ದಾವಣಗೆರೆಯಲ್ಲಿ ಹುಲಿ ಉಗುರು ಮಾರಾಟ, ಬೆಂಗಳೂರಿನ ಇಬ್ಬರು ಸೇರಿ 7 ಜನರು ಬಂಧನ

Published : Dec 08, 2023, 05:37 AM IST
ದಾವಣಗೆರೆಯಲ್ಲಿ ಹುಲಿ ಉಗುರು ಮಾರಾಟ, ಬೆಂಗಳೂರಿನ ಇಬ್ಬರು ಸೇರಿ 7 ಜನರು ಬಂಧನ

ಸಾರಾಂಶ

ಎಂಡಿಎಂಎ ಮಾದಕ ವಸ್ತು ಹಾಗೂ ಹುಲಿ ಉಗುರು ಮಾರಾಟ ಮಾಡುತ್ತಿದ್ದ ಬೆಂಗಳೂರಿ ಇಬ್ಬರು ಸೇರಿ 7 ಮಂದಿ ಆರೋಪಿಗಳನ್ನು ದಾವಣಗೆರೆ ಪೊಲೀಸರು ಬಂಧಿಸಿದ್ದಾರೆ. ಆರೋಪಿಗಳಿಂದ ₹7.20 ಲಕ್ಷ ಮೌಲ್ಯದ 40 ಗ್ರಾಂ ಎಂಡಿಎಂಎ ಮಾದಕ ವಸ್ತು, 6 ಹುಲಿ ಉಗುರುಗಳು ಹಾಗೂ ಒಂದು ಕಾರನ್ನು ದಾವಣಗೆರೆ ಸಿಇಎನ್ ಅಪರಾಧ ಪೊಲೀಸರು ಜಪ್ತಿ ಮಾಡಿದ್ದಾರೆ.

ದಾವಣಗೆರೆ (ಡಿ.8)  :  ಎಂಡಿಎಂಎ ಮಾದಕ ವಸ್ತು ಹಾಗೂ ಹುಲಿ ಉಗುರು ಮಾರಾಟ ಮಾಡುತ್ತಿದ್ದ ಬೆಂಗಳೂರಿ ಇಬ್ಬರು ಸೇರಿ 7 ಮಂದಿ ಆರೋಪಿಗಳನ್ನು ದಾವಣಗೆರೆ ಪೊಲೀಸರು ಬಂಧಿಸಿದ್ದಾರೆ. ಆರೋಪಿಗಳಿಂದ ₹7.20 ಲಕ್ಷ ಮೌಲ್ಯದ 40 ಗ್ರಾಂ ಎಂಡಿಎಂಎ ಮಾದಕ ವಸ್ತು, 6 ಹುಲಿ ಉಗುರುಗಳು ಹಾಗೂ ಒಂದು ಕಾರನ್ನು ದಾವಣಗೆರೆ ಸಿಇಎನ್ ಅಪರಾಧ ಪೊಲೀಸರು ಜಪ್ತಿ ಮಾಡಿದ್ದಾರೆ.

ತುಮಕೂರು ಜಿಲ್ಲೆ ಕೆರೆಯಾಗಲ ಚಿಕ್ಕೇನಹಳ್ಳಿಯ ಮೂಲದ, ಹಾಲಿ ದಾವಣಗೆರೆ ಬಾಲಾಜಿ ನಗರದ ಷೇರು ಮಾರ್ಕೆಟ್‌ ಟ್ರೇಡಿಂಗ್‌ನ ಎಸ್‌.ಅಶೋಕ ಕುಮಾರ(27 ವರ್ಷ), ಆರ್‌ಎಂಸಿ ಲಿಂಕ್ ರಸ್ತೆಯ ವಾಸಿ, ಮೂಲತಃ ರಾಜಸ್ಥಾನದ ಬಾಲೋತ್ರ ಜಿಲ್ಲೆಯ ರಮೇಶ ಕುಮಾರ ಗಾಂಸಿ(39), ಆರ್‌ಎಂಸಿ ಲಿಂಕ್ ರಸ್ತೆಯ ಎಂ.ಆರ್.ಲೋಕೇಶ(40), ವಿನೋಬನಗರ ಕಾರು ಚಾಲಕ ಕಾರ್ತಿಕ್‌(32), ನಿಜಲಿಂಗಪ್ಪ ಬಡಾವಣೆಯ ಕಾರ್ಪೆಂಟರ್‌ ರಾಮರತನ್‌ ಅಲಿಯಾಸ್‌ ನೌರತನ್‌(34), ರಾಜಸ್ಥಾನದ ಸ್ಯಾಂಚೋರು ಜಿಲ್ಲೆ, ಹಾಲಿ ಬೆಂಗಳೂರು ಬಸವೇಶ್ವರ ಬಡಾವಣೆ ವಾಸಿ ಸ್ಟೀಲ್ ರೀಲಿಂಗ್ ಕೆಲಸಗಾರ ಸುನಿಲಕುಮಾರ(28), ಅದೇ ರಾಜ್ಯದವನಾದ ಬೆಂಗಳೂರು ಕೊಡಿಗೆಹಳ್ಳಿ ಸ್ಟ್ರೀಲ್ ಸ್ಕ್ರ್ಯಾಪ್ ವ್ಯಾಪಾರಿ ಅಶೋಕಕುಮಾರ(23) ಬಂಧಿತ ಆರೋಪಿಗಳು.

