ಶಿವಮೊಗ್ಗದಲ್ಲಿ ಮತ್ತೆ ಹಿಂದೂ ಕಾರ್ಯಕರ್ತನ ಹತ್ಯೆಗೆ ಸಂಚು

By Girish Goudar  |  First Published Apr 26, 2022, 6:59 AM IST

*  ಭರತ್‌ ಎಂಬಾತನ ಸಹೋದರನನ್ನು ಅಡ್ಡಗಟ್ಟಿ ನಿಂದನೆ, ಮಾರಕಾಸ್ತ್ರಗಳ ಪ್ರದರ್ಶಿಸಿ ಕೊಲೆ ಬೆದರಿಕೆ
*  ದೂರಿನ ಮೇರೆಗೆ ಸಲ್ಮಾನ್‌, ಅಬ್ಬಾಸ್‌, ಉಸ್ಮಾನ್‌ನನ್ನು ಬಂಧಿಸಿರುವ ದೊಡ್ಡಪೇಟೆ ಠಾಣೆ ಪೊಲೀಸರು
*  ಆರೋಪಿಗಳು ಗಾಂಜಾ ಸೇವಿಸಿದ್ದರ ಬಗ್ಗೆ ದೃಢ 
 


ಶಿವಮೊಗ್ಗ(ಏ.26):  ಭಜರಂಗದಳ(Bajrang Dal) ಕಾರ್ಯಕರ್ತನ ಹತ್ಯೆಗೆ ಸಂಚು ಮಾಡಿದ್ದ ಆರೋಪದ ಹಿನ್ನೆಲೆಯಲ್ಲಿ ಅನ್ಯಕೋಮಿನ ಮೂವರು ಯುವಕರನ್ನು ದೊಡ್ಡಪೇಟೆ ಠಾಣೆ ಪೊಲೀಸರು(Police) ವಶಕ್ಕೆ ಪಡೆದಿದ್ದಾರೆ.

ಸಲ್ಮಾನ್‌, ಅಬ್ಬಾಸ್‌ ಮತ್ತು ಉಸ್ಮಾನ್‌ ಬಂಧಿತ(Arrest) ಆರೋಪಿಗಳು(Accused). ಹಿಂದೂಪರ ಸಂಘಟನೆಯೊಂದರ ಕಾರ್ಯಕರ್ತ ಭರತ್‌ ಎಂಬಾತನನ್ನು ಅನೇಕ ದಿನಗಳಿಂದ ಯುವಕರ ತಂಡ ಹಿಂಬಾಲಿಸಿದೆ. ಆದರೆ, ನ್ಯೂ ಮಂಡ್ಲಿ ಬಡಾವಣೆ ಬಳಿ ಬೈಕ್‌ನಲ್ಲಿ ತೆರಳುತ್ತಿದ್ದ ಆತನ ಸಹೋದರನನ್ನು ಅಡ್ಡಗಟ್ಟಿದ ತಂಡ, ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಲ್ಲದೇ, ಲಾಂಗು, ಚಾಕು ತೋರಿಸಿ ಕೊಲೆ ಬೆದರಿಕೆ(Threat of Murder) ಹಾಕಿದ್ದಾರೆ. ಭರತ್‌ ಎಲ್ಲಿ ಎಂದು ಕೂಡ ಪ್ರಶ್ನಿಸಿದೆ. ತಕ್ಷಣವೇ ಪೊಲೀಸರಿಗೆ ಈ ಬಗ್ಗೆ ದೂರು ಸಲ್ಲಿಕೆಯಾಗಿ, ಬಳಿಕ ಪೊಲೀಸರು ನಾಲ್ವರ ವಿರುದ್ಧ ದೂರು ದಾಖಲಿಸಿಕೊಂಡಿದ್ದರು. ಮಿಂಚಿನ ಕಾರ್ಯಾಚರಣೆ ನಡೆಸಿದ ಪೊಲೀಸರು ಸಂಚು ರೂಪಿಸಿದ್ದ ಮೂವರನ್ನು ಬಂಧಿಸಿ ವಿಚಾರಣೆಗೆ ಒಳಪಡಿಸಿದ್ದಾರೆ. ಇನ್ನೊಬ್ಬ ಆರೋಪಿ ಬಂಧನಕ್ಕೆ ಪೊಲೀಸರು ಬಲೆ ಬೀಸಿದ್ದಾರೆ.

