ಪಿಎಸ್ಐ ಪರೀಕ್ಷೆ ಅಕ್ರಮಕ್ಕಾಗಿ ಸತ್ತವರ ಹೆಸರಿನ ಸಿಮ್ ಬಳಕೆ: ಖತರನಾಕ್ ಗ್ಯಾಂಗ್‌ ಇದು..!

Published : Apr 26, 2022, 08:02 AM IST
ಪಿಎಸ್ಐ ಪರೀಕ್ಷೆ ಅಕ್ರಮಕ್ಕಾಗಿ ಸತ್ತವರ ಹೆಸರಿನ ಸಿಮ್ ಬಳಕೆ: ಖತರನಾಕ್ ಗ್ಯಾಂಗ್‌ ಇದು..!

ಸಾರಾಂಶ

*  ಸಿಐಡಿ ತನಿಖೆಯಲ್ಲಿ ಬಯಲಿಗೆ ಬಂದ ಸತ್ಯ *  ಸತ್ತವರ ಸಾಮಗ್ರಿಗಳೂ ಸಹ ಅಕ್ರಮ ಕೆಲಸಗಳಿಗೆ ಬಳಕೆ *  ಆರೋಪಿಗಳ ಹೆಡೆಮುರಿ ಕಟ್ಟಲು ತನಿಖೆ ತೀವ್ರಗೊಳಿಸಿದ ಸಿಐಡಿ   

ಕಲಬುರಗಿ(ಏ.26): ಪಿಎಸ್ಐ ನೇಮಕಾತಿ(PSI Recruitment) ಪರೀಕ್ಷಾ ಅಕ್ರಮಗಳು ಬಗೆದಷ್ಟು ಬಯಲಾಗುತ್ತಿವೆ. ಈ ಬಗ್ಗೆ ತನಿಖೆ ನಡೆಸುತ್ತಿರುವ ಸಿಐಡಿಗೆ(CID) ತನಿಖೆ ವೇಳೆ ಶಾಕಿಂಗ್ ಸತ್ಯಗಳು ಹೊರಬರುತ್ತಿವೆ. ಪಿಎಸ್ಐ ನೇಮಕಾತಿ ಪರೀಕ್ಷಾ ಅಕ್ರಮಗಳು ದಿನವೂ ಹೊರ ಬರುತ್ತಲೇ ಇವೆ. ಪರೀಕ್ಷೆಯಲ್ಲಿ ಅಕ್ರಮ ಮಾಡುತ್ತಿದ್ದ ಕಿಲಾಡಿಗಳು ಅದೆಷ್ಟು ಚಾಲಾಕಿಗಳು ಅಂದ್ರೆ ಅಕ್ರಮದಲ್ಲಿ ಸಿಕ್ಕು ಬೀಳಬಾರದು ಅಂತ ಸತ್ತವರ ಹೆಸರಿನ ಸಿಮ್ ಕಾರ್ಡ್‌ಗಳನ್ನು ಅಕ್ರಮಕ್ಕೆ ಬಳಸಿಕೊಳ್ಳುತ್ತಿದ್ದರು. 

ಕಳೆದ ವರ್ಷ ಲಕ್ಷ್ಮೀ ಪುತ್ರ ಎನ್ನುವ ವ್ಯಕ್ತಿ ಕೋವಿಡ್‌ನಿಂದ(Covid-19) ಮೃತಪ್ಟಿರುತ್ತಾನೆ(Death). ಆತನ ಮೊಬೈಲ್ ಮತ್ತು ಸಿಮ್ ಕಾರ್ಡ್‌(Sim Card) ಪಡೆದಿದ್ದ ಈ ಪ್ರಕರಣದ ಕಿಂಗ್‌ಪಿನ್ ಆರ್.ಡಿ ಪಾಟೀಲ್(RD Patil), ಬ್ಲೂಟೂತ್(Bluetooth) ಮೂಲಕ ಪರೀಕ್ಷಾ ಅಕ್ರಮ ನಡೆಸಲು ಸತ್ತ ಲಕ್ಷ್ಮೀಪುತ್ರನ ಸಿಮ್ ಕಾರ್ಡ್‌ ಬಳಸಿಕೊಳ್ಳುತ್ತಾನೆ. ಆ ಸಿಮ್ ಕಾರ್ಡ್‌ ಮೂಲಕವೇ ಅಕ್ರಮವಾಗಿ ಆನ್ಸರ್ ಹೇಳಲಾಗುತ್ತದೆ ಎನ್ನಲಾಗಿದೆ. 
ಈ ವಿಚಾರ ಈ ಅಕ್ರಮದ ಬಗ್ಗೆ ಸಿಐಡಿ ನಡೆಸುತ್ತಿರುವ ತನಿಖೆಯಲ್ಲಿ ಬಯಲಿಗೆ ಬಂದಿದೆ. ಬ್ಲೂಟೂತ್ ಎಲೆಕ್ಟ್ರಾನಿಕ್ ಡಿವೈಸ್ ಬಳಸಿ ಪರೀಕ್ಷೆ ಬರೆಸಿದ ಆರೋಪದಲ್ಲಿರುವ ಕಿಂಗ್‌ಪಿನ್ ಆರ್‌ಡಿ ಪಾಟೀಲ್ ನ ಬಳಿ ಅಫಜಲಪೂರ ತಾಲೂಕಿನ ಸೊನ್ನ ಗ್ರಾಮದ ಲಕ್ಷ್ಮೀಪುತ್ರ ಎಂಬಾತ ಸೂಪರ್‌ವೈಸರ್ ಆಗಿ ಕೆಲಸ ಮಾಡ್ತಿದ್ದ. ಈ ಲಕ್ಷ್ಮೀಪುತ್ರ ಕೋವಿಡ್‌ನಿಂದ ಕಳೆದ ಒಂದು ವರಗಷದ ಹಿಂದೆ ಮೃತಪಟ್ಟಿರುತ್ತಾನೆ. ಆತನ ಬಳಿಕ ಎರಡು ಮೊಬೈಲ್‌ಗಳ ಪೈಕಿ ಒಂದು ಮೊಬೈಲ್ ಇಟ್ಟುಕೊಂಡು ಅದನ್ನು ಪರೀಕ್ಷಾ ಅಕ್ರಮಕ್ಕೆ ಬಳಸಿಕೊಂಡಿದ್ದ ಈ ಖತರನಾಕ್ ಆಸಾಮಿ.

