
ಬೆಂಗಳೂರು (ಜ.13): ಅತಿಯಾಸೆಗೆ ಬಿದ್ರೆ ಏನೆಲ್ಲಾ ಆಗುತ್ತೆ ಎಂಬುದಕ್ಕೆ ಇಲ್ಲಿ ನಡೆದಿರುವ ಘಟನೆಯೇ ಸಾಕ್ಷಿಯಾಗಿದೆ. ವಿದ್ಯಾರಾಣ್ಯಪುರ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದ್ದು, ಮಿಶೋ ಎಂಬ ಆನ್ಲೈನ್ ಆ್ಯಪ್ ನಲ್ಲಿ ಅರುಣಾ ಎಂಬುವವರು ಒಂದು ಟೀ ಶರ್ಟ್ ಬುಕ್ ಮಾಡಿದ್ದರು. ಬುಕ್ ಮಾಡಿದ ಕೆಲ ದಿನಗಳಲ್ಲೇ ಟೀ ಶರ್ಟ್ ಜೊತೆಗೆ ಲೆಟರ್,ಸ್ಕ್ರಾಚ್ ಕಾರ್ಡ್ ಸಹ ಬಂದಿತ್ತು. ಲೆಟರ್ ಪರಿಶೀಲಿಸಿದಾಗ ಲಾಟರಿ ಮುಖಾಂತರವಾಗಿ ನಿಮಗೆ ಕಾರು ಬಂದಿದೆ ಎಂದು ಬರೆದಿತ್ತು. ಇದನ್ನು ಗಮನಿಸಿದ್ದ ಮಹಿಳೆ ಪತ್ರದಲ್ಲಿ ಇದ್ದ ವಾಟ್ಸ್ ಆ್ಯಪ್(whatsap no) ಸಂಖ್ಯೆಗೆ ಮೆಸೇಜ್ ಮಾಡಿದ್ದಾರೆ. ಇಲ್ಲೇ ನೋಡಿ ಮಹಿಳೆ ಯಾಮಾರಿದ್ದು.
ಮಹಿಳೆ ರಿಪ್ಲೈಗಾಗಿ ಕಾದು ಕುಳಿತ್ತಿದ್ದ ಆನ್ಕೈನ್ ವಂಚಕರು ಅಚ್ಚ ಕನ್ನಡದಲ್ಲಿ ಮಾತನಾಡಿ ಮಹಿಳೆಗೆ ಉಂಡೆನಾಮ ಹಾಕಿದ್ದಾರೆ. ನಿಮಗೆ ಲಾಟರಿ ಮೂಲಕ ಕಾರು ಬಹುಮಾನ ಬಂದಿದೆ. ನಿಮಗೆ ಕಾರು ಬೇಕೋ ಹಣ ಬೇಕೋ ಎಂದು ಕೇಳಿದ್ದಾರೆ. ಮೊದಲೇ ಆರ್ಥಿಕ ಸಮಸ್ಯೆಯಲ್ಲಿದ್ದ ಮಹಿಳೆ ಕಾರಿನ ಬದಲು ಹಣ ನೀಡಿ ಎಂದಿದ್ದರು.
Ola Scooty Scam: ಓಲಾ ಸ್ಕೂಟಿ ಹೆಸರಲ್ಲಿ ಆನ್‌ಲೈನ್ ವಂಚನೆ: ಬೆಂಗಳೂರು ಸೇರಿ ದೇಶಾದ್ಯಂತ 20 ಮಂದಿ ಬಂಧನ
ಇದನ್ನೇ ಬಂಡವಾಳ ಮಾಡಿಕೊಂಡ ಚೋರರು ಮೊದಲಿಗೆ ಪ್ರೊಸೆಸಿಂಗ್ ಫೀ(Processing Fee) ಎಂದು 14.800 ರೂ ಕಳುಹಿಸಲು ಹೇಳಿದ್ದರು. ಇವರ ಮಾತನ್ನು ನಂಬಿದ್ದ ಮಹಿಳೆ ಹಣ ಕಳುಹಿಸಿದ ನಂತರ ಮತ್ತೆ ಮತ್ತೆ ಕರೆ ಮಾಡಿ ನಿಮಗೆ ಇಂಟರ್ ನ್ಯಾಶನಲ್ ಬ್ಯಾಂಕ್(International Bank) ನಿಂದ ಹಣ ಡಬ್ಬಲ್ ಆಗಿದೆ. ನಿಮ್ಮ ಅಕೌಂಟ್ ಗೆ 40 ಲಕ್ಷ ಹಣ ಬರುತ್ತದೆ. ಹೀಗಾಗಿ ಇತರೆ ಫೀಜ್ ಕಟ್ಟಿ ಎಂದು ಬರೋಬ್ಬರಿ 10 ಲಕ್ಷ ಹಣ ಹಾಕಿಸಿಕೊಂಡಿದ್ದಾರೆ.
ಇಷ್ಟು ದಿನವಾದ್ರೂ ಹಣ ಬರದಿರುವುದರಿಂದ ಅನುಮಾನಗೊಂಡ ಮಹಿಳೆ ಪೊಲೀಸರನ್ನು ಸಂಪರ್ಕಿಸಿದ್ದಾರೆ. ಆಗಾ ಇದು ಆನ್ ಲೈನ್ ವಂಚನೆ ಜಾಲ ಎಂಬುದು ಗೊತ್ತಾಗಿದ್ದು, ಮಹಿಳೆ ಸದ್ಯ ಕಂಗಾಲಾಗಿದ್ದಾರೆ. ಸದ್ಯ ಇದೇ ರೀತಿ ಯಲಹಂಕದ ವ್ಯಕ್ತಿಯೊಬ್ಬರಿಗೆ 80 ಸಾವಿರ ರೂಪಾಯಿ ವಂಚಿಸಿರುವ ಮಾಹಿತಿ ಸಹ ಲಭ್ಯವಾಗಿದೆ. ಈಗ ನೊಂದ ಮಹಿಳೆ ಈಶಾನ್ಯ ವಿಭಾಗ ಸಿಇಎನ್ ಠಾಣೆ(CEN police station)ಯಲ್ಲಿ ದೂರು ದಾಖಲಿಸಿದ್ದು, ಪೊಲೀಸರು ತನಿಖೆ ಮುಂದುವರೆಸಿದ್ದಾರೆ.
ಭಾರತೀಯ ಮಕ್ಕಳು ಆನ್‌ಲೈನ್ ವಂಚನೆ ಬಲಿಯಾಗುವ ಸಾಧ್ಯತೆ ಹೆಚ್ಚು: McAfee 2022 ವರದಿ
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