ಬೆಂಗಳೂರು: ವಿದೇಶಿ ಪ್ರಜೆಗಳೂ ಸೇರಿ 6 ಸೆರೆ, 2.7 ಕೋಟಿ ಡ್ರಗ್ಸ್ ಜಪ್ತಿ

By Kannadaprabha NewsFirst Published May 15, 2024, 12:34 PM IST
Highlights

ನೈಜೀರಿಯಾ ದೇಶದ ಆಗಸ್ಟೆನ್ ನಾನ್ನೊ, ಫೈಡ್ಲೆಲಿಸ್, ಎರೇಂಜಿನ್ ಸ್ಟಾರ್ಟ್, ಮಡಿಕೇರಿ ಜಿಲ್ಲೆ ನಾಣಯ್ಯ, ವಿ.ವಿ.ಪುರದ ಕುತಾಲ್ ಹಾಗೂ ಮಡಿವಾಳದ ವಿಶ್ವಾಸ್ ಬಂಧಿತರಾಗಿದ್ದು, ಆರೋಪಿಗಳಿಂದ ಎಂಡಿಎಂಎ ಕ್ರಿಸ್ಟೆಲ್, ಕೊಕೇನ್, ಎಲ್ ಎಸ್‌ಡಿ, ಚರಸ್, 12 ಕೇಜಿ ಗಾಂಜಾ, ಹ್ಯಾಶಿಶ್ ಆಯಿಲ್ ಸೇರಿ ಒಟ್ಟು 22.74 ಕೋಟಿ ಮೌಲ್ಯದ ಡ್ರಗ್ಸ್ ಜಪ್ತಿ ಮಾಡಲಾಗಿದೆ. 
 

ಬೆಂಗಳೂರು(ಮೇ.15): ರಾಜಧಾನಿಯಲ್ಲಿ ಡ್ರಗ್ಸ್ ಮಾರಾಟ ದಂಧೆಯಲ್ಲಿ ತೊಡಗಿದ್ದ ಖಾಸಗಿ ಬ್ಯಾಂಕ್ ಉದ್ಯೋಗಿ, 3 ವಿದೇಶಿ ಪ್ರಜೆಗಳು ಸೇರಿ ಆರು ಮಂದಿಯನ್ನು ಪ್ರತ್ಯೇಕವಾಗಿ ಸೆರೆ ಹಿಡಿದು 2.74 ಕೋಟಿ ಮೌಲ್ಯದ ಡ್ರಗ್ಸ್ ಅನ್ನು ಸಿಸಿಬಿ ಜಪ್ತಿ ಮಾಡಿದೆ. 

ನೈಜೀರಿಯಾ ದೇಶದ ಆಗಸ್ಟೆನ್ ನಾನ್ನೊ, ಫೈಡ್ಲೆಲಿಸ್, ಎರೇಂಜಿನ್ ಸ್ಟಾರ್ಟ್, ಮಡಿಕೇರಿ ಜಿಲ್ಲೆ ನಾಣಯ್ಯ, ವಿ.ವಿ.ಪುರದ ಕುತಾಲ್ ಹಾಗೂ ಮಡಿವಾಳದ ವಿಶ್ವಾಸ್ ಬಂಧಿತರಾಗಿದ್ದು, ಆರೋಪಿಗಳಿಂದ ಎಂಡಿಎಂಎ ಕ್ರಿಸ್ಟೆಲ್, ಕೊಕೇನ್, ಎಲ್ ಎಸ್‌ಡಿ, ಚರಸ್, 12 ಕೇಜಿ ಗಾಂಜಾ, ಹ್ಯಾಶಿಶ್ ಆಯಿಲ್ ಸೇರಿ ಒಟ್ಟು 22.74 ಕೋಟಿ ಮೌಲ್ಯದ ಡ್ರಗ್ಸ್ ಜಪ್ತಿ ಮಾಡಲಾಗಿದೆ. ಹಲವು ದಿನಗಳಿಂದ ನಗರದಲ್ಲಿ ಈ ಆರು ಮಂದಿ ಪೆಡ್ಡರ್‌ಗಳು ಡ್ರಗ್ಸ್ ಮಾರಾಟದಲ್ಲಿ ತೊಡಗಿದ್ದರು. ಈ ಬಗ್ಗೆ ಖಚಿತ ಮಾಹಿತಿ ಪಡೆದು ಸಿಸಿಬಿ ಕಾರ್ಯಾಚರಣೆ ನಡೆಸಿದೆ. ಈ ವಿದೇಶಿ ಪ್ರಜೆಗಳು ಬಿಜಿನೆಸ್, ಮೆಡಿಕಲ್ ವೀಸಾದಡಿ ಭಾರತಕ್ಕೆ ಬಂದಿದ್ದರು. ಆನಂತರ ಬೆಂಗಳೂರಿಗೆ ಬಂದು ನೆಲೆಸಿದ್ದರು. ಮೋಜಿನ ಜೀವನ ನಡೆಸಲು ಗೋವಾ, ಮುಂಬೈ, ಹಾಗೂ ದೆಹಲಿಯಲ್ಲಿ ನೆಲೆಸಿರುವ ತಮ್ಮ ದೇಶದ ಪ್ರಜೆ ಗಳಿಂದ ಎಂಡಿಎಂಎ ಕ್ರಿಸ್ಟೆಲ್ ಹಾಗೂ ಕೊಕೇನ್ ಖರೀದಿಸಿ ಮಾರಾಟ ಮಾಡುತ್ತಿದ್ದರು. ಈ ಬಗ್ಗೆ ಖಚಿತ ಮಾಹಿತಿ ಪಡೆದು ಸಂಪಿಗೆಹಳ್ಳಿ ಠಾಣಾ
ವ್ಯಾಪ್ತಿಯಲ್ಲಿ ವಿದೇಶಿ ಪೆಡ್ಡರ್‌ಗಳನ್ನು ಬಂಧಿಸಲಾ ಯಿತು. ಕಾಟನ್‌ಪೇಟೆಯ ಬಿನ್ನಿಮಿಲ್ ಸಮೀಪ ಡ್ರಗ್ಸ್ ಮಾರಾಟಕ್ಕೆ ಯತ್ನಿಸಿದ್ದಾಗ ಕುಖ್ಯಾತ ರೌಡಿ ವಿಶ್ವಾಸ್‌ನನ್ನು ಸಿಸಿಬಿ ಬಂಧಿಸಿದೆ. ಆರೋಪಿ ಯಿಂದ ₹14 ಲಕ್ಷದ ಡ್ರಗ್ಸ್ ಜಪ್ತಿ ಮಾಡಿದೆ.

