ತಾನು ಪ್ರೀತಿ ಮಾಡಿದ ಯುವಕ ಬೇರೊಂದು ಹುಡುಗಿಯೊಂದಿಗೆ ಸುತ್ತಾಡುವುದನ್ನು ನೋಡಿ, ಮನನೊಂದು ಇಲಿ ಪಾಷಾಣ ಸೇವಿಸಿ ಯುವತಿ ಸಾವನ್ನಪ್ಪಿದ ದುರ್ಘಟನೆ ಮೈಸೂರಿನಲ್ಲಿ ನಡೆದಿದೆ.
ಮೈಸೂರು (ಜು.23): ಪ್ರೀತಿ ಮಾಡೋದ್ ತಪ್ಪೇನಿಲ್ಲಾ.. ಎನ್ನುವ ರವಿಚಂದ್ರನ್ ಅವರ ಸಿನಿಮಾದ ಆಹಡನ್ನು ಕೇಳಿ ಪ್ರೀತಿ ಮಾಡಿದ ಎಷ್ಟೋ ಪ್ರೇಮಿಗಳು ಧೈರ್ಯವಾಗಿ ಮದುವೆಯಾಗಿ ಜೀವನ ಕಟ್ಟಿಕೊಂಡಿದ್ದಾರೆ. ಆದರೆ, ಇಲ್ಲೊಬ್ಬ ಯುವತಿ ತಾನು ಪ್ರೀತಿ ಮಾಡಿದ ಯುವಕ ಬೇರೊಂದು ಹುಡುಗಿಯೊಂದಿಗೆ ಸುತ್ತಾಡುವುದನ್ನು ನೋಡಿ ಸಹಿಸದೇ ಮನನೊಂದು ಇಲಿ ಪಾಷಾಣ ಸೇವಿಸಿ ಸಾವನ್ನಪ್ಪಿದ್ದ ದುರ್ಘಟನೆ ಮೈಸೂರಿನಲ್ಲಿ ನಡೆದಿದೆ.
ಪ್ರೀತಿಸಿದ ಹುಡುಗ ಮತ್ತೊಬ್ಬಳ ಹಿಂದೆ ಸುತ್ತಾಡಿದ ಹಿನ್ನಲೆಯಲ್ಲಿ ಡೆತ್ ನೋಟ್ ಬತೆದಿಟ್ಟು ಯುವತಿ ಆತ್ಮಹತ್ಯೆಗೆ ಯತ್ನಿಸಿದ್ದಳು. ಇಲ್ಲಿ ಪಾಷಾಣ ತಿಂದ ಯುವತಿಯನ್ನು ಆಸ್ಪತ್ರೆಗೆ ಸೇರಿಸಲಾಗಿತ್ತು. ಆದರೆ, ಈಗ ಚಿಕಿತ್ಸೆ ಫಲಕಾರಿಯಾಗದೇ ಯುವತಿ ಸಾವನ್ನಪ್ಪಿದ್ದಾಳೆ. ಮೈಸೂರು ಜಿಲ್ಲೆ ಕೆ.ಆರ್ ನಗರ ತಾಲೂಕಿನ ಗೌಡನಹಳ್ಳಿ ಗ್ರಾಮದಲ್ಲಿ ಘಟನೆ ನಡೆದಿದೆ. ಮೃತ ಯುವತಿ ನಿಸರ್ಗ(20) ಆಗಿದ್ದಾಳೆ. ಇನ್ನು ಮೃತ ಯುವತಿ ನಿಸರ್ಗ ಕೆ.ಆರ್. ನಗರದ ಪ್ರಥಮ ದರ್ಜೆ ಕಾಲೇಜಿನಲ್ಲಿ ಅಂತಿಮ ವರ್ಷದ ಬಿ.ಕಾಂ ವ್ಯಾಸಂಗ ಮಾಡುತ್ತಿದ್ದಳು.
ತನಗೆ ಮತ ಹಾಕದ ವ್ಯಕ್ತಿಗೆ ಚಪ್ಪಲಿಯಿಂದ ಹೊಡೆದ ಮಹಿಳೆ: ಇದೆಂಥಾ ಚುನಾವಣೆ!
