
ಬೆಂಗಳೂರು(ಫೆ.24): ಕೇಂದ್ರ ಸರ್ಕಾರದ ತ್ರಿವಳಿ ತಲಾಖ್ ರದ್ದು, ರಾಮ ಜನ್ಮ ಭೂಮಿ ತೀರ್ಪು ಹಾಗೂ ಎನ್‌ಆರ್‌ಸಿ ಕಾಯ್ದೆಯಿಂದ ಆಕ್ರೋಶಗೊಂಡು ದೇಶದಲ್ಲಿ ಅಶಾಂತಿ ಸೃಷ್ಟಿಸುವ ಉದ್ದೇಶದಿಂದಲೇ ಪಿಎಫ್‌ಐ ಮತ್ತು ಎಸ್‌ಡಿಪಿಐ ಕಾರ್ಯಕರ್ತರು ಸಂಚು ರೂಪಿಸಿ ಡಿ.ಜೆ.ಹಳ್ಳಿ ಮತ್ತು ಕೆ.ಜಿ.ಹಳ್ಳಿಯಲ್ಲಿ ಗಲಭೆ ಸೃಷ್ಟಿಸಿದ್ದಾರೆ ಎಂದು ರಾಷ್ಟ್ರೀಯ ತನಿಖಾ ದಳ (ಎನ್‌ಐಎ) ದೋಷಾರೋಪ ಪಟ್ಟಿಯಲ್ಲಿ ಹೇಳಿದೆ.
ದೇಶದಲ್ಲಿ ಅಶಾಂತಿ ಸೃಷ್ಟಿಸಲು ಎಸ್‌ಡಿಪಿಐ ಹಾಗೂ ಪಿಎಫ್‌ಐ ಕಾರ್ಯಕರ್ತರು ಸಂಚು ರೂಪಿಸಿದ್ದರು. ಅದೇ ಸಮಯಕ್ಕೆ ಮುಸ್ಲಿಂ ಸಮುದಾಯವನ್ನು ಕೆರಳಿಸುವ ವಿವಾದ್ಮತಕ ಪೋಸ್ಟ್ ಮಾಡಿದ್ದನ್ನೇ ಹಿನ್ನೆಲೆಯಾಗಿ ಇಟ್ಟುಕೊಂಡು ಗಲಭೆ ಸೃಷ್ಟಿಸಲಾಗಿದೆ ಎಂದು ತಿಳಿಸಿದ್ದಾರೆ.
ಎನ್‌ಆರ್‌ಸಿ, ಸಿಎಎ ಮತ್ತು ಅಯೋಧ್ಯಾ ವಿರುದ್ಧ ಅತೃಪ್ತರಾಗಿದ್ದ ಕಿಡಿಗೇಡಿಗಳು ಶಾಂತಿ ಕದಡಲು ಸಂಚು ರೂಪಿಸಿದ್ದರು. ಪ್ರಮುಖ ಆರೋಪಿ ಫೈರೋಜ್ ಪಾಷಾ ತನ್ನ ಸಹಚರರ ಜತೆ ಸೇರಿ ಸಂಚು ರೂಪಿಸಿದ್ದ. ಫೇಸ್‌ಬುಕ್‌ನಲ್ಲಿ ಹಿಂದು ದೇವರನ್ನು ಅವಮಾನಿಸುವ ವಿವಾದಾತ್ಮಕ ಫೋಸ್ಟ್‌ಗಳನ್ನು ಅಪ್‌ಲೋಡ್ ಮಾಡಿ ಹಿಂದುಗಳಿಗೆ ಪ್ರಚೋದನೆ ನೀಡಲು ನಿರ್ಧಾರ ಮಾಡಿದ್ದರು.
