ಹೊತ್ತು ಊಟಕ್ಕಾಗಿ ಮೃತ ಸಹೋದರನನ್ನು ಕೊಂದೆ ಎಂದ ನಿರುದ್ಯೋಗಿ ತಮ್ಮ

By Anusha KbFirst Published Jun 17, 2022, 5:29 PM IST
Highlights

ನಿರುದ್ಯೋಗವೆಂಬುದು ಮನುಷ್ಯನನ್ನು ಎಂಥಾ ಹೇಯ ಕೆಲಸ ಮಾಡಲು ಕೂಡ ಪ್ರೇರೇಪಿಸಬಹುದು ಎಂಬಂತಹ ಘಟನೆಯೊಂದು ಪಶ್ಚಿಮ ಬಂಗಾಳದ ಕೋಲ್ಕತ್ತಾದಲ್ಲಿ ನಡೆದಿದೆ. ಜೈಲಿನಲ್ಲಿ ಉಚಿತವಾಗಿ ಊಟ ಹಾಗೂ ಇರಲು ವಸತಿ ಸಿಗುತ್ತದೆ ಎಂದು ಯುವಕನೋರ್ವ ಈಗಾಗಲೇ ಮೃತಪಟ್ಟಿದ್ದ ತನ್ನ ಸಹೋದರನನ್ನು ಕೊಂದಿರುವುದಾಗಿ ಆತನೇ ಪೊಲೀಸರಿಗೆ ದೂರವಾಣಿ ಕರೆ ಮಾಡಿ ತಿಳಿಸಿದ್ದಾನೆ. 

ಕೋಲ್ಕತ್ತಾ: ನಿರುದ್ಯೋಗವೆಂಬುದು ಮನುಷ್ಯನನ್ನು ಎಂಥಾ ಹೇಯ ಕೆಲಸ ಮಾಡಲು ಕೂಡ ಪ್ರೇರೇಪಿಸಬಹುದು ಎಂಬಂತಹ ಘಟನೆಯೊಂದು ಪಶ್ಚಿಮ ಬಂಗಾಳದ ಕೋಲ್ಕತ್ತಾದಲ್ಲಿ ನಡೆದಿದೆ. ಜೈಲಿನಲ್ಲಿ ಉಚಿತವಾಗಿ ಊಟ ಹಾಗೂ ಇರಲು ವಸತಿ ಸಿಗುತ್ತದೆ ಎಂದು ಯುವಕನೋರ್ವ ಈಗಾಗಲೇ ಮೃತಪಟ್ಟಿದ್ದ ತನ್ನ ಸಹೋದರನನ್ನು ಕೊಂದಿರುವುದಾಗಿ ಆತನೇ ಪೊಲೀಸರಿಗೆ ದೂರವಾಣಿ ಕರೆ ಮಾಡಿ ತಿಳಿಸಿದ್ದಾನೆ. ಪಶ್ಚಿಮ ಬಂಗಾಳದ ಕೋಲ್ಕತ್ತಾದಲ್ಲಿ ಈ ವಿಲಕ್ಷಣ ಘಟನೆ ನಡೆದಿದೆ. 

