Bengaluru Rape Case victim Statement ರಾಜರಾಜೇಶ್ವರಿ ನಗರ ಶಾಸಕ ಮುನಿರತ್ನ, ವಿಕಾಸ ಸೌಧ ಮಾತ್ರವಲ್ಲದೆ, ಸಚಿವರ ಕಚೇರಿ, ಸರ್ಕಾರಿ ಕಾರು, ಜೆಪಿ ಪಾರ್ಕ್‌ನ ಗೋಡೌನ್‌ನಲ್ಲೂ ಅತ್ಯಾಚಾರ ಎಸಗಿದ್ದಾರೆ ಎಂದು ಜಡ್ಜ್ ಮುಂದೆ ಸಂತ್ರಸ್ಥೆ ಹೇಳಿಕೆ ನೀಡಿದ್ದಾರೆ.ನನ್ನ ಮೇಲೆ ಅತ್ಯಾಚಾರವೆಸಗಿ, ವಿಡಿಯೋ ಮಾಡಿಕೊಂಡು ಬ್ಲ್ಯಾಕ್ ಮೇಲ್ ಮಾಡುತ್ತಿದ್ದರು ಎಂದು ಹೇಳಿದ್ದಾರೆ.
ಬೆಂಗಳೂರು (ಸೆ.27): 'ನನ್ನ ಮೇಲೆವಿಕಾಸಸೌಧದ ಚೇಂಬರ್ (ತೋಟಗಾರಿಕೆ ಇಲಾಖೆ ಸಚಿವರಾಗಿದ್ದಾಗ ನೀಡಿದ್ದ ಕಚೇರಿ) ಹಾಗೂ ಸರ್ಕಾರಿ ಕಾರಿನಲ್ಲಿ ಮಾಜಿ ಸಚಿವ ಹಾಗೂ ರಾಜರಾಜೇಶ್ವರಿ ನಗರ ಕ್ಷೇತ್ರದ ಬಿಜೆಪಿ ಶಾಸಕ ಮುನಿರತ್ನ ಅತ್ಯಾಚಾರ ನಡೆಸಿದ್ದಾರೆ' ನ್ಯಾಯಾಲಯದಲ್ಲಿ ಬಿಜೆಪಿ ಕಾರ್ಯಕರ್ತೆಯೂ ಆಗಿರುವ ಸಂತ್ರಸ್ತೆ ಹೇಳಿಕೆ ದಾಖಲಿಸಿದ್ದಾರೆ. ಮಾಗಡಿ ಕ್ಷೇತ್ರದ ಮಾಜಿಶಾಸಕ ಎ.ಮಂಜುನಾಥ್ ಹಾಗೂ ಕೆಲ ಪೊಲೀಸ್ ಅಧಿಕಾರಿಗಳ ಅಶ್ಲೀಲ ವಿಡಿಯೋ ಮತ್ತು ಪೋಟೋಗಳನ್ನು ನನ್ನಿಂದ ಸಂಗ್ರಹಿಸಿ ಮುನಿರತ್ನ ಬ್ಲ್ಯಾಕ್ ಮೇಲ್ ಮಾಡಿದ್ದರು ಎಂದು ಸಂತ್ರಸ್ತೆ ದೂರಿದ್ದಾರೆ. ಶಾಸಕರ ವಿರುದ್ಧ ಅತ್ಯಾಚಾರ ಪ್ರಕರಣ ಸಂಬಂಧ ನೆಲಮಂಗಲ ತಾಲೂಕಿನ 1ನೇ ಅಪರ ಸಿವಿಲ್ ನ್ಯಾಯಾಧೀಶರು ಮತ್ತು ಪ್ರಥಮ ದರ್ಜೆ ನ್ಯಾಯಿಕ ದಂಡಾಧಿಕಾರಿಗಳ ನ್ಯಾಯಾಲಯದ ಮುಂದೆ ಸಿಆರ್ ಪಿಸಿ 164ರಡಿ ಸಂತ್ರಸ್ತೆ ಮೂರು ಪುಟಗಳ ಹೇಳಿಕೆ ದಾಖಲಿಸಿದ್ದು, ಈ ಹೇಳಿಕೆಯ ಪ್ರತಿ ಗುರುವಾರ ಬಹಿ ರಂಗವಾಗಿ ತೀವ್ರ ಸಂಚಲನ ಮೂಡಿಸಿದೆ. ರಾಜ್ಯದ ಆಡಳಿತದ ಶಕ್ತಿ ಸೌಧವಾಗಿರುವ ವಿಕಾಸಸೌಧದಲ್ಲೇ ಅತ್ಯಾಚಾರದಂತಹ ಹೀನ ಕೃತ್ಯ ನಡೆದಿರುವ ಕುರಿತ ಆರೋಪ ವಿವಾದವೆಬ್ಬಿಸಿದೆ.