ಹಾಡಹಗಲೇ ಮನೆ ಬೀಗಮುರಿದು ಕಳ್ಳತನ ಮಾಡುತ್ತಿದ್ದ ಇಬ್ಬರು ಖದೀಮರು ಅರೆಸ್ಟ್

ದಾವಣಗೆರೆ ಜಿ.ಮಲ್ಲಿಕಾರ್ಜುನಪ್ಪ ಬಡಾವಣೆಯ ಎನ್‌ಎಚ್‌ 48 ಸರ್ವೀಸ್ ರಸ್ತೆ ಕಡೆಯಿಂದ ಮಯೂರ ಗ್ಲೋಬಲ್ ಶಾಲೆ ಕಡೆಗೆ ಹೋಗುವ ಮಾರ್ಗದಲ್ಲಿ ಮಾದಕ ವಸ್ತು ಮಾರುತ್ತಿರುವ ಬಗ್ಗೆ ದೊರೆತ ಖಚಿತ ಮಾಹಿತಿ ಆಧರಿಸಿ ಪೊಲೀಸರು ದಾಳಿ ಮಾಡಿದ್ದಾರೆ. ಈ ವೇಳೆ ಒಬ್ಬನನ್ನು ಬಂಧಿಸಿ ಮೊಬೈಲ್ ವಶಪಡಿಸಿಕೊಂಡು, ಆರೋಪಿತನ ಮಾಹಿತಿ ಮೇರೆಗೆ ಬೆಂಗಳೂರಿನ ಬಸವೇಶ್ವರ ಬಡಾವಣೆ 2ನೇ ಹಂತ, 4ನೇ ಮುಖ್ಯರಸ್ತೆ, 5ನೇ ತಿರುವಿನ ಮನೆಯ ಮೇಲೆ ಶೋಧನಾ ವಾರೆಂಟ್ ಪಡೆದು, ದಾಳಿ ಮಾಡಿದ್ದರು.

ಜನಪ್ರಿಯ ಧಾರವಾಹಿಗಳಲ್ಲಿ ನಟಿಸಿ ಇದೀಗ ಹೀರೋ ಆಗಲು ಹೋಗಿ ಜೈಲು ಸೇರಿದ ನಟ!

ಬೆಂಗಳೂರಿನ ಮನೆಯಲ್ಲಿದ್ದ ಇಬ್ಬರು ಆರೋಪಿಗಳನ್ನು ಬಂಧಿಸಿ, ಎಂಡಿಎಂಎ ಮತ್ತು 6 ಹುಲಿ ಉಗುರು ಹಾಗೂ 2 ಮೊಬೈಲ್‌ಗಳನ್ನು ಜಪ್ತಿ ಮಾಡಲಾಗಿದೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಎರಡು ಮಕ್ಕಳ ತಾಯಿ ಸಹವಾಸ ಮಾಡಿ ಮಸಣ ಸೇರಿದ ಯುವಕ: ತಾಯಿಯ ಲೀವಿಂಗ್ ಪಾರ್ಟನರ್ ಕತೆ ಮುಗಿಸಿದ ಅಮ್ಮ ಮಕ್ಕಳು
ರಿಯಲ್ ಎಸ್ಟೇಟ್ ಉದ್ಯಮಿಯ ಬರ್ಬರ ಹತ್ಯೆ: ಮಗ ಓದುತ್ತಿದ್ದ ಶಾಲೆಯ ಮುಂದೆಯೇ ಕೃತ್ಯ