
ವಿಜಯನಗರ (ನ.20): ಇನ್ನೆರಡು ದಿನದಲ್ಲಿ ಮದುವೆಯಾಗಿ ದಾಂಪತ್ಯಕ್ಕೆ ಕಾಲಿಡಬೇಕಿದ್ದ ಯುವತಿ ನೇಣಿಗೆ ಶರಣಾದ ಘಟನೆ ಹೊಸಪೇಟೆ ತಾಲೂಕಿನ ಟಿಬಿ ಡ್ಯಾಂನಲ್ಲಿ ನಡೆದಿದೆ.
ಐಶ್ವರ್ಯ ನೇಣಿಗೆ ಶರಣಾದ ಯುವತಿ. ಮದುವೆ ಸಂಭ್ರಮದಲ್ಲಿರಬೇಕಾದ ಯುವತಿ ಆತ್ಮಹತ್ಯೆ ಮಾಡಿಕೊಂಡಿರುವುದು ಹಲವು ಅನುಮಾನ ಹುಟ್ಟಿಸಿದೆ. ಮದುವೆಯಾಗಬೇಕಿದ್ದ ವರನ ಮನೆಯಲ್ಲೇ ಅನುಮಾನಾಸ್ಪದವಾಗಿ ಸಾವನ್ನಪ್ಪಿರೋ ಯುವತಿ.
ಸಿಂಧನೂರು: ಪ್ರೀತಿಸಿ ಮದುವೆಯಾದ ಪತ್ನಿಯನ್ನ ನೇಣು ಬಿಗಿದು ಕೊಲೆ ಮಾಡಿದ ಪಾಪಿ ಗಂಡ..!
6 ವರ್ಷಗಳಿಂದ ಪರಸ್ಪರ ಪ್ರೀತಿ ಮಾಡಿದ್ದ ಆಶೋಕ ಮತ್ತು ಐಶ್ವರ್ಯ. ಯುವಕ ಯುವತಿ ಇಬ್ಬರೂ ಖಾಸಗಿ ಕಂಪನಿಯ ಉದ್ಯೋಗಿಗಳು. ಪರಿಚಯವಾಗಿ ಪರಸ್ಪರ ಪ್ರೀತಿಸುತ್ತಿದ್ದರು. ಮನೆಯವರ ಒಪ್ಪಿಗೆ ಮೇರೆಗೆ ಅಂತರ್ಜಾತಿ ವಿವಾಹವಾಗಲು ರೆಡಿಯಾಗಿದ್ರು. ಐಶ್ವರ್ಯಾ ಎಸ್ಸಿ, ಹುಡುಗ ಗೌಂಡರ್. ಅಂತರ್ಜಾತಿ ಹಿನ್ನೆಲೆ ಕೆಲವು ಷರತ್ತುಗಳ ಮೇಲೆ ಮದುವೆಯಾಗಲು ಒಪ್ಪಿದ್ದರಂತೆ ಯುವಕನ ಕಡೆಯವರು.
ಬಳಿಕ ಸಂಪ್ರದಾಯದಂತೆ ಮದುವೆ ಮಾಡಿಕೊಳ್ತೇವೆಂದು ಶಾಸ್ತ್ರ ಇದೆ ಎಂದು ಯುವತಿಯನ್ನು ಕರೆದುಕೊಂಡು ಹೋಗಿದ್ದರು. ಹುಡುಗಿ ಕಡೆಯವರು ಯಾರೂ ಬರಬಾರದೆಂದು ಷರತ್ತು ಹಾಕಿ ಕರೆದುಕೊಂಡು ಹೋಗಿದ್ದ ಅಶೋಕನ ಕುಟುಂಬಸ್ಥರು. ಅವರ ಹಿಂದೆ ಒಬ್ಬಳೇ ಹೋಗಿದ್ದ ಐಶ್ವರ್ಯಾ ಇದೀಗ ದಿಢೀರನೇ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾಳೆಂದು ಕತೆ ಕಟ್ಟಿದ್ದಾರೆ ಆರೋಪಿಸಿರುವ ಯುವತಿ ಮನೆಯವರು.
ನಮ್ಮ ಮಗಳು ಆತ್ಮಹತ್ಯೆ ಮಾಡಿಕೊಳ್ಳುವಷ್ಟು ಹೇಡಿಯಲ್ಲ. ಆದ್ರೇ ಆತ್ಮಹತ್ಯೆ ಮಾಡಿಕೊಳ್ಳಲು ಪ್ರಚೋದನೆ ಮಾಡಿದ್ದಾರೆ. ಇದೊಂದು ಕೊಲೆ ಎಂದ ಯುವತಿಯ ಪೋಷಕರು. ಟಿಬಿ ಡ್ಯಾಂ ಪೊಲೀಸ್ ಠಾಣೆಯಲ್ಲಿ ಕೊಲೆ ಪ್ರಕರಣ ದಾಖಲಿಸಿದ ಪೋಷಕರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