
ಗೋರಖ್‌ಪುರ: ಉತ್ತರ ಪ್ರದೇಶದ ಗೋರಖ್‌ಪುರದಲ್ಲಿ 60 ವರ್ಷದ ವ್ಯಕ್ತಿಯೊಬ್ಬ ತನ್ನ ಮೊಮ್ಮಗಳ (Granddaughter) ಮೇಲೆಯೇ ಅತ್ಯಾಚಾರ ಎಸಗಿದ್ದು, ಪೊಲೀಸರು ಆತನನ್ನು ಬಂಧಿಸಿದ್ದಾರೆ. 15 ವರ್ಷದ ಬಾಲಕಿಯನ್ನು ಅಜ್ಜ ರೇಪ್ ಮಾಡಿದ್ದು, ನಂತರ ಈ ವಿಷಯವನ್ನು ಯಾರಿಗೂ ಹೇಳದಂತೆ ತಿಳಿಸಿ ತನ್ನ ಮೊಮ್ಮಗಳಿಗೆ 10 ರೂಪಾಯಿ ನೀಡಿದ್ದ. ಸಂಜೆ ಸೊಸೆ ಮತ್ತು ಮೊಮ್ಮಗಳು ಕುರಿಗಳನ್ನು ಮೇಯಿಸುತ್ತಿದ್ದರು. ಈ ವೇಳೆ ಅಲ್ಲಿಗೆ ಬಂದ ಅಜ್ಜ, ಸೊಸೆಯನ್ನು (Daughter in law) ಮನೆಗೆ ಹೋಗುವಂತೆ ಹೇಳಿದ್ದಾನೆ. ಕಟ್ಟಿಗೆ ಕಡಿಯಲು ಕೊಡಲಿ ತರುವಂತೆ ಮೊಮ್ಮಗಳಿಗೆ ತಿಳಿಸಿದ್ದಾನೆ. ಮೊಮ್ಮಗಳು ಮನೆಗೆ ಹೋಗಿ ಕೊಡಲಿ ತಂದಾಗ, ಆಕೆಯನ್ನು ನಿರ್ಜನ ಸ್ಥಳಕ್ಕೆ ಕರೆದೊಯ್ದು ಅತ್ಯಾಚಾರ (Rape) ಎಸಗಿದ್ದಾನೆ. ಅಲ್ಲದೇ ಈ ಬಗ್ಗೆ ಯಾರಿಗೂ ಹೇಳಬಾರದು ಎಂದು ಮೊಮ್ಮಗಳಿಗೆ 10 ರೂ. ನೀಡಿದ್ದಾನೆ ಎಂದು ತಿಳಿದುಬಂದಿದೆ.
ಈ ವೇಳೆ ಗ್ರಾಮಸ್ಥನೊಬ್ಬ ಇದನ್ನು ಕಂಡು, ಜನ ಸೇರಿಸಿ, ಅಜ್ಜನನ್ನು ಹಿಡಿದು ಥಳಿಸಿ, ಪೊಲೀಸರಿಗೆ ಒಪ್ಪಿಸಿದ್ದಾರೆ. ಪೊಲೀಸರು ಬಾಲಕಿಯನ್ನು ವೈದ್ಯಕೀಯ ತಪಾಸಣೆಗೆ (Medical test) ಒಳಪಡಿಸಿದ್ದಾರೆ. ಕುಟುಂಬಸ್ಥರು ಪೊಲೀಸ್ ಠಾಣೆಗೆ ಬಂದು ದೂರು ದಾಖಲಿಸಿದ್ದಾರೆ. ಪ್ರಕರಣ ದಾಖಲಿಸಿಕೊಂಡು ಆರೋಪಿ (Accused) ಅಜ್ಜನನ್ನು ಬಂಧಿಸಲಾಗಿದೆ ಎಂದು ಪೊಲೀಸ್ ಅಧಿಕಾರಿಯೊಬ್ಬರು ಹೇಳಿದ್ದಾರೆ.
Bengaluru Crime: ಪ್ರೀತಿಸಿದ ಯುವತಿಗೆ ಮದುವೆ ಫಿಕ್ಸ್: ಮನೆಗೆ ನುಗ್ಗಿ ರೇಪ್ ಮಾಡಿ ಕೊಲೆಗೈದ ಪ್ರೇಮಿ
ತಂದೆಯ ಕೊಂದು 50 ವರ್ಷದ ಮಲತಾಯಿ ಮೇಲೆ ರೇಪ್ : ಯುವಕನ ಬಂಧನ
20 ವರ್ಷದ ತರುಣನೋರ್ವ ತನ್ನ ತಂದೆಯನ್ನು ಕೊಂದು ಬಳಿಕ ತನ್ನ 50 ವರ್ಷ ಪ್ರಾಯದ ಮಲತಾಯಿ ಮೇಲೆ ಅತ್ಯಾಚಾರವೆಸಗಿದ ಹೇಯ ಕೃತ್ಯ ಒಡಿಶಾ ರಾಜ್ಯದಲ್ಲಿ ನಡೆದಿದೆ. ಜಾಜ್‌ಪುರ ಜಿಲ್ಲೆಯ ಟೊಮ್ಕಾ ಪೊಲೀಸ್ ಠಾಣೆ ವ್ಯಾಪ್ತಿಯ ಚಂಪಾಜರ್ (Champajhar) ಗ್ರಾಮದಲ್ಲಿ ಫೆ.5ರಂದು ಈ ಭಯಾನಕ ಘಟನೆ ನಡೆದಿದ್ದು, ಫೆ.6 ರಂದು ಆರೋಪಿ 20 ವರ್ಷದ ಲುಗು ಹೆಂಬ್ರೂಮ್‌ನನ್ನು ಪೊಲೀಸರು ಬಂಧಿಸಿದ್ದಾರೆ.
