
ನವದೆಹಲಿ (ಮೇ.15): ಉತ್ತರ ಪ್ರದೇಶದ ಬದ್ನೌನ್‌ನಲ್ಲಿ ನಡೆದ ಭೀಕರ ಘಟನೆಯೊಂದರಲ್ಲಿ, ಇನ್ನೊಬ್ಬ ವ್ಯಕ್ತಿಯ ಹೆಂಡತಿಯೊಂದಿಗೆ ಓಡಿಹೋಗಿದ್ದಕ್ಕಾಗಿ ವ್ಯಕ್ತಿಯೊಬ್ಬನಿಗೆ "ಶಿಕ್ಷೆ" ಎಂದು ಬಲವಂತವಾಗಿ ಮಾನವನ ಮೂತ್ರ ಕುಡಿಯಲು ಹಾಗೂ ಮಾನವ ಮಲವನ್ನು ತಿನ್ನಲು ಒತ್ತಾಯ ಮಾಡಲಾಗಿದೆ. ತನ್ನ ಹೆಂಡತಿ ಜೊತೆ ಓಡಿಹೋದ ಯುವಕನ ಕುತ್ತಿಗೆಗೆ ಚಪ್ಪಲಿ ಹಾಗೂ ಶೂಗಳ ಹಾರ ಹಾಕಿ ಮೆರವಣಿಗೆಯನ್ನೂ ಮಾಡಲಾಗಿದೆ. ಇನ್ನೂ ಆಘಾತಕಾರಿ ವಿಚಾರವೆಂದರೆ, ಇಡೀ ಘಟನೆಯುನ್ನು ವಿಡಿಯೋ ಕೂಡ ಮಾಡಲಾಗಿದೆ. ಇಷ್ಟೆಲ್ಲಾ ಆಗುತ್ತಿದ್ದರೂ ಯುವಕನಿಗೆ ಸಹಾಯ ಮಾಡಲು ಯಾರೊಬ್ಬರು ಮುಂದೆ ಬಂದಿರಲಿಲ್ಲ. ಬದ್ನೌನ್‌ನ ಫೈಜ್‌ಗಂಜ್ ಬೆಹ್ತಾ ಪ್ರದೇಶದಲ್ಲಿ ಈ ಘಟನೆ ನಡೆದಿದೆ. ಅಸಹ್ಯಕರ ಘಟನೆಯ ವೀಡಿಯೊವನ್ನು ಸ್ಥಳೀಯ ಸುದ್ದಿ ಹ್ಯಾಂಡಲ್‌ಗಳು ಸಾಮಾಜಿಕ ಮಾಧ್ಯಮ ವೇದಿಕೆಯಲ್ಲಿ ಹಂಚಿಕೊಳ್ಳಲಾಗಿದೆ. ಯುವಕನ ಕುತ್ತಿಗೆಯಲ್ಲಿ ಚಪ್ಪಲಿ ಹಾಗೂ ಶೂಗಳ ಹಾರ ಹಾಕಿಕೊಂಡು ನಡೆಯುತ್ತಿರುವ ವೇಳೆ, ಸ್ಥಳೀಯ ಜನರು ಹಾಗೂ ಮಕ್ಕಳು ಕೂಡ ಆತನ ಸುತ್ತ ಇರುವುದು ವಿಡಿಯೋದಲ್ಲಿ ದಾಖಲಾಗಿದೆ.
ಸ್ಥಳೀಯ ವರದಿಗಳ ಪ್ರಕಾರ, ವ್ಯಕ್ತಿ ಈಗಾಗಲೇ ಮದುವೆಯಾಗಿದ್ದ ಮಹಿಳೆಯೊಂದಿಗೆ ಓಡಿಹೋಗಿದ್ದ. ಸಿಕ್ಕಿಬೀಳಬಾರದೆಂದು ಇಬ್ಬರೂ ಹಿಮಾಚಲ ಪ್ರದೇಶಕ್ಕೆ ಪರಾರಿಯಾಗಿದ್ದರು. ಆದರೆ, ಮಹಿಳೆಯ ಪತಿ ಹಿಮಾಚಲದಲ್ಲಿ ವಾಸಿಸುತ್ತಿರುವ ಇಬ್ಬರ ಬಗ್ಗೆ ತಿಳಿದುಕೊಂಡಿದ್ದಲ್ಲದೆ, ಇಬ್ಬರನ್ನೂ ತನ್ನೂರಿಗೆ ಕರೆದುಕೊಂಡು ಬಂದಿದ್ದ. ಮಹಿಳೆಯನ್ನು ಕೂಡಿಹಾಕಲಾಗಿದ್ದರೆ, ಪುರುಷನನ್ನು ಅವಮಾನಕ್ಕೆ ಒಳಪಡಿಸಲಾಗಿದೆ.
SSLC ವಿದ್ಯಾರ್ಥಿನಿ ತಲೆಯನ್ನು ಹೊತ್ತೊಯ್ದಿದ್ದ ಹಂತಕನ ಟಾರ್ಗೆಟ್ ಆಕೆ ಮಾತ್ರ ಆಗಿರಲಿಲ್ಲ!
ವರದಿಯ ಪ್ರಕಾರ, ಘಟನೆಯ ಬಗ್ಗೆ ಯುವಕ ಪೊಲೀಸರಿಗೆ ದೂರು ನೀಡಿದ್ದಾನೆ. ಆದರೆ, ವಿಡಿಯೋ ವೈರಲ್ ಆದ ನಂತರವೇ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ. ಈಗಲೂ ಆರೋಪಿಗಳನ್ನು ಪೊಲೀಸರು ಬಂಧಿಸಿಲ್ಲ. ಯುವಕನ ವೈದ್ಯಕೀಯ ಪರೀಕ್ಷೆ ನಡೆಸಲಾಗಿದ್ದು, ಸೂಕ್ತ ಸೆಕ್ಷನ್‌ಗಳ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಲಾಗುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಕದ್ದುಮುಚ್ಚಿ 2ನೇ ಮದುವೆಗೆ ರೆಡಿಯಾಗ್ತಿದ್ದ ಮಗ, ದರದರನೆ ಎಳೆದು ಪೊಲೀಸರಿಗೆ ಒಪ್ಪಿಸಿದ ತಂದೆ!
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