Meesho ಆ್ಯಪ್ ನಲ್ಲಿ ಒಂದು ಟೀ ಶರ್ಟ್ ಬುಕ್ ಮಾಡಿ 10 ಲಕ್ಷ ಕಳೆದುಕೊಂಡ ಮಹಿಳೆ!

By Gowthami KFirst Published Jan 13, 2023, 1:29 PM IST
Highlights

Meesho ಆ್ಯಪ್ ನಲ್ಲಿ ಒಂದು ಟೀ ಶರ್ಟ್ ಬುಕ್ ಮಾಡಿದ್ದ ಮಹಿಳೆಯೊಬ್ಬರು 10 ಲಕ್ಷ ರೂ ಕಳೆದುಕೊಂಡಿರುವ ಘಟನೆ ನಡೆದಿದೆ. ಲಾಟರಿ ಹೆಸರಲ್ಲಿ ಮಹಿಳೆಗೆ ಖದೀಮರು ಲಕ್ಷ-ಲಕ್ಷ ಪಂಗನಾಮ ಹಾಕಿದ್ದಾರೆ.

ಬೆಂಗಳೂರು (ಜ.13): Meesho ಆ್ಯಪ್ ನಲ್ಲಿ ಒಂದು ಟೀ ಶರ್ಟ್ ಬುಕ್ ಮಾಡಿದ್ದ ಮಹಿಳೆಯೊಬ್ಬರು 10 ಲಕ್ಷ ರೂ ಕಳೆದುಕೊಂಡಿರುವ ಘಟನೆ ನಡೆದಿದೆ. ಲಾಟರಿ ಹೆಸರಲ್ಲಿ ಮಹಿಳೆಗೆ ಖದೀಮರು ಲಕ್ಷ-ಲಕ್ಷ ಪಂಗನಾಮ ಹಾಕಿದ್ದಾರೆ. ಅರುಣ ಎಂಬ ಮಹಿಳೆಗೆ ವಂಚಿಸಿರುವ ಆನ್ಲೈನ್ ಖದೀಮರು ಲಾಟರಿಯಲ್ಲಿ ಕಾರು ಬಂದಿದೆ ಎಂದು ಪತ್ರ ಕಳುಹಿದ್ದರು. ಟೀ ಶರ್ಟ್ ಜೊತೆ ವಂಚಕರು  ಪೋಸ್ಟ್ ಕಾರ್ಡ್, ಸ್ಕ್ರಾಚ್ ಕಾರ್ಡ್, ಲೇಟರ್  ಕಳುಹಿಸಿದ್ದರು. ಲೇಟರ್ ನಲ್ಲಿ ಲಾಟರಿ ಮೂಲಕ ಕಾರು ಬಹುಮಾನ ಬಂದಿದೆ ಎಂದು ವಂಚಕರು ಬಿಂಬಿಸಿದ್ದರು. ಅಚ್ಚ ಕನ್ನಡದಲ್ಲಿ ಮಾತನಾಡಿ ಮಹಿಳೆಗೆ  ಸೈಬರ್ ಚೋರರು ಯಾಮಾರಿಸಿದ್ದರು.

ಇದನ್ನು ನಂಬಿದ ಮಹಿಳೆ ಅರುಣಾ ಪತ್ರದಲ್ಲಿದ್ದ ಸಂಖ್ಯೆಗೆ ವಾಟ್ಸ್ ಆ್ಯಪ್ ನಲ್ಲಿ ಮೆಸೇಜ್ ಮಾಡಿದ್ದರು. ಆ ಕಡೆಯಿಂದ ಕಾರು, ಬೇಕೋ ಹಣ ಬೇಕೋ ಎಂದು ವಂಚಕರು ಕೇಳಿದ್ದರು. ಆರ್ಥಿಕ ಸಮಸ್ಯೆ ಇರುವ ಕಾರಣ ಕಾರಿನ ಬದಲು ಹಣ ನೀಡಿ  ಎಂದು ಅರುಣ ಉತ್ತರಿಸಿದ್ದರು.

ಅಕ್ರಮವಾಗಿ ಪೆಂಗೋಲಿಯನ್ ಚಿಪ್ಪು ಸಾಗಾಟ: 25 ಲಕ್ಷ ಬೆಲೆ ಬಾಳುವ ಚಿಪ್ಪು ವಶ

ಮೊದಲಿಗೆ ಪ್ರೊಸೆಸಿಂಗ್ ಫೀ ಎಂದು 14,800 ರೂ ಕಳುಹಿಸುವಂತೆ ವಂಚಕರು ಹೇಳಿದ್ದರು. ನಂತರ 40 ಸಾವಿರ ಹಣ ಬರುತ್ತದೆ ಇತರೆ ಫೀಜ್ ಕಟ್ಟಿ ಎಂದು ಬರೋಬ್ಬರಿ 10 ಲಕ್ಷ ವಂಚಿಸಿದ್ದಾರೆ. ಇದೀಗ ಹಣ ಕಳೆದುಕೊಂಡು ಕಂಗಾಲಾಗಿರುವ ಮಹಿಳೆ ಸದ್ಯ ವಿದ್ಯಾರಣ್ಯಪುರದ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

ಮನೆಯಲ್ಲಿ ಮಾರಕಾಸ್ತ್ರ ಹಿಡಿದು ನಿಂತಿದ್ದ ರಾಬರ್ಸ್: ಸಿನಿಮೀಯ ರೀತಿಯಲ್ಲಿ ಸೆರೆಯಾಗಿದ್ದು ಹೇಗೆ?

ಇದೇ ರೀತಿಯಾಗಿ ಯಲಹಂಕದ ವ್ಯಕ್ತಿಯೊಬ್ಬರಿಗೆ  ಖದೀಮರು  ವಂಚಿಸಿರುವ ಪ್ರಕರಣ ಬೆಳಕಿಗೆ ಬಂದಿದೆ. ನೊಂದ ಮಹಿಳೆಯಿಂದ ಈಶಾನ್ಯ ವಿಭಾಗದ ಸಿಇಎನ್ ಠಾಣೆಯಲ್ಲಿ ದೂರು ದಾಖಲಾಗಿದೆ.

 

click me!