ಸಂತ್ರಸ್ತೆ ಹೇಳಿಕೆ ಪೂರ್ಣ ವಿವರ ಹೀಗಿದೆ: ಕೋವಿಡ್ ಸಮಯದಲ್ಲಿ ನಾನು ಕಾರ್ಪೋರೇಟರ್ ಮಮತಾ ವಾಸುದೇವ್ ಅವರಿಗೆ 5000 ಮಾಸ್ಕ್ ಹಂಚಲು ನೀಡಿದ್ದೆ. ಈ ವಿಚಾರ ತಿಳಿದ ಮುನಿರತ್ನ ನನ್ನನ್ನು ಕರೆಸಿ ಪರಿಚಯ ಮಾಡಿಕೊಂಡಿದ್ದರು. ಆನಂತರ ಪ್ರತಿ ದಿನ ನನಗೆ ವಾಟ್ಸ್‌ಆ್ಯಪ್ ಆಡಿಯೋ ಹಾಗೂ ವಿಡಿಯೋ ಕಾಲ್ ಮಾಡುತ್ತಿದ್ದರು. ಒಂದು ಬಾರಿ ನಾನು ಸ್ನಾನ ಮಾಡುವಾಗ ವಿಡಿಯೋ ಕಾಲ್ ಮಾಡಿದ್ದರು, ನಾನು ರಿಸೀವ್ ಮಾಡದೆ ಇದ್ದ ಕಾರಣ ನನ್ನನ್ನು ಗೋಡೌನ್‌ಗೆ ಬರುವಂತೆ ಕರೆದರು.
ನಾನು 2020ನೇ ಏಪ್ರಿಲ್‌ನಲ್ಲಿ ಅವರ ಗೋಡೌನ್ ಗೆ ಹೋದಾದ ನನ್ನ ಜುಟ್ಟು ಎಳೆದು ಬೆದರಿಸಿ ಅತ್ಯಾಚಾರ ಮಾಡಿದರು. ಇದಾದ 2 ದಿನ ನಂತರ ನನ್ನ ಮೇಲೆ ಅತ್ಯಾಚಾರ ಮಾಡಿದ ವಿಡಿಯೋವನ್ನು ಕಳುಹಿಸಿ ಶಾಸಕರು ಬ್ಲ್ಯಾಕ್ ಮೇಲ್ ಮಾಡಿದರು. ಕಾರ್ಪೋರೇಟರ್ ಮಮತಾರವರ ಪತಿ ವಾಸುದೇವ್ ರವರು ಬೇರೆ ಹೆಣ್ಣಿನ ಜತೆ ಇರುವ ಅಶ್ಲೀಲ ವಿಡಿಯೋ ಅವರಿಗೆ (ಶಾಸಕರು) ಮಾಡಿಕೊಡುವಂತೆ ಬ್ಲ್ಯಾಕ್ ಮೇಲ್ ಮಾಡಿದರು. ಆ ವಿಡಿಯೋ ಮಾಡಲು ನನ್ನೊಂದಿಗೆ ರಾಧಾ ಹೆಸರಿನ ಎಚ್‌ಐವಿ ಸೋಂಕಿತೆ ಯನ್ನು ವಾಸುದೇವ್ ಜೊತೆ ಖಾಸಗಿ ಕ್ಷಣ ಕಳೆಯಲು ಕಳುಹಿಸಿದ್ದರು. ಈ ಕೃತ್ಯದ ಚಿತ್ರೀಕರಣಕ್ಕೆ ಮೊಬೈಲ್ ಕ್ಯಾಮೆರಾಗಳನ್ನು ರಾಧಾ ಹಾಗೂ ನನ್ನಿಂದ ಫಿಕ್ಸ್ ಮಾಡಿಸಿದ್ದರು. ಬಳಿಕ ಈ ವಿಡಿಯೋವನ್ನು ಶಾಸಕರ ಸೋದರ ಸುಧಾಕರ್‌ರವರಿಗೆ ಕಳುಹಿಸಲಾಯಿತು ಎಂದು ಸಂತ್ರಸ್ತೆ ವಿವರಿಸಿದ್ದಾಳೆ. ಆದರೆ ಆ ವಿಡಿಯೋದಲ್ಲಿ ಸರಿಯಾಗಿ ಮುಖ ಕಾಣುತ್ತಿಲ್ಲ ಎಂದು ಹೇಳಿದ ಶಾಸಕರು, ವಾಸುದೇವ್ ಜತೆ ಕಾಲ ಕಳೆಯಲು ಮತ್ತೊಂದು ಬಾರಿ ಮೂರು ಜನ ಹೆಣ್ಣು ಮಕ್ಕಳಿಗೆ ಹಿಡನ್ ಕ್ಯಾಮೆರಾಗಳನ್ನು ಸುಧಾಕರ್ ಮೂಲಕ ಫಿಕ್ಸ್ ಮಾಡಿ ಕಳುಹಿಸಿದ್ದರು. ಆನಂತರ ಅದೇ ರೀತಿಯಲ್ಲಿ ನನಗೆ ಮತ್ತೊಂದು ಬಾರಿ ಬ್ಲ್ಯಾಕ್‌ಮೇಲ್ ಮಾಡಿ, ಒಂದು ಬ್ಯಾಗಿನಲ್ಲಿ ಮೊಬೈಲ್ ಕ್ಯಾಮೆರಾ ಫಿಕ್ಸ್ ಮಾಡಿ ನನ್ನನ್ನು ಗಂಗಣ್ಣ ನವರ (ಸ್ಥಳೀಯ ರಾಜಕೀಯ ಮುಖಂಡ) ಜೊತೆ ಮಲಗಲು ಬಲವಂತ ಮಾಡಿದ್ದರು. ನನ್ನ ಹಾಗೂ ಗಂಗಣ್ಣರವರ ದೈಹಿಕ ಸಂಬಂಧದ ವಿಡಿಯೋವನ್ನು ಸುಧಾಕರ್‌ರವರು ತೆಗೆದುಕೊಂಡಿದ್ದರು.
ಐಎಎಸ್ ಪತಿ ಪಾರು ಮಾಡಲು ವಿದ್ಯಾ ಬಲಿ: 2021ರ ಜುಲೈನಲ್ಲಿ ಮುನಿರತ್ನರವರು ತನ್ನ ಸಹೋದರಿಯ (ಐಎಎಸ್ ಅಧಿಕಾರಿ) ಪತಿಯನ್ನು ವಿದ್ಯಾ ಹಿರೇಮಠ ಎಂಬ ಮಹಿಳೆ ಬ್ಲ್ಯಾಕ್‌ಮೇಲ್ ಮಾಡುತ್ತಿದ್ದಾಳೆ ಎಂದು ನನಗೆ ತಿಳಿಸಿದರು. ಆ ಮಹಿಳೆಗೆ ಒಂದು ಗತಿ ಕಾಣಿಸಲು ಸಹಕರಿಸುವಂತೆ ನನ್ನನ್ನು ಶಾಸಕರು ಬ್ಲಾಕ್‌ಮೇಲ್ ಮಾಡಿದರು. ಅದರಂತೆ ನನ್ನನ್ನು, ಲಕ್ಷ್ಮಿ, ಕಿರಣ್ ಕುಮಾರ್, ಲೋಹಿತ್‌ಗೌಡ, ಮಂಜುನಾಥರವರನ್ನು ವಿದ್ಯಾರವರಿಗೆ ಬರ್ತ್ ಡೇ ಪಾರ್ಟಿಯಲ್ಲಿ ಪರಿಚಯ ಮಾಡಿಸಿದರು. ಆಗ ನಮ್ಮನ್ನು ಗುಹಾಂತರ ರೆಸಾರ್ಟ್‌ಗೆ ಹೋಗುವಂತೆ ಹೇಳಿದ ಶಾಸಕರು, ಅಲ್ಲಿ ವಿದ್ಯಾಳ ಅಶ್ಲೀಲ ವಿಡಿಯೋ ಚಿತ್ರೀಕರಿಸುವಂತೆ ಸೂಚಿಸಿದ್ದರು.
