ಹುಡುಗರೇ ಗೆಳತಿ ಭೇಟಿಗೆ ತೆರಳುವ ಮುನ್ನ ಸಾವಿರ ಬಾರಿ ಯೋಚಿಸಿ: ಇಲ್ಲೇನಾಯ್ತು ನೋಡಿ

By Anusha Kb  |  First Published Jul 4, 2023, 5:41 PM IST

ಗೆಳೆಯನೋರ್ವನನ್ನು ಭೇಟಿ ಆಗಬೇಕೆಂದು ಕರೆದು ಬಳಿಕ ತನ್ನ ಸಹಚರನೊಂದಿಗೆ ಸೇರಿ ಆತನ ಮೈ ಮೇಲಿದ್ದ ಬಟ್ಟೆಯನ್ನು ಬಿಡದೇ ಆತನ ಬಳಿ ಇದ್ದ ಚಿನ್ನಾಭರಣ ಹಣ ಸೇರಿದಂತೆ ಎಲ್ಲಾ ಅಮೂಲ್ಯ ವಸ್ತುಗಳನ್ನು ಲೂಟಿ ಮಾಡಿ ಆತನನ್ನು ನಡುರಸ್ತೆಯಲ್ಲಿ ಬಿಟ್ಟು ಯುವತಿಯೊಬ್ಬಳು ಪರಾರಿಯಾದ ಆಘಾತಕಾರಿ ಘಟನೆ ಮಹಾರಾಷ್ಟ್ರದ ಥಾಣೆ ಜಿಲ್ಲೆಯ ಶಹಾಪುರದಲ್ಲಿ ನಡೆದಿದೆ. 


ಥಾಣೆ: ಗೆಳೆಯನೋರ್ವನನ್ನು ಭೇಟಿ ಆಗಬೇಕೆಂದು ಕರೆದು ಬಳಿಕ ತನ್ನ ಸಹಚರನೊಂದಿಗೆ ಸೇರಿ ಆತನ ಮೈ ಮೇಲಿದ್ದ ಬಟ್ಟೆಯನ್ನು ಬಿಡದೇ ಆತನ ಬಳಿ ಇದ್ದ ಚಿನ್ನಾಭರಣ ಹಣ ಸೇರಿದಂತೆ ಎಲ್ಲಾ ಅಮೂಲ್ಯ ವಸ್ತುಗಳನ್ನು ಲೂಟಿ ಮಾಡಿ ಆತನನ್ನು ನಡುರಸ್ತೆಯಲ್ಲಿ ಬಿಟ್ಟು ಯುವತಿಯೊಬ್ಬಳು ಪರಾರಿಯಾದ ಆಘಾತಕಾರಿ ಘಟನೆ ಮಹಾರಾಷ್ಟ್ರದ ಥಾಣೆ ಜಿಲ್ಲೆಯ ಶಹಾಪುರದಲ್ಲಿ ನಡೆದಿದೆ.   ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಐವರು ಆರೋಪಿಗಳಲ್ಲಿ ಇಬ್ಬರನ್ನು ಗುರುತಿಸಿದ್ದು ಅವರಿಗಾಗಿ ಬಲೆ ಬೀಸಿದ್ದಾರೆ. 

ನಡೆದಿದ್ದೇನು? 
ಕಟ್ಟಡ ನಿರ್ಮಾನ ವ್ಯವಹಾರ ನಡೆಸುತ್ತಿದ್ದ ಶಹಾಪುರದ ಬಿಲ್ಡರ್‌ ಬಾಲಾಜಿ ಶಿವಭಗತ್  ಎಂಬುವವರು ಹಲವು ವರ್ಷಗಳಿಂದ ಶಹಾಪುರದ ನಿವಾಸಿಯೇ ಆದ 30 ವರ್ಷದ ಭವಿಕಾ ಭೋಯಿರ್ ಎಂಬಾಕೆಯನ್ನು ಪ್ರೀತಿಸುತ್ತಿದ್ದು, ಮದುವೆಯಾಗಲು ನಿರ್ಧರಿಸಿದ್ದರು. ಆದರೆ ಜೂನ್ 28 ರಂದು ಇದ್ದಕ್ಕಿದ್ದಂತೆ ಭವಿಕಾ ಭೋಯಿರ್, ಬಿಲ್ಡರ್ ಹಾಗೂ ಗೆಳೆಯ ಬಾಲಾಜಿ ಶಿವಭಗತ್‌ಗೆ ಕರೆ ಮಾಡಿ ತನ್ನನ್ನು ಭೇಟಿಯಾಗುವಂತೆ ಕೇಳಿದ್ದಾಳೆ. ಅಲ್ಲದೇ ಭೇಟಿಯ ವೇಳೆ ಅಮೂಲ್ಯವಾದ ಗಿಫ್ಟ್‌ಗಳನ್ನು ನೀಡುವಂತೆಯೂ ಕೇಳಿದ್ದಾಳೆ. ಗೆಳತಿಯ ಆಸೆಯಂತೆ ಬಾಲಾಜಿ ಆಕೆ ಏನೆಲ್ಲಾ ಕೇಳಿದ್ದಳೋ ಅದೆಲ್ಲಾವನ್ನು ತೆಗೆದುಕೊಂಡು ಆಕೆಯನ್ನು ಭೇಟಿಯಾಗಲು ಆಕೆಯೇ ನಿಗದಿ ಪಡಿಸಿದ ಅಟ್ಗಾಂವ್ ಹೈವೇ ಬಳಿ ಸಂಜೆ 4.30ರ ಸುಮಾರಿಗೆ ಹೋಗಿದ್ದಾನೆ. 

