ಮುಂಬೈ ಪೊಲೀಸರ ಹೆಸರಿನಲ್ಲಿ ಸೈಬರ್ ವಂಚನೆ, ಬೆಂಗಳೂರಲ್ಲಿ ಎರಡು ಪ್ರತ್ಯೇಕ ಪ್ರಕರಣ ದಾಖಲು

By Suvarna NewsFirst Published Jan 13, 2023, 3:21 PM IST
Highlights

ಸೈಬರ್ ವಂಚಕರು ಮುಂಬೈ ಪೊಲೀಸರ ಸೋಗಿನಲ್ಲಿ ಹಣ ವಸೂಲಿ ಮಾಡುತ್ತಿರುವ ನಿದರ್ಶನಗಳು ಬೆಳಕಿಗೆ ಬಂದಿವೆ. ಈ ಬಗ್ಗೆ ಬೆಂಗಳೂರು ಪೂರ್ವ ವಿಭಾಗದ ಸೈಬರ್ ಕ್ರೈಮ್ ಠಾಣೆಯಲ್ಲಿ ಎರಡು ಪ್ರತ್ಯೇಕ ಪ್ರಕರಣಗಳು ದಾಖಲಾಗಿವೆ.

ಬೆಂಗಳೂರು (ಜ.13): ತಂತ್ರಜ್ಞಾನ ಮುಂದುವರೆದಷ್ಟು ಸೈಬರ್ ವಂಚಕರ ಹೊಸ ಹೊಸ ತಂತ್ರಗಳೂ ಬಯಲಾಗುತ್ತಲೇ ಇವೆ. ನೀವೇನಾದ್ರೂ ಪರಿಶೀಲಿಸಿ ಕಳಿಸಲಾದ ಕೊರಿಯರ್ ಬಗ್ಗೆ ಆಕ್ಷೇಪಣೆ ಹೇಳಿಕೊಂಡು ಯಾರಾದರೂ ಕರೆ ಮಾಡಿದರೆ, ನಂಬುವ ಮುನ್ನ ಎಚ್ಚರವಿರಲಿ. ವಿದೇಶಕ್ಕೆ ಕಳಿಸಿದ್ದ ಕೊರಿಯರ್ ನಲ್ಲಿ ಮಾದಕ ಪದಾರ್ಥ ಪತ್ತೆಯಾಗಿದೆ ಅಂತಾ ಬೆದರಿಸುವ ಸೈಬರ್ ವಂಚಕರು ಮುಂಬೈ ಪೊಲೀಸರ ಸೋಗಿನಲ್ಲಿ ಹಣ ವಸೂಲಿ ಮಾಡುತ್ತಿರುವ ನಿದರ್ಶನಗಳು ಬೆಳಕಿಗೆ ಬಂದಿವೆ. ಈ ಬಗ್ಗೆ ಬೆಂಗಳೂರು ಪೂರ್ವ ವಿಭಾಗದ ಸೈಬರ್ ಕ್ರೈಮ್ ಠಾಣೆಯಲ್ಲಿ ಎರಡು ಪ್ರತ್ಯೇಕ ಪ್ರಕರಣಗಳು ದಾಖಲಾಗಿವೆ.

ಮನೆಯಲ್ಲಿ ಮಾರಕಾಸ್ತ್ರ ಹಿಡಿದು ನಿಂತಿದ್ದ ರಾಬರ್ಸ್: ಸಿನಿಮೀಯ ರೀತಿಯಲ್ಲಿ ಸೆರೆಯಾಗಿದ್ದು ಹೇಗೆ?

ಕೋಮಲ್ ಎಂಬುವವರಿಗೆ ಜನವರಿ 6ರಂದು ಕರೆ ಮಾಡಿದ್ದ ಸೈಬರ್ ವಂಚಕರು ಮೊದಲು 'ತಾವು ಕೊರಿಯರ್ ಕಂಪನಿಯವರು, ನೀವು ತೈವಾನ್ ಗೆ ಕಳಿಸಿದ್ದ ಕೊರಿಯರ್ ನಲ್ಲಿ ಗಾಂಜಾ, ಹಾಗೂ ಹಣ ಪತ್ತೆಯಾಗಿದೆ' ಎಂದು ಬೆದರಿಸಿದ್ದಾರೆ. ಕೆಲವೇ ನಿಮಿಷಗಳಲ್ಲಿ ತಾವು ಮುಂಬೈ ಪೊಲೀಸರೆಂದು ಹೇಳಿಕೊಂಡು ಕರೆ ಮಾಡಿದ್ದ ಅದೇ ಖದೀಮರು, 'ನಿಮ್ಮ ವಿರುದ್ಧ ಪ್ರಕರಣ ದಾಖಲಾಗುತ್ತಿದೆ, ಇಲ್ಲವಾದಲ್ಲಿ ಹಣ ಪಾವತಿಸಬೇಕು ಎಂದು ಬೆದರಿಸಿ' 1.50 ಲಕ್ಷ ರೂಗಳನ್ನ ತಮ್ಮ ಖಾತೆಗೆ ವರ್ಗಾಯಿಸಿಕೊಂಡಿದ್ದಾರೆ.

Meesho ಆ್ಯಪ್ ನಲ್ಲಿ ಒಂದು ಟೀ ಶರ್ಟ್ ಬುಕ್ ಮಾಡಿ 10 ಲಕ್ಷ ಕಳೆದುಕೊಂಡ ಮಹಿಳೆ!

ಇದೇ ಮಾದರಿಯಲ್ಲಿ ಡಿಸೆಂಬರ್ 15ರಂದು ಪೂಜಾ ಎಂಬಾಕೆಗೆ ಕರೆ ಮಾಡಿದ್ದ ಆರೋಪಿಗಳು, ಬೆದರಿಸಿ 67 ಸಾವಿರ ವರ್ಗಾಯಿಸಿಕೊಂಡಿರುವುದು ಸಹ ಬೆಳಕಿಗೆ ಬಂದಿದೆ. ಸದ್ಯ ಪೂರ್ವ ವಿಭಾಗದ ಸೈಬರ್ ಕ್ರೈಮ್ ಠಾಣೆಯಲ್ಲಿ ಈ ಎರಡೂ ಪ್ರತ್ಯೇಕ ಪ್ರಕರಣಗಳು ದಾಖಲಾಗಿದ್ದು, ತನಿಖೆ ನಡೆಸಲಾಗುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.

click me!