Tap to resize

Latest Videos

Suicide Cases in Karnataka: ಸಾಲದ ಬಾಧೆಗೆ ಸಿಲುಕಿ ರೈತ ಆತ್ಮಹತ್ಯೆಗೆ ಶರಣು

ಕೆಲ ದಿನಗಳ ಹಿಂದಷ್ಟೇ ಹಿಂದೂ ಸಂಘಟನೆ(Hindu Organization) ಕಾರ್ಯಕರ್ತ ಹರ್ಷ(Harsha) ಎಂಬಾತನ ಹತ್ಯೆ ನಡೆದಿತ್ತು. ಬಳಿಕ ಹರ್ಷನ ಕೊಲೆಗೆ ಪ್ರತಿಕಾರವಾಗಿ ಅನ್ಯಕೋಮಿನ ಸದಸ್ಯರ ಹತ್ಯೆಗೆ ಸಂಚು ನಡೆಸಲಾಗಿತ್ತು. ಮಾಹಿತಿ ಪಡೆದ ಪೊಲೀಸರು ಆರೋಪಿಗಳನ್ನು ಬಂಧಿಸಿದ್ದರು. ಇದೀಗ ಮತ್ತದೇ ರೀತಿಯಲ್ಲಿ ಹತ್ಯೆಗೆ ಸ್ಕೆಚ್‌ ಹಾಕಿದ್ದ ಆರೋಪಿಗಳನ್ನು ಬಂಧಿಸುವ ಮೂಲಕ ಶಿವಮೊಗ್ಗದಲ್ಲಿ(Shivamogga) ನಡೆಯಬೇಕಿದ್ದ ಅನಾಹುತವೊಂದನ್ನು ತಡೆಯುವಲ್ಲಿ ಪೊಲೀಸರು ಯಶಸ್ವಿಯಾಗಿರುವುದು ವಿಶೇಷ.

ಗಾಂಜಾ ಸೇವನೆ ದೃಢ:

ಭಜರಂಗದಳ ಕಾರ್ಯಕರ್ತನ ಕೊಲೆಗೆ ಸಂಚು ಮಾಡಿ, ಆತನನ್ನ ಹಿಂಬಾಲಿಸಿ, ಸಿಗದಿದ್ದಾಗ ಆತನ ಸಹೋದರನಿಗೆ ಧಮ್ಕಿ ಹಾಕಿದ್ದ ಮೂವರು ಅನ್ಯಕೋಮಿನ ಯುವಕರ ವಿರುದ್ಧ ಮತ್ತೊಂದು ಪ್ರಕರಣ ದಾಖಲಾಗಿದೆ. ಪ್ರಕರಣದಲ್ಲಿ ಬಂಧಿತರಾದ ಸಲ್ಮಾನ್‌, ಅಬ್ಬಾಸ್‌ ಮತ್ತು ಉಸ್ಮಾನ್‌ ಗಾಂಜಾ ಸೇವನೆ ಮಾಡಿದ್ದರು. ಬೈಪಾಸ್‌ ಬಳಿ ಗಾಂಜಾ ಸೇವಿಸಿ ಸಾರ್ವಜನಿಕ ಸ್ಥಳದಲ್ಲಿ ಅನುಮಾನಸ್ಪದವಾಗಿ ಈ ಮೂವರು ವರ್ತಿಸುತ್ತಿದ್ದರು. ಆಗ ಮೂವರನ್ನೂ ಬಂಧಿಸಿ ಗಾಂಜಾ(Marijuana) ಪರೀಕ್ಷೆಗೆ ಒಳಪಡಿಸಿದಾಗ ಪ್ರಕರಣ ಬೆಳಕಿಗೆ ಬಂದಿದೆ. 

ಮೆಹಬೂಬ್‌ ನಗರದ ಸಲ್ಮಾನ್‌(18), ಅಬ್ಬಾಸ್‌ (20) ಯಾನೆ ಶೇಕ್‌ ಉಸ್ಮಾನ್‌ ಗನಿ (18) ಯಾನೆ ಚೋಟುನನ್ನು ಮೆಗ್ಗಾನ್‌ನಲ್ಲಿ ಪರೀಕ್ಷೆಗೆ ಒಳಪಡಿಸಿದಾಗ ಗಾಂಜಾ ಸೇವನೆ ದೃಢಪಟ್ಟಿದೆ. ದೊಡ್ಡಪೇಟೆ ಠಾಣೆಯಲ್ಲಿ ಪ್ರತ್ಯೇಕ ಎಫ್‌ಐಆರ್‌(FIR) ದಾಖಲಿಸಲಾಗಿದೆ.
 

click me!