Tap to resize

Latest Videos

ಬಾಡಿಗೆಗೆ ಮನೆ ಕೊಡುವ ಮುನ್ನ ಎಚ್ಚರ..ಎಚ್ಚರ.! : ಲಿವಿಂಗ್‌ ಟುಗೆದರ್‌ನಲ್ಲಿದ್ದ ಖತರ್ನಾಕ್‌ ಜೋಡಿಯಿಂದ ದರೋಡೆ

ಇಲ್ಲಿ ಈ ಜೋಡಿ ಮಾತನಾಡುತ್ತ ನಿಂತಿದ್ದ ವೇಳೆ ಎಲ್ಲಿಂದಲೋ ಬಂದ ನಾಲ್ವರು ದುಷ್ಕರ್ಮಿಗಳು (ಪ್ರಿಯತಮೆ ಭವಿಕಾ ಕಡೆ ಜನ) ಬಾಲಾಜಿ ಮೇಲೆ ಹಲ್ಲೆ ಮಾಡಲು ಶುರು ಮಾಡಿದ್ದಾರೆ. ಸಂಜೆಯಿಂದ ಮಾರನೇ ದಿನ ಬೆಳಗ್ಗಿನವರೆಗೂ ಆತನ ಮೇಲೆ ಹಲ್ಲೆ ಮಾಡಿದ ದುಷ್ಕರ್ಮಿಗಳು ಆತನ ಬಳಿ ಇದ್ದ ಅಮೂಲ್ಯ ವಸ್ತುಗಳನ್ನೆಲ್ಲಾ ಕಸಿದುಕೊಂಡು ಕೊನೆಗೆ ಆತ ಧರಿಸಿದ್ದ ಬಟ್ಟೆಯನ್ನು ಕೂಡ ಬಿಚ್ಚಿ ಆತನನ್ನು ಶಹಾಪುರ (Shahapura Highway) ಹೈವೇಯಲ್ಲಿ ಬಿಸಾಕಿ ಹೋಗಿದ್ದಾರೆ. 

ಘಟನೆಯ ಬಳಿಕ ಬಾಲಾಜಿ ಎರಡು ದಿನಗಳ ಕಾಲ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆದಿದ್ದು, ಪ್ರೇಯಸಿಯ ಕೃತ್ಯದಿಂದ ಆಘಾತಗೊಂಡಿದ್ದ ಆತ, ಆ ಆಘಾತದಿಂದಲೇ ಘಟನೆಯ ಬಗ್ಗೆ ವಿವರ ನೀಡಿದ್ದಾರೆ. ನಾನು ಆಕೆಗೆ ಎಲ್ಲವನ್ನು ಮಾಡಿದ್ದೆ. ಆಕೆಗಾಗಿ ಆಕೆಯ ಇಷ್ಟದಂತೆ ಮನೆಯನ್ನು ಕಟ್ಟಿಸಿದ್ದೆ. ಅಲ್ಲದೇ ಆಕೆ ಬೇಕು ಎಂದಾಗಲೆಲ್ಲಾ ಕೇಳಿದ್ದೆಲ್ಲಾ ಕೊಡಿಸಿದ್ದೆ. ಅವಳ ಆಸೆಯನ್ನು ಆಜ್ಞೆ ಎಂಬಂತೆ ಪಾಲಿಸಿದ್ದೆ. ಆದರೆ ಆಕೆ ಮತ್ತೋರ್ವ ಯುವಕನೊಂದಿಗೆ ಸೇರಿಕೊಂಡು ನನ್ನ ಮೇಲೆ ಭಯಾನಕವಾಗಿ ಹಲ್ಲೆ ಮಾಡಿದ್ದಾಳೆ. 