ವ್ಯಕ್ತಿಯೊಬ್ಬ ಪೊಲೀಸರನ್ನು ಸಂಪರ್ಕಿಸಿ ತನ್ನ ಸಹೋದರನನ್ನು ಕೊಲೆ ಮಾಡಿರುವುದಾಗಿ ತಪ್ಪೊಪ್ಪಿಕೊಂಡಿದ್ದಾನೆ. ದಕ್ಷಿಣ ಕೋಲ್ಕತ್ತಾದ (South Kolkata) ಬನ್ಸ್‌ದ್ರೋನಿಯ (Bansdroni) ನಿರಂಜನ್ ಪಲ್ಲಿ (Niranjan Palli) ಪ್ರದೇಶದಲ್ಲಿ ಈ ಘಟನೆ ವರದಿಯಾಗಿದೆ. ಆದರೆ ವಿಚಾರಣೆ ನಡೆಸಿದ ಪೊಲೀಸರಿಗೆ ಆ ವ್ಯಕ್ತಿಯ ಸಹೋದರ ಮಿದುಳಿನ ಸ್ಟ್ರೋಕ್‌ನಿಂದ (cerebral stroke) ಸಾವನ್ನಪ್ಪಿದ್ದ. ಆದರೆ ಆತನ ಸಹೋದರ ಜೈಲಿನಲ್ಲಿ ಊಟ ಮತ್ತು ವಾಸಕ್ಕೆ ಸ್ಥಳ ಸಿಗುವಂತೆ ಕೊಲೆಯ ಕಥೆಯನ್ನು ರೂಪಿಸಿದ್ದ ಎಂದು ನಂತರ ತಿಳಿದು ಬಂದಿದೆ. ಶುಭಾಶಿಸ್ ಚಕ್ರವರ್ತಿ (Shubhashis Chakroborty) ಎಂಬ ವ್ಯಕ್ತಿ ಪದೇ ಪದೇ ಪೊಲೀಸರಿಗೆ ಕರೆ ಮಾಡಿ ನನ್ನ ಅಣ್ಣನನ್ನು ಕೊಂದಿದ್ದೇನೆ, ನನ್ನನ್ನು ಬಂಧಿಸಿ ಎಂದು ಹೇಳುತ್ತಿದ್ದ. ಅಲ್ಲದೇ ಅವನು ತನ್ನ ಸಹೋದರನ ದೇಹವನ್ನು ಅವನ ಮುಖದ ಮೇಲೆ ದಿಂಬಿನಿಂದ ಮುಚ್ಚಿಟ್ಟಿದ್ದ ಸ್ಥಳಕ್ಕೆ ಪೊಲೀಸರನ್ನು ಕರೆದೊಯ್ದ ಎಂದು ಮಾಧ್ಯಮಗಳು ವರದಿ ಮಾಡಿವೆ. 

ಡ್ರಗ್ಸ್‌ ಕೇಸಲ್ಲಿ ಜೈಲು ಸೇರಿದ ಪತಿಗೆ ಬೇಲ್‌ ಕೊಡಿಸಲು ಮಾದಕವಸ್ತು ಮಾರಾಟಕ್ಕಿಳಿದ ಪತ್ನಿ!
 

ಮೃತ ವ್ಯಕ್ತಿಯನ್ನು 48 ವರ್ಷ ಪ್ರಾಯದ ಮೃತರನ್ನು ದೇಬಶಿಶ್ ಚಕ್ರವರ್ತಿ (Debashis) ಎಂದು ಗುರುತಿಸಲಾಗಿದೆ. ದೇಬಾಶಿಸ್ ಮತ್ತು ಶುಭಾಷಿಶ್‌ ಇಬ್ಬರೂ ಜಾದವ್‌ಪುರದ ಸೆರಾಮಿಕ್ಸ್ ಇನ್‌ಸ್ಟಿಟ್ಯೂಟ್‌ನಲ್ಲಿ ಉದ್ಯೋಗಿಯಾಗಿದ್ದ ತಮ್ಮ ತಾಯಿಯೊಂದಿಗೆ ವಾಸಿಸುತ್ತಿದ್ದರು. ಅವರ ತಾಯಿಗೆ ನಿವೃತ್ತಿಯ ನಂತರ ರೂ 35,000 ಪಿಂಚಣಿ ಬರುತ್ತಿತ್ತು.  ಈಗ ಮೃತನಾಗಿರುವ ದೇಬಶಿಶ್ ಚಕ್ರವರ್ತಿ ಕೂಡ ಅದೇ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದರು. ಆದರೆ, ಕೆಲಸ ಮಾಡುವಾಗಲೇ ಅವರ ಕಣ್ಣುಗಳು ಹಾಳಾಗಿದ್ದರಿಂದ ಕೆಲಸ ಮುಂದುವರಿಸಲು ಸಾಧ್ಯವಾಗಲಿಲ್ಲ. ಅವರು ತಿಂಗಳಿಗೆ 15 ಸಾವಿರ ಪಿಂಚಣಿ ಪಡೆಯುತ್ತಿದ್ದರು. ಆದರೆ ಸಹೋದರನನ್ನು ಕೊಂದಿರುವೆ ಎಂದ ಶುಭಾಷಿಗಳು 2017 ರಿಂದಲೂ ನಿರುದ್ಯೋಗಿಯಾಗಿದ್ದ.

