ಮೀನು ಹಿಡಿಯಲು ಹೋದ ಇಬ್ಬರು ಯವಕರು ಕಣ್ಮರೆಯಾದ ಘಟನೆ ಗುಬ್ಬಿ ತಾಲೂಕಿನ ಕಡಬ ಕೆರೆಯಲ್ಲಿ ನಡೆದಿದೆ. ತಡ ರಾತ್ರಿ ಯುವಕರು ಕೆರೆಯಲ್ಲಿ ಮೀನು ಹಿಡಿಯಲು ತೆರಳಿದ್ದಾಗ ಈ ದುರಂತ ನಡೆದಿದೆ.
ತುಮಕೂರು (ಜು.23): ಮೀನು ಹಿಡಿಯಲು ಹೋದ ಇಬ್ಬರು ಯವಕರು ಕಣ್ಮರೆಯಾದ ಘಟನೆ ಗುಬ್ಬಿ ತಾಲೂಕಿನ ಕಡಬ ಕೆರೆಯಲ್ಲಿ ನಡೆದಿದೆ. ತಡ ರಾತ್ರಿ ಯುವಕರು ಕೆರೆಯಲ್ಲಿ ಮೀನು ಹಿಡಿಯಲು ತೆರಳಿದ್ದಾಗ ಈ ದುರಂತ ನಡೆದಿದ್ದು, ಇಬ್ಬರು ಕೆರೆ ನೀರಿನಲ್ಲಿ ಮುಳುಗಿರುವ ಶಂಕೆ ವ್ಯಕ್ತವಾಗಿದೆ. ಹರೀಶ್(31) ಯೋಗೀಶ್ (36) ಕಣ್ಮರೆಯಾದ ಯುವಕರಾಗಿದ್ದು, ಗುಬ್ಬಿ ತಾಲ್ಲೂಕಿನ ಆಡುಗೊಂಡನಹಳ್ಳಿ ನಿವಾಸಿಗಳಾಗಿದ್ದಾರೆ. ಸ್ಥಳಕ್ಕೆ ಗುಬ್ಬಿ ಪೊಲಿಸರು ಭೇಟಿ ನೀಡಿದ್ದು, ನಾಪತ್ತೆಯಾದವರಿಗಾಗಿ ಕೆರೆಯಲ್ಲಿ ಶೋಧ ನಡೆಸಲಾಗುತ್ತಿದೆ. ಕೆರೆಯ ಬಳಿ ನೂರಾರು ಮಂದಿ ಗ್ರಾಮಸ್ಥರು ಜಮಾಯಿಸಿದ್ದಾರೆ.
ಟೊಂಕಾ ಮೀನುಗಾರಿಕಾ ಬಂದರಿನ ಸಮಸ್ಯೆ ನಿವಾರಿಸಿ: ಹೊನ್ನಾವರ ತಾಲೂಕಿನ ಕಾಸರಕೋಡ್ ಫಾರೆಸ್ಟ್ ಐಬಿಯಲ್ಲಿ ಸಚಿವ ಮಂಕಾಳ ವೈದ್ಯ ಅವರಿಗೆ ಇಲ್ಲಿನ ಟ್ರೋಲ್ ಬೋಟ್ ಮಾಲೀಕರ ಸಂಘದ ವತಿಯಿಂದ ಸನ್ಮಾನಿಸಲಾಯಿತು. ಈ ವೇಳೆ ಟೊಂಕಾ ಮೀನುಗಾರಿಕಾ ಬಂದರಿನ ಸಮಸ್ಯೆಗಳನ್ನು ಅತಿ ಶೀಘ್ರದಲ್ಲಿ ಪರಿಹರಿಸುವ ಕುರಿತು ಸಚಿವರಿಗೆ ಮನವಿ ಸಲ್ಲಿಸಿದರು. ಜಿಲ್ಲೆಯಲ್ಲಿ ಮೀನುಗಾರಿಕೆಗೆ ಪ್ರಸಿದ್ಧಿ ಪಡೆದ ಏಕೈಕ ಬಂದರಾಗಿದೆ. ಕಳೆದ 5 ದಶಕಗಳಿಂದ ಬಂದರಿನ ಅಭಿವೃದ್ಧಿಯ 2ನೇ ಹಂತದ ಕಾಮಗಾರಿ 2022ನೇ ಸಾಲಿನಲ್ಲಿ ಪೂರ್ತಿಗೊಂಡಿದೆ.
