ಹಣದ ವ್ಯವಹಾರ ತಾಯಿ ಮಕ್ಕಳು ಮತ್ತು ಅಣ್ಣತಮ್ಮಂದಿರನ್ನು ಬೇರೆ ಮಾಡುತ್ತದೆ ಅನ್ನೋ ಮಾತಿಗೆ ಈ ಪ್ರಕರಣ ಮತ್ತೊಮ್ಮೆ ಸಾಕ್ಷಿಯಾಗಿದೆ. ಕರಾಟೆ ಪಟುವಾಗಿ ಸಾಕಷ್ಟು ಜನರಿಗೆ ಕರಾಟೆ ಕಲಿಸುವ ಮೂಲಕ ಸಮಾಜದಲ್ಲಿ ಒಳ್ಳೆಯ ಹೆಸರು ಮಾಡಿದ್ದ ಆರೋಪಿ ಕಟ್ಟೆಸ್ವಾಮಿ ಇದೀಗ ಹಣ ವಾಪಸ್ ನೀಡ ಹಿನ್ನೆಲೆ ಹುಸೇನಪ್ಪ ಅವರನ್ನು ಕೊಲೆ ಮಾಡಿ ಜೈಲು ಸೇರಿದ್ದಾನೆ.
ನರಸಿಂಹ ಮೂರ್ತಿ ಕುಲಕರ್ಣ
ಬಳ್ಳಾರಿ(ಡಿ.09): ಇದು ದೃಶ್ಯಂ ಸಿನಿಮಾದ ಮಾದರಿಯ ಮರ್ಡರ್ ಸ್ಟೋರಿ. ಇಲ್ಲಿ ಜೊತೆಗಿದ್ದ ಸಂಬಂಧಿಕರೇ ಮರ್ಡರ್ ಮಾಡಿರುತ್ತಾರೆ. ಆದರೆ ಯಾರು ಮಾಡಿದ್ದಾರೆ.? ಯಾಕೆ ಮಾಡಿದ್ದಾರೆ ಅನ್ನೊದೇ ದೊಡ್ಡ ಯಕ್ಷ ಪ್ರಶ್ನೆಯಾಗಿತ್ತು. ಕೆಲಸಕ್ಕೆಂದು ಹೊರಟಿದ್ದ ಕೆಎಸ್ಆರ್ಟಿಸಿ ಸಿಬ್ಬಂದಿ ಯೊಬ್ಬರನ್ನು ವ್ಯಕ್ತಿಯೊಬ್ಬ ಸ್ನೇಹಿತನ ಜೊತೆ ಸೇರಿ ಕೊಲೆ ಮಾಡಿದ್ದನು. ಆದರೆ ಕೊಲೆ ಯಾಕೆ ನಡೆದಿತ್ತು. ಅನ್ನೋದು ಮಾತ್ರ ಸಾಕಷ್ಟು ನಿಗೂಢತೆಯಿಂದ ಕೂಡಿತ್ತು. ನಾಲ್ಕು ತಿಂಗಳ ಬಳಿಕ ದೊರೆತ ಸಣ್ಣ ಕ್ಲೂ ಒಂದರಿಂದ ಆರೋಪಿಗಳಿಬ್ಬರನ್ನು ಬಂಧಿಸುವಲ್ಲಿ ಬಳ್ಳಾರಿ ಪೊಲೀಸರು ಯಶಸ್ವಿಯಾಗಿದ್ದಾರೆ.
undefined
ಸಿಸಿ ಟಿವಿ ದೃಶ್ಯವಿದ್ರೂ ಅಸ್ಪಷ್ಟತೆ ಹಿನ್ನಲೆ ತನಿಖೆ ವಿಳಂಬ
ಕೊಲೆ ಮಾಡುತ್ತಿರೋ ದೃಶ್ಯ ಸಿಸಿ ಟಿವಿಯಲ್ಲಿ ಸೆರೆಯಾದ್ರೂ ಆರೋಪಿ ಯಾರು ಎಂದು ಕಂಡು ಹಿಡಿಯಲು ಪೊಲೀಸರು ಹರಸಾಹಸ ಪಡಬೇಕಾಯ್ತು… ಕೊಲೆಯಾದ ಬಳಿಕ ಆರೋಪಿಗಳು ಜೊತೆಗಿದ್ರು ಕೊಲೆಗಾರರು ಯಾರು ಎಂದು ಕಂಡು ಹಿಡಿಯಲು ಆಗದಂಗೆ ಮ್ಯಾನೇಜ್ ಮಾಡಿದ್ರಂತೆ ಹಂತಕರು..