ಫೆಬ್ರವರಿಯಲ್ಲಿ ನಡೆಯಬೇಕಿದ್ದ 402 ಪಿಎಸ್‌ಐ ನೇಮಕದಲ್ಲೂ ಅಕ್ರಮ? 

ತಮ್ಮ ಬಳಿಯಿರುವ ಮೊಬೈಲ್ ಬಳಸಿದ್ರೆ ಪ್ರಕರಣ ಬಯಲಿಗೆ ಬರುತ್ತೆ ಅಂತಾ ಬೇರೆಯವರ ಸಿಮ್ ಬಳಸುತ್ತಿದ್ದ ಈತ, ಇನ್ನೂ ಸತ್ತವರ ಮೊಬೈಲ್ ಸಿಕ್ರೆ ಸುಮ್ಮನೆ ಬಿಡ್ತಾನಾ? ಎಷ್ಟು ಸಾಧ್ಯವೋ ಅಷ್ಟು ಅಕ್ರಮ ಕೆಲಸಕ್ಕೆ ಬಳಕೆ ಮಾಡಿಕೊಳ್ಳುತ್ತಾನೆ ಈ ಕಿಲಾಡಿ ಆರ್.ಡಿ ಪಾಟೀಲ್.  ಸಿಐಡಿ ಅಧಿಕಾರಿಗಳ ವಿಚಾರಣೆ ವೇಳೆ ಸ್ಫೋಟಕ ಮಾಹಿತಿ ಬೆಳಕಿಗೆ ಬಂದಿದ್ದು, ಈ ಬಗ್ಗೆ ಸಿಐಡಿ ವಿಚಾರಣೆ ತೀವ್ರಗೊಳಿಸಿದೆ. 

ಇನ್ನೊಂದು ಸಿಮ್ ಸಹ ಬಳಕೆ

ಕೋವಿಡ್‌ನಿಂದ ಮೃತಪಟ್ಟ ಲಕ್ಷ್ಮೀಪುತ್ರನ ಒಂದು ಸಿಮ್ ಕಾರ್ಡ್ ಆರ್.ಡಿ ಪಾಟೀಲ್ ಅಕ್ರಮಕ್ಕೆ ಬಳಕೆ ಮಾಡಿಕೊಂಡ್ರೆ, ಇದೇ ಲಕ್ಷ್ಮೀಕಾಂತನ ಇನ್ನೊಂದು ಸಿಮ್ ಕಾರ್ಡ್‌ ಆತನ ಸಹೋದರ ಶರಣಬಸಪ್ಪ ಸಹ ಪರೀಕ್ಷಾ ಅಕ್ರಮಕ್ಕೆ ಬಳಕೆ ಮಾಡಿಕೊಂಡಿರುತ್ತಾನೆ. ಈ ಶರಣಬಸಪ್ಪ ನನ್ನು ಸಹ ಸಿಐಡಿ ಇದೇ ಪ್ರಕರಣದಲ್ಲಿ ಈಗಾಗಲೇ ಬಂಧಿಸಿದೆ. 

ಒಟ್ಟಾರೆ ಬ್ಲೂಟೂತ್ ಮೂಲಕ ಪರೀಕ್ಷಾ ಅಕ್ರಮ ನಡೆಸುವ ಈ ಖತರನಾಕ್ ಗ್ಯಾಂಗ್ ಸತ್ತವರ ಸಾಮಗ್ರಿಗಳನ್ನೂ ಸಹ ತಮ್ಮ ಅಕ್ರಮ ಕೆಲಸಗಳಿಗೆ ಬಳಕೆ ಮಾಡಿಕೊಳ್ಳುತ್ತಿದ್ದರು ಎನ್ನುವುದೇ ರೋಚಕ. ಇಂಥವರ ಹೆಡೆಮುರಿ ಕಟ್ಟಲು ಸಿಐಡಿ ತನಿಖೆ ತೀವ್ರಗೊಳಿಸಿದೆ.
 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

Pocso: 9 ವರ್ಷದ ಬಾಲಕಿ ಮೇಲೆ ಲೈಂಗಿಕ ದೌರ್ಜನ್ಯ; ಆರೋಪಿಗೆ ಗ್ರಾಮಸ್ಥರಿಂದ ಧರ್ಮದೇಟು!
ಸಿನಿಮೀಯ ಶೈಲಿಯಲ್ಲಿ ಹಿಮಾಲಯದ ಮೈನಸ್ ತಾಪಮಾನದಲ್ಲಿ ಅಂತಾರಾಷ್ಟ್ರೀಯ ಮಹಿಳಾ ಸ್ಮಗ್ಲರ್‌ ಬಂಧನ