
ನವದೆಹಲಿ (ಜು.4): ಅಕ್ರಮ ಸಂಬಂಧವನ್ನು ಪ್ರಶ್ನೆ ಮಾಡಿದ್ದಕ್ಕಾಗಿ ಗಂಡನೊಬ್ಬ ಪತ್ನಿಯ ಮೂಗನ್ನು ಕತ್ತರಿಸಿದ್ದಲ್ಲದೆ, ಕತ್ತರಿಸಿದ ಮೂಗನ್ನು ಕಿಸೆಯಲ್ಲಿ ಇಟ್ಟುಕೊಂಡು ಪರಾರಿಯಾಗಿದ್ದಾನೆ. ಕತ್ತರಿಸಿದ ಮೂಗಿನೊಂದಿಗೆ ಪೊಲೀಸ್ ಠಾಣೆ ಮೆಟ್ಟಿಲೇರಿದ ಆಕೆ ಗಂಡನ ವಿರುದ್ಧ ದೂರು ದಾಖಲಿಸಿದ ಘಟನೆ ನಡೆದಿದೆ. ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, ಪತ್ನಿಯ ಮೂಗನ್ನು ಜೇಬಿನಲ್ಲಿಟ್ಟುಕೊಂಡು ಪರಾರಿಯಾಗಿರುವ ವ್ಯಕ್ತಿಗಾಗಿ ಶೋಧ ನಡೆಸುತ್ತಿದ್ದಾರೆ. ಉತ್ತರ ಪ್ರದೇಶದ ಲಖೀಂಪುರ ಖೇರಿಯಲ್ಲಿ ಈ ಘಟನೆ ನಡೆದಿದೆ. ಇಲ್ಲಿನ ಮಿಥೌಲಿ ಪ್ರದೇಶದ ಬನ್ಸ್ಟಾಲಿ ಗ್ರಾಮದಲ್ಲಿ ವಿಕ್ರಮ್ ಎನ್ನುವ ವ್ಯಕ್ತಿ ತನ್ನ ಪತ್ನಿ ಸೀಮಾದೇವಿ ಹಾಗೂ ಇಬ್ಬರು ಮಕ್ಕಳೊಂದಿಗೆ ವಾಸವಾಗಿದ್ದ. ವಿಕ್ರಮನ್ ಹಾಗೂ ಸೀಮಾದೇವಿ ಮದುವೆಯಾಗಿ 12 ವರ್ಷಗಳು ಕಳೆದಿದ್ದರು. ಇತ್ತೀಚೆಗೆ ಕಾರ್ಯಕ್ರಮವೊಂದರಲ್ಲಿ ವಿಕ್ರಮ್, ಮಹಿಳೆಯೊಬ್ಬರನ್ನು ಭೇಟಿಯಾಗಿದ್ದ. ಅದು ಇವರ ವಿವಾಹೇತರ ಸಂಬಂಧಕ್ಕೂ ಕಾರಣವಾಯಿತು. ಇವರಿಬ್ಬರ ಸಂಬಂಧ ಸೀಮಾದೇವಿಗೆ ತಿಳಿದ ಬಳಿಕ ಗಂಡನಿಗೆ ಈ ಬಗ್ಗೆ ಪ್ರಶ್ನೆ ಮಾಡಲು ಆರಂಭ ಮಾಡಿದ್ದಳು. ಪ್ರತಿ ದಿನ ಇವರ ನಡುವೆ ಇದೇ ವಿಚಾರಕ್ಕಾಗಿ ಗಲಾಟೆ ನಡೆಯುತ್ತಿತ್ತು.