ಕೈ ಕೊಯ್ದುಕೊಂಡು ಆತ್ಮಹತ್ಯಗೆ ಯತ್ನ: ಕಾಲೇಜಿನಲ್ಲಿ ಸುಹಾಸ್ ರೆಡ್ಡಿ ಎಂಬ ಯುವಕನನ್ನು ಪ್ರೀತಿ ಮಾಡುತ್ತಿದ್ದಳು. ಯುವಕ ಸುಹಾಸ್ ರೆಡ್ಡಿ ಹಾಗೂ ನಿಸರ್ಗ ಕಳೆದ ನಾಲ್ಕು ವರ್ಷಗಳ ಕಾಲ ಊರೂರು ಸುತ್ತಾಡಿದ್ದಾರೆ. ನಂತರ ಸುಹಾಸ್ ಗೆ ಬೇರೊಂದು ಹುಡುಗಿ ಜೊತೆಗೆ ಲವ್ ಆಗಿದೆ. ತಾನು ಪ್ರೀತಿಸಿ ಜೊತೆಗೆ ಸುತ್ತಾಡಿದ ಪ್ರಿಯಕರ ಬೇರೊಂದು ಹುಡುಗಿಯ ಹಿಂದೆ ಹೋಗಿದ್ದಕ್ಕೆ ಮನನೊಂದು ಮಾನಸಿಕವಾಗಿ ಖಿನ್ನತೆಗೊಳಗಾದ ನಿಸರ್ಗ, ಕೈ ಕೊಯ್ದುಕೊಂಡು ಸಮಾಜಿಕ ಜಾಲಾತಾಣದಲ್ಲಿ ಫೋಟೊ ಹಾಕಿದ್ದಳು. ಇದಾದ ನಂತರ ಆಕೆಯನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗಿತ್ತು.
ಮತ್ತೊಬ್ಬ ಹುಡುಗಿ ಪೋಷಕರೊಂದಿಗೆ ಗಲಾಟೆ: ಈ ಘಟನೆ ನಡೆದ ನಂತರವೂ ಸುಮ್ಮನಿರದ ಯುವತಿ ನಿಸರ್ಗ ತಮ್ಮ ಪ್ರೀತಿ ವಿಚಾರವನ್ನು ಇನ್ನೊಂದು ಹುಡುಗಿಯ ಪೋಷಕರಿಗೆ ತಿಳಿಸಿದ್ದರು. ಅವನು ತನ್ನನ್ನು ಪ್ರೀತಿಸುತ್ತಿದ್ದು, ನೀವು ನಿಮ್ಮ ಮಗಳ ಪ್ರೀತಿಗೆ ಸಪೋರ್ಟ್ ಮಾಡಬೇಡಿ ಎಂದು ಗಲಾಟೆ ಮಾಡಿದ್ದಳು. ಈ ವೇಳೆ ಇನ್ನೊಬ್ಬ ಯುವತಿಯ ಪೋಷಕರು ನಿಸರ್ಗಳಿಗೆ ಕೆಟ್ಟದಾಗಿ ನಿಂದಿಸಿ ಸಾಯುವಂತೆ ಪ್ರೇರಣೆ ಮಾಡಿದ್ದಾರೆ ಎಂದೂ ಡೆತ್‌ನೋಟ್‌ನಲ್ಲಿ ಆರೋಪ ಮಾಡಿದ್ದಾಳೆ. ಇನ್ನು ಯುವತಿ ಡೆತ್ ನೋಟ್ ಬರೆದು ಬ್ಯಾಗ್ ನಲಿಟ್ಟು ಆತ್ಮಹತ್ಯೆಗೆ ಶರಣಾಗಿದ್ದಾಳೆ.
Bengaluru: ಐಷಾರಾಮಿ ಜೀವನಕ್ಕೆ ಉದ್ಯೋಗವೇ ಬೇಡ, ಕಳ್ಳತನವೇ ಸಾಕು! ರಫೀಕ್‌ನ ಕಳ್ಳಾಟ ಬಯಲು
ಪ್ರೀತಿಸಿ ಸುತ್ತಾಡಿ ಕೈಕೊಟ್ಟ ಪ್ರಿಯಕರ ಪರಾರಿ: ಆತ್ಮಹತ್ಯೆ ಘಟನೆ ಕುರಿತು ಕೆ.ಆರ್ ಪೊಲೀಸ್ ಠಾಣೆಯಲ್ಲಿ ಎಫ್ ಐ ಆರ್ ದಾಖಲು ಆಗಿದೆ. ಪ್ರೀತಿಸಿದ ಯುವಕ ಸುಹಾಸ್ ರೆಡ್ಡಿ, ಮತ್ತೊಬ್ಬ ಯುವತಿಯ ಪೋಷಕರು ಸೇರಿದಂತೆ ಒಟ್ಟು 5 ಜನರ ವಿರುದ್ಧ ಎಫ್ಐಆರ್ ದಾಖಲು ಮಾಡಲಾಗಿದೆ. ನಿಸರ್ಗ ಆತ್ಮಹತ್ಯೆಗೆ ಯತ್ನಿಸುತ್ತಿದ್ದಂತೆ ಸುಹಾಸ್ ರೆಡ್ಡಿ ಪರಾರಿ ಆಗಿದ್ದಾನೆ. ತಲೆಮರಿಸಿಕೊಂಡಿರುವ ಸುಹಾಸ್ ರೆಡ್ಡಿ ಬಂಧನಕ್ಕೆ ಪೊಲೀಸರಿಂದ ಶೋಧ ಕಾರ್ಯಾಚರಣೆ ಮುಂದುವರೆಸಿದ್ದಾರೆ.