್ಸ್ ಆರ್ಡರ್ ಮಾಡಿದ ವ್ಯಕ್ತಿಗೆ ನಕಲಿ ಆಂಡ್ರಾಯ್ಡ್ ಫೋನ್ ನೀಡಿದ ಆ್ಯಪಲ್ ಸಂಸ್ಥೆ!
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