ಬೆಂಗಳೂರು: ಟ್ರಾಫಿಕ್ ಸಿಗ್ನಲ್ ಬ್ಯಾಟರಿ ಕದಿಯುತ್ತಿದ್ದ ಖತರ್ನಾಕ್‌ ಖದೀಮರ ಬಂಧನ

By Girish GoudarFirst Published Nov 26, 2023, 9:53 AM IST
Highlights

ಬ್ಯಾಟರಿ ಕಳ್ಳತನ ಮಾಡಿ ಗುಜರಿಗಳಲ್ಲಿ ಮಾರಾಟ ಮಾಡುತ್ತಿದ್ದರು ಖತರ್ನಾಕ್‌ ಖದೀಮರು. ಇದರಿಂದ ಬಂದ ಹಣದಿಂದ ಮೋಜು ಮಸ್ತಿ ಮಾಡುತ್ತಿದ್ದರು. ಆರೋಪಿಗಳ ಪತ್ತೆಗೆ ಪೊಲೀಸರು ಸುಮಾರು 120 ಸಿಸಿಟಿವಿಗಳನ್ನ ಪರಿಶೀಲನೆ ಮಾಡಿದ್ದರು. 

ಬೆಂಗಳೂರು(ನ.26):  ನಗರದ ಟ್ರಾಫಿಕ್ ಸಿಗ್ನಲ್ ಬ್ಯಾಟರಿ ಕದಿಯುತ್ತಿದ್ದ ಆರೋಪಿಗಳನ್ನ ಹೈಗ್ರೌಂಡ್ಸ್ ಠಾಣೆಯ ಪೊಲೀಸರು ಬಂಧಿಸಿದ್ದಾರೆ. ಸೈಫ್ ಪಾಷಾ, ಸಲ್ಮಾನ್ ಖಾನ್ ಬಂಧಿತ ಆರೋಪಿಗಳಾಗಿದ್ದಾರೆ. 

ಬಂಧಿತರಿಂದ ಐದು ಲಕ್ಷ ಮೌಲ್ಯದ 80 ಬ್ಯಾಟರಿಗಳನ್ನ ಪೊಲೀಸರು ವಶಕ್ಕೆ ಪಡೆದಿದ್ದಾರೆ. ನಗರದ ಹಲವು ಜಂಕ್ಷನ್ ಗಳಲ್ಲಿ ಸಿಗ್ನಲ್‌ಗಳಿಗೆ ಅಳವಡಿಸಿದ್ದ ಬ್ಯಾಟರಿಗಳನ್ನ ಖದೀಮರು ಕದ್ದಿದ್ದರು. ಕಳೆದ ಆರೇಳು ತಿಂಗಳಿಂದ ಸಿಗ್ನಲ್ ಬ್ಯಾಟರಿ ಕಳ್ಳತನ ನಡೆದಿದೆ. 

Latest Videos

ಕಾರಲ್ಲಿ ಬಂದು ಹೂಕುಂಡ ಕದ್ದ ಕಳ್ಳಿಯರು: ವೀಡಿಯೋ ವೈರಲ್

ಬ್ಯಾಟರಿ ಕಳ್ಳತನ ಮಾಡಿ ಗುಜರಿಗಳಲ್ಲಿ ಮಾರಾಟ ಮಾಡುತ್ತಿದ್ದರು ಖತರ್ನಾಕ್‌ ಖದೀಮರು. ಇದರಿಂದ ಬಂದ ಹಣದಿಂದ ಮೋಜು ಮಸ್ತಿ ಮಾಡುತ್ತಿದ್ದರು. ಆರೋಪಿಗಳ ಪತ್ತೆಗೆ ಪೊಲೀಸರು ಸುಮಾರು 120 ಸಿಸಿಟಿವಿಗಳನ್ನ ಪರಿಶೀಲನೆ ಮಾಡಿದ್ದರು. ಇದೀಗ ಬನಶಂಕರಿ ಮೂಲದ ಇಬ್ಬರು ಆರೋಪಿಗಳನ್ನ ಪೊಲೀಸರು ಬಂಧಿಸಿದ್ದಾರೆ. ಈ ಸಂಬಂಧ ಹೈಗ್ರೌಂಡ್ಸ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. 

click me!