Latest Videos

ಬೆಂಗಳೂರು: ಡ್ರಗ್ಸ್‌ ಹೆಸರಿನಲ್ಲಿ ವಕೀಲೆಯನ್ನು ಡಿಜಿಟಲ್‌ ಆರೆಸ್ಟ್‌ ಮಾಡಿ, ನಗ್ನಗೊಳಿಸಿ ಹಣ ಸುಲಿಗೆ..!

ಡ್ರಗ್ಸ್ ಮಾರುತ್ತಿದ್ದ ನಿವೃತ್ತ ಎಇಇ ಪುತ್ರನ ಸೆರೆ

ವಿದೇಶದಲ್ಲಿ ನೆಲೆಸಿರುವ ತನ್ನ ಗೆಳೆಯನ ಜತೆ ಸೇರಿ ನಗರದಲ್ಲಿ ಡ್ರಗ್ಸ್ ಮಾರಾಟಕ್ಕಿಳಿದಿದ್ದ ನಿವೃತ್ತ ಎಇಇ ಪುತ್ರನೊಬ್ಬ ಸಿಸಿಬಿ ಗಾಳಕ್ಕೆ ಸಿಲುಕಿದ್ದಾನೆ. ನಿವೃತ್ತ ಎಇಇ ಪುತ್ರ ಕುಶಾಲ್ ಬಂಧಿ ತನಾಗಿದ್ದು, ಆತನಿಂದ 10 ಲಕ್ಷ ಮೌಲ್ಯದ 5 ಕೇಜಿ ಗಾಂಜಾ, 7 ಎಲ್‌ಎಸ್‌ಡಿ ಸ್ಟಿಪ್ ಗಳು ಮತ್ತು 25 ಗ್ರಾಂ ಚರಸ್ ವಶಪಡಿಸಿಕೊಳ್ಳಲಾಗಿದೆ. ಕೆನಡಾ ದೇಶದಲ್ಲಿರುವ ತನ್ನ ಸ್ನೇಹಿ ತನ ಸಹಕಾರದಲ್ಲಿ ಆರೋಪಿ ಡ್ರಗ್ಸ್ ದಂಧೆ ನಡೆಸುತ್ತಿದ್ದ ಬಗ್ಗೆ ಖಚಿತ ಮಾಹಿತಿ ಪಡೆದು ವಿವಿ ಪುರ ಬಳಿ ಬಂಧಿಸಲಾಗಿದೆ. ಶಿವಮೊಗ್ಗ ಜಿಲ್ಲೆಯಿಂದ ಬಸ್‌ನಲ್ಲಿ ಕುಶಾಲ್‌ಗೆ ಡ್ರಗ್ಸ್ ಪೂರೈಕೆ ಯಾಗುತ್ತಿತ್ತು. ಬಳಿಕ ಅದನ್ನು ನಗರದಲ್ಲಿ ಆತ ಮಾರಾಟ ಮಾಡುತ್ತಿದ್ದ. ಇನ್ನು ಡ್ರಗ್ಸ್ ಬೇಕಾದಾಗ ಕೆನಡಾದ ಗೆಳೆಯನಿಗೆ ಕರೆ ಮಾಡಿದರೆ ಮರುದಿನ ಕುಶಾಲ್ ಕೈಗೆ ಡ್ರಗ್ಸ್ ಸೇರುತ್ತಿತ್ತು. ಈ ಪೂರೈಕೆದಾರನ ಪತ್ತೆಗೆ ತನಿಖೆ ನಡೆದಿದೆ ಎಂದು ಅಧಿಕಾರಿಗಳು ವಿವರಿಸಿದ್ದಾರೆ. 