ಬೆಂಗಳೂರು: ಮಾರಕಾಸ್ತ್ರದಿಂದ ಕೊಚ್ಚಿ ಆಟೋ ಚಾಲಕನ ಹತ್ಯೆಗೈದ ದುಷ್ಕರ್ಮಿಗಳು
ಹೌದು, ಹೀಗೆ ರಕ್ತ ಸಿಕ್ತ ದೇಹದಲ್ಲಿ ಬಿದ್ದಿರೋ ಇವರ ಹೆಸರು ಹುಸೇನಪ್ಪ. ಬಳ್ಳಾರಿಯ ಕೆಎಸ್ಆರ್ಟಿಸಿ ಡಿಪೋದಲ್ಲಿ ಕೆಲಸ ಮಾಡುತ್ತಿದ್ರು. ಎಂದಿನಂತೆ ಆಗಸ್ಟ್ ಆರನೇ ತಾರಿಖು ಮನೆಯಿಂದ ಕೆಲಸಕ್ಕೆಂದು ಹೊರಟಿದ್ರು. ಆದರೆ ಅದೇನಾಯ್ತು ಗೊತ್ತಿಲ್ಲ. ಬಳ್ಳಾರಿ ಜೈಲು ಪಕ್ಕದ ರಸ್ತೆಯಲ್ಲಿ ಬಂದ ಇಬ್ಬರು ಹುಸೇನಪ್ಪ ಗಾಡಿಗೆ ಡಿಕ್ಕಿ ಹೊಡೆಯುತ್ತಾರೆ. ಕೆಳಗೆ ಬಿದ್ದ ಹುಸೇನಪ್ಪ ಮೇಲೆ ರಾಡ್ ನಿಂದ ಹೊಡೆದು ಕೊಲೆ ಮಾಡುತ್ತಾರೆ. ಕೊಲೆಯ ದೃಶ್ಯ ಸಿಸಿ ಟಿವಿಯಲ್ಲಿ ಸೆರೆಯಾದ್ರೂ ಅಸ್ಟಷ್ಟ ಮಾಹಿತಿ ಹಿನ್ನೆಲೆ ಕೊಲೆಗಾರರನ್ನು ಪತ್ತೆ ಮಾಡೋದು ದೊಡ್ಡ ಹರಸಾಹಸವಾಗಿತ್ತು. ಇಬ್ಬರು ಹೆಂಡತಿಯರನ್ನು ಹೊಂದಿದ್ದ ಹಿನ್ನೆಲೆ ಹುಸೇನಪ್ಪ ಸಾವಿನ ಬಗ್ಗೆ ಆಸ್ತಿಯ ವಿವಾದದ ಹಿನ್ನೆಲೆ ನಡೆದಿರಬಹುದೆಂದು ಅನುಮಾನ ವ್ಯಕ್ತವಾಗಿತ್ತಾದ್ರೂ ಕೊಲೆಗೆ ಮತ್ತೊಂದೇ ಕಾರಣ ಎನ್ನುವುದು ಇದೀಗ ಬಹಿರಂಗವಾಗಿದೆ. ಆದರೆ ಮನೆಯವರು ಮಾತ್ರ ಕೊಲೆಗೆ ಯಾರ ಮೇಲೂ ಅನುಮಾನವಿಲ್ಲ ಎನ್ನುತ್ತಿದ್ದರು.
ಹಣದ ವಹಿವಾಟೇ ಕೊಲೆಗೆ ಕಾರಣವಾಯ್ತು..
ಇನ್ನೂ ಕೊಲೆಯಾದ ಹುಸೇನಪ್ಪ ತನ್ನ ಅಳಿಯ ಹೊನ್ನೂರು ಸ್ವಾಮಿ ಮೂಲಕ ದೂರದ ಸಂಬಂಧಿ ಯಾಗಿರೋ ಆರೋಪಿ ಕಟ್ಟೆಸ್ವಾಮಿ ಬಳಿ ಎರಡುವರೆ ಲಕ್ಷ ರೂಪಾಯಿ ಸಾಲ ಪಡೆದಿದ್ದನು. ಇದನ್ನು ವಾಪಸ್ ಕೇಳಿದಾಗ ಹುಸೇನಪ್ಪ ಕೊಟ್ಟಿರಲಿಲ್ಲ. ಹಣ ವಾಪಸ್ ನೀಡದಿರೋದ್ರ ಜೊತೆ ಕಟ್ಟೆಸ್ವಾಮಿಯವರ ತಾಯಿಯ ಬಗ್ಗೆ ಕೆಟ್ಟದಾಗಿ ಮಾತನಾಡಿದ್ದನಂತೆ ಮೃತ ಹುಸೇನಪ್ಪ. ಈ ಹಿನ್ನೆಲೆ ಕಟ್ಟೆಸ್ವಾಮಿ ಪ್ಲಾನ್ ಮಾಡಿ ತನ್ನ ಸ್ನೇಹಿತ ಮಾನಪ್ಪ ಜೊತೆ ಸೇರಿ ಯಾವುದೇ ಸಾಕ್ಷಿ ಮತ್ತು ಕುರುಹು ಇಲ್ಲದೇ ಹುಸೇನಪ್ಪ ಅವರನ್ನು ಕೊಂದಿದ್ದನು.