ಕಾಂಗ್ರೆಸ್ ಪಕ್ಷದಲ್ಲಿ ಯಾವುದೇ ಗೊಂದಲಗಳು ಇಲ್ಲ: ಮಾಜಿ ಸಂಸದ ಉಗ್ರಪ್ಪ
ತಾಲೂಕಿನಾದ್ಯಂತ ಸರ್ಕಾರದ ಅಂಕಿ-ಅಂಶಗಳ ಪ್ರಕಾರ ಸರಿ ಸುಮಾರು 26,000 ಮೀನುಗಾರರು ಅಧಿಕೃತವಾಗಿ ಮೀನುಗಾರಿಕೆಯ ಇಲಾಖೆಯಲ್ಲಿ ನೋಂದಣಿಯಾಗಿದ್ದು, ತಾಲೂಕಿನಲ್ಲಿಯೇ 1 ಲಕ್ಷಕ್ಕೂ ಅಧಿಕ ಮೀನುಗಾರರು ಪ್ರತ್ಯಕ್ಷ ಹಾಗೂ ಪರೋಕ್ಷವಾಗಿ ಮೀನುಗಾರಿಕೆಗೆ ಅವಲಂಬಿತರಾಗಿ ಜೀವನ ನಡೆಸುತ್ತಿದ್ದಾರೆ ಎಂದು ತಿಳಿಸಿದ್ದಾರೆ. ತಾಲೂಕಿನಾದ್ಯಂತ ಸಾಂಪ್ರದಾಯಿಕ, ಮೋಟಾರಿಕೃತ ಮತ್ತು ಯಾಂತ್ರೀಕೃತ ಮೀನುಗಾರಿಕೆ ಯಥೇಚ್ಛ ಪ್ರಮಾಣದಲ್ಲಿ ನಡೆಯುತ್ತಿದೆ.
ಪುತ್ತೂರಿನಲ್ಲಿ ಮತ್ತೆ ಹಿಂದುತ್ವ ವರ್ಸಸ್ ಬಿಜೆಪಿ ಮಧ್ಯೆ ಬಿಗ್ ಫೈಟ್!
ಆರ್ಥಿಕವಾಗಿ ಹಲವು ರೀತಿಯಲ್ಲಿ ಸರ್ಕಾರಕ್ಕೆ ಲಾಭ ತರುವಲ್ಲಿ ಯಶಸ್ವಿಯಾದ ಮೀನುಗಾರಿಕೆ ಉದ್ಯಮದ ಪ್ರಮುಖರಾದ ಮೀನುಗಾರರ ನಿರ್ಲಕ್ಷತನವೇ ಎನ್ನುವಂತೆ ಮೀನುಗಾರಿಕೆ ನಡೆಯುತ್ತಿದೆ ಎಂದು ಮನವಿಯಲ್ಲಿ ವಿವರಿಸಿದ್ದಾರೆ. ಸಮಗ್ರ ಮೀನುಗಾರರ ಪರವಾಗಿ ಅತಿ ಅವಶ್ಯವಾಗಿರುವ 9 ಬೇಡಿಕೆಗಳನ್ನು ಮನವಿಯಲ್ಲಿ ಪ್ರಸ್ತಾಪಿಸಿ, ಸರ್ಕಾರದ ಮಟ್ಟದಲ್ಲಿ ಶೀಘ್ರ ಪರಿಹರಿಸುವಂತೆ ಒತ್ತಾಯಿಸಿದ್ದಾರೆ. ಸಂಬಂಧಪಟ್ಟವರಿಗೆ ಸೂಕ್ತ ಮಾರ್ಗದರ್ಶನ ನೀಡಿ, ಮುಂದಿನ ಋುತುವಿನಲ್ಲಿ ಸಮರ್ಪಕ ಮೀನುಗಾರಿಕೆ ನಡೆಸಲು ಅನುವು ಮಾಡಿಕೊಡುವಂತೆ ಮನವಿಯಲ್ಲಿ ವಿನಂತಿಸಿದ್ದಾರೆ.