ಅಯ್ಯಪ್ಪ ಮಾಲೆ ಧರಿಸಿ ವಂಚನೆ; ಆರೋಪಿಗಳನ್ನು ಹಿಡಿದು ಪೊಲೀಸರಿಗೆ ಒಪ್ಪಿಸಿದ ಸಾರ್ವಜನಿಕರು!

By Ravi Janekal  |  First Published Dec 8, 2023, 9:58 AM IST

ಅಯ್ಯಪ್ಪ ಮಾಲೆ ಧರಿಸಿ ಜನರಿಂದ ದೇಣಿಗೆ ಸಂಗ್ರಹಿಸುವ ಮೂಲಕ ವಂಚಿಸುತ್ತಿದ್ದ ನಕಲಿ ಅಯ್ಯಪ್ಪ ಮಾಲಾಧಾರಿಗಳನ್ನು ಸಾರ್ವಜನಿಕರು ಹಿಡಿದು ಪೊಲೀಸರಿಗೆ ಒಪ್ಪಿಸಿದ ಘಟನೆ ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲೂಕಿನ ನಿಡ್ಲೆ ಗ್ರಾಮದಲ್ಲಿ ನಡೆದಿದೆ.


ಬೆಳ್ತಂಗಡಿ (ಡಿ.8): ಅಯ್ಯಪ್ಪ ಮಾಲೆ ಧರಿಸಿ ಜನರಿಂದ ದೇಣಿಗೆ ಸಂಗ್ರಹಿಸುವ ಮೂಲಕ ವಂಚಿಸುತ್ತಿದ್ದ ನಕಲಿ ಅಯ್ಯಪ್ಪ ಮಾಲಾಧಾರಿಗಳನ್ನು ಸಾರ್ವಜನಿಕರು ಹಿಡಿದು ಪೊಲೀಸರಿಗೆ ಒಪ್ಪಿಸಿದ ಘಟನೆ ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲೂಕಿನ ನಿಡ್ಲೆ ಗ್ರಾಮದಲ್ಲಿ ನಡೆದಿದೆ.

ಇಬ್ಬರು ಯುವಕರಿಂದ ವಂಚನೆ. ಬೆಂಗಳೂರು ಮೂಲದ ಸ್ವಾಮಿ ವಿವೇಕಾನಂದ ಸೊಷಿಯಲ್ ಸರ್ವಿಸ್ ಟ್ರಸ್ಟ್ (ರಿ) ಹೆಸರಿನಲ್ಲಿ ವಂಚಿಸುತ್ತಿದ್ದ ಆರೋಪಿಗಳು. ಈಗಾಗಲೇ ಹಲವು ಜನರಿಂದ ದೇಣಿಗೆ ಸಂಗ್ರಹಿಸಿದ್ದರು. ನಿನ್ನೆ ನಿಡ್ಲೆ ಗ್ರಾಮದ ಧನುಷ್ ಎಂಬುವವರಲ್ಲಿ ದೇಣಿಗೆ ಕೇಳಿದಾಗ ಅನುಮಾನಗೊಂಡಿರುವ ಧನುಷ್ ಆರೋಪಿಗಳು ನಡೆಸುತ್ತಿರುವ ಟ್ರಸ್ಟ್ ಬಗ್ಗೆ ಮಾಹಿತಿ ಕೇಳಿದ್ದಾನೆ. ಸಂಸ್ಥೆಯದ್ದೆಂದು ಹೇಳಲಾದ ಮೊಬೈಲ್ ನಂಬರ್‌ಗೆ ಕರೆ ಮಾಡಿ ವಿಚಾರಣೆ ನಡೆಸಿದ್ದ ಧನುಷ್ ಈ ವೇಳೆ ಬಯಲಾದ ಆರೋಪಿಗಳ ಕೃತ್ಯ. 

Tap to resize

Latest Videos

ಆನ್‌ಲೈನ್‌ನಲ್ಲಿ ಹಣ ವರ್ಗಾಯಿಸುವೆ ಎಂದು ನಂಬಿಸಿ ₹50,000 ಟೋಪಿ!

ಆ ಸಂಸ್ಥೆಯವರು ಯಾರನ್ನೂ ಸಾರ್ವಜನಿಕರಿಂದ ದೇಣಿಗೆ ಸಂಗ್ರಹಿಸಲು ಕಳಿಸಿಲ್ಲವೆಂದು ಧನುಷ್ ಕರೆಮಾಡಿದಾಗ ಸ್ಪಷ್ಟಪಡಿಸಿದ್ದಾರೆ. ಇದರಿಂದ ಅನುಮಾನಗೊಂಡು ಇನ್ನಷ್ಟು ಪ್ರಶ್ನೆ ಮಾಡಿರುವ ಯುವಕ. ಆರೋಪಿಗಳು ನಕಲಿ ಟ್ರಸ್ಟ್ ಮೂಲಕ ದೇಣಿಗೆ ಸಂಗ್ರಹಿಸುತ್ತಿರುವ ಕೃತ್ಯ ಬಯಲಾಗಿದೆ. ಸಾರ್ವಜನಿಕರು ಪೊಲೀಸರಿಗೆ ಕರೆ ಮಾಡಿ ಸ್ಥಳಕ್ಕೆ ಕರೆಸಿಕೊಂಡು ಆರೋಪಿಗಳನ್ನು ಪೊಲೀಸರಿಗೆ ಒಪ್ಪಿಸಿದ್ದಾರೆ. ಯುವಕರನ್ನು ವಶಕ್ಕೆ ಪಡೆದುಕೊಂಡು ಸದ್ಯ ವಂಚನೆ ಕೇಸ್ ಸಂಬಂಧ ಧರ್ಮಸ್ಥಳ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿ ವಿಚಾರಣೆ ಮುಂದುವರಿಸಿರುವ ಪೊಲೀಸರು.

ರಾಜ್ಯದ ಪ್ರಪ್ರಥಮ ವಿಧಾನಸಭಾ ಶಾಸಕರ ಕುಟುಂಬಕ್ಕೆ ತುತ್ತು ಅನ್ನಕ್ಕೂ ಗತಿಯಿಲ್ಲ: ಸರಳ್ಳತನಕ್ಕಿಳಿದ ಮೊಮ್ಮಗ

click me!