ಅಣ್ಣನ ಕೊಂದವನನ್ನು ಪ್ರೀತಿಸಿ, ಸಿನಿಮೀಯ ಶೈಲಿಯಲ್ಲಿ ಕೊಲ್ಲಲು ಯುವತಿ ಪ್ಲ್ಯಾನ್!

ಬಾಂಡ್‌ಸ್ರೋನಿಯ (Bandsroni) ಸೋನಾಲಿ ಪಾರ್ಕ್‌ನಲ್ಲಿ (Sonali Park) ಬಾಡಿಗೆ ಫ್ಲಾಟ್‌ನಲ್ಲಿ ಈ ಕುಟುಂಬ ವಾಸವಾಗಿತ್ತು. ಈ ನಡುವೆ ಕಳೆದ ಮೇನಲ್ಲಿ ಅವರ ತಾಯಿ ನಿಧನರಾಗಿದ್ದರು. ನಂತರ ಸಹೋದರರು ನಿರಂಜನ್ ಪಲ್ಲಿಯಲ್ಲಿರುವ (Niranjan Palli) ಸಣ್ಣ ಮನೆಗೆ ತೆರಳಿ ದೇಬಾಶಿಸ್ ಅವರ ಪಿಂಚಣಿ ಹಣ 15,000 ರೂಪಾಯಿಯಲ್ಲಿ ಮನೆ ನಡೆಸುತ್ತಿದ್ದರು. ಕೆಲವು ದಿನಗಳ ಹಿಂದೆ, ದೇಬಾಶಿಸ್ ಅವರು ತಮ್ಮ ಕಿರಿಯ ಸಹೋದರನಿಗೆ ಅವರು ಹೆಚ್ಚು ಕಾಲ ಬದುಕುವುದಿಲ್ಲ ಮತ್ತು  ಪಿಂಚಣಿ ಹಣವೂ ಬರುವುದು ನಿಲ್ಲುವುದು ಎಂದು ಹೇಳಿದ್ದರು. ಅಲ್ಲದೇ ತನ್ನ ಸಾವಿನ ನಂತರ ತನ್ನ ಸಹೋದರ ಹಸಿವಿನಿಂದ ಸಾಯಬಹುದು ಎಂದು ಅವರು ಭಯಪಟ್ಟರು.


ಹೀಗಾಗಿ ತನ್ನ ಸಾವಿನ ನಂತರ ಪೊಲೀಸರಿಗೆ ಹೋಗಿ ಕೊಲೆ ಮಾಡಿದ್ದಾಗಿ ಕಥೆ  ಹೇಳುವಂತೆ ದೇಬಾಶಿಸ್ ತನ್ನ ಕಿರಿಯ ಸಹೋದರ ಶುಭಾಷಿಗೆ ಹೇಳಿದ್ದ ಎನ್ನಲಾಗಿದೆ. ಕೊಲೆ ಪ್ರಕರಣದಲ್ಲಿ ಜೀವಾವಧಿ ಶಿಕ್ಷೆಗೆ ಗುರಿಯಾದರೆ, ಸರ್ಕಾರದ ಖರ್ಚಿನಲ್ಲಿ ಜೀವಮಾನವಿಡೀ ಜೈಲಿನಲ್ಲಿ ತಿಂದು ಬದುಕಬಹುದು ಎಂದು ಸಹೋದರನಿಗೆ ಹೇಳಿದ್ದ ಎನ್ನಲಾಗಿದೆ. ಅಣ್ಣನ ಮಾತು ಕೇಳಿದ ಸಹೋದರ ಆತನ ಸಾವಿನ ನಂತರ ಅದರಂತೆ ಮಾಡಿದ್ದಾನೆ. ಆದರೆ ಮೃತನ ಶವಪರೀಕ್ಷೆಯ ನಂತರ, ಅವನ ಸಾವು ಕೊಲೆಯಿಂದ ಸಂಭವಿಸಿಲ್ಲ. ಅವರು ಸ್ಟ್ರೋಕ್‌ನಿಂದ ಸಾವನ್ನಪ್ಪಿದ್ದಾರೆ ಎಂದು ಪೊಲೀಸರಿಗೆ ತಿಳಿದು ಬಂದಿದೆ.

click me!