ಭೇಟಿಗೂ ಮೊದಲು ಆಕೆ ನನಗೆ, ಸಾರಿ ಚಿನ್ನದ ಬೆಂಡೋಲೆ (Gold Earing), ಚಿನ್ನದ ಕಾಲ್ಗೆಜ್ಜೆ (Gold Anklets), ಚಿನ್ನದ ಬಳೆ (Gold bangals), ಮಳೆಗಾಲಕ್ಕಾಗಿ ಮಾನ್ಸೂನ್ ಶೂ, ಹಾಗೂ ಕೊಡೆ ತಂದುಕೊಡುವಂತೆ ಕೇಳಿದ್ದಳು. ಈ ಎಲ್ಲಾ ಗಿಫ್ಟ್‌ಗಳೊಂದಿಗೆ ನಾನು ಆಕೆಯನ್ನು ತಲುಪಿದಾಗ ಆಕೆ ನನ್ನ ಕ್ರೇಟಾ ಕಾರೊಳಗೆ ಕುಳಿತುಕೊಂಡು ನಾನು ತೆಗೆದುಕೊಂಡು ಹೋದ ಗಿಫ್ಟ್‌ಗಳೆಲ್ಲವನ್ನು ಒಂದೊಂದಾಗಿ ನೋಡ ತೊಡಗಿದಳು. ಈ ವೇಳೆ ನಾಲ್ವರು ಅಪರಿಚಿತರು ಅಲ್ಲಿಗೆ ಬಂದಿದ್ದು, ನನ್ನ ಕಾರೊಳಗೆ ನುಗ್ಗಿ ನನ್ನನ್ನೇ ದೂರ ತಳ್ಳಿ ಅವರಲೊಬ್ಬ ಕಾರನ್ನು ಚಲಾಯಿಸಲು ಆರಂಭಿಸಿದ, ಅಲ್ಲದೇ ಅವರು ನನ್ನ ತಲೆಗೆ ಚಾಕುವಿನಿಂದ ಹೊಡೆದರು. ನಂತರ ನನ್ನನ್ನು ಅಪರಿಚಿತ ರೆಸ್ಟೋರೆಂಟ್‌ ಒಂದಕ್ಕೆ ಕರೆದೊಯ್ದು, ಬೆಳಗಾಗುವವರೆಗೂ ಥಳಿಸಿದರು ಎಂದು ಶಿವ ಭಗತ್ (Shiv Bhagat) ಘಟನೆಯನ್ನು ವಿವರಿಸಿದ್ದಾರೆ. 

ದುಬೈ ಉದ್ಯಮಿಯ ಕಾರು ಅಡ್ಡಗಟ್ಟಿ 95 ಲಕ್ಷ ರೂ. ದೋಚಿದ ಖತರ್ನಾಕ್ ಗ್ಯಾಂಗ್!

ಘಟನೆಗೆ ಸಂಬಂಧಿಸಿದಂತೆ ಶಹಾಪುರ ಠಾಣೆ ಪೊಲೀಸ್ ಇನ್ಸ್‌ಪೆಕ್ಟರ್ ರಾಜ್‌ಕುಮಾರ್ ಉಪ್ಸೆ ಮಾತನಾಡಿದ್ದು, ಆರೋಪಿಗಳು ಶಿವ ಭಗತ್‌ನನ್ನು ಬೆತ್ತಲಾಗಿಸಿದ್ದಲ್ಲದೇ ಆತನ ವೀಡಿಯೋವನ್ನು ಮಾಡಿಕೊಂಡಿದ್ದಾರೆ. ಅಲ್ಲದೇ ಆತನ ಬಳಿ ಇದ್ದ ಎರಡು ಚಿನ್ನದ ಸರ, 7 ಬೆರಳುಗಳಲ್ಲಿದ್ದ ಚಿನ್ನದ ಉಂಗುರವನ್ನು ಕಸಿದುಕೊಂಡಿದ್ದಾರೆ. ನಂತರ ಮುಂಜಾನೆ ಶಹಾಪುರ ಹೈವೇಯಲ್ಲಿ ಆತನನ್ನು ಬಿಟ್ಟು ಪರಾರಿಯಾಗಿದ್ದಾರೆ ಎಂದರು. 

ನಂತರ ಘಟನೆಯಿಂದ ಚೇತರಿಸಿಕೊಂಡು ಸಮೀಪದ ಪೊಲೀಸ್ ಠಾಣೆಗೆ ತೆರಳಿ ಅಲ್ಲಿ ತನ್ನ ಗೆಳೆಯರಿಗೆ ಪೊಲೀಸರ ಸಹಾಯದಿಂದ ಕರೆ ಮಾಡಿದ ಆತ ಆಸ್ಪತ್ರೆಗೆ ಸೇರಿದ್ದಾನೆ. ಹಲ್ಲೆ ಮಾಡಿ ದರೋಡೆ ಮಾಡಿದ ಐವರು ಆರೋಪಿಗಳ ವಿರುದ್ಧ ಕಿಡ್ನಾಪ್ ಹಾಗೂ ಇತರ ಅಪರಾಧ ಸೆಕ್ಷನ್‌ಗಳಡಿ ಪ್ರಕರಣ ದಾಖಲಾಗಿದೆ. ಅವರಲ್ಲಿ ಇಬ್ಬರನ್ನು ಭವಿಕಾ ಬೋಯಿರ್ ಹಾಗೂ ಆಕೆಯ ಗೆಳೆಯ ನದೀಂ ಖಾನ್ ಎಂದು ಗುರುತಿಸಲಾಗಿದೆ ಎಂದು ಪೊಲೀಸರು ಹೇಳಿದ್ದಾರೆ. 

click me!