ಶಾಲೆಯ ಯಶಸ್ಸಿಗಾಗಿ 7 ವರ್ಷದ ಬಾಲಕನನ್ನು ವಾಮಾಚಾರಕ್ಕೆ ಬಲಿಕೊಟ್ಟ ಆಡಳಿತ ಮಂಡಳಿ!

By Santosh Naik  |  First Published Sep 27, 2024, 10:56 AM IST

ಉತ್ತರ ಪ್ರದೇಶದ ಹತ್ರಾಸ್‌ನಲ್ಲಿರುವ ಶಾಲೆಯೊಂದು ಮಾಟಮಂತ್ರದ ಭಾಗವಾಗಿ 7 ವರ್ಷದ ಬಾಲಕನನ್ನು ಬಲಿ ಕೊಟ್ಟಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಶಾಲೆಯ ನಿರ್ದೇಶಕ, ಮೂವರು ಶಿಕ್ಷಕರು ಸೇರಿದಂತೆ ಐವರನ್ನು ಬಂಧಿಸಲಾಗಿದೆ. ಶಾಲೆಗೆ ಕೀರ್ತಿ ಮತ್ತು ಯಶಸ್ಸನ್ನು ತರಲು ಈ ಕೃತ್ಯ ಎಸಗಲಾಗಿದೆ ಎಂದು ಹೇಳಲಾಗುತ್ತಿದೆ.


ನವದೆಹಲಿ (ಸೆ.27): ಮಾಟಮಂತ್ರದ ಭಾಗವಾಗಿ ಉತ್ತರ ಪ್ರದೇಶದ ಹತ್ರಾಸ್‌ನಲ್ಲಿರುವ ಶಾಲೆಯೊಂದು ತನ್ನ ಹಾಸ್ಟೆಲ್‌ನಲ್ಲಿ ಓದುತ್ತಿದ್ದ 7 ವರ್ಷದ ಬಾಲಕನ್ನು ಕೊಲೆ ಮಾಡಿದೆ ಎಂದು ಪೊಲೀಸರು ಗುರುವಾರ ತಿಳಿಸಿದ್ದಾರೆ. ವಾಮಾಚಾರ ಪ್ರಕರಣಕ್ಕೆ ಸಂಬಂಧಪಟ್ಟಂತೆ ರಾಸ್‌ಗವಾನ್‌ನ ಡಿಎಲ್ ಪಬ್ಲಿಕ್ ಸ್ಕೂಲ್‌ನ ನಿರ್ದೇಶಕ, ಮೂವರು ಶಿಕ್ಷಕರು ಸೇರಿದಂತೆ ಐವರನ್ನು ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಈ ವೇಳೆ ಕೆಲ ತಿಂಗಳ ಹಿಂದೆಯೂ ಕೂಡ ಒಂದು ಮಗುವನ್ನು ಬಲಿಕೊಡುವ ವಿಫಲ ಪ್ರಯತ್ನವೂ ನಡೆದಿತ್ತು ಎಂದು ತಿಳಿಸಿದ್ದಾರೆ. ಟೈಮ್ಸ್ ಆಫ್ ಇಂಡಿಯಾದ ವರದಿಯ ಪ್ರಕಾರ, ಶಾಲೆಗೆ ಕೀರ್ತಿ ಮತ್ತು ಯಶಸ್ಸನ್ನು ತರಲು ಉದ್ದೇಶಿಸಲಾದ ಆಚರಣೆಯಲ್ಲಿ ಮಗುವನ್ನು ಬಲಿಕೊಡಲಾಗಿದೆ ಎಂದು ಪೊಲೀಸರು ಹೇಳಿದ್ದಾರೆ.