ಬೆಂಗಳೂರು: ಮುಂದಿನ ತಿಂಗಳು ಹಸೆಮಣೆಗೆ ಏರಬೇಕಿದ್ದ ಆಟೋ ಚಾಲಕನ ಬರ್ಬರ ಕೊಲೆ
ಆದರೆ ಕೊಲೆ ಮಾಡೋ ದಿನ ಮಾತ್ರ ಕಟ್ಟೆಸ್ವಾಮಿ ಅವರಿಗೆ ಹುಸೇನಪ್ಪ ಅವರ ಅಳಿಯ ಹೊನ್ನರು ಸ್ವಾಮಿ ಮನೆಯಲ್ಲಿರೋ ಸ್ಥಗಿತಗೊಂಡ ಹೆಚ್ಚುವರಿ ಸೀಮ್ ಜೊತೆ ಮಾತನಾಡಿದ್ರು. ಮನೆಯಲ್ಲಿದ್ದ ಹೆಚ್ಚುವರಿ ಸೀಮ್ ಅಷ್ಟಾಗಿ ಬಳಕೆ ಮಾಡುತ್ತಿರಲಿಲ್ಲ. ಆದರೆ ಅವತ್ತು ಆ ಸೀಮ್ ಯಾಕೆ ಬಳಕೆಯಾಯ್ತು. ಅದರ ಹಿಂದೆ ಹೋದ ಪೊಲೀಸರಿಗೆ ಸತ್ಯಾಂಶ ಗೊತ್ತಾಗಿದೆ. ಕೊಲೆಯಾದ ದಿನ ಬಳಕೆಯಾದ ಸೀಮ್ ನಿಂದ ಕಟ್ಟೆಸ್ವಾಮಿ ಮೊಬೈಲೆಗೆ ಹದಿನಾಲ್ಕು ಬಾರಿ ಕಾಲ್ ಮಾಡಲಾಗಿತ್ತು. ಅದರ ಆಧಾರದಲ್ಲಿ ಕುಟುಂಬದ ಜೊತೆಗಿದ್ದ ಕಟ್ಟೆಸ್ವಾಮಿ ವಿಚಾರಣೆ ಮಾಡಿದಾಗ ಸತ್ಯಾಸತ್ಯತೆ ಗೊತ್ತಾಗಿದೆ ಎಂದು ಬಳ್ಳಾರಿ ಎಸ್ಪಿ ರಂಜಿತ್ ಕುಮಾರ ಬಂಡಾರು ಕೊಲೆ ರಹಸ್ಯ ಬಿಚ್ಚಿಟ್ಟಿದ್ದಾರೆ.
ಕರಾಟೆ ಮಾಸ್ಟರ್ ಕೊಲೆ ಮಾಡಿದ ಆರೋಪಿ
ಹಣದ ವ್ಯವಹಾರ ತಾಯಿ ಮಕ್ಕಳು ಮತ್ತು ಅಣ್ಣತಮ್ಮಂದಿರನ್ನು ಬೇರೆ ಮಾಡುತ್ತದೆ ಅನ್ನೋ ಮಾತಿಗೆ ಈ ಪ್ರಕರಣ ಮತ್ತೊಮ್ಮೆ ಸಾಕ್ಷಿಯಾಗಿದೆ. ಕರಾಟೆ ಪಟುವಾಗಿ ಸಾಕಷ್ಟು ಜನರಿಗೆ ಕರಾಟೆ ಕಲಿಸುವ ಮೂಲಕ ಸಮಾಜದಲ್ಲಿ ಒಳ್ಳೆಯ ಹೆಸರು ಮಾಡಿದ್ದ ಆರೋಪಿ ಕಟ್ಟೆಸ್ವಾಮಿ ಇದೀಗ ಹಣ ವಾಪಸ್ ನೀಡ ಹಿನ್ನೆಲೆ ಹುಸೇನಪ್ಪ ಅವರನ್ನು ಕೊಲೆ ಮಾಡಿ ಜೈಲು ಸೇರಿದ್ದಾನೆ.