ಮಾದಕ ವಸ್ತು ಮಾರಾಟ: ಇಬ್ಬರು ನೈಜೀ​ರಿಯಾ ಪ್ರಜೆ​ಗ​ಳ ಬಂಧನ

Published : Feb 24, 2021, 09:52 AM IST
ಮಾದಕ ವಸ್ತು ಮಾರಾಟ: ಇಬ್ಬರು ನೈಜೀ​ರಿಯಾ ಪ್ರಜೆ​ಗ​ಳ ಬಂಧನ

ಸಾರಾಂಶ

ಎಕ್ಸ್‌ಟಸಿ ಮಾರುತ್ತಿದ್ದ ವಿದೇಶಿಗರ ಬಂಧನ| ಆರೋಪಿಗಳಿಂದ 56 ಎಕ್ಸ್‌ಟಸಿ ಮಾತ್ರೆ​ ಜಪ್ತಿ| ಇಂದಿ​ರಾ​ನ​ಗ​ರದ ಮೆಟ್ರೋ ಸಮೀ​ಪ​ದಲ್ಲಿ ಗ್ರಾಹ​ಕ​ರಿಗೆ ಮಾದ​ಕ ವಸ್ತು ನೀಡಲು ಬಂದಿ​ದ್ದ ಆರೋ​ಪಿ​ಗಳು| ವಿದ್ಯಾರ್ಥಿ ವೀಸಾ​ದಡಿ ಬೆಂಗ​ಳೂ​ರಿಗೆ ಬಂದಿ​ರುವ ಆರೋ​ಪಿ​ಗಳು| 

ಬೆಂಗಳೂರು(ಫೆ.24): ಮಾದಕ ವಸ್ತು ಮಾರಾಟ ಮಾಡುತ್ತಿದ್ದ ಆರೋಪದ ಮೇರೆಗೆ ಇಬ್ಬರು ನೈಜೀ​ರಿಯಾ ಪ್ರಜೆ​ಗ​ಳನ್ನು ಕೇಂದ್ರ ಅಪ​ರಾಧ ವಿಭಾಗ (ಸಿಸಿಬಿ) ಪೊಲೀ​ಸರು ಬಂಧಿ​ಸಿ​ದ್ದಾ​ರೆ.

ನೈಜೀರಿಯಾ ಮೂಲದ ಚುಕ್ವೂ ಇಮೆ​ಕ್‌​(24) ಮತ್ತು ಆ್ಯಮ್‌ ಸಿಲಮ್‌ ಚಿರೋ​ಜ್‌​(35) ಬಂಧಿ​ತರು. ಆರೋಪಿಗಳಿಂದ 56 ಎಕ್ಸ್‌ಟಸಿ ಮಾತ್ರೆ​ ಜಪ್ತಿ ಮಾಡಲಾಗಿದೆ ಎಂದು ಸಿಸಿಬಿ ಪೊಲೀಸರು ಹೇಳಿದ್ದಾರೆ. ಇಂದಿ​ರಾ​ನ​ಗ​ರದ ಮೆಟ್ರೋ ಸಮೀ​ಪ​ದಲ್ಲಿ ಆರೋ​ಪಿ​ಗಳು ಗ್ರಾಹ​ಕ​ರಿಗೆ ಮಾದ​ಕ ವಸ್ತು ನೀಡಲು ಬಂದಿ​ದ್ದರು. ಈ ಖಚಿತ ಮಾಹಿತಿ ಮೇರೆಗೆ ದಾಳಿ ನಡೆಸಿ ಬಂಧಿ​ಸ​ಲಾ​ಗಿದೆ.

ಡ್ರಗ್ ಸೀಝ್: ಬಿಜೆಪಿ ಮುಖಂಡನಿಗೆ ಸಮನ್ಸ್

ವಿದ್ಯಾರ್ಥಿ ವೀಸಾ​ದಡಿ ಬೆಂಗ​ಳೂ​ರಿಗೆ ಬಂದಿ​ರುವ ಆರೋ​ಪಿ​ಗಳು, ವೀಸಾ ಅವಧಿ ಮುಗಿ​ದರೂ ಅಕ್ರ​ಮ​ವಾಗಿ ವಾಸ​ವಾ​ಗಿ​ದ್ದಾರೆ. ಈ ಹಿಂದೆ ಡ್ರಗ್ಸ್‌ ಪ್ರಕ​ರ​ಣ​ದಲ್ಲಿ ಬಂಧ​ನ​ಕ್ಕೊ​ಳ​ಗಾದ ಕೆಲ ನೈಜೀ​ರಿಯಾ ಪ್ರಜೆ​ಗಳ ಜತೆ ಶಾಮೀ​ಲಾ​ಗಿ​ರುವ ಮಾಹಿತಿ ಸಿಕ್ಕಿ​ದೆ ಎಂದು ಸಿಸಿ​ಬಿ ಪೊಲೀ​ಸರು ತಿಳಿಸಿದ್ದಾರೆ. ಈ ಸಂಬಂಧ ಇಂದಿ​ರಾ​ನ​ಗರ ಠಾಣೆ​ಯಲ್ಲಿ ಪ್ರಕ​ರಣ ದಾಖ​ಲಾ​ಗಿ​ದೆ.
 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

click me!

Recommended Stories

ಗೆಳತಿಯ ತಡೆಯಲು ಕಾರಿನ ರೂಫ್‌ ಮೇಲೆ ಹತ್ತಿದ.. ಆದರೆ ಆಕೆಯ ಪ್ರಿಯಕರ ಆತನ ಮೇಲೆ ಕಾರು ಹತ್ತಿಸಿದ
Shivamogga: 14 ವರ್ಷ ಜೈಲು ಶಿಕ್ಷೆ ಅನುಭವಿಸಿದ್ರು ಬದಲಾಗಲಿಲ್ಲ; ತಂದೆಯನ್ನು ಕೊಲೆಗೈದು ಬಾವಿಗೆ ಎಸೆದ ಮಗ!