ಕೌಟುಂಬಿಕ ಕಲಹದ (family dispute) ಹಿನ್ನೆಲೆಯಲ್ಲಿ ಈ ಕೃತ್ಯ ನಡೆದಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಕೊಲೆಯಾದ ವ್ಯಕ್ತಿಯನ್ನು 65 ವರ್ಷದ ಸದೈ ಹೆಂಬ್ರಾಮ್ (Sadai Hembram) ಎಂದು ಗುರುತಿಸಲಾಗಿದೆ. ವರದಿಗಳ ಪ್ರಕಾರ, ಸದೈ ಹೆಂಬ್ರಾಮ್ ಅವರ ಪುತ್ರ ದಿನಗೂಲಿ ಕೆಲಸ ಮಾಡುತ್ತಾ ಜೀವನ ಸಾಗಿಸುತ್ತಿದ್ದ. ಆದರೆ ಮಲತಾಯಿ ಆತನೊಂದಿಗೆ ನಿರಂತವಾಗಿ ಜಗಳವಾಡುತ್ತಿದ್ದಳು. ಅಲ್ಲದೇ ಆತ ಕುಟುಂಬದೊಂದಿಗೆ ಚಂಪಾಜಾರ್ ಗ್ರಾಮದಲ್ಲಿಇರಲು ಮಲತಾಯಿ ಅವಕಾಶ ನೀಡದ ಕಾರಣ ಆತ ಕುಟುಂಬ ತೊರೆದು ಬೇರೆಯೇ ಹಳ್ಳಿಯಲ್ಲಿ ವಾಸವಾಗಿದ್ದ. ಈ ಎಲ್ಲಾ ಕಾರಣಗಳಿಂದ 20ರ ಹರೆಯದ ಹುಡುಗ ತನ್ನ ಮಲತಾಯಿಯ ಬಗ್ಗೆ ವ್ಯಾಘ್ರನಾಗಿದ್ದ.
ಗ್ಯಾಂಗ್‌ರೇಪ್ ಆರೋಪಿಯ ಮನೆಯನ್ನು ಬುಲ್ಡೋಜರ್ ಮೂಲಕ ಧ್ವಂಸ ಮಾಡಿದ ಮಹಿಳಾ ಪೊಲೀಸ್ ಅಧಿಕಾರಿಗಳು!
ರಾತ್ರಿ, ಲುಗು ತನ್ನ ತಂದೆ ಇದ್ದಲ್ಲಿಗೆ ಬಂದಾಗ ಮಲತಾಯಿ ಮತ್ತೆ ಅವನೊಂದಿಗೆ ಜಗಳ ಶುರು ಮಾಡಿದ್ದಳು. ಜಗಳ ವಿಕೋಪಕ್ಕೆ ತಿರುಗುತ್ತಿದ್ದಂತೆ, ಆತನ ತಂದೆ ಪತ್ನಿಯ ಬೆಂಬಲಕ್ಕೆ ನಿಂತಿದ್ದಾನೆ. ಇದರಿಂದ ಕೋಪಗೊಂಡ ಲುಗು ತನ್ನ ತಂದೆಯನ್ನು ಹರಿತವಾದ ಆಯುಧದಿಂದ ಕೊಚ್ಚಿ ಕೊಲೆ ಮಾಡಿದ್ದಾನೆ. ನಂತರ ಆತ ತನ್ನ 50 ವರ್ಷದ ಮಲತಾಯಿಯ ಮೇಲೆ ಅತ್ಯಾಚಾರವೆಸಗಿ ಶೀಘ್ರದಲ್ಲೇ ಆ ಸ್ಥಳದಿಂದ ಪರಾರಿಯಾಗಿದ್ದ. ಈ ಬಗ್ಗೆ ಅತ್ಯಾಚಾರ ಸಂತ್ರಸ್ತೆ ಹಾಗೂ ಮಲತಾಯಿ ಟೊಮ್ಕಾ ಪೊಲೀಸರಿಗೆ ದೂರು ನೀಡಿದ್ದಳು.
ತಂದೆಯನ್ನು ಕೊಂದ ತನ್ನ ಮಲಮಗ ನಂತರ ನನ್ನ ಮೇಲೆ ಅತ್ಯಾಚಾರವೆಸಗಿದ್ದಾನೆ ಎಂದು ಮಲತಾಯಿ ನೀಡಿದ ದೂರಿನಲ್ಲಿ ತಿಳಿಸಿದ್ದಾರೆ. ಮಲತಾಯಿ ನೀಡಿದ ದೂರಿನ ಮೇಲೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದು, ನಂತರ ಆರೋಪಿಯನ್ನು ಬಂಧಿಸಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