ಕಾಂಗ್ರೆಸ್ ನಾಯಕನಿಗೆ ಬೇಲ್: ಮನೆಯನ್ನೇ ಸುಟ್ಟವರು, ನನ್ನನ್ನು ಸುಡದೆ ಬಿಡ್ತಾರಾ ಎಂದ ಶಾಸಕ
ಕಳೆದ 2020ರ ಆಗಸ್ಟ್‌ನಲ್ಲಿ 11ರಂದು ಕೃಷ್ಣ ಜನ್ಮಾಷ್ಟಮಿ ದಿನವನ್ನೇ ನಿಗದಿ ಮಾಡಿದ್ದರು. ಅಂದು ಮಧ್ಯಾಹ್ನ ಒಂದು ಗಂಟೆ ಸುಮಾರಿಗೆ ವಿವಾದಾತ್ಮಕ ವಿಡಿಯೋ ತುಣುಕನ್ನು ಫೈರೋಜ್ ಪಾಷಾ ಫೇಸ್‌ಬುಕ್‌ಗೆ ಅಪ್‌ಲೋಡ್ ಮಾಡಿ ಅವಾಚ್ಯವಾಗಿ ಕಮೆಂಟ್ ಹಾಕಿದ್ದ. ಕಮೆಂಟನ್ನು ಕಾಂಗ್ರೆಸ್ ಶಾಸಕ ಅಖಂಡ ಶ್ರೀನಿವಾಸಮೂರ್ತಿ ಅವರ ಸಹೋದರ ಸಂಬಂಧಿ ನವೀನ್‌ಗೆ ಟ್ಯಾಗ್ ಮಾಡಿದ್ದ.
ಇದಕ್ಕೆ ಪ್ರತಿಕ್ರಿಯೆ ನೀಡಲು ಹೋಗಿ ನವೀನ್, ವಿವಾದಾತ್ಮಕ ಕಾರ್ಟೂನ್ ಪೋಸ್ಟ್ ಮಾಡಿದ್ದ. ಆಗ ಪೂರ್ವ ಸಂಚಿನಂತೆ ಕಿಡಿಗೇಡಿಗಳು ರಾಜಕೀಯ ವಿರೋಧಿಗಳನ್ನು ಮುಗಿಸಲು ಮತ್ತು ಗಲಭೆ ಸೃಷ್ಟಿಸಿದ್ದರು. ಧರ್ಮದ ರಕ್ಷಣೆಗೆ ಪ್ರಾಣ ತ್ಯಾಗ ಮಾಡಬೇಕು, ಎಂಬಿತ್ಯಾದಿ ಧಾರ್ಮಿಕ ಭಾವನೆಗಳನ್ನು ಒಂದು ವರ್ಗದ ಸಮುದಾಯವರದಲ್ಲಿ ಹುಟ್ಟು ಹಾಕಿದ್ದರು.
ಈ ಪೋಸ್ಟ್ ಮಾಡಿದ ನವೀನ್, ಶಾಸಕ ಅಖಂಡ ಶ್ರೀನಿವಾಸಮೂರ್ತಿ ಮತ್ತು ಮುಸ್ಲಿಂ ಧರ್ಮದ ವಿಷಯಕ್ಕೆ ಬರುವ ಹಿಂದುಗಳಿಗೆ ಬುದ್ಧಿ ಕಲಿಸಬೇಕು ಎಂದು ಹೇಳುವ ಸಮುದಾಯದ ಸಾವಿರಾರು ಜನರು ಬರುವಂತೆ ನೋಡಿಕೊಂಡಿದ್ದರು. ಬಳಿಕ ಮೊದಲೇ ಸಂಚು ರೂಪಿಸಿದಂತೆ ಶಾಸಕರ ನಿವಾಸ, ಕಲ್ಲು ತೂರಾಟ, ಠಾಣೆಗಳಿಗೆ ಬೆಂಕಿ ಹಚ್ಚಿ ಗಲಭೆ ಸೃಷ್ಟಿಸಿದ್ದರು ಎಂದು ಎನ್‌ಐಎ ಈ ಹಿಂದೆ ಸಲ್ಲಿರುವ ಚಾಜ್‌ರ್‍ಶೀಟ್‌ನಲ್ಲಿ ಉಲ್ಲೇಖಿಸಿರುವುದು ಬೆಳಕಿಗೆ ಬಂದಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