ಶಾಸಕ ಮುನಿರತ್ನ ದೇವಸ್ಥಾನ ಸ್ವರೂಪಿ ವಿಕಾಸ ಸೌಧದಲ್ಲೂ, ನನ್ನ ಮೇಲೆ ಅತ್ಯಾಚಾರ ಮಾಡಿದ ಎಂದ ಸಂತ್ರಸ್ತೆ!
ಗೌಡತಿ ಎಂದು ಅತ್ಯಾಚಾರ: ನಾನು ಗೌಡರ ಜಾತಿಗೆ ಸೇರಿದವಳು. ತಮಗೆ (ಶಾಸಕರು) ಗೌಡರ ಮೇಲೆ ಸ್ನೇಹ ಇದೆ ಎಂದು ನನ್ನನ್ನು ಗೌಡತಿ ಎಂದು ಅಡ್ಡತ ರಿನಿಂದ ಕರೆದು ಅತ್ಯಾಚಾರ ಎಸಗಿದರು. ಮುನಿರತ್ನ ರವರ ಇನ್ನೊಬ್ಬ ಗನ್‌ಮ್ಯಾನ್ ಶ್ರೀನಿವಾಸ್ ರವರು ಮುನಿರತ್ನ ಹೇಳಿದಂತೆ ನಾನು ಕೇಳದಿದ್ದರೆ ನನ್ನ ಮಗನನ್ನು ಕೊಲೆ ಮಾಡುತ್ತಾರೆಂದು ಬೆದರಿಸಿದ್ದರು. ಮಾಗಡಿ ಮಾಜಿ ಶಾಸಕ, ಪೊಲೀಸರ ವಿಡಿಯೋ: ಮಾಗಡಿ ಕ್ಷೇತ್ರದ ಮಾಜಿ ಶಾಸಕ ಎ.ಮಂಜುನಾಥ್ ರವರ ಜತೆ ಸಹ ಅಶ್ಲೀಲವಾಗಿ ಮಾತನಾಡಲು ಹೇಳಿದರು. ಅಲ್ಲದೆ ಅವರ ಅಶ್ಲೀಲ ಚಿತ್ರಗಳನ್ನು ನನ್ನಿಂದ ಪಡೆದಿದ್ದರು. ಇದೇ ರೀತಿ ಮುನಿರತ್ನರವರು ಹಲವು ಪೊಲೀಸ್ ಅಧಿಕಾರಿಗಳ ಅಶ್ಲೀಲ ವಿಡಿಯೋಗಳನ್ನು ಇಟ್ಟುಕೊಂಡು ಬ್ಲ್ಯಾಕ್ ಮೇಲ್ ಮಾಡಿ ಕೆಲಸ ಮಾಡಿಸಿಕೊಳ್ಳುತ್ತಿದ್ದರು.
ಬಲಾತ್ಕಾರ, ಹನಿಟ್ರ್ಯಾಪ್: ಮುನಿರತ್ನ ಬಳಿ ಇದ್ದ ಅಶ್ಲೀಲ ವಿಡಿಯೋ ನಾಶ?
ಗುರುಕೃಪ ಆಸ್ಪತ್ರೆಯ ಡಾಕ್ಟರ್‌ರೋಹಿತ್‌ರವರ ಅಶ್ಲೀಲ ವಿಡಿಯೋ ಬೇಕು ಎಂದು ನನಗೆ ಶಾಸಕರು ಹೇಳಿದ್ದರು. ನನಗೆ ಸಾಕಾಗಿ ನಾನು ನಿರಾಕರಿಸಿದ್ದೆ. ನಾನು ನಿರಾಕರಿಸಿದ ಕಾರಣ ನನ್ನ ವಿಡಿಯೋವನ್ನು ನನ್ನ ಗಂಡ ಹಾಗೂ ಮಕ್ಕಳಿಗೆ ಕಳುಹಿಸಿದರು. ನನ್ನನ್ನು ಸಾಯಿಸುವುದಾಗಿ ಮುನಿರತ್ನ ಬೆದರಿಸಿದರು ಎಂದು ಸಂತ್ರಸ್ತೆ ಹೇಳಿದ್ದಾರೆ.