ಬಾಲಕಿಗೆ ಮಾತು ಬಾರದಿದ್ದರಿಂದ ತನ್ನ ಮೇಲಾದ ದೌರ್ಜನ್ಯದ ಬಗ್ಗೆ ಪೋಷಕರ ಬಳಿ ಹೇಳಿಕೊಳ್ಳಲು ಆಗಿಲ್ಲ. ಆದರೆ ಬಾಲಕಿಯ ನರಳಾಟ ನೋಡಿದ ಪೋಷಕರು ಮಗಳನ್ನು ಆಸ್ಪತ್ರೆಗೆ ಕರೆದುಕೊಂಡು ಹೋದಾಗ ಅತ್ಯಾಚಾರ ನಡೆದಿರುವುದು ತಿಳಿದು ಬಂದಿದೆ.
ಹಾಸನ(ಸೆ.27): ಮೂಕ, ಕಿವುಡ ಅಪ್ರಾಪ್ತಯ ಮೇಲೆ ಅತ್ಯಾಚಾರ ಎಸಗಿರುವ ಪೈಶಾಚಿಕ ಕೃತ್ಯ ಹಾಸನ ಜಿಲ್ಲೆಯಲ್ಲಿ ನಡೆದಿದ್ದು ಒಂದು ತಿಂಗಳ ಬಳಿಕ ತಡವಾಗಿ ಬೆಳಕಿಗೆ ಬಂದಿದೆ. ಶ್ರವಣದೋಷವುಳ್ಳ, ಕಿವುಡ ಮಕ್ಕಳ ಶಾಲೆಯಲ್ಲಿ 2ನೇ ತರಗತಿ ವ್ಯಾಸಂಗ ಮಾಡುತ್ತಿದ್ದ ಅಪ್ರಾಪ್ತ ಮೇಲೆ ಒಂದು ತಿಂಗಳ ಹಿಂದೆ ಅತ್ಯಾಚಾರ ನಡೆದಿದೆ.
ಆದರೆ, ಬಾಲಕಿಗೆ ಮಾತು ಬಾರದಿದ್ದರಿಂದ ತನ್ನ ಮೇಲಾದ ದೌರ್ಜನ್ಯದ ಬಗ್ಗೆ ಪೋಷಕರ ಬಳಿ ಹೇಳಿಕೊಳ್ಳಲು ಆಗಿಲ್ಲ. ಆದರೆ ಬಾಲಕಿಯ ನರಳಾಟ ನೋಡಿದ ಪೋಷಕರು ಮಗಳನ್ನು ಆಸ್ಪತ್ರೆಗೆ ಕರೆದುಕೊಂಡು ಹೋದಾಗ ಅತ್ಯಾಚಾರ ನಡೆದಿರುವುದು ತಿಳಿದು ಬಂದಿದೆ.
ಸಚಿವರ ಕಚೇರಿ, ಸರ್ಕಾರಿ ಕಾರು, ಜೆಪಿ ಪಾರ್ಕ್‌ನ ಗೋಡೌನ್‌ನಲ್ಲೂ ಮುನಿರತ್ನ ಅತ್ಯಾಚಾರ: ಸಂತ್ರಸ್ಥೆಯ ಹೇಳಿಕೆ
ಈ ಸಂಬಂಧ ಬಾಲಕಿಯ ಪೋಷಕರು ಮಹಿಳಾ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಈ ಹಿನ್ನೆಲೆ ಪೊಲೀಸರು ತನಿಖೆ ಕೈಗೊಂಡಿದ್ದಾರೆ.