ಖಾಸಗಿ ಬ್ಯಾಂಕ್ ಉದ್ಯೋಗಿ ಬಳಿ ₹2 ಕೋಟಿ ಡ್ರಗ್ಸ್ ಜಪ್ತಿ!

ಡ್ರಗ್ಸ್ ದಂಧೆಯಲ್ಲಿ ತೊಡಗಿದ್ದ ಖಾಸಗಿ ಬ್ಯಾಂಕ್ ಉದ್ಯೋಗಿಯೊಬ್ಬ ಸಿಸಿಬಿ ಬಲೆಗೆ ಬಿದ್ದಿದ್ದಾನೆ. ಕೊತ್ತನೂರು ಸಮೀಪ ನಿವಾಸಿ ನಾಣಯ್ಯ ಬಂಧತನಾಗಿದ್ದು, ಆರೋಪಿಯಿಂದ 62 ಕೋಟಿ ಮೌಲ್ಯದ 2 ಕೇಜಿ ಹ್ಯಾಶಿಶ್ ಆಯಿಲ್ ಹಾಗೂ 716 ಗ್ರಾಂ ತೂಕದ ಚರಸ್ ಜಪ್ತಿ ಮಾಡಲಾಗಿದೆ. ಆಂಧ್ರಪ್ರದೇಶದಿಂದ ಕಡಿಮೆ ಬೆಲೆಗೆ ಹ್ಯಾಸಿಶ್ ಆಯಿಲ್ ತಂದು ನಗರದಲ್ಲಿ ಆತ ದುಬಾರಿ ಬೆಲೆಗೆ ಮಾರುತ್ತಿದ್ದು, ಕೊತ್ತೂರು ಬಳಿ ಆರೋಪಿಯನ್ನು ಸಿಸಿಬಿ ಬಂಧಿಸಿದೆ. ಆರೋಪಿ ನಾಣಯ್ಯನ ತಂದೆ ಮಾಜಿ ಸೈನಿಕರಾಗಿದ್ದು, ಆತನ ತಾಯಿ ಮಡಿಕೇರಿಯಲ್ಲಿ ಹೋಂ ಸ್ಟೇ ನಡೆಸುತ್ತಿದ್ದಾರೆ. ನಗರದಲ್ಲಿ ಖಾಸಗಿ ಬ್ಯಾಂಕ್‌ನಲ್ಲಿ ಉದ್ಯೋಗದಲ್ಲಿದ್ದ ಆತ, ಮೋಜಿನ ಜೀವನ ಕ್ಕಾಗಿ ಹಾದಿ ತಪ್ಪಿದ್ದ. 3 ವರ್ಷಗಳ ಹಿಂದೆ ಗೋವಾ ಪ್ರವಾಸಕ್ಕೆ ಹೋಗಿದ್ದಾಗ ಆತನಿಗೆ ಡ್ರಗ್ಸ್ ಮಾರಾಟ ಜಾಲದ ಪೂರೈಕೆದಾರರ ಸಂಪರ್ಕವಾಗಿದೆ. ಆರಂಭ ದಲ್ಲಿ ಮಾದಕ ವ್ಯಸನಿಯಾಗಿದ್ದ ನಾಣಯ್ಯ ಬಳಿಕ ಪೆಡ್ಡರ್ ಆಗಿದ್ದಾನೆ. 2 ವರ್ಷ ಗಳಲ್ಲಿ 60 ಲೀ, ಹ್ಯಾಶಿಶ್ ಆಯಿಲ್ ಬಿಕರಿ ಮಾಡಿದ ಮಾಹಿತಿ ಇದೆ. 

click me!