ಘಟನೆ ಸಂಬಂದ ಮದ್ದೂರು ಪೊಲೀಸರು ಮೃತರ ಎರಡು ಕುಟುಂಬಗಳು ನೀಡಿದ ದೂರಿನ ಅನ್ವಯ ಪ್ರಕರಣ ದಾಖಲು ಮಾಡಿಕೊಂಡು ಮುಂದಿನ ತನಿಖೆ ಕೈಗೊಂಡಿದ್ದಾರೆ. ಮಂಡ್ಯ ಜಿಲ್ಲಾ ಆಸ್ಪತ್ರೆಯಲ್ಲಿ ಸೃಷ್ಟಿಯ ಮರಣೋತ್ತರ ಪರೀಕ್ಷೆ ನಡೆಸಲಾಯಿತು.
ಮದ್ದೂರು(ಡಿ.18): ಅನೈತಿಕ ಸಂಬಂಧ ಕುಟುಂಬದವರಿಗೆ ಗೊತ್ತಾದ ಹಿನ್ನೆಲೆಯಲ್ಲಿ ವಿವಾಹಿತರಿಬ್ಬರು ಭಯಗೊಂಡು ಆತ್ಮಹತ್ಯೆಗೆ ಶರಣಾಗಿರುವ ಘಟನೆ ತಾಲೂಕಿನಲ್ಲಿ ಜರುಗಿದೆ. ತಾಲೂಕಿನ ಕೆ.ಬೆಳ್ಳೂರು ಗ್ರಾಮದ ಸೃಷ್ಟಿ (20) ಶಿಂಷಾ ನದಿಗೆ ಹಾರಿ ಸಾವನ್ನಪ್ಪಿದ್ದರೆ, ಬನಹಳ್ಳಿಯ ಪ್ರಸನ್ನ (25) ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ.
ಕೆ.ಬೆಳ್ಳೂರು ಗ್ರಾಮದ ಸೃಷ್ಟಿಯನ್ನು ಆತಗೂರು ಹೋಬಳಿ ಯರಗನಹಳ್ಳಿಯ ದಿನೇಶ್ ಅವರಿಗೆ ಕಳೆದ ಒಂದೂವರೆ ವರ್ಷದ ಹಿಂದೆ ವಿವಾಹ ಮಾಡಿಕೊಡಲಾಗಿತ್ತು. ನಂತರ ದಂಪತಿ ನಡುವೆ ಹೊಂದಾಣಿಕೆ ಇಲ್ಲದ ಕಾರಣ ನಾಲೈದು ಬಾರಿ ಜಗಳ ನಡೆದಿತ್ತು. ನಂತರ ದಿನೇಶನನ್ನು ತೊರೆದ ಸೃಷ್ಟಿ ಬನ್ನಹಳ್ಳಿಯ ಪ್ರಸನ್ನನೊಂದಿಗೆ ಅನೈತಿಕ ಸಂಬಂಧ ಹೊಂದಿದ್ದಳು ಎನ್ನಲಾಗಿದೆ.
undefined
ಚುಚ್ಚಿ ಕೊಂದ ಚಿರಂಜೀವಿ, ಚಿನ್ನದಂಥ ಗಂಡನಿದ್ದರೂ ವಾಟ್ಸಪ್ ಪ್ರೇಮಿಗೆ ಬಲಿಯಾದ ತೃಪ್ತಿ!
ಈ ವಿಚಾರ ಎರಡು ಕುಟುಂಬಗಳಿಗೆ ಗೊತ್ತಾದ ಹಿನ್ನೆಲೆಯಲ್ಲಿ ಸೃಷ್ಟಿ ನಾಪತ್ತೆಯಾಗಿದ್ದಳು. ಪತ್ನಿ ನಾಪತ್ತೆಯಾದ ಬಗ್ಗೆ ಗಂಡ ದಿನೇಶ್ ಕೆಸ್ತೂರು ಪೊಲೀಸರಿಗೆ ದೂರು ನೀಡಿದ್ದರು. ತನ್ನ ಹಾಗೂ ಪ್ರಸನ್ನ ನಡುವಿನ ಅನೈತಿಕ ಸಂಬಂಧ ಎರಡು ಕುಟುಂಬಗಳಿಗೆ ಬಹಿರಂಗವಾದ ಕಾರಣ ಭೀತಿಗೊಂಡ ಸೃಷ್ಟಿ ಶಿಂಷಾ ನದಿಗೆ ಹಾರಿ ಆತ್ಮಹತ್ಯೆ ಮಾಡಿ ಕೊಂಡಿದ್ದಾಳೆ.
ಈಕೆಯ ಶವ ಮದ್ದೂರು ತಾಲೂಕು ವೈದ್ಯನಾಥಪುರ ಗ್ರಾಮದ ಬಳಿ ಕೊಳೆತ ಸ್ಥಿತಿಯಲ್ಲಿ ಸೋಮವಾರ ಸಂಜೆ ಪತ್ತೆಯಾಗಿದೆ. ಸೃಷ್ಟಿ ಸಾವನ್ನಪ್ಪಿದ ವಿಚಾರ ತಿಳಿಯುತ್ತಲೇ ಆಕೆಯೊಂದಿಗೆ ಅಕ್ರಮ ಸಂಬಂಧ ಹೊಂದಿದ್ದ ಪ್ರಸನ್ನ ಸಹ ಬನ್ನಹಳ್ಳಿಯ ತನ್ನ ಮನೆಯಲ್ಲಿ ಸೋಮವಾರ ರಾತ್ರಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ.