ಶಂಕಿತರನ್ನು ಶಾಲಾ ನಿರ್ದೇಶಕ ದಿನೇಶ್ ಬಘೇಲ್, ಅವರ ತಂದೆ ಜಶೋಧನ್ ಸಿಂಗ್ ಮತ್ತು ಶಿಕ್ಷಕರಾದ ಲಕ್ಷ್ಮಣ್ ಸಿಂಗ್, ವೀರಪಾಲ್ ಸಿಂಗ್ ಮತ್ತು ರಾಮಪ್ರಕಾಶ್ ಸೋಲಂಕಿ ಎಂದು ಪೊಲೀಸರು ಗುರುತಿಸಿದ್ದಾರೆ. ವರದಿಯ ಪ್ರಕಾರ, ಮಾಟಮಂತ್ರವನ್ನು ನಂಬಿದ್ದ ಜಶೋಧನ್ ಸಿಂಗ್ ತನ್ನ ಮಗ ಮತ್ತು ಶಿಕ್ಷಕರಿಗೆ ಶಾಲೆಯ ಮಗುವೊಂದನ್ನು ಬಲಿ ಕೊಡುವುದರಿಂದ ಶಾಲೆಗೆ ದೊಡ್ಡ ಮಟ್ಟದ ಯಶಸ್ಸು ಸಿಗಲಿದೆ ಎಂದು ತಿಳಿಸಿದ್ದರು. ಅದರಂತೆ ಈ ಕೃತ್ಯ ಎಸಗಲಾಗಿದೆ ಎಂದು ತಿಳಿಸಿದ್ದಾರೆ.

ಹಣದ ವಿಚಾರಕ್ಕಾಗಿ 80 ವರ್ಷದ ಅಜ್ಜ- ಅಜ್ಜಿಯ ನಡುವೆ ಕಿತ್ತಾಟ, ಎಂಥ ಕಾಲ ಬಂತಪ್ಪ!

ಸುಮಾರು 600 ವಿದ್ಯಾರ್ಥಿಗಳನ್ನು ಈ ಶಾಲೆಯ ಹೊಂದಿದ್ದು, ಪುಟ್ಟ ಮಕ್ಕಳನ್ನೂ ಕೂಡ ತನ್ನ ಹಾಸ್ಟೆಲ್‌ನಲ್ಲಿ ಇರಿಸಿಕೊಳ್ಳುತ್ತದೆ. ಬಲಿಯಾಗಿರುವ ಬಾಲಕ ಕೂಡ ಇದೇ ಹಾಸ್ಟೆಲ್‌ನಲ್ಲಿದ್ದ ಎನ್ನಲಾಗಿದೆ. ಇನ್ನು ಬಾಲಕನ ತಂದೆ ದೆಹಲಿಯಲ್ಲಿ ಸಾಫ್ಟ್‌ವೇರ್‌ ಇಂಜಿನಿಯರ್‌ ಆಗಿದ್ದಾನೆ ಎನ್ನಲಾಗಿದೆ. 2ನೇ ತರಗತಿಯಲ್ಲಿ ಕಲಿಯುತ್ತಿದ್ದ ಬಾಲಕ ಸೋಮವಾರ ತನ್ನ ಹಾಸ್ಟೆಲ್‌ ಬೆಡ್‌ನಲ್ಲಿ ಪ್ರಜ್ಞೆ ಇಲ್ಲದೆ ಬಿದ್ದುಕೊಂಡಿದ್ದ ಎನ್ನಲಾಗಿದೆ. ಘಟನೆಯನ್ನು ವರದಿ ಮಾಡುವ ಬದಲು, ಶಾಲೆಯ ಸಿಬ್ಬಂದಿ ಕೊಲೆಯನ್ನು ಮುಚ್ಚಿಹಾಕಲು ಪ್ರಯತ್ನಿಸಿದರು, ಪೊಲೀಸರು ಮಧ್ಯಪ್ರವೇಶಿಸುವ ಮೊದಲು ಬಾಲಕನ ಶವವನ್ನು ಅವನ ಕಾರಿನಲ್ಲಿಟ್ಟುಕೊಂಡು ಓಡಾಡುತ್ತಿದ್ದರು ಎನ್ನಲಾಗಿದೆ.

Tap to resize

Latest Videos

ಹಾಸನ: 2ನೇ ತರಗತಿಯ ಮೂಕ, ಕಿವುಡ ಅಪ್ರಾಪ್ತ ಮೇಲೆ ಅತ್ಯಾಚಾರ

click me!