
ನವದೆಹಲಿ (ಜೂ.29): ಉತ್ತರ ಪ್ರದೇಶದ ಆಲಿಘಢದಲ್ಲಿ 14 ವರ್ಷದ ಅಂಗವಿಕಲ ಬಾಲಕ 12 ವರ್ಷದ ಬಾಲಕಿಯನ್ನು ರೇಪ್ ಮಾಡಿದ ಘಟನೆ ನಡೆದಿದೆ. ಗುರುವಾರ ಈ ಘಟನೆ ನಡೆದಿದೆ. ಸಂತ್ರಸ್ಥ ಬಾಲಕಿ ನೋವಿನಿಂದ ಅಳುತ್ತಾ ತನ್ನ ಮನೆಗೆ ತಲುಪಿದಾಗ ಘಟನೆ ಬೆಳಕಿಗೆ ಬಂದಿದೆ. ಮನಗೆ ಬಂದವಳೇ ಆಕೆ ತನ್ನ ಪಾಲಕರಿಗೆ ಆಗಿದ್ದ ಘಟನೆಯನ್ನು ತಿಳಿಸಿದ್ದಾಳೆ. ತಕ್ಷಣವೇ ಪೊಲೀಸರು ಆರೋಪಿಯ ವಿರುದ್ಧ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಪ್ರಕರಣದ ಕುರಿತಾಗಿ ಮಾಹಿತಿ ನೀಡಿರುವ ಪೊಲೀಸ್ ಅಧಿಕಾರಿಯೊಬ್ಬರು, 14 ವರ್ಷದ ಬಾಲಕ ಕಿವುಡ ಹಾಗೂ ಮೂಗ. ಅತನ ವಿರುದ್ಧ ದೂರು ದಾಖಲಾದ ಬೆನ್ನಲ್ಲಿಯೇ ವಶಕ್ಕೆ ತೆಗೆದುಕೊಂಡು ಚೈಲ್ಡ್ ಲೈನ್‌ನ ಮೇಲ್ವಿಚಾರಣೆಯಲ್ಲಿ ಇರಿಸಲಾಗಿದೆ ಎಂದು ತಿಳಿಸಿದ್ದಾರೆ.
ಮೊಬೈಲ್‌ನಲ್ಲಿ ಅಶ್ಲೀಲ ಚಿತ್ರಗಳನ್ನು ವೀಕ್ಷಿಸಿದ ನಂತರ ಈ ಕೃತ್ಯ ಎಸಗಿರುವುದಾಗಿ ಬಾಲಕ ಪೊಲೀಸರಿಗೆ ತಿಳಿಸಿದ್ದಾನೆ. ಪೋಕ್ಸೋ ಕಾಯ್ದೆಯ ಸೆಕ್ಷನ್‌ಗಳ ಅಡಿಯಲ್ಲಿ ಎಫ್‌ಐಆರ್ ದಾಖಲಿಸಲಾಗಿದೆ ಎಂದು ಡಿಎಸ್‌ಪಿ ಕೃಷ್ಣ ಗೋಪಾಲ್ ಸಿಂಗ್ ಹೇಳಿದ್ದಾರೆ. ಶುಕ್ರವಾರ, ಅಪ್ರಾಪ್ತ ಆರೋಪಿಯನ್ನು ಬಾಲ ನ್ಯಾಯ ಮಂಡಳಿಯ ಮುಂದೆ ಹಾಜರುಪಡಿಸಲಾಯಿತು. ಆ ಬಳಿಕ ಆತನನ್ನು ಆಗ್ರಾದಲ್ಲಿರುವ ಬಾಲಾಪರಾಧಿಗಳ ಮನೆಗೆ ಕಳುಹಿಸಲಾಗುವುದು ಎಂದು ತಿಳಿಸಿದ್ದಾರೆ.
ಗ್ಯಾಂಗ್ ರೇಪಿಸ್ಟ್‌ಗೆ ಅವಮಾನಿಸಿದ ಯುವತಿ, ರೇಪ್ ಆರೋಪಿಗಿಂತ ಹೆಚ್ಚಿನ ಶಿಕ್ಷೆ ಕೊಟ್ಟ ಕೋರ್ಟ್!
ಸಂತ್ರಸ್ಥ ಬಾಲಕಿಯನ್ನು ಆಸ್ಪತ್ರೆಗೆ ದಾಖಲಿಸಲಾಗಿದ್ದು, ವೈದ್ಯಕೀಯ ಪರೀಕ್ಷೆಯಲ್ಲಿ ಲೈಂಗಿಕ ದೌರ್ಜನ್ಯ ನಡೆದಿರುವುದು ದೃಢಪಟ್ಟಿದೆ ಎಂದು ಪೊಲೀಸರು ತಿಳಿಸಿದ್ದಾರೆ. ನೆರೆಮನೆಯ ಹುಡುಗ ತನ್ನನ್ನು ಅವರ ಮನೆಯ ಸಮೀಪವಿರುವ ಪ್ರತ್ಯೇಕ ಸ್ಥಳಕ್ಕೆ ಕರೆದೊಯ್ದು ಅತ್ಯಾಚಾರವೆಸಗಿದ್ದಾನೆ. ಈ ವೇಳೆ ನಾನು ಅಳುತ್ತಲೇ ಇದ್ದೆ ಎಂದು ಬಾಲಕಿ ಪೊಲೀಸರಿಗೆ ಮಾಹಿತಿ ನೀಡಿದ್ದಾಳೆ.
ಆನ್‌ಲೈನ್ ರೇಪ್, ಎಲ್ಲಿಂದಲೋ ಮಾಡುವ ಮಾನಸಿಕ ಹಿಂಸೆ ಅಂದ್ರೇನೇ ಅಶ್ಲೀಲ ಮೆಸೇಜ್; ನಟಿ ಚಿತ್ರಾಲ್!
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