ಘಟನೆ ಸಂಬಂದ ಮದ್ದೂರು ಪೊಲೀಸರು ಮೃತರ ಎರಡು ಕುಟುಂಬಗಳು ನೀಡಿದ ದೂರಿನ ಅನ್ವಯ ಪ್ರಕರಣ ದಾಖಲು ಮಾಡಿಕೊಂಡು ಮುಂದಿನ ತನಿಖೆ ಕೈಗೊಂಡಿದ್ದಾರೆ. ಮಂಡ್ಯ ಜಿಲ್ಲಾ ಆಸ್ಪತ್ರೆಯಲ್ಲಿ ಸೃಷ್ಟಿಯ ಮರಣೋತ್ತರ ಪರೀಕ್ಷೆ ನಡೆಸಲಾಯಿತು. ಮದ್ದೂರು ಸಾರ್ವಜನಿಕ ಆಸ್ಪತ್ರೆಯಲ್ಲಿ ಪ್ರಸನ್ನ ಶವ ಪರೀಕ್ಷೆ ನಂತರ ಇಬ್ಬರ ಶವಗಳನ್ನು ವಾರಸುದಾರರ ವಶಕ್ಕೆ ಒಪ್ಪಿಸಲಾಯಿತು.
ಮಂಡ್ಯ: ಅನೈತಿಕ ಸಂಬಂಧ ಶಂಕೆ, ಮಾರಕಾಸ್ತ್ರಗಳಿಂದ ಕೊಚ್ಚಿ ವ್ಯಕ್ತಿಯ ಬರ್ಬರ ಹತ್ಯೆ
ಮಂಡ್ಯ: ವ್ಯಕ್ತಿಯೊಬ್ಬನನ್ನ ಬರ್ಬರ ಹತ್ಯೆಗೈದ ಘಟನೆ ಜಿಲ್ಲೆಯ KRS ಗ್ರಾಮದಲ್ಲಿ ಡಿ.12 ರಂದು ನಡೆದಿತ್ತು. ಅನೈತಿಕ ಸಂಬಂಧ ಶಂಕೆ ವ್ಯಕ್ತವಾದ ಹಿನ್ನೆಲೆಯಲ್ಲಿ ವ್ಯಕ್ತಿಯನ್ನ ಬರ್ಬರ ಹತ್ಯೆ ಮಾಡಲಾಗಿತ್ತು. ಕೆಆರ್ ನಗರ ಮೂಲದ ಚೇತನ್(40) ಮೃತ ದುರ್ದೈವಿ.
ಕೊಲೆಯಾದ ಚೇತನ್ ಶ್ರೀರಂಗಪಟ್ಟಣದ ಬೋರೆಆನಂದೂರು ಗ್ರಾಮದ ಯುವತಿ ಜೊತೆ ಮದುವೆಯಾಗಿ KRSನಲ್ಲಿ ವಾಸವಾಗಿದ್ದ. ಕಳೆದ 7-8 ವರ್ಷಗಳಿಂದ KRSನಲ್ಲಿ ಚೇತನ್ ಬೇಕರಿಯೊಂದನ್ನ ನಡೆಸುತ್ತಿದ್ದ. ಸಂತೋಷ್ ಎಂಬ ಯುವಕನ ಪ್ರೇಯಸಿ ಜೊತೆಗೆ ಚೇತನ್ ಅಕ್ರಮ ಸಂಬಂಧ ಇಟ್ಟುಕೊಂಡಿದ್ದ. ಸಾಕಷ್ಟು ಬಾರಿ ಇದೇ ವಿಚಾರಕ್ಕೆ ಚೇತನ್ ಹಾಗೂ ಸಂತೋಷ್ ನಡುವೆ ಕಿರಿಕ್ ನಡೆದಿತ್ತು.
ಅಮ್ಮ-ಮಗಳು ಇಬ್ಬರಿಗೂ ಅವನೇ ಬೇಕು! ಅಡ್ಡಿಯಾಗಿದ್ದ ಯಜಮಾನನಿಗೆ ಮುಹೂರ್ತ ಇಟ್ಟರು!
ಕಡೆಗೆ ಚೇತನ್ ಹತ್ಯೆಗೆ ಸಂತೋಷ್ ನಿರ್ಧರಿಸಿದ್ದ. ಇಂದು ಸಂಜೆ 5:40ರ ಸಮಯದಲ್ಲಿ ಸ್ನೇಹಿತನ ಜೊತೆಗೂಡಿ ಚೇತನ್ ಮೇಲೆ ಮಾರಕಾಸ್ತ್ರಗಳಿಂದ ಸಂತೋಷ್ ಹಲ್ಲೆ ನಡೆಸಿದ್ದಾನೆ. ಬೇಕರಿ ಮುಂಭಾಗವೇ ಚೇತನ್ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿ ಸಂತೋಷ್ ಪರಾರಿಯಾಗಿದ್ದನು.
ತೀವ್ರವಾಗಿ ಗಾಯಗೊಂಡು ರಕ್ತದ ಮಡುವಿನಲ್ಲಿ ಬಿದ್ದಿದ್ದ ಚೇತನ್‌ನನ್ನು ಆಸ್ಪತ್ರೆ ದಾಖಲಿಸಿದರೂ ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದನು. ಆರೋಪಿಗಳಿಗಾಗಿ ಪೊಲೀಸರು ಶೋಧಕಾರ್ಯ ಆರಂಭಿಸಿದ್ದಾರೆ. KRS ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿತ್ತು.