ಮೈಸೂರು: ವ್ಯಕ್ತಿ ತಲೆ ಮೇಲೆ ಕಲ್ಲು ಎತ್ತಿ ಹಾಕಿ ಬರ್ಬರ ಹತ್ಯೆ

By Kannadaprabha News  |  First Published Jun 29, 2024, 4:45 AM IST

ತರಕಾರಿ ವ್ಯಾಪಾರಿಯಾಗಿದ್ದ ಬಂಗಾರು ರಾಜ್ಯದಿಂದ ತಮಿಳುನಾಡಿಗೆ ತರಕಾರಿ ಸಾಗಿಸುತ್ತಿದ್ದ ಎನ್ನಲಾಗಿದ್ದು, ಶುಕ್ರವಾರ ಮದುವೆಗೆಂದು ನಂಜನಗೂಡಿಗೆ ಬಂದಿದ್ದಾಗ, ಅಪರಿಚಿತರು ಪಟ್ಟಣದ ಹದಿನಾರು ಕಾಲು ಮಂಟಪದ ಬಳಿ ತಲೆ ಮೇಲೆ ಕಲ್ಲು ಎತ್ತಿ ಹಾಕಿ ಭೀಕರವಾಗಿ ಕೊಲೆಗೈದು ಪರಾರಿಯಾಗಿದ್ದಾರೆ. 


ನಂಜನಗೂಡು(ಜೂ.29):  ಪಟ್ಟಣದ ಶ್ರೀಕಂಠೇಶ್ವರ ದೇವಾಲಯದ ಹದಿನಾರು ಕಾಲು ಮಂಟಪದ ಬಳಿ ವ್ಯಕ್ತಿಯೊರ್ವನ ತಲೆ ಮೇಲೆ ಕಲ್ಲು ಎತ್ತಿ ಹಾಕಿ ಬರ್ಬರವಾಗಿ ಕೊಲೆಗೈದಿರುವ ಘಟನೆ ಶುಕ್ರವಾರ ಜರುಗಿದೆ. ಚಾಮರಾಜನಗರ ತಾಲೂಕಿನ ಹರದನಹಳ್ಳಿ ಗ್ರಾಮದ ಬಂಗಾರು (47) ಮೃತ ದುರ್ದವಿ.

ತರಕಾರಿ ವ್ಯಾಪಾರಿಯಾಗಿದ್ದ ಬಂಗಾರು ರಾಜ್ಯದಿಂದ ತಮಿಳುನಾಡಿಗೆ ತರಕಾರಿ ಸಾಗಿಸುತ್ತಿದ್ದ ಎನ್ನಲಾಗಿದ್ದು, ಶುಕ್ರವಾರ ಮದುವೆಗೆಂದು ನಂಜನಗೂಡಿಗೆ ಬಂದಿದ್ದಾಗ, ಅಪರಿಚಿತರು ಪಟ್ಟಣದ ಹದಿನಾರು ಕಾಲು ಮಂಟಪದ ಬಳಿ ತಲೆ ಮೇಲೆ ಕಲ್ಲು ಎತ್ತಿ ಹಾಕಿ ಭೀಕರವಾಗಿ ಕೊಲೆಗೈದು ಪರಾರಿಯಾಗಿದ್ದಾರೆ. ಯಾವ ಕಾರಣಕ್ಕಾಗಿ ಕೊಲೆಗೈಯ್ಯಲಾಗಿದೆ? ಯಾರು ಕೊಲೆ ಮಾಡಿದ್ದಾರೆ ಎಂಬುದು ಪೊಲೀಸರ ತನಿಖೆಯಿಂದ ಬೆಳಕಿಗೆ ಬರಬೇಕಿದೆ.

Tap to resize

Latest Videos

undefined

ಗುರಾಯಿಸಿದ್ದಕ್ಕೆ ಬಿತ್ತು ಹೆಣ: ಬನ್ನೇರುಘಟ್ಟ ರಸ್ತೆಯಲ್ಲಿ ಭೀಕರ ಹತ್ಯೆ!

ವಿಷಯ ತಿಳಿದು ಸ್ಥಳಕ್ಕೆ ಎಎಸ್ಪಿ ನಾಗೇಶ್, ಡಿವೈಎಸ್ಪಿ ರಘು, ಪಟ್ಟಣ ಪೊಲೀಸ್ ಠಾಣೆಯ ಇನ್ಸ್ಪೆಕ್ಟರ್ ಬಸವರಾಜು ಭೇಟಿ ನೀಡಿ ಪರಿಶೀಲನೆ ನಡೆಸಿ, ಶ್ವಾನದಳ ಕರೆಸಿ ತನಿಖೆ ನಡೆಸಿದ್ದಾರೆ. ಕೊಲೆಗೈದ ಅಪರಾಧಿಗಳ ಪತ್ತೆಗಾಗಿ ತಂಡವನ್ನು ರಚಿಸಿ ತಲಾಶ್ ನಡೆಸಿದ್ದಾರೆ. ಶವವನ್ನು ಸರ್ಕಾರಿ ಆಸ್ಪತ್ರೆಗೆ ಮಾರಣೋತ್ತರ ಪರೀಕ್ಷೆಗೆ ರವಾನಿಸಲಾಗಿದೆ. ನಂಜನಗೂಡು ಪಟ್ಟಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

click me!