
ಬೆಂಗಳೂರು (ಜೂ. 17): ಬೊಜ್ಜು ಕರಗಿಸುವ ಶಸ್ತ್ರ ಚಿಕಿತ್ಸೆ ವೇಳೆ ಕಿರುತೆರೆ ನಟಿ ಚೇತನಾ ರಾಜ್ (21) ಅನುಮಾನಾಸ್ಪದವಾಗಿ ಮೃತಪಟ್ಟಿದ್ದ ಘಟನೆ ದೇಶಾದ್ಯಂತ ಭಾರೀ ಸುದ್ದಿಯಾಗಿತ್ತು. ಈ ನಡುವೆ ದಂತ ಚಿಕಿತ್ಸೆಗೆಂದು ಹೋದ ನಟಿಯ ಮುಖವನ್ನೇ ವೈದ್ಯರು ವಿರೂಪಗೊಳಿಸಿರುವ ಘಟನೆ ನಡೆದಿದೆ. ಸ್ಯಾಂಡಲ್‌ವುಡ್ ನಟಿ ಸ್ವಾತಿ ಪಾಲಿಗೆ ಈಗ ದಂತ ವೈದ್ಯೆರೇ ವಿಲನ್ ಆಗಿದ್ದಾರೆ. ವೈದ್ಯರ ನಿರ್ಲಕ್ಷ್ಯದಿಂದ ಸಿನಿಮಾ ನಟಿಯ ಮುಖ ವಿರೂಪವಾಗಿದೆ. ಎಫ್ಐಆರ್ 6 ಟು 6 ಸೇರಿದಂತೆ ಹಲವು ಸಿನಿಮಾದಲ್ಲಿ ಸ್ವಾತಿ ನಟಿಸಿದ್ದಾರೆ. ಹಲ್ಲಿನ ಚಿಕಿತ್ಸೆಗಾಗಿ ಓರಿಕ್ಸ್ ಡೆಂಟಲ್ ಮಲ್ಟಿಸ್ಪೆಷಾಲಿಟಿ ಆಸ್ಪತ್ರೆಗೆ ನಟಿ ಸ್ವಾತಿ ಹೋಗಿದ್ದರು. ಚಿಕಿತ್ಸೆ ಪಡೆದ ಬಳಿಕ ಮುಖದಲ್ಲಿ ಊತ ಕಾಣಿಸಿಕೊಂಡು ವಿರೂಪವಾಗಿದೆ.
ಮುಖ ವಿರೂಪಗೊಂಡ ಬಳಿಕ ಮನೆಯಿಂದ ಹೊರಬರಲಾರದೆ ನಟಿ ತೊಂದರೆ ಅನುಭವಿಸುತ್ತಿದ್ದಾರೆ. ರೂಟ್ ಕ್ಯಾನಲ್‌ಗೆ ಎಂದು ಸ್ವಾತಿ ದಂತ ವೈದ್ಯರ ಬಳಿ ಹೋಗಿದ್ದರು. ಈ ವೇಳೆ ಈ ಘಟನೆ ನಡೆದಿದೆ. ಫೈ ಸ್ಟಾರ್ ರಿವ್ಯೂ ನೋಡಿ ಆಸ್ಪತ್ರೆಗೆ ಹೋಗಿದ್ದ ನಟಿಯಿಂದ ಈಗ ಸ್ಟಾರ್ ಆಗೋ ಭಾಗ್ಯ ಕಸಿದುಕೊಂಡಂತಾಗಿದೆ.
"
ಇದನ್ನೂ ಓದಿ: 1 ಲಕ್ಷ 60 ಸಾವಿರ ರೂ. ಫ್ಯಾಟ್ ಬರ್ನಿಂಗ್ ಆಪರೇಷ್; ಚೇತನಾಗೆ ಹಾರ್ಟ್ ಅಟ್ಯಾಕ್ ಆಗಿದ್ಯಾ?
ಚಿಕಿತ್ಸೆ ಪಡೆದ ಬಳಿಕ ಮುಖದಲ್ಲಿ ಭಾರಿ ಬದಲಾವಣೆಯಾಗಿತ್ತು. ಆದರೆ ಎರಡು ದಿನದಲ್ಲಿ ಊತ ಕಮ್ಮಿಯಾಗುತ್ತೆ ವೈದ್ಯರು ಹೆಳಿದ್ದರು ಎನ್ನಲಾಗಿದೆ. ಆದರೆ 20 ದಿನಗಳು ಕಳೆದರೂ ಮುಖ ಮೊದಲಿನಂತಾಗಲಿಲ್ಲ. ಒರಿಜಿನಲ್ ಫೇಸ್ ವಾಪಸ್ಸಾಗ್ಲೇ ಇಲ್ಲ ಅನ್ನೋ ನೋವನಲ್ಲಿದ್ದಾರೆ ನಟಿ.
ದಂತ ವೈದ್ಯೆಯ ಯಡವಟ್ಟಿನಿಂದ ಈಗ ನಟಿ ಅವಕಾಶ ಕಳೆದುಕೊಂಡಿದ್ದಾರೆ. ಸದ್ಯ ಕೆಲಸವಿಲ್ಲದೇ, ಸಿನಿಮಾದಲ್ಲೂ ನಟಿಸಲಾಗದೇ ನಟಿ ಸ್ವಾತಿ ಕಂಗಾಲಾಗಿದ್ದಾರೆ. ಸದ್ಯ ಬೇರೆ ಆಸ್ಪತ್ರೆಯಲ್ಲಿ ನಟಿ ಸ್ವಾತಿ ಟ್ರೀಟ್ಮೆಂಟ್ ಪಡೆದುಕೊಳ್ಳುತ್ತಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