ಜೂನ್ 1ರ ಶನಿವಾರ ಏಕರಂನಲ್ಲಿ ವಿಕ್ರಮ್ ತನ್ನ ಪತ್ನಿ ಸೀಮಾದೇವಿಯ ಜೊತೆ ಜಗಳವಾಡಿದ್ದ. ಈ ವೇಳೆ ಈತನ ನಾಲ್ಕು ವರ್ಷದ ಮಗಳು ಮೊಬೈಲ್‌ನಲ್ಲಿ ಆಟವಾಡುತ್ತಿದ್ದಳು, ಮೊಬೈಲ್ ಕೊಡುವಂತೆ ಮಗಳತ್ತ ಕೇಳಿದರೂ ಅದು ನೀಡಿರಲಿಲ್ಲ. ಇದು ಕೋಪಕ್ಕೆ ಕಾರಣವಾಗಿದ್ದಲ್ಲದೆ, ಮಗಳನ್ನು ಥಳಿಸಿದ್ದಾನೆ. ಇದನ್ನು ನೋಡಿದ ಸೀಮಾ ದೇವಿ ಅಡ್ಡ ಬಂದಿದ್ದಳು. ಮಗಳ ಮೇಲಿದ್ದ ಸಿಟ್ಟನ್ನು ಸೀಮಾದೇವಿ ಮೇಲೆ ತೋರಿಸಿದ ವಿಕ್ರಮ್ ಆಕೆಯ ಮೇಲೆ ತೀವ್ರವಾಗಿ ಹಲ್ಲೆ ಮಾಡಿದ್ದ. ಸಿಟ್ಟಿನಲ್ಲಿದ್ದ ಆತ ಅಲ್ಲಿಯೇ ಇದ್ದ ಚೂರಿ ತೆಗೆದುಕೊಂಡು ಸೀಮಾದೇವಿಯ ಮೂಗನ್ನು ಕತ್ತರಿಸಿದ್ದಾನೆ. ಬಳಿಕ ಮೂಗಿನ ತುಂಡನ್ನುಜೇಬಿಗೆ ಹಾಕಿಕೊಂಡು ಅಲ್ಲಿಂದ ಪರಾರಿಯಾಗಿದ್ದಾನೆ ಎಂದು ಹೇಳಲಾಗಿದೆ.
ಈ ಹಂತದಲ್ಲಿ ಸೀಮಾದೇವಿ ನೋವಿನಿಂದ ಚೀರಾಡುತ್ತಿದ್ದಳು. ಮನೆಗೆ ಆಗಮಿಸಿದ ಸ್ಥಳೀಯರು, ತಕ್ಷಣವೇ ಆಂಬ್ಯುಲೆನ್ಸ್‌ನಲ್ಲಿ ಸೀಮಾದೇವಿಯನ್ನು ಮಿಥೌಲಿ ಆಸ್ಪತ್ರೆಗೆ ದಾಖಲು ಮಾಡಿದ್ದರು. ಆ ಬಳಿಕ ಹೆಚ್ಚಿನ ಚಿಕಿತ್ಸೆಗಾಗಿ ಆಕೆಯನ್ನು ಜಿಲ್ಲಾ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ಚಿಕಿತ್ಸೆ ಪಡೆದುಕೊಂಡ ಬಳಿಕ ಸೀಮಾದೇವಿ ತನ್ನ ಪಾಲಕರೊಂದಿಗೆ ಪೊಲೀಸ್ ಠಾಣೆಗೆ ತೆರಳಿ ಪತಿಯ ವಿರುದ್ಧ ದೂರು ದಾಖಲು ಮಾಡಿದ್ದಾಳೆ. ಪೊಲೀಸರು ನಾಪತ್ತೆಯಾಗಿರುವ ವಿಕ್ರಮ್‌ನ ಪತ್ತೆಗೆ ಬಲೆ ಬೀಸಿದ್ದರು.
ತನಿಖೆಯ ವೇಳೆ ಸೀಮಾದೇವಿಗೂ ಪೊಲೀಸರು ವಿಚಾರಣೆಗೆ ಬರುವಂತೆ ಹೇಳಿದ್ದರು. ಗಾಯದ ನಡುವೆಯೂ ಹಾಜರಾದ ಸೀಮಾದೇವಿ, 'ಮದುವೆಯಾಗಿ 12 ವರ್ಷಗಳಾಗಿವೆ, ವಿಕ್ರಮ್ ಪ್ರತಿದಿನ ಕುಡಿದು ಬರುತ್ತಿದ್ದ. ಕುಡಿದ ಅಮಲಿನಲ್ಲಿ ತನಗೆ ಥಳಿಸುತ್ತಿದ್ದ' ಎಂದು ಹೇಳಿದ್ದಾಳೆ. ಆತ ಬದಲಾಗಬಹುದು ಎಂದು ನಾನು ಕಾಯುತ್ತಿದ್ದೆ. ಈ ನಡುವೆ ಬೇರೆ ಮಹಿಳೆಯೊಂದಿಗೆ ವಿವಾಹೇತರ ಸಂಬಂಧ ಇಟ್ಟುಕೊಂಡು ಚಿತ್ರಹಿಂಸೆ ನೀಡುತ್ತಿದ್ದ ಎಂದು ತಿಳಿಸಿದ್ದಾಳೆ. ಪ್ರತಿ ಬಾರಿ ಕುಡಿದು ಮನೆಗೆ ಬರುತ್ತಿದ್ದ ಆತ ಮಕ್ಕಳೆಂತಲೂ ನೋಡದೇ ಅವರನ್ನೂ ಥಳಿಸುತ್ತಿದ್ದ ಎಂದಿದ್ದಾರೆ.
ಹುಡುಗರೇ ಗೆಳತಿ ಭೇಟಿಗೆ ತೆರಳುವ ಮುನ್ನ ಸಾವಿರ ಬಾರಿ ಯೋಚಿಸಿ: ಇಲ್ಲೇನಾಯ್ತು ನೋಡಿ
ಕೆಲ ಸಮಯದ ಬಳಿಕ ಅದೇ ದಿನ ವಿಕ್ರಮ್‌ನನ್ನು ಬಂಧಿಸಲು ಪೊಲೀಸರು ಯಶಸ್ವಿಯಾಗಿದ್ದಾರೆ. ಆತನನ್ನು ಕೋರ್ಟ್‌ಗೆ ಹಾಜರುಪಡಿಸಿ ಪೊಲೀಸ್ ಕಸ್ಟಡಿಗೆ ಒಪ್ಪಿಸಲಾಗಿದೆ.ಈ ಘಟನೆ ಕುರಿತು ಲಖಿಂಪುರ ಸಿಒ ಸಿಟಿ ಸಂದೀಪ್ ಸಿಂಗ್ ಮಾತನಾಡಿ..ಮಿಥೌಲಿ ಪೊಲೀಸ್ ಠಾಣಾ ವ್ಯಾಪ್ತಿಯ ಬನ್ಸ್ತಾಲಿ ಗ್ರಾಮದಲ್ಲಿ ಪತಿಯೊಬ್ಬ ಪತ್ನಿ ಮೇಲೆ ಹಲ್ಲೆ ನಡೆಸಿ ಮೂಗು ಕತ್ತರಿಸಿದ್ದಾನೆ.. ಪ್ರಕರಣ ದಾಖಲಿಸಿಕೊಂಡು ಪತಿಯನ್ನು ಬಂಧಿಸಿ ಜೈಲಿಗೆ ಕರೆದೊಯ್ದು ತನಿಖೆ ನಡೆಸಲಾಗುತ್ತಿದೆ ಎಂದಿದ್ದಾರೆ.
ಪರ ಸ್ತ್ರೀ ಜೊತೆ ತಂದೆಯ ದೈಹಿಕ ಸಂಪರ್ಕದ ವಿಡಿಯೋ ವೈರಲ್, ಪುತ್ರ ಆತ್ಮಹತ್ಯೆ